- ಸುನಾಮಿನ್ಯೂಸ್, ಡಿ,23
*ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು.
ಗಾನಯೋಗಿ ಪದ್ಮಭೂಷಣ ಲಿಂ.ಡಾ.ಪಂಡಿತ್ ಪುಟ್ಟರಾಜ ಗವಾಯಿಗಳವರ 15 ನೇ ವರ್ಷದ ಪುಣ್ಯ ಸ್ಮರಣೋತ್ಸವದ ನಿಮಿತ್ತ 29 ಡಿಸೆಂಬರ್, ಭಾನುವಾರ “ಸ್ವರ-ಸಂಸ್ಮರಣೆ” ಕಾರ್ಯಕ್ರಮವನ್ನು ಪಟ್ಟಣದ ಡಾ.ಪಂ.ಪುಟ್ಟರಾಜ ಕಲಾ ಸೇವಾ ಬಳಗದವರು ಹಮ್ಮಿಕೊಂಡಿದ್ದಾರೆ.
ಹಳೇ ಹಗರಿಬೊಮ್ಮನಹಳ್ಳಿ ಪಟ್ಟಣದ ನೀರಾವರಿ ಇಲಾಖೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ನವಿನ್ ಸ್ಪೋರ್ಟ್ಸ್ ಕ್ಲಬ್(ರಿ) ವೇದಿಕೆಯಲ್ಲಿ ಮಧ್ಯಾಹ್ನ ಮೂರು ಗಂಟೆ ಯಿಂದ ರಾತ್ರಿ ಹತ್ತು ಗಂಟೆಯ ವರೆಗೂ ಕಾರ್ಯಕ್ರಮ ಜರುಗಲಿದೆ ಎಂದು ಕಲಾ ಸೇವಾ ಬಳಗದ ಪ್ರಮುಖರಾದ ಡಿಶ್ ವೆಂಕಟೇಶ್(ಟೈಲರ್), ಸೊಸೈಟಿ ಬಸವನಗೌಡ್ರು, ಶಂಕರಬಾಬು, ನಿವೃತ್ತ ಪೊಸ್ಟ್ ಮ್ಯಾನ್ ನಾಗರಾಜ ಅವರು ” ಸುನಾಮಿನ್ಯೂಸ್” ಗೆ ತಿಳಿಸಿದ್ದಾರೆ.
ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಆಕಾಶವಾಣಿ ‘ಎ’ಗ್ರೇಡ್ ಕಲಾವಿದರಾದ ಪಂ.ಕುಮಾರದಾಸ್ ರವರು ಸಂಗೀತಾ ಸೇವೆ ನೀಡುವ ಮೂಲಕ “ಸ್ವರ-ಸಂಸ್ಮರಣೆ” ಗೆ ಮೆರಗು ತುಂಬುವುದಲ್ಲದೆ, ಪುಟ್ಟರಾಜರಿಗೆ ಗೌರವ ಸೇವೆ ಸಲ್ಲಿಸಲಿದ್ದಾರೆ. ಆಗೇನೆ ನಾಡಿನ ಹೆಸರಾಂತ ಹಾರ್ಮೋನಿಯಂ ಕಲಾವಿದರಾದ ದೇವರಾಜ ಗಿಣಿಗೇರಿ, ರಾಜ್ಯದ ಖ್ಯಾತ ತಬಲಾ ವಾದಕರಾದ ಷಣ್ಮುಖಯ್ಯ ಸ್ವಾಮಿ, ಬೆಂಗಳೂರು ಇವರು ಪಂ.ಕುಮಾರದಾಸ್ ಗಾಯನಕ್ಕೆ ಸಾಥ ಕೊಡಲಿದ್ದಾರೆ ಎಂದು ಮುಖಂಡರು ತಿಳಿಸಿದರು.
ಮಧ್ಯಾಹ್ನ ಮೂರು ಗಂಟೆಗೆ ಸ್ಥಳಿಯ ಕಲಾವಿದರ ಸಂಗೀತಾ ಸೇವೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶ್ರೀನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮಿ, ಸ್ಥಳಿಯ ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ “ಸ್ವರ-ಸಂಸ್ಮರಣೆ”ಯನ್ನು ಯಶಸ್ವಿಗೊಳಿಸ ಬೇಕೆಂದು ಆಯೋಜಕರು “ಸುನಾಮಿನ್ಯೂಸ್” ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
- ಹುಳ್ಳಿಪ್ರಕಾಶ, ಸಂಪಾದಕರು.9448234961

