Sunday, March 8, 2026
HomeUncategorizedಹ್ಯಾಳ್ಯಾ ಬೆಂಕಿ ಅವಘಡ; ಶಾಸಕ ನೇಮಿರಾಜನಾಯ್ಕ್ , ಜೆಡಿಎಸ್ ಮುಖಂಡ ಎಂಎಂಜೆ ಹರ್ಷವರ್ಧನ ಭೇಟಿ. ಸಂತ್ರಸ್ತರಿಗೆ...

ಹ್ಯಾಳ್ಯಾ ಬೆಂಕಿ ಅವಘಡ; ಶಾಸಕ ನೇಮಿರಾಜನಾಯ್ಕ್ , ಜೆಡಿಎಸ್ ಮುಖಂಡ ಎಂಎಂಜೆ ಹರ್ಷವರ್ಧನ ಭೇಟಿ. ಸಂತ್ರಸ್ತರಿಗೆ ಪರಿಹಾರ ವಿತರಣೆ.

  • ಸುನಾಮಿನ್ಯೂಸ್, ಮಾರ್ಚ್,8
  • ಕೊಟ್ಟೂರು/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಶನಿವಾರ ಸಂಜೆ ಶಾಕ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ರೈತರ ಬೆಳೆ ಹಾಗೂ ಸಪ್ಪೆ ಬಣವಿಗಳಿಗೆ ಅಗ್ನಿ ಅವಘಡ ಸಂಭವಿಸಿತ್ತು.

ಭಾನುವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಅವರು ಭೇಟಿ ನೀಡಿ, ಬೆಳೆ ಹಾಗೂ ಸಪ್ಪೆ ಬಣವಿ ಕಳೆದುಕೊಂಡವರಿಗೆ ಧೈರ್ಯ ಹೇಳಿದರು. ಆಗೇನೆ ತಮ್ಮ ವೈಯಕ್ತಿಕವಾಗಿ ನೆರವು ನೀಡಿ, ಸರ್ಕಾರ ದಿಂದ ಬಂದ ಪರಿಹಾರವನ್ನು ಸಂತ್ರಸ್ತ ರೈತರಿಗೆ ವಿತರಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾದಾಮಿ ಮೃತ್ಯುಂಜಯ್ ತಸಿಲ್ದಾರ್ ಜಿಕೆ ಅಮರೇಶ್, ತಾಲೂಕು ಪಂಚಾಯಿತಿ ಇಓ ಆನಂದ್ ಕುಮಾರ್, ಹ್ಯಾಳ್ಯ ಗ್ರಾಮದ ಮುಖಂಡರಾದ ಮಹಾಂತೇಶ್, ಕೆ ಎಸ್ ನಾಗರಾಜ್ ಗೌಡ, ವೀರಯ್ಯ,ಸಂಪತ್, ಬಸವರಾಜ್ ಹಲವರು ಶಾಸಕರ ಜೊತೆಯಲ್ಲಿದ್ದರು.

  • ಹುಳ್ಳಿಪ್ರಕಾಶ, ಸಂಪಾದಕರು, 9448234961
RELATED ARTICLES
- Advertisment -

Most Popular

Recent Comments