!!
*ಸುನಾಮಿನ್ಯೂಸ್, ಫೆ,23
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಜಾತ್ಯಾತೀತ ಜನತಾದಳ ಪಕ್ಷ(ಜೆಡಿಎಸ್)ದ ವಿಜಯನಗರ ಜಿಲ್ಲಾ ಘಟಕಕ್ಕೆ ಹೊಸ ಸಾರಥಿ ನೇಮಕವಾಗಿದ್ದು, ಮಾರ್ಚ್ ಒಂದರಂದು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಪಟ್ಟಣದ ಯುಕೆ ಕೊಟ್ರಬಸಪ್ಪರ ಜಾಗದಲ್ಲಿ ಜರುಗಲಿದೆ.
ಸಮಾರಂಭ,
ಅತ್ಯಂತ ಅದ್ದೂರಿ ಆಗಿ ಜರುಗಲಿದ್ದು, ಸಮಾರಂಭದಲ್ಲಿ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರ ಸಮೂಹವನ್ನು ಸಂಘಟಕರು ನಿರೀಕ್ಷಿಸಿದ್ದಾರೆ.
ಪಕ್ಷದ ಭವಿಷ್ಯದ ಜನನಾಯಕ ನಿಕಿಲ್ ಕುಮಾರಸ್ವಾಮಿ ಆಗಮಿಸಲಿದ್ದು
ಇವರ ಸಮ್ಮಖದಲ್ಲಿ ರಾಜ್ಯದ ವೀರಶೈವ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕರು, ಪಟ್ಟಣದ ಪುರಸಭೆಯ ಮಾಜಿ ಸದಸ್ಯರು ಆಗಿರುವ ಬಾದಾಮಿ ಮೃತ್ಯುಂಜಯ ಅವರು ವಿಜಯನಗರ ಜಿಲ್ಲೆಯ ಜೆಡಿಎಸ್ ನ ನೂತನ ಸಾರಥಿ ಆಗಿ ಪಕ್ಷವನ್ನು ಮುನ್ನೇಡೆಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹೊರಲಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರ ಸಹಿತ ವಿಜಯನಗರ ಜಿಲ್ಲೆಗೆ ಒಳಪಡುವ ಹರಪನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರಗಳ ಪ್ರತಿ ಮತಗಟ್ಟೆ ಪ್ರತಿನಿಧಿಸಿ ಬರುವ ಮುಖಂಡರು, ಕಾರ್ಯಕರ್ತರು ಪದಗ್ರಹಣವನ್ನು ಸಾಕ್ಷಿಕರಿಸಲಿದ್ದಾರೆ.
ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿಬಿ ಸುರೇಶಬಾಬು, ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕರಾದ ಶರಣನಗೌಡ ಕಂದಕೂರು ಸಹಿತ ಹಲವು ಮುಖಂಡರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

