* ಸುನಾಮಿನ್ಯೂಸ್
*ಹಗರಿಬೊಮ್ಮನಹಳ್ಳಿ,ಡಿ,28
–
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಶನಿವಾರ ಸಂಜೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಸಮಳ ವಾದ್ಯ ಪರಿಕರದೊಂದಿಗೆ ಅಯ್ಯಪ್ಪಸ್ವಾಮಿ ಮೂರ್ತಿಯ ಮೆರವಣಿಗೆ ನಡೆಸಿದರು.
ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ಸಮಳ ವಾದ್ಯದ ವಾದನಕ್ಕೆ ತಕ್ಕಂತೆ ಪಟ್ಟಣದ ಬೀದಿ ಹಾಕುತ್ತಾ ಸಾಗಿದರು. ಮೆರವಣಿಗೆ ಸಾಗಿ ಬಂದ ಮಾರ್ಗದಲ್ಲಿ ಜನರು ಅಯ್ಯಪ್ಪಸ್ವಾಮಿಯ ದರ್ಶನ ಪಡೆದುಕೊಂಡು ತಮ್ಮ ಭಕ್ತಿ ಸರ್ಮಪಿಸಿದರು.
ಪಟ್ಟಣದ ರಾಮನಗರದಲ್ಲಿನ ನಾಣಿಕೆರಿ ಶ್ರೀ ಈಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ಗುಡಿಯಿಂದ ಅರ್ಟಿಫಿಷಿಯಲ್ ಬೆಳ್ಳಿರಥದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೊಂಡು ಮೆರವಣಿಗೆ ಆರಂಭವಾಯ್ತು.
ಪಟ್ಟಣದ ರಾಮನಗರ ಸರ್ಕಲ್ ಮೂಲಕ ರಥ ಬೀದಿ, ಕೂಡ್ಲಿಗಿ ಸರ್ಕಲ್, ಕೊಟ್ಟೂರು ಸರ್ಕಲ್, ನೇತಾಜಿ ರಸ್ತೆ ಹಾದು, ಬೈಪಾಸ್ ಗೆ ಎಂಟ್ರಿ ಆಗಿ ಅಲ್ಲಿಂದ ಬಸವೇಶ್ವರ ಬಜಾರ್ ಮೂಲಕ ಬಸವಸರ್ಕಲ್ ಸುತ್ತಿ ಮರಳಿ ಸನ್ನಿಧಿಯಲ್ಲಿ ರಾತ್ರಿ ಮೆರವಣಿಗೆ ಸಂಪನ್ನಗೊಂಡಿತು.
ನಂತರ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯ್ತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಮಾಲಾಧಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
* ಹುಳ್ಳಿಪ್ರಕಾಶ, ಸಂಪಾದಕರು,9448234961