- ಸುನಾಮಿನ್ಯೂಸ್, ಮಾರ್ಚ್, 2
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಪಟ್ಟಣದ ಕೂಡ್ಲಿಗಿ ಸರ್ಕಲ್ ನಲ್ಲಿ ಹೋಳಿ ಹಬ್ಬದ ನಿಮಿತ್ತ ಆಚರಿಸುವ
‘ಕಲರ್ಸ್ ವಿಥ್ ಕಾರಂಜಿ’ ಹಲವು ಯುವಕರು ಒಂದಾಗಿ ಸಂಘಟಿಸ ಬಹುದು, ಆದರೇ ಅದು ಇಡೀ ಊರಿನ ಹಬ್ಬ. ನಮ್ಮ ಹಗರಿಬೊಮ್ಮನಹಳ್ಳಿ ಪಟ್ಟಣದ ಹೆಮ್ಮೆ ಹಾಗು ಗೌರವದ ಸಂಕೇತ ಕೂಡ. ಇದಕ್ಕೆ ಸಣ್ಣ ಕಪ್ಪು ಚುಕ್ಕೆ ತಾಗದಂತೆ ಎಚ್ಚರವಹಿಸುವಂತೆ ಸರ್ಕಲ್ ಇನ್ಸ್ ಪೆಕ್ಟರ್ ವಿಕಾಸ್ ಲಮಾಣಿ ಅವರು ಸಂಘಟಕರಿಗೆ ಸೂಚಿಸಿದರು.
ಭಾನುವಾರ ರಾತ್ರಿ ಪಟ್ಟಣದ ಸಿಪಿಐ ಕಚೇರಿ ಆವರಣದಲ್ಲಿ ಕರೆದಿದ್ದ ಹೋಳಿ ಹಬ್ಬದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ,
ಹಗರಿಬೊಮ್ಮನಹಳ್ಳಿ ಪಟ್ಟಣದ ಇಡೀ ಹಬ್ಬವನ್ನು ಒಂದು ಕಡೆಗೆ ಕೇಂದ್ರೀಕರಿಸುವ ಮೂಲಕ ಪಟ್ಟಣಕ್ಕೆ ಶೋಭೆ ತರುವ ಕಾರ್ಯ ‘ಕಲರ್ ವಿಥ್ ಕಾರೆಂಜಿ’ ಯಿಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ಸೈಜಿನಷ್ಟು ಅಹಿತಕರ ಘಟನೆಗಳಾಗದಂತೆ ನಿಗಾವಹಿಸಿ, ಯಾರದರೂ ಅನಾವಶ್ಯಕವಾಗಿ ಅನುಚಿತವಾಗಿ ವರ್ತಿಸಿದರೇ ನಾವು ಇಲಾಖೆಯವರು ಮುಲಾಜಿಲ್ಲದೆ ಕ್ರಮವಹಿಸುತ್ತೇವೆ ಎಂದು ಎಚ್ಚರಿಸಿದರು.
ಕಿಡಿಗೇಡಿಗಳು, ವಿನಾಕಾರಣ ಗಲಾಟೆ ಮಾಡುವವರನ್ನು ನಿಯಂತ್ರಣ ಮಾಡಲು
ನಿಮ್ಮ ಜೊತೆಗೆ ನಮ್ಮ ಇಲಾಖೆ ಕೂಡ ಜೊತೆಗೆ ಇರುತ್ತದೆ. ಯಾವುದೇ ಅಳುಕು ಇಲ್ಲದೆ ಹಬ್ಬ ಮಾಡಿ ಎಂದು ಸಂಘಟಕರ ಮನೋಸ್ಥೈರ್ಯಕ್ಕೆ ಸಿಪಿಐ ಬಲ ತುಂಬಿದರು.
ಇತ್ತಿಚಿನ ಎರಡು ವರ್ಷದಲ್ಲಿ ಬಹು ಸಂಖ್ಯೆಯಲ್ಲಿ ಸಣ್ಣ ಮಕ್ಕಳ ಜೊತೆಗೆ ಯುವತಿಯರು,
ಮಹಿಳೆಯರು ಕಲರ್ ವಿಥ್ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಹೋಳಿ ಹಬ್ಬದಾಚರಣೆಗೆ ಯಾವುದೇ ಅಡ್ಡಿ,ಆತಂಕಗಳು ಎದುರಾಗದಂತೆ ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾರಿಕೇಡ್ ವ್ಯವಸ್ಥೆ ಮಾಡುವಂತೆ ಸಂಘಟಕರಿಗೆ ವಿಕಾಸ್ ಲಮಾಣಿ ಸೂಚಿಸಿದರು.
ಸೋಷಿಯಲ್ ಮಿಡಿಯಾದ ಬಗ್ಗೆ ಎಚ್ಚರವಿರಲಿ, ಅನಾವಶ್ಯಕ ವಿಷಯಗಳು ವೈರಲ್ ಆಗದಂತೆ ನಿಗಾವಹಿಸಬೇಕು. ನಮ್ಮ ಇಲಾಖೆಯ ಸೋಷಿಯಲ್ ಮಿಡಿಯಾ ಟೀಂ ನೋಡ್ತಾ ಇರುತ್ತದೆ. ನೀವು ಕೂಡ ನಿಗಾವಹಿಸುತ್ತೀರಬೇಕು ಎಂದರು.
ಪಿಎಸ್ಐ ಬಸವರಾಜ ಅಡವಿಬಾವಿ ಮಾತನಾಡಿ, ಸಣ್ಣ ಕಪ್ಪು ಚುಕ್ಕೆ ಇರದಂತೆ ಹೋಳಿ ಹಬ್ಬ ಆಚರಿಸುವ ಮೂಲಕ ನಮ್ಮೂರಿಗೆ ಹೆಸರು ತರುವ ಕೆಲಸ ಮಾಡೋಣ. ಇಲ್ಲಿನ ಹಬ್ಬದಾಚರಣೆ ಇಡೀ ನಾಡಿಗೆ ಮಾದರಿ ಆಗುವಂತಿರಬೇಕು ಎಂದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಜನತೆ ಶಾಂತಿಪ್ರೀಯರಿದ್ದಾರೆ. ಅವರೇ ಮುಂದೆ ನಿಂತು ಅಹಿತಕರ ಘಟನೆಗೆ ಅಸ್ಪದ ನೀಡದಂತೆ ನೋಡಿಕೊಳ್ಳುತ್ತಾರೆ ಎಂದು ಪಟ್ಟಣದ ಜನತೆಯ ಸಹಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪಿಯೂಸಿ ಪರೀಕ್ಷೆ ನಡೆಯುತ್ತೀವೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾರೇ ಇರಲಿ ಅವರೆಲ್ಲ ನಮ್ಮ ಮಕ್ಕಳು ಇದ್ದಂತೆ ಯಾರಿಗೂ ಬಲವಂತವಾಗಿ ಬಣ್ಣ ಹಾಕಬೇಡಿ, ಬಟ್ಟೆ ಹರಿದುಕೊಂಡು ಅಸಭ್ಯವಾಗಿ ವರ್ತಿಸಬಾರದು, ಕುಡುಕರನ್ನು ನಿಯಂತ್ರಿಸಬೇಕು ಎಂದರು.
ಹಿರಿಯ ಪತ್ರಕರ್ತ ಹುಳ್ಳಿಪ್ರಕಾಶ, ಸೋಡಾ ನಿಂಬಣ್ಣ, ಸೆರೆಗಾರ ಹುಚ್ಚಪ್ಪ, ಕಲರ್ಸ್ ವಿಥ್ ಕಾರಂಜಿಯ ಮುಖಂಡರಾದ ಸಂದೀಪ್, ಅಶೋಕ ಉಪ್ಪಾರ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೊನ್ನದ ಗುರುಬಸವರಾಜ ಹಬ್ಬದಾಚರಣೆ ಬಗ್ಗೆ ಮಾತನಾಡಿದರು.
ಹೋಳಿ ಹಬ್ಬ ಶಾಂತಿಸಭೆಯಲ್ಲಿ
ಗ್ಯಾರಂಟಿ ಪ್ರಾಧಿಕಾರ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸೊನ್ನದ ಗುರುಬಸವರಾಜ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೆಂದ್ರ, ಹಂಪಿ ಟೈಮ್ಸ್ ಸಂಪಾದಕರಾದ ಎಂ.ಶಿವಮೂರ್ತಿ, ಕಲರ್ಸ್ ವಿಥ್ ಕಾರಂಜಿಯ ಪೂಜಾರ ಸಂತೋಷ್, ವಿರೇಶ ಉತ್ತಂಗಿ, ಶಂಭು,ಹಳೇಊರಿನ ಹಿರಿಯರಾದ ಕುಬೇರಪ್ಪ, ವಿಜಯಕುಮಾರ, ಕನ್ನಡ ರಕ್ಷಣಾ ವೇದಿಕೆಯ ಭರಮಜ್ಜನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಿಬ್ಬಂದಿಗಳಾದ ದಶರಥ್, ಮಲ್ಲೇಶನಾಯ್ಕ್, ಹನುಮಂತಪ್ಪ, ಸಿದ್ದೇಶ ನಿರೂಪಿಸಿದರು.
-ಹುಳ್ಳಿಪ್ರಕಾಶ, ಸಂಪಾದಕರು,9448234961

