Monday, February 23, 2026
HomeUncategorizedಹಾಡು ಹಗಲೇ ಶಾಲೆಗೆ ಬೆಂಕಿ! ಇದು ಅಕಸ್ಮಿಕವೋ, ಇಲ್ಲಾ ಕಿಡಿಗೇಡಿಗಳ ಉದ್ದೇಶ ಪೂರ್ವಕ ಕೃತ್ಯವೋ?

ಹಾಡು ಹಗಲೇ ಶಾಲೆಗೆ ಬೆಂಕಿ! ಇದು ಅಕಸ್ಮಿಕವೋ, ಇಲ್ಲಾ ಕಿಡಿಗೇಡಿಗಳ ಉದ್ದೇಶ ಪೂರ್ವಕ ಕೃತ್ಯವೋ?

  • ಸುನಾಮಿನ್ಯೂಸ್, ಫೆ,23
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಹಳೇ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಒಂದಕ್ಕೆ ಸೋಮವಾರ ಬೆಳಿಗ್ಗೆ ಎಂಟು ಗಂಟೆ ಆಸು,ಪಾಸು ಸುಮಾರಿನಲ್ಲಿ ಬೆಂಕಿ ಬಿದ್ದಿದೆ. ಸಕಾಲಕ್ಕೆ ಬೆಂಕಿ ನಂದಿಸಿದ್ದರಿಂದಾಗಿ ಹೆಚ್ಚಿನ ಅನಾಹುತವಾಗಿಲ್ಲ.

ಈ ಘಟನೆಯಲ್ಲಿ ಶಾಲಾ ಕೊಠಡಿಯಲ್ಲಿದ್ದ ಬುಕ್ ಬ್ಯಾಂಕ್ ನಲ್ಲಿದ್ದ ನೂರಾರು ಪುಸ್ತಕಗಳು, ಐದು ಕಂಪ್ಯೂಟರ್ ಮನೀಟರ್ ಗಳು, ಭೋಧನಾ ಪ್ರೋಜಕ್ಟರ್ ಸಹಿತ ಹಲವು ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲು ಆಗಿವೆ.
ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಮೌಲ್ಯದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯ ಮೇರೆಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ವೀರನಗೌಡ ಅವರು ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಪಿಎಸ್ಐ ಬಸವರಾಜ ಅಡವಿಬಾಯಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ಶಾಲೆ ಜನನಿಬೀಡ ಸ್ಥಳದಲ್ಲಿದೆ. ಶಾಲೆಯ ಸುತ್ತಲೂ ಕಿಕ್ಕಿರಿದು ಜನವಸತಿ ಇದ್ದು, ಸದಾಕಾಲವೂ ಜನರು ನಿರಂತರವಾಗಿ ಓಡಾಡುತ್ತಲೇ ಇರುತ್ತಾರೆ. ಇಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಬೆಂಕಿ ಬಿದ್ದಿರುವುದು ಸಾರ್ವಜನಿಕರಲ್ಲಿ ಕೂತೂಹಲ ಮತ್ತು ಇದು ಯಾರು ಕಿಡಿಗೇಡಿಗಳು ಎಸಗಿರುವ ಕೃತ್ಯ ಎನ್ನುವ ಅನುಮಾನ ಎರಡನ್ನು ಹುಟ್ಟುವಂತೆ ಮಾಡಿದೆ.

ಬೆಳಗಿನ ಅವಧಿಯ ಶಾಲೆ ಆರಂಭಕ್ಕೂ ಮೊದಲೇ ಶಾಲೆಯ ಐದನೇಯ ತರಗತಿಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದು ಗಂಟೆ ಕಾಲ ಬೆಂಕಿ ಉರಿದಿದೆ. ಸದರಿ ಕೊಠಡಿಯಲ್ಲಿಯೇ ಬುಕ್ ಬ್ಯಾಂಕಿಗಾಗಿ ನೂರಾರು ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಗಿತ್ತು. ದಾನಿಗಳಿಂದ ದೇಣಿಗೆ ಪಡೆದಿದ್ದ ಪ್ರೊಜೆಕ್ಟರ್, ಆರು ಮಾನಿಟರುಗಳು, ಹಲವಾರು ಡೆಸ್ಕುಗಳು ಕೂಡ ಇಲ್ಲಿದ್ದವು ಇವೆಲ್ಲ ಅಗ್ನಿಜ್ವಾಲೆಗೆ ಸಿಕ್ಕು ಸುಟ್ಟು ಕರಕಲಾಗಿವೆ.

ಪುರಸಭಾ ಅಧ್ಯಕ್ಷ ಮರಿರಾಮಪ್ಪ, ಬಿಇಓ ಪ್ರಭಾಕರ್, ಪುರಸಭಾ ಸದಸ್ಯರಾದ ದೀಪಕ್ ಸಾ ಕಠಾರೆ, ಊರಿನ ಪ್ರಮುಖರಾದ ರವೀಂದ್ರ ಗೌಡ, ಈ ಕೃಷ್ಣಮೂರ್ತಿ, ಸುನಿಲ್, ವಿನಯಕುಮಾರ್ ಸೇರಿದಂತೆ ಸಾರ್ವಜನಿಕರು ಶಾಲೆಯ ಹಲವಾರು ಹಿರಿಯ ವಿದ್ಯಾರ್ಥಿಗಳು ಕೂಡ ಭೇಟಿ ನೀಡಿದರು.

  • ಹುಳ್ಳಿಪ್ರಕಾಶ, ಸಂಪಾದಕರು

.‌

RELATED ARTICLES
- Advertisment -

Most Popular

Recent Comments