Saturday, February 14, 2026
HomeUncategorizedಸಾರ್ವಜನಿಕರನ್ನು ಆಕರ್ಷಿಸಿದ ಬಂಜಾರ ನೃತ್ಯ!

ಸಾರ್ವಜನಿಕರನ್ನು ಆಕರ್ಷಿಸಿದ ಬಂಜಾರ ನೃತ್ಯ!

  • ಸುನಾಮಿನ್ಯೂಸ್, 14,ಫೆ,2026
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಸೇವಾಲಾಲ ಜಯಂತಿ ನಿಮಿತ್ತ ತಾಲೂಕಿನ ನಕ್ರಾಳತಾಂಡದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಬಂಜಾರ ಮಲಾಧಾರಿಗಳು
ಶನಿವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಆಕರ್ಷಕ ಭವ್ಯ ಮೆರವಣಿಗೆ ನಡೆಸಿದರು.

ಶ್ವೇತ ವಸ್ತ್ರಧಾರಿ ಆಗಿದ್ದ ಮಾಲಾಧಾರಿಗಳ ಜೊತೆಗರ ತಾಂಡದ ನೂರಾರು ಸಂಖ್ಯೆಯ ಬಂಜಾರ ಪುರುಷರು, ಮಹಿಳೆಯರು, ಯುವಕ,ಯುವತಿಯರು, ಸಣ್ಣ ಮಕ್ಕಳು ಹೆಜ್ಜೆ ಹಾಕಿ ಸಾಥ್ ನೀಡಿದರು.

ಸೇವಾಲಾಲ ಭಾವಚಿತ್ರಹೊತ್ತಿದ್ದ ಟ್ರಾಕ್ಟರ್ ನಿಂದ ಹೊರಹೊಮ್ಮುತ್ತಿದ್ದ ಮ್ಯೂಸಿಕ್ ಗೆ ಮಾಲಾಧಾರಿಗಳ ಜೊತೆಗೆ ಮಹಿಳೆಯರು, ಯುವತಿಯರು ಸಹ ರಸ್ತೆ ಮೇಲೆಯೇ ಡ್ಯಾನ್ಸ್ ಮಾಡಿದರು. ಲಂಬಾಣಿ ಸಂಪ್ರದಾಯ ಪ್ರತಿನಿಧಿಸುವ ತೊಟ್ಟಿದ್ದ ವೇಷ,ಭೂಷಣಗಳು ಮೆರವಣಿಗೆ ಸಾಗಿ ಬಂದ ರಸ್ತೆ ಇಕ್ಕಡೆಗಳಲ್ಲಿ ನಿಂತಿದ್ದ ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸಿತು.

ನಕ್ರಾಳತಾಂಡ, ಹಗರಿಬೊಮ್ಮನಹಳ್ಳಿ ಪಟ್ಟಣ ದಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಂದಲೇ ಬೆಳಗ್ಗೆ ಸೇವಾಲಾಲ ಭಾವಚಿತ್ರ ಹೊತ್ತು ಕೊಂಡಿದ್ದ ಟ್ರಾಕ್ಟರ್ ಜೊತೆಗೆ ಅಬಾಲ ರಿಂದ ಹಿಡಿದು ವೃದ್ಧರ ತನಕವೂ ಬಂಜಾರ ಬಂಧುಗಳು ಶಿಸ್ತು ಬದ್ಧವಾಗಿ ಮೆರವಣಿಗೆಯಲ್ಲಿ ಪಟ್ಟಣಕ್ಕೆ ಸಾಗಿ ಬಂದರು.

ಪಟ್ಟಣದ ರಾಮನಗರದ ಶ್ರೀ ಗಾಳೆಮ್ಮ ದೇವಿ ದೇವಸ್ಥಾನ ದಿಂದ ಬಸವಣ್ಣ ಪುತ್ಥಳಿವರೆಗೂ ಮೆರವಣೆಗೆ ನಡೆಸಿ ನಂತರ ತಾಂಡಕ್ಕೆ ಮರಳಿದರು.

  • ಹುಳ್ಳಿಪ್ರಕಾಶ, ಸಂಪಾದಕರು, 9448234961
RELATED ARTICLES
- Advertisment -

Most Popular

Recent Comments