Wednesday, February 25, 2026
HomeUncategorized'ಅಭಿಮಾನ್ಯು' ಮಾಡಲು ಯತ್ನಿಸಿದವರಿಗೆ 'ಅರ್ಜುನ್' ನಾದ ಮರಿರಾಮಪ್ಪ!

‘ಅಭಿಮಾನ್ಯು’ ಮಾಡಲು ಯತ್ನಿಸಿದವರಿಗೆ ‘ಅರ್ಜುನ್’ ನಾದ ಮರಿರಾಮಪ್ಪ!

  • ಸುನಾಮಿನ್ಯೂಸ್, ಫೆ,25
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಮಂಗಳವಾರ ಕರೆಯಲಾಗಿದ್ದ ಹಗರಿಬೊಮ್ಮನಹಳ್ಳಿ ಪುರಸಭೆಯ ಬಜೇಟ್ ಪೂರ್ವ ಸಿದ್ದತಾ ಸಭೆಯಲ್ಲಿ, “ಮಹಾಭಾರತದ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮಾನ್ಯು” ಆಗಿಸಲು ಮಸಲತ್ತು ಮಾಡಿದವರ ಎದುರಿಗೆ ‘ಸಂಯಮದ ಬಾಣ’ ಪ್ರಯೋಗಿಸುವ ಮೂಲಕ ಅಧ್ಯಕ್ಷ ಮರಿರಾಮಪ್ಪ “ಅರ್ಜುನ್ ” ಆಗಿ ವಿರೋಧಿಗಳು ಕಟ್ಟಿದ್ದ ಕುತಂತ್ರದ ವ್ಯೂಹವನ್ನು ಪುಡಿಗಟ್ಟಿ, ಉಡಾಯಿಸಿದರು.

ಸಭೆಯಲ್ಲಿ ಭಾರೀ ಗದ್ದಲ,ಗಲಾಟೆ, ಏರುಧ್ವನಿಮಾತಿನ ವಾಗ್ವಾಣಗಳ ಸುರಿಮಳೆಯನ್ನೆ ಸುರಿಸಿದರೇ ಅದರಿಂದ ಮರಿರಾಮಪ್ಪ ವಿಚಲಿತರಾಗಿ, ತಾಳ್ಮೆಗೆಡುತ್ತಾರೆ ಆಗ ನಾವು ಮಧ್ಯ ಪ್ರವೇಶಿಸಿ ರಾಜೀ ಪಂಚಾಯ್ತಿ ಮಾಡಿ “ನಾಯಕ”ರಾಗಲು ಯತ್ನಿಸಿದವರ ನರಿ ಬುದ್ಧಿ ರಾಜಕಾರಣವನ್ನು ಕೂಡ ಅವರು ಮೆಟ್ಟಿ ನಿಂತರು!

ವಿಶೇಷ ಎಂದರೇ, ಸಭೆಯಲ್ಲಿ
ಸ್ವಪಕ್ಷೀಯರೇ ಮರಿರಾಮಪ್ಪ ಮೇಲೆ ಭಾರಿ ಮಾತಿನ ದಾಳಿ ನಡೆಸಿದರು. ಇತ್ತ ವಿರೋಧ ಪಕ್ಷದ ಸದಸ್ಯರುಗಳು ಧ್ವನಿ ಏರಿಸಿದರು. ಆದರೇ ಕೂದಲೇಳೆಯಷ್ಟು ಕೂಡ ಅಧ್ಯಕ್ಷ ಮರಿರಾಮಪ್ಪ ವಿಚಲಿತರಾಗಲಿಲ್ಲ, ತಮ್ಮ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಟ್ಟು ಕೊಂಡೇ ಏಕಾಂಗಿ ಆಗಿಯೇ ಸದಸ್ಯರು ಹಾಗು ಹಲವು ಸಾರ್ವಜನಿಕರ ಮಾತಿನದಾಳಿಯನ್ನು ಧೈರ್ಯ ದಿಂದಲೇ ಎದುರಿಸಿ, ದಿಟ್ಟತನ ದಿಂದಲೇ ಉತ್ತರಿಸಿದರು.

ಹೀಗಾಗಿ ಪಟ್ಟಣದ ‘ಬೈಪಾಸ್’ ರಸ್ತೆಯ ಮನೆಯೊಂದರಲ್ಲಿ ಮೂರ್ನಾಕು ದಿನಗಳ ಕಾಲ ಕುಳಿತು ಬಜೇಟ್ ಪೂರ್ವ ಸಭೆಯಲ್ಲಿ ಅಧ್ಯಕ್ಷರನ್ನು ವಿಚಲಿತಗೊಳಿಸಲು ಮಾಡಿದ್ದ ಎಲ್ಲಾ ಪ್ಲಾನ್ ಗಳು ಠುಸ್ ಪಟಾಕಿ ಆದವು. ಇತ್ತ ಸಭೆಯಲ್ಲಿ ಮೆಜು ಕುಟ್ಟಿದವರ ಕೈಗಳು ನೋವಾದವೇ ಹೊರತು ಅಧ್ಯಕ್ಷರ ಮನೋಸ್ಥೈರ್ಯವನ್ನು ಅಲುಗಾಡಿಸಲಾಗಲಿಲ್ಲ

ಮರಿ ರಾಮಪ್ಪ, ರಾಜಕಾರಣಕ್ಕೆ ಹೊಸಬರಿರ ಬಹುದು. ಆದರೇ, ಬಜೇಟ್ ಪೂರ್ವ ಸಭೆಯಲ್ಲಿ ಎದುರಾದ ಸಂಕಷ್ಟವನ್ನು ನಿಭಾಯಿಸಿದ ರೀತಿ ನುರಿತ ರಾಜಕಾರಣಿಯಂತಿತ್ತು. ಏಕೆಂದರೆ, ಇತ್ತ ಬೆಳಕು ಮೂಡಿ, ರಾತ್ರಿಯಾದ್ರೂ ಅಧ್ಯಕ್ಷರ ಹಿಂದೆ,ಮುಂದೆಯೇ ಗಸ್ತು ಹೊಡೆಯುವ ಸದಸ್ಯರು ಕೂಡ ಅವರ ನೆರವಿಗೆ ಬರಲಿಲ್ಲ! ಅದರಿಂದ ಮರಿರಾಮಪ್ಪ ಕೂದಲೇಳೆಯಷ್ಟು ಕೂಡ ಅಳುಕಾಗಲಿಲ್ಲ. ಎಲ್ಲವನ್ನೂ ಏಕಾಂಗಿ ಆಗಿಯೇ ದಿಟ್ಟವಾಗಿ, ಧೈರ್ಯವಾಗಿಯೇ ಎದುರಿಸಿದರು.

ಮರಿರಾಮಪ್ಪ, ಪಟ್ಟಣದಲ್ಲಿ ಮೂರ್ನಾಕು ವೈನ್ ಶಾಪ್ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳನ್ನು ಹಲವು ದಶಕಗಳಿಂದಲೂ ಲೀಜ್ ಪಡೆದು ವ್ಯವಹಾರ ನಡೆಸುತ್ತಾ ಬರುತ್ತಿದ್ದಾರೆ. ದೈನಂದಿನ ಮದ್ಯ ಮಾರಾಟದ ವ್ಯವಹಾರದಲ್ಲಿ ತಾಳ್ಮೆ ಅತಿಮುಖ್ಯ. ತಾಳ್ಮೆ ಕಳೆದುಕೊಂಡರೆ ವ್ಯವಹಾರ ಢಮಾರ್!
ಇದು ಅವರಲ್ಲಿ ತಾಳ್ಮೆಯ ಪವರ್ ನ್ನು ಸಾಕಷ್ಟು ಹೆಚ್ಚಿಸಿದೆ.

ಇದರ ನಡುವೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಬಳಿಕವಂತೂ ಬೆಂಗಳೂರು ಲೇವೆಲ್ ನಲ್ಲಿ ಅವರು ಕಲಿತಿರುವ ರಾಜಕಾರಣದ ಕಾರ್ಯತಂತ್ರಗಳು ಅವರ ನೆರವಿಗೆ ಬಂದವು. ವಿರೋಧಿಗಳು ಎಷ್ಟೇ ರೇಗಾಡಿ, ಎಗುರಾಡಿದರೂ ಅವರನ್ನು ಲೈನ್ ಕ್ರಾಸ್ ಮಾಡಲು ಬಿಡಲಿಲ್ಲ.

ಅಚ್ಚರಿ ಎಂದರೇ, ಬಹುತೇಕ ಕಡೆಗಳಲ್ಲಿ ಆಡಳಿತ ಪಕ್ಷಗಳ ವಿರುದ್ಧವಾಗಿ ವಿರೋಧಪಕ್ಷಗಳು ಕದನ ಕಣಕ್ಕೀಳಿಯುವುದು ಸಹಜ. ಆದರೇ ಇಂದಿನ ಸಭೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಕೌನ್ಸಿಲ್ ರ್ ಗಳೇನೆ ಸ್ವಪಕ್ಷದ ಅಧ್ಯಕ್ಷರ ವಿರುದ್ಧವಾಗಿಯೇ ಭರ್ಜರಿ ‘ದಂಗಲ್’ ಮಾಡಿದ್ದು ವಿಶೇಷವಾಗಿತ್ತು.

ಇತ್ತ ಬಜೇಟ್ ಪೂರ್ವ ಸಿದ್ದತಾ ಸಭೆಯಲ್ಲಿ ಉದ್ದೇಶ ಇಲ್ಲದಿದ್ರು ಏನಾದರೂ ಸಣ್ಣ ನೆಪ ಮುಂದಿಟ್ಟು ಕೊಂಡು ಸ್ವಪಕ್ಷದ ಸದಸ್ಯರುಗಳು ನನ್ನ ಮೇಲೆ ಮುರುಕೊಂಡು ಬಿದ್ದೇ ಬಿಳ್ಳುತ್ತಾರೆ. ಸಭೆಯಲ್ಲಿ ಗೊಂದಲ ಉಂಟು ಮಾಡೇ ಮಾಡುತ್ತಾರೆ ಎನ್ನುವ ವರ್ತಮಾನದ ಮರ್ಮವನ್ನು ಅಧ್ಯಕ್ಷ ಮರಿರಾಮಣ್ಣ ಅರಿತಿದ್ರು.

ಮಂಗಳವಾರ ಹನ್ನೊಂದು ಗಂಟೆಗೆ ಪುರಸಭಾ ಸಭಾಂಗಣದಲ್ಲಿ ಬಜೇಟ್ ಪೂರ್ವ ಸಭೆ ನಡೆಯುವ ಬಗ್ಗೆ ಅಧಿಕೃತವಾಗಿ ಘೋಷಣೆ ಪ್ರಕಟವಾದಗಾಲೇ ಈ ಸಭೆ ಸುರಕ್ಷಿತವಾಗಿ ಸಂಪನ್ನಗೊಳ್ಳದ್ದು ಎನ್ನುವ ಮಾತುಗಳು ಪಟ್ಟಣದ ತುಂಬನೂ ಜೋರಾಗಿದ್ದವು.

ಮರಿರಾಮಣ್ಣ ರೆಡಿಯಾಗಿಯೇ ಸಭೆಗೆ ಬಂದಿದ್ರು. ಹೀಗಾಗಿ ಸ್ವಪಕ್ಷದ ಅಸಮಾಧಾನಿತ ಸದಸ್ಯರು ಒಂದೂಗೂಡಿ ಹಾಕುತ್ತಿದ್ದ ಪ್ರತಿ ಪಟ್ಟಿಗೂ ಅಧ್ಯಕ್ಷ ಮರಿರಾಮಪ್ಪ ಜಗ್ಗಲಿಲ್ಲ, ಬೇದರಲಿಲ್ಲ ಹೀಗಾಗಿ ಎಷ್ಟೇ ಪ್ರಯತ್ನ ಮಾಡಿದರೂ ಅಧ್ಯಕ್ಷರನ್ನು ಮಾತಿನ ಸಮರದಲ್ಲಿ ಸ್ವಪಕ್ಷೀಯ ಎದುರಾಳಿಗಳಿಗೆ ಮಣಿಸಲಾಗಲಿಲ್ಲ.

  • ಹುಳ್ಳಿಪ್ರಕಾಶ, ಸಂಪಾದಕರು. 9448234961
RELATED ARTICLES
- Advertisment -

Most Popular

Recent Comments