Sunday, February 22, 2026
HomeUncategorizedಎಸ್ಪಿ ಮೇಲೆ ಕಲ್ಲು! ನಾವೀರೋದು ಕರ್ನಾಟಕವಲ್ಲ, ಆರಬ್ ಕಂಟ್ರೀ ಆಡಳಿತದ ಭಾಸವಾಗುತ್ತಿದೆ. ಅನುಮಾನ ವ್ಯಕ್ತಪಡಿಸಿದ...

ಎಸ್ಪಿ ಮೇಲೆ ಕಲ್ಲು! ನಾವೀರೋದು ಕರ್ನಾಟಕವಲ್ಲ, ಆರಬ್ ಕಂಟ್ರೀ ಆಡಳಿತದ ಭಾಸವಾಗುತ್ತಿದೆ. ಅನುಮಾನ ವ್ಯಕ್ತಪಡಿಸಿದ ಜೆಡಿಎಸ್ ಶಾಸಕ ಕೆ.ನೇಮಿರಾಜನಾಯ್ಕ್.

  • ಸುನಾಮಿನ್ಯೂಸ್, ಫೆ,22
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಈ ಸರ್ಕಾರದಲ್ಲಿ ಜನರಿಗೂ ರಕ್ಷಣೆ ಇಲ್ಲಾ, ಇನ್ನೂ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪೊಲೀಸರ ಮೇಲೆನೇ ಕಲ್ಲು, ಚಪ್ಪಲಿ ತೂರುವಷ್ಟರ ಮಟ್ಟಿಗೆ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದನ್ನೆಲ್ಲ ನೋಡ್ತಾಯಿದ್ರೇ ನಾವು ಕರ್ನಾಟಕದಲ್ಲಿ ಇದ್ಯಾವೋ? ಇಲ್ಲ ತಾಲಿಬಾನ್ ಆಡಳಿತದಲ್ಲಿ ಇದ್ಯಾವೋ!? ಎನ್ನುವ ಅನುಮಾನ ಶುರುವಾಗಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ನೇಮಿರಾಜನಾಯ್ಕ್ ಆರೋಪಿಸಿ, ಆತಂಕ ವ್ಯಕ್ತಪಡಿಸಿದರು.

ಭಾನುವಾರ ಮುಂಜಾನೆ ಪಟ್ಟಣದ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ನೇಮಿರಾಜನಾಯ್ಕ್ ಮಾತನಾಡಿದರು.

ಬಾಗಲಕೋಟಯಲ್ಲಿ ಶಿವಾಜಿ ಮಹಾರಾಜರ ಶೋಭಾಯಾತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಎಸ್ಪಿ ಅವರ ಮೇಲೆಯೇ ಕಲ್ಲು ತೂರಾಲಾಗಿದೆ. ಆದರೇ ನಮ್ಮ ಗೃಹ ಸಚಿವರು ಹೇಳ್ತಾರೇ,
ಚಿಕ್ಕ ಮಕ್ಕಳು ಕಲ್ಲು ಎಸೆದಿದ್ದಾರೆ ಎನ್ನುತ್ತಾರೆ. ಇದನ್ನು ನೋಡಿದರೇ ನಿಜಕ್ಕೂ ನಮಗೆ ನಾವೇಲ್ಲಿದ್ದೇವೆ ಎನ್ನುವಂತಹ ಅನುಮಾನ ಕಾಡದಿರದು ಎಂದರು.

ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರೇ ನೀವುಹಿರಿಯರಿದ್ದೀರಿ, ಮುತ್ಸದಿಗಳಿದ್ದೀರಿ ನಿಮ್ಮ ಬಗ್ಗೆ ನನಗೆ ಆಪಾರ ಗೌರವ ಇದೆ. ನೀವು ಯಾರದೋ ಒತ್ತಡಕ್ಕೆ ಸಿಲುಕಿ ಸತ್ಯ ಮರೆಮಾಚಿಸಬೇಡಿ, ನಿಮ್ಮ ಮಾತನ್ನು ನಾವು ಒಪ್ಪಲ್ಲ, ಅದನ್ನು ಹಿಂದಕ್ಕೆ ಪಡೆದು, ನಿಜವಾದ ಆರೋಪಿಗಳ ಮೇಲೆ ಕ್ರಮವಹಿಸುವಂತೆ ಗೋಷ್ಠಿಯ ಮೂಲಕ ಶಾಸಕರು ಮನವಿ ಮಾಡಿಕೊಂಡರು.

ರಾಜ್ಯ ಸರ್ಕಾರ ಒಂದು ಧರ್ಮದ ಪರ ನಿಲ್ಲದೆ, ಇಡೀ ರಾಜ್ಯದ ಜನರಪರ ಇರಬೇಕು, ಜನರ ಬೆನ್ನಿಗೆ ನಿಲ್ಲಬೇಕು. ನೀವು ಯಾರದೋ ಹಿತಾಸಕ್ತಿಗೆ ಕೆಲಸ ಮಾಡಿದರೇ ಆಗಾದರೇ ಈ ನಾಡಿನ ಜನರನ್ನು ರಕ್ಷಿಸುವವರು ಯಾರು? ಎಂದು ಶಾಸಕ ನೇಮಿರಾಜನಾಯ್ಕ್ ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಪಕ್ಷದ ಮುಖಂಡ ಕನ್ನಿಹಳ್ಳಿ ಚಂದ್ರಶೇಖರ ಗೋಷ್ಠಿಯಲ್ಲಿದ್ದರು.

RELATED ARTICLES
- Advertisment -

Most Popular

Recent Comments