Wednesday, February 11, 2026
HomeUncategorizedಅಪೂರ್ಣ ಮಾಚಿದೇವ ಸಮುದಾಯ ಭವನ; 1.25 ಕೋಟಿ ರೂ ಅನುದಾನ ನೀಡಿ ಪೂರ್ಣಗೊಳಿಸುವೆ. ಮಡಿವಾಳ ಸಮುದಾಯಕ್ಕೆ...

ಅಪೂರ್ಣ ಮಾಚಿದೇವ ಸಮುದಾಯ ಭವನ; 1.25 ಕೋಟಿ ರೂ ಅನುದಾನ ನೀಡಿ ಪೂರ್ಣಗೊಳಿಸುವೆ. ಮಡಿವಾಳ ಸಮುದಾಯಕ್ಕೆ ಶಾಸಕ ಕೆ.ನೇಮಿರಾಜನಾಯ್ಕ್ ಭರವಸೆ.

ಅಪೂರ್ಣಗೊಂಡಿರುವ ಮಾಚಿದೇವರ ಸಮುದಾಯ ಭವನ; 1.25 ಕೋರೂ ಅನುದಾನ ನೀಡಿ, ಪೂರ್ಣಗೊಳಿಸುವುದಾಗಿ ಮಡಿವಾಳ ಸಮುದಾಯಕ್ಕೆ ಶಾಸಕ ಕೆ.ನೇಮಿರಾಜನಾಯ್ಕ್ ಭರವಸೆ .

  • ಸುನಾಮಿನ್ಯೂಸ್, 11,ಫೆ,2026
  • ಹಗರಿಬೊಮ್ಮನಹಳ್ಳಿ/ವಿಜಯನಗರ
  • ಹುಳ್ಳಿಪ್ರಕಾಶ, ಸಂಪಾದಕರು
    1.25 ಕೋಟಿ ರೂಪಾಯಿ ಅನುದಾನ ನೀಡಿ ಅಪೂರ್ಣಗೊಂಡಿರುವ ಮಡಿವಾಳ ಮಾಚಿದೇವ ಸಮುದಾಯ ಭವನವನ್ನು ಆಧುನಿಕ ಶೈಲಿಯಲ್ಲಿ ಪೂರ್ಣಗೊಳಿಸುವುದಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.

ಸೋಮವಾರ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಜೆಸ್ಕಾಂ ಕಚೇರಿ ಬಳಿ ಇರುವ ಶ್ರೀ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ಶ್ರೀವೀರಘಂಟಿ ಮಡಿವಾಳ ಮಾಚಿದೇವ ತಾಲೂಕ ಸಂಘ ಆಯೋಜಿಸಿದ್ದ ಮಾಚಿದೇವರ ಜಯಂತ್ಯೋತ್ಸವದಲ್ಲಿ ಸಮುದಾಯದ ಮುಖಂಡರು, ಸಮುದಾಯ ಭವನ ಪೂರ್ಣಗೊಳಿಸುವಂತೆ ಸಲ್ಲಿಸಿದ ಭಿನ್ನವತ್ತಳೆ ಸ್ವೀಕರಿಸಿ, ಅನುದಾನ ನೀಡುವ ಭರವಸೆಯನ್ನು ಶಾಸಕರು ಕೊಟ್ಟರು.

ಕೆಳಗಡೆ ಆಡುಗೆ ಮನೆ, ಊಟದ ಸಭಾಂಗಣ, ಮೊದಲ ಮಹಡಿಯಲ್ಲಿ ಹತ್ತು ರೂಂ ಕಟ್ಟುವ ಕಾಮಗಾರಿ ಅಪೂರ್ಣಗೊಂಡಿದೆ. ಇದನ್ನು ಸಂಪೂರ್ಣಗೊಳಿಸಿ, ಎರಡನೇಯ ಮಹಡಿಯಲ್ಲಿ ಬೃಹತ್ ಸಭಾಭವನವನ್ನು ನಿರ್ಮಿಸಲಾಗುವುದು ಅಗತ್ಯ ಎನಿಸಿದರೆ ಲಿಫ್ಟ್ ವ್ಯವಸ್ಥೆಯನ್ನು ಕೂಡ ಮಾಡಿ ಆಧುನಿಕ ಸೌಲಭ್ಯಸಹಿತ ಮಾಚಿದೇವರ ಸಮುದಾಯವನ್ನು ಸಂಪೂರ್ಣಗೊಳಿಸಿಕೊಡುವುದಾಗಿ ನೇಮಿರಾಜನಾಯ್ಕ್ ವೇದಿಕೆ ಮೇಲೆ ಮಾತು ಕೊಟ್ಟರು.

ಮಾಚಿದೇವರ ಸಮುದಾಯ ಭವನ ರೈತರ ಓಣಿಯಲ್ಲಿದ್ದು, ಇದು ಪೂರ್ಣಗೊಂಡರೆ ಬರೀ ಈ ಸಮುದಾಯಕ್ಕಷ್ಟೆಯಲ್ಲ ಇಡೀ ರೈತರ ಓಣಿ ಜನರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಸುಸಜ್ಜಿತ ಭವನ ಸಿಗಲಿದೆ ಎಂದರು.

  • ಭಿನ್ನವತ್ತಳೆ:
    ಮಡಿವಾಳ ಸಮುದಾಯವನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸಬೇಕು, ಸಮುದಾಯ ಒಳಿತಿಗಾಗಿ ಇರುವ ಡಾ.ಅನ್ನಪೂರ್ಣ ವರದಿ ಜಾರಿಗೆ ಆಗಬೇಕು, ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯ ಪ್ರತಿ ಗ್ರಾಮಪಂಚಾಯ್ತಿಗೆ ಒಂದರಂತೆ ಧೋಬಿಘಾಟ್ ನಿರ್ಮಿಸಬೇಕು, ಸಮುದಾಯದ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ವಿದ್ಯುತ್ ಸಂಪರ್ಕದೊಂದಿಗೆ ಎಲ್ಲರಿಗೂ ಕರೆಂಟ್ ಇಸ್ತ್ರಿ ಪೆಟ್ಟಿಗೆ ನೀಡಬೇಕು, ಪಟ್ಟಣದ ಬುಧವಾರ ಸಂತೆ ಮಾರುಕಟ್ಟೆಯಲ್ಲಿರುವ ಧೋಬಿಘಾಟ್ ನ್ನು ದುರಸ್ತಿಮಾಡಬೇಕು ಎಂಬಿತ್ಯಾದಿ ಬೇಡಿಕೆಯ ಭಿನ್ನವತ್ತಳೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಟ್ಟಿಮನಿ, ಖಜಾಂಚಿ ಅಗಸರ ಪ್ರಕಾಶ ಓದಿದರು. ಸಮುದಾಯದ ಮುಖಂಡರು ಶಾಸಕರಿಗೆ ಅರ್ಪಿಸಿದರು.

ಮಡಿವಾಳ ಮಾಚಿದೇವ ತಾಲೂಕ ಸಂಘದ ಅಧ್ಯಕ್ಷ ಎಂ.ರಾಮಪ್ಪ ಅಧ್ಯಕ್ಷತೆ ವಹಿದ್ದರು. ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ, ಜೆಡಿಎಸ್ ವಿಜಯನಗರ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಬಿಡಿ.ಗಂಗಣ್ಣ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಹಿರಿಯ ಪತ್ರಕರ್ತ ಹುಳ್ಳಿಪ್ರಕಾಶ, ಉಲುವತ್ತಿ ಪಿಕೆಪಿಎಸ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಜೆಡಿಎಸ್ ಮುಖಂಡ ಜಿಎಂ.ಜಗದೀಶ, ಉಪ್ಪಾರ ಸಂಘದ ಅಧ್ಯಕ್ಷರಾದ ಕನಕಪ್ಪ,

ಮಡಿವಾಳರ ಸಂಘದ ಹಿರಿಯ ಮುಖಂಡರಾದ ಅಗಸರ ತಿಮ್ಮಣ್ಣ, ಬಾಳಪ್ಪ, ಅಗಸರ ಮಂಜುನಾಥ, ವೆಲ್ಡಿಂಗ್ ಹುಲುಗಪ್ಪ, ಲಾಟರಿ ಕರಿಯಪ್ಪ, ಚಿಂತ್ರಪಳ್ಳಿ ಟೀಪುಡಿ ನಾಗರಾಜ, ಪ್ಲಂಬರ್ ಹೊಸಪೇಟೆ ಹನುಮಂತಪ್ಪ, ಬಂಡಿಹಳ್ಳಿ ಸಂತೋಷ, ಚಿಂತ್ರಪಳ್ಳಿ ಪರುಶುರಾಮ, ಯುವ ಘಟಕದ ಎಂ.ಮೇಘರಾಜ, ಹನುಮೇಶ, ನಾಗಭೂಷಣ, ಕುಮಾರ,ಪ್ಲಂಬರ್ ಮಾರುತಿ, ಟೈಲ್ಸ್ ನಾಗ, ಅಗಸರ ನೀಲಪ್ಪ, ಪರುಶುರಾಮ, ಭರ್ಮಪ್ಪ, ಗಜೇಂದ್ರ ಮಾಚಿ, ಯಶವಂತ್ ಕಟ್ಟಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಾಗರತ್ನ ಶ್ರೀನಿವಾಸ ಕಟ್ಟಿಮನಿ, ರೇಣುಕಮ್ಮ ತಿಮ್ಮಣ್ಣ, ಮಂಜಮ್ಮ, ಮಂಗಳಗೌರಿ, ನಿರ್ಮಲ ಹುಲುಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಟ್ಟಿಮನಿ, ಖಜಾಂಚಿ ಅಗಸರ ಪ್ರಕಾಶ ಸ್ಬಾಗತಿಸಿ, ನಿರೂಪಿಸಿದರು.

  • ಹುಳ್ಳಿಪ್ರಕಾಶ, ಸಂಪಾದಕರು.
RELATED ARTICLES
- Advertisment -

Most Popular

Recent Comments