Monday, March 2, 2026
HomeUncategorizedಉರಿ ಬಿಸಿಲಿಗೂ ಜಗ್ಗದ 'ಜೆಡಿಎಸ್' ಕಾರ್ಯಕರ್ತರು! 'ನಿಖಿಲ್' ನೋಡಲು ಮೂರುವರೇ ತಾಸು ಕಾದರು!

ಉರಿ ಬಿಸಿಲಿಗೂ ಜಗ್ಗದ ‘ಜೆಡಿಎಸ್’ ಕಾರ್ಯಕರ್ತರು! ‘ನಿಖಿಲ್’ ನೋಡಲು ಮೂರುವರೇ ತಾಸು ಕಾದರು!

  • ಸುನಾಮಿನ್ಯೂಸ್, ಮಾರ್ಚ್, 2
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಉರಿ ಬಿಸಿಲಿಗೂ ಜಗ್ಗದ ‘ಜೆಡಿಎಸ್’ ಕಾರ್ಯಕರ್ತರು! ‘ನಿಖಿಲ್’ ನೋಡಲು ಮೂರುವರೇ ತಾಸು ಕಾದರು!

ತಮ್ಮ ನೆಚ್ಚಿನ ಯುವ ನಾಯಕನ ಮೇಲಿಟ್ಟಿರುವ ಅಭಿಮಾನದ ಮುಂದೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ‘ಸೂರ್ಯ’ನೇ ತಣ್ಣಾ ಗಾಗಬೇಕಾಯ್ತು! ಕಾಲ ಬುಡದಲ್ಲಿ ಕೆಂಡದಂತಹ ಅನುಭವ, ತಲೆ ಮೇಲೆ ನೆತ್ತಿ ಸುಡುವ ಕಡು ಬಿಸಿಲು ಇದ್ಯಾವುದು ಕೂಡ ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು, ಕಾರ್ಯಕರ್ತರನ್ನು ವಿಚಲಿತರನ್ನಾಗಿಸಲಿಲ್ಲ.

ನೆಚ್ಚಿನ ಯುವ ನಾಯಕ ಬರಲು ನಿಗದಿತ ಸಮಯ ಕ್ಕಿಂತಲೂ ಬರೋಬ್ಬರಿ ಮೂರುವರೇ ತಾಸು ವಿಳಂಬಿಸಿದರೂ ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳು ಒಂದ್ಚೂರು ಮಿಸುಕಾಡಲಿಲ್ಲ, ಬೇಸರಿಸಿಕೊಳ್ಳಲಿಲ್ಲ! ಬಿರು ಬಿಸಿಲಿಗೂ ಅವರಲ್ಲಿದ್ದ ಜೋಷ್ ನ್ನು ಬತ್ತಿಸಲಾಗಲಿಲ್ಲ!

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಯು.ಕೆ. ಕೊಟ್ರಬಸಪ್ಪ ಬಯಲು ಜಾಗದಲ್ಲಿ ಜೆಡಿಎಸ್ ಕ್ಷೇತ್ರ ಘಟಕ ಭಾನುವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ‘ಜನರೊಂದಿಗೆ ಜನತಾದಳ ಹಾಗೂ ಪಕ್ಷದ ಸದಸ್ಯತ್ವ ನೋಂದಣಿ ಬೃಹತ್ ಅಭಿಯಾನ’ದಲ್ಲಿ ಕಂಡು ಬಂದ ಚಿತ್ರಣವಿದು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಬೆಳಿಗ್ಗೆ ಹತ್ತು ಗಂಟೆಗೆ ನಿಗದಿ ಆಗಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯಿಂದಲೇ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಸಮಾರಂಭದ ಸ್ಥಳದತ್ತ ತಂಡೋಪ,ತಂಡವಾಗಿ ಬಂದು ಜಮಾ ವಾಗತೊಡಗಿದರು.

ಗಡಿಯಾರದ ಮುಳ್ಳು ಹತ್ತನ್ನು ಕ್ರಾಸ್ ಮಾಡುವ ವೇಳೆಗೆಲ್ಲ ಪಟ್ಟಣದ ಬೀದಿಗಳೆಲ್ಲವೂ ತೆನೆಹೊತ್ತ ಮಹಿಳೆಯ ಚಿಹ್ನೆ ಹೊತ್ತ ಧ್ವಜಾಧಾರಿಗಳಿಂದ ಭರ್ತಿಯಾದವು! ಆದರೇ ಕಾರ್ಯಕರ್ತರ ನೆಚ್ಚಿನ ಯುವ ನಾಯಕ ನಿಖಿಲ್ ಬರುವ ಸಣ್ಣ ಸುಳಿವು ಕಾಣಲಿಲ್ಲ. ‘ಇನ್ನೂ ಕೇಲವೇ,ಕೆಲವು ಕ್ಷಣಗಳಲ್ಲಿ ನಿಖಿಲ್ ಕುಮಾರಸ್ವಾಮಿ ಬರಲಿದ್ದಾರೆ’. ಎಂದು ಸಂಘಟಕರ ನುಡಿಮುತ್ತುಗಳು ಧ್ವನಿವರ್ಧಕಗಳು ಬಿತ್ತಾರಗೊಳಿಸುತ್ತಲೇ ಇದ್ದವು.

ಗಡಿಯಾರದ ಮುಳ್ಳು
ಕ್ಷಣ ಧಾಟಿ, ಅರ್ಧ ಗಂಟೆ ಕಳೆದು, ಹತ್ತು, ಹನ್ನೊಂದು, ಹನ್ನೆರೆಡು ಗಂಟೆಗಳನ್ನು ಧಾಟಿ, ಕೊನೆಗೆ ನಡು ಮಧ್ಯಾಹ್ನ ಸಮೀಪಿಸಿದರೂ ನಿಖಿಲ್ ಸುಳಿವೇ ಇಲ್ಲಾ. ಆಗಂತಾ ಕಾರ್ಯಕರ್ತರು ಮಾತ್ರ ಎದ್ದು ಹೊರ ನಡೆಯಲಿಲ್ಲ. ವೇದಿಕೆ ಪಕ್ಷದಲ್ಲಿದೆ ಸಿದ್ದಪಡಿಸಿದ್ದ ಸ್ವಾಧಿಕಷ್ಟಕರ ಗೋಧಿ ಹುಗ್ಗಿ, ರುಚಿಕರವಾದ ಸೋಪ್ಪಿನ ಸಾರು, ಹೂವಿನಂತಹ ಮೃದುವಾದ ಅನ್ನದೂಟವನ್ನು ಹೊಟ್ಟೆ ತುಂಬ ಊಟ ಮಾಡಿ, ಮೇಲೆ ಮಜ್ಜಿಗೆ ಕುಡಿದು ಪಟ್ಟಾಂಗ ಹಾಕಿ ಕುಳಿತರು.

ಕೊನೆಗೂ ಮಧ್ಯಾಹ್ನ ಒಂದೂವರೇ ಗಂಟೆಗೆ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ ಶಾಸಕ ಕೆ.ನೇಮಿರಾಜನಾಯ್ಕ್, ವಿಜಯನಗರ ಜಿಲ್ಲಾ ಜೆಡಿಎಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ ಅವರ ಜೊತೆಗೂಡಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಬೆಳಿಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾಯುತ್ತಿದ್ದ ಪಕ್ಷದಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಮುಗಿಲು ಮುಟ್ಟುವ ರೀತಿಯಲ್ಲಿ ಜಯಘೋಷ ಮೊಳಗಿಸಿ ಸಂಭ್ರಮಿಸಿ, ತಮ್ಮ ನೆಚ್ಚಿನ ಯುವ ನಾಯಕನಿಗೆ ಅದ್ದೂರಿ ಸ್ವಾಗತಕೋರಿದರು.

ತಡವಾಗಿ ಬಂದರೂ ನಿಖಿಲ್ ಕುಮಾರಸ್ವಾಮಿ ತಮಗಾಗಿ ಕಾದಿದ್ದ ಪಕ್ಷದ ಕಾರ್ಯಕರ್ತರನ್ನು ನಿರಾಸೆಗೊಳಿಸಲಿಲ್ಲ. ತನ್ನ ಅಜ್ಜ ಮಾಜಿ ಪ್ರಧಾನಿ ದೇವೆಗೌಡರಂತೆ, ತಂದೆ ಮಾಜಿ ಸಿಎಂ, ಹಾಲಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರಂತೆ ರೈತರ ಪರವಾಗಿ ಭರ್ಜರಿ ಭಾಷಣದ ಮೂಲಕ ನಿಖಿಲ್ ಕುಮಾರಸ್ವಾಮಿ ನಾನು ಅನ್ನದಾತರ ಪರ ಎನ್ನುವ ಮೂಲಕ ಕೃಷಿಕರೇ ಹೆಚ್ಚಾಗಿರುವ ಪಕ್ಷದ ಕಾರ್ಯಕರ್ತರ ಮನಗೆದ್ದರು.

ತಮ್ಮ ಭಾಷಣದಲ್ಲಿ, ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖ ಮಾಡದೆಯೇ ರಾಜ್ಯ ಸರ್ಕಾರದ ವಿರುದ್ಧವಾಗಿ ತೀವ್ರ ವಾಗ್ದಾಳಿ ನಡೆಸುವ ಮೂಲಕ ಭರ್ಜರಿ ಚಪ್ಪಾಳೆ,ಕೇಕೆಗಳ ಸುರಿಮಳೆಯನ್ನೇ ನಿಖಿಲ್ ಪಡೆದುಕೊಂಡರು.

ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಹೊಡೆಯುತ್ತಾ, ಆಡಳಿತದ ತುಂಬನೂ ಭ್ರಷ್ಟಾಚಾರವನ್ನು ಹಾಸುಹೊಕ್ಕಾಗಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ಬೀದಿಗಿಳಿದು ಹೋರಾಟ ಮಾಡುವ ಹುರುಪನ್ನು ನಿಖಿಲ್ ತಮ್ಮ ನಿಖರವಾದ, ಖಡಕ್ ಮಾತುಗಳ ಮೂಲಕ ಭರ್ತಿಗೊಳಿಸಿದರು.

ಸರಿ,ಸುಮಾರು ಅರ್ಧತಾಸು ನಿರ್ಗಳವಾಗಿ ಮಾತನಾಡಿದ ನಿಖಿಲ್, ಉರಿ ಬಿಸಿಲನ್ನು ಲೆಕ್ಕಿಸಿದೇ ಕಾದಿದ್ದ ಪಕ್ಷದ ಕಾರ್ಯಕರ್ತರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ತಮ್ಮ ನಗು ಮುಖ ದಿಂದಲೇ ಕಾರ್ಯಕರ್ತರ ಮನದೊಳಗೆ ನೆಲೆಗೊಂಡರು.

ನೀರಾವರಿಗೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಕರ್ನಾಟಕದಲ್ಲಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾಡಿದೆ ಎಂದು ಜಾತ್ಯಾತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ರಾಜ್ಯದಲ್ಲಿರುವುದು ಜನರ, ರೈತರ ಹಿತಕಾಪಾಡುವಂತಹ ಸರ್ಕಾರವಲ್ಲ, ಅತ್ಯಂತ ಭ್ರಷ್ಟ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡ್ತಾಯಿದೆ. ಗ್ಯಾರಂಟಿ ಹೆಸರಿನಲ್ಲಿ ಹಗಲು ಲೂಟಿ ಮಾಡ್ರಾಯಿರುವ ಈ ಸರ್ಕಾರವನ್ನು ಕಿತ್ತೊಗೆದು, ಸದಾ ರೈತಪರ ಚಿಂತನೆ ಮಾಡುವ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಕರ್ನಾಟದ ಜನತೆ, ಅನ್ನದಾತರು ಸಂಕಲ್ಪ ಮಾಡಿದ್ದು, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಯು ಇಂತಹದ್ದೆ ಸಂಕಲ್ಪ ಮಾಡಬೇಕೆಂದು ನೆರೆದಿದ್ದ ಜನತೆಯಲ್ಲಿ ಮನವಿ ಮಾಡಿಕೊಂಡರು.

ಇದಕ್ಕೂ ಮುನ್ನ ರಸ್ತೆ ಮೂಲಕ ಪಟ್ಟಣಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಇಲ್ಲಿನ ಮಿನಿ ವಿಧಾನಸೌಧದ ಬಳಿ ಅದ್ದೂರಿ ಆಗಿ ಸ್ವಾಗತಿಸಿ, ಅಲ್ಲಿಂದ ನೂರಾರು ಬೈಕ್ ಹಾಗೂ ಆಟೋ ರ‍್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು.

ಅದ್ದೂರಿ ಸ್ವಾಗತ ಕೋರಿದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಹಾಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಜನತದಾಳ ಪಕ್ಷ ಎಲ್ಲಿದೆ ಎಂದರೇ ನಿಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದೆ ಎಂಬುದನ್ನು ತೋರಿಸಿದ ಈ ಕ್ಷೇತ್ರದ ಜನತೆಗೆ ಕೋಟಿ,ಕೋಟಿ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಕ್ಷೇತ್ರದ ಶಾಸಕ ಕೆ.ನೇಮಿರಾಜನಾಯ್ಕ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಮಾಜಿ ಶಾಸಕರಾದ ಅನಿಲ್ ಲಾಡ್, ಹರಿಹರದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೂತನ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಬಳ್ಳಾರಿ ಜಿಲ್ಲಾಧ್ಯಕ್ಷ ಮಿನಹಳ್ಳಿ ತಾಯಣ್ಣ ಹಿರಿಯಮುಖಂಡರಾದ ಎಂಎಂಜೆ. ಹರ್ಷವರ್ಧನ, ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಮುಖಂಡರಾದ ರಾರಾಳು ಶೇಖರಪ್ಪ, ಭರಮನ ರೆಡ್ಡಿ, ಕನ್ನಿಹಳ್ಳಿ ಚಂದ್ರಶೇಖರ ಸಹಿತ ಹಲವರು ಭಾಗವಹಿಸಿದ್ದರು. ಕೆಎಂ.ಶಿವಶಂಕರಯ್ಯ ನಿರೂಪಿಸಿದರು.

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments