Thursday, February 26, 2026
HomeUncategorizedಬಜೇಟ್ ಗದ್ದಲ; ಅಶಿಸ್ತು ತೋರಿದ ಸದಸ್ಯರಿಗೆ, ವರಿಷ್ಠ ರಿಂದ 'ಶಿಸ್ತಿ'ನ ಪಾಠ ಕಲಿಸಲು 'ಕೈ'...

ಬಜೇಟ್ ಗದ್ದಲ; ಅಶಿಸ್ತು ತೋರಿದ ಸದಸ್ಯರಿಗೆ, ವರಿಷ್ಠ ರಿಂದ ‘ಶಿಸ್ತಿ’ನ ಪಾಠ ಕಲಿಸಲು ‘ಕೈ’ ಪಕ್ಷದ ಹಿರಿಯ ನಾಯಕ ಶಿವಯೋಗಿ ವಕೀಲರ ಚಿಂತನೆ.

  • ಸುನಾಮಿನ್ಯೂಸ್, ಫೆ,26
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಹಗರಿಬೊಮ್ಮನಹಳ್ಳಿ ಪುರಸಭೆಯ ಬಜೇಟ್ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಸದಸ್ಯರ ನಡುವಳಿಕೆಗಳು ಮತ್ತು ಸ್ವಪಕ್ಷದ ಅಧ್ಯಕ್ಷರ ಮೇಲೆಯೇ ಹೇರಿಹೊದ ಅವರ ಅತೀರೇಕದ ವರ್ತನೆಗಳು ನಮ್ಮ ಪಕ್ಷಕ್ಕೆ ಸಾರ್ವಕನಿಕವಾಗಿ ಮುಜುಗರವನ್ನುಂಟು ಮಾಡಿ, ಪಕ್ಷದ ಘನತೆ, ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಪಕ್ಷದ ಹಿರಿಯ ನಾಯಕರು, ಹಿರಿಯ ವಕೀಲರು ಆದ ಬಿ.ವಿ.ಶಿವಯೋಗಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ‘ಸುನಾಮಿನ್ಯೂಸ್’ ಜೊತೆಗೆ ಮಾತನಾಡಿದ ಅವರು, ಮಂಗಳವಾರದ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪಕ್ಷದ ನಿಲುವು ಉಲಂಘಿಸಿರುವ ಸದಸ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ನಾನು ಈ ಕೂಡಲೇ ಪಕ್ಷದ ವರಿಷ್ಠರಿಗೂ ಮನವರಿಕೆ ಮಾಡುತ್ತೇನೆ ಎಂದರು.

2026-27 ರ ಸಾಲಿನಲ್ಲಿ ಪುರಸಭೆಯ ಬಜೇಟ್ ರೂಪರೇಷೆ ಯಾವ ರೀತಿಯಲ್ಲಿರ ಬೇಕೆಂದು ಸಾರ್ವಜನಿಕರು ಮತ್ತು ಪಟ್ಟಣದ ಸಂಘ,ಸಂಸ್ಥೆಗಳಿಂದ ಸಲಹೆ ಸ್ವೀಕರಿಸಲು ಮಂಗಳವಾರ ಸಭೆ ಕರೆದಿದ್ದೇ ಹೊರತು ಅದು ‘ಜನರಲ್ ಬಾಡಿ ಮಿಟಿಂಗ್’ ಅಲ್ಲ. ಸಾಮಾನ್ಯಸಭೆ ಕರೆದಿಲ್ಲ ಎನ್ನುವ ನೆಪ ಮುಂದಿಟ್ಟು ಕೊಂಡು ಸ್ವಪಕ್ಷದ ಅಧ್ಯಕ್ಷರ ಮೇಲೆಯೇ ಕಾಂಗ್ರೆಸ್ ಸದಸ್ಯರು ರೇಗಾಡಿ, ಕೂಗಾಡುವ ಮೂಲಕ ವಿರೋಧ ಪಕ್ಷಗಳಿಗೆ ಆಹಾರ ಒದಗಿಸಿದ್ದಾರೆ ಎಂದರು.

ಜನರಲ್ ಬಾಡಿ ಮಿಟಿಂಗ್ ಕರೆಯಲು ಕೂಡ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಹಲವು ಮಾನದಂಡಗಳನ್ನು ರೂಪಿಸಿದೆ.‌ ಸಭೆ ಕರೆಯುವುದು ವಿಳಂಬವಾಗಿದ್ದರೇ ಸದಸ್ಯರು ಸಂಭಂದಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೇ ಬಜೇಟ್ ಸಭೆಯನ್ನೆ ಟಾರ್ಗೆಟ್ ಮಾಡಬಾರದಿತ್ತು ಎಂದು ಶಿವಯೋಗಿ ವಕೀಲರು ಬೇಸರ ವ್ಯಕ್ತಪಡಿಸಿದರು.

ಒಂದು ರಾಜಕೀಯ ಪಕ್ಷ ದಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವು ಭಿನ್ನತೆ ಇರುವುದು ಸಹಜವೇ ಸರಿ. ಆಗಂತಾ ಅವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದರೇ ಅದರಿಂದ ಪಕ್ಷಕ್ಕೆ ಹಾನಿ ಉಂಟಾಗುತ್ತದೆ. ಬದಲಿಗೆ ಪಕ್ಷದ ಚೌಕಟ್ಟಿನೊಳಗೆಯೇ ಪರಿಹಾರಿಸಿಕೊಳ್ಳಬೇಕಿತ್ತು.
ಇದು ನಮ್ಮ ಪಕ್ಷವನ್ನು ಪುರಸಭೆಯಲ್ಲಿ ಪ್ರತಿನಿಧಿಸುತ್ತೀರುವ ಕೌನ್ಸಿಲರ್ ಗಳು ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.

ಪುರಸಭೆಯ ಅಧ್ಯಕ್ಷ ಮರಿರಾಮಪ್ಪ ಜಂಟಲ್ ಮ್ಯಾನ್ ಅಷ್ಟೆ ಅಲ್ಲಾ ಕ್ಲಿನ್ ಹ್ಯಾಂಡ್ ಕೂಡ. ಸಾರ್ವಜನಿಕರ ಸಮಸ್ಯೆಗಳಿಗೆ ಆ ತಕ್ಷಣಕ್ಕೆ ಕಿವಿಯಾಗಿ ಸ್ಪಂದಿಸುವ ಗುಣಸಂಪನ್ನರು ಹೌದು. ಅವರ ಈ ನಡೆ ಈ ಪಟ್ಟಣದಲ್ಲಿ ನಮ್ಮ ಪಕ್ಷದ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಭಾವನೆ ಮೂಡಿಸಿದೆ ಎಂದು, ಪುರಸಭೆ ಅಧ್ಯಕ್ಷರ ಕಾರ್ಯ ವೈಖರಿಗೆ ತಾಪಂ ಮಾಜಿ ಉಪಾಧ್ಯಕ್ಷರು, ತಾಲೂಕ ವಕೀಲರ ಸಂಘದ ಮಾಜಿ ಅಧ್ಯಕ್ಷರು ಆದ ಶಿವಯೋಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಹುಳ್ಳಿಪ್ರಕಾಶ, ಸಂಪಾದಕರು,9448234961

RELATED ARTICLES
- Advertisment -

Most Popular

Recent Comments