ಸುನಾಮಿನ್ಯೂಸ್, ಫೆ,22
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ರಾಜ್ಯ ಸರ್ಕಾರ ಜನವಿರೋಧಿ ಆಗಿದ್ದು, ಇದರ ವಿರುದ್ಧವಾಗಿ ‘ಜನವಿರೋಧಿ ಸಮಾವೇಶ’ವನ್ನು ಜೆಡಿಎಸ್ ಪಕ್ಷ ದಿಂದ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಾರ್ಚ್ ಒಂದರಂದು ಹಮ್ಮಿಕೊಳ್ಳಲಾಗಿದೆ. ಪಕ್ಷದ ಯುವ ನೇತಾರರಾ್ ನಿಕಿಲ್ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದರು.
ಭಾನುವಾರ ಮುಂಜಾನೆ ಪಟ್ಟಣದ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ನೇಮಿರಾಜನಾಯ್ಕ್ ಮಾತನಾಡಿದರು.
ಬಡವರು, ರೈತರ ಜೀವ ಹಿಂಡುವುದೇ ಗ್ಯಾರಂಟಿ ಸರ್ಕಾರದ ಮೂಲ ಉದ್ದೇಶವಾಗಿದೆ. ಜನರ ಹಿತ ಮರೆತು, ಜನರಿಗೆ ಅನ್ಯಾಯ ಮಾಡಿ, ಜನರು ಕಟ್ಟಿರುವ ತೆರಿಗೆ ಹಣದಲ್ಲಿ ಗ್ಯಾರಂಟಿ ಕೊಡುತ್ತೀರುವ ಈ ಸರ್ಕಾರವನ್ನು ನಮಗೆ ಗ್ಯಾರಂಟಿ ಕೋಡಿ ಎಂದು ಯಾರು ಕೇಳಿದ್ರು? ಎಂದು ಶಾಸಕರು ರಾಜ್ಯ ಸರ್ಕಾರದ ವಿರುದ್ಧವಾಗಿ ಗೋಷ್ಠಿಯಲ್ಲಿ ತೀವ್ರ ಹರಿಹಾಯ್ದರು.
ಇನ್ನೂ ನಮ್ಮ ಸರ್ಕಾರ ಎಸ್ಸಿ,ಎಸ್ಟಿ ಸಮುದಾಯಗಳ ಕಲ್ಯಾಣದ ಸರ್ಕಾರ ಎನ್ನುತ್ತಾರೆ ಆದರೇ ಎಸ್ಇಪಿ ಮತ್ತು ಎಸ್ಟಿಪಿ ಅನುದಾನವನ್ನು ಗ್ಯಾರಂಟಿಗೆ ಬಳಸಿಕೊಳ್ಳುತ್ತಿದ್ದಾರೆ ಹೀಗಾಗಿ ಈ ಮೂರು ವರ್ಷದಲ್ಲಿ ಗಂಗಾ ಕಲ್ಯಾಣಕ್ಕೂ ದುಡ್ಡಿಲ್ಲ, ಪರಿಶಿಷ್ಟರ ವಿವಿಧ ಯೋಜನೆಗಳಿಗೆ ಹಣ ಇಲ್ಲ, ಮನೆ ಇಲ್ಲ, ನೀರಾವರಿಗೆ ದುಡ್ಡಿಲ್ಲ ಎಂದರು.
ನನ್ನ ಕ್ಷೇತ್ರದ ಮರಬ್ಬಿಹಾಳು ಏತನೀರಾವರಿ, ಕೊಟ್ಟೂರಿನ ಭಾಗದಲ್ಲಿ ಹದಿನೇಳು ಕೆರೆ ತುಂಬಿಸಲು ವಾಟರ್ ಅಲೋಕೇಷನ್ ಇದ್ರೂನೂ ಸರ್ಕಾರ ಹಣ ಕೋಡ್ತಾಯಿಲ್ಲ
ನೀವು ನಲವತ್ತು ಪರ್ಸೆಂಟ್ ಅನುದಾನ ಕೋಡಿ ಉಳಿದ ಅರವತ್ತು ಪರ್ಸೆಂಟ್ ಕೇಂದ್ರ ದಿಂದ ತರುತ್ತೇನೆ ಎಂದ್ರುನೂ ಸರ್ಕಾರ ಅನುದಾನ ನೀಡ್ತಾಯಿಲ್ಲ ಸರ್ಕಾರದಲ್ಲಿ ದುಡ್ಡಿಲ್ಲ ಎಂದರು.
ಕೆಕೆಆರ್ ಡಿಬಿಗೆ ಐದು ಸಾವಿರ ಕೋಟಿ ಕೊಡ್ತಿನಿ ಅಂತಾ ಹೇಳುತ್ತಿರಿ ಆದರೇ ಅದು ಪೇಪರ್ ನಲ್ಲಿ ಮಾತ್ರವೇ ಹೊರತು ಅದು ಕಾರ್ಯರೂಪಕ್ಕ ಬಂದಿಲ್ಲ. ಮೂರು ವರ್ಷ ಕಳೆಯುತ್ತಾ ಬಂದ್ರು ಕೆಕೆಆರ್ಡಿ ಯಲ್ಲಿ ಒಬ್ಬೇ ಒಬ್ಬ ವಿರೋದ ಪಕ್ಷದ ಶಾಸಕರನ್ನು ಸೇರಿಸಿಕೊಂಡಿಲ್ಲ. ಬದಲಿಗೆ ನಿಮ್ಮ ಶಾಸಕರನ್ನು ಇಟ್ಟುಕೊಂಡು ಕೆಕೆಆರ್ ಡಿಬಿಯನ್ನು ಲೂಟಿ ಹೊಡೆತ್ತಾ ಇದ್ದೀರಿ ಎಂದು ಗೋಷ್ಠಿಯಲ್ಲಿ ಶಾಸಕರು ಸರ್ಕಾರದ ಮೇಲರ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ, ಕಾನೂನು ಬದ್ಧವಾಗಿ ಕೆಕೆಆರ್ ಡಿಬಿ ಕ್ರೀಯಾಯೋಜನೆ ಆಗ್ತಾಯಿಲ್ಲ, ಕಾನೂನು ಉಲಂಘಿಸಿ ಆ್ಯಕ್ಷನ್ ಪ್ಲಾನ್ ಮಾಡ್ತಾ ಇದ್ದಾರೆ. ಇನ್ನೂ ಎರಡು ವರ್ಷದಲ್ಲಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಏತನೀರಾವರಿ ಯೋಜನೆಗಳಿಗೆ ಅನುದಾನ ಕೊಡದಿದ್ರೇ ಜನರೇ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಶಾಲಾ ಮಕ್ಕಳ ಪ್ರವಾಸದಲ್ಲೂ ಈ ಸರ್ಕಾರ ಜಾತಿ ತಾರತಮ್ಯ ಮಾಡುತ್ತಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ.ಎಲ್ಲ ಮಕ್ಕಳಿಗೂ ಪ್ರವಾಸ ಭಾಗ್ಯ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಚಿಕ್ಕ ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಬಿತ್ತುವ ಕೆಲಸವನ್ನು ಮಾಡಬೇಡಿ ಎಂದರು. ಗೋಷ್ಠಿ ಆರಂಭ ದಿಂದ ಅಂತ್ಯದವರೆಗೂ ಶಾಸಕರು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ತೀವ್ರ ಕಿಡಿಕಾರಿದರು
ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಪಕ್ಷದ ಮುಖಂಡ ಕನ್ನಿಹಳ್ಳಿ ಚಂದ್ರಶೇಖರ ಗೋಷ್ಠಿಯಲ್ಲಿದ್ದರು.
.

