Wednesday, March 25, 2026
HomeUncategorizedಬಾಗಲಕೋಟೆ ಉಪ ಸಮರ; 'ಸಿಎಂ' ಅಖಾಡಕ್ಕೀಳಿದ್ರೂ! ಲಿಂಗಾಯತ ಲೀಡರ್ 'ಎಸ್ಸಾರ್ ಪಾಟೀಲ್' ಬಲ ತುಂಬದಿದ್ರೇ 'ಮೇಟಿ...

ಬಾಗಲಕೋಟೆ ಉಪ ಸಮರ; ‘ಸಿಎಂ’ ಅಖಾಡಕ್ಕೀಳಿದ್ರೂ! ಲಿಂಗಾಯತ ಲೀಡರ್ ‘ಎಸ್ಸಾರ್ ಪಾಟೀಲ್’ ಬಲ ತುಂಬದಿದ್ರೇ ‘ಮೇಟಿ ಪುತ್ರರ’ ಮುಖದಲ್ಲಿ ಹುಟ್ಟದು ಗೆಲುವಿನ ಪಸೆ!

  • *ಸುನಾಮಿನ್ಯೂಸ್, ಬೆಂಗಳೂರು, ಮಾರ್ಚ್ 25,2026
  • *ಹುಳ್ಳಿಪ್ರಕಾಶ, ಸಂಪಾದಕರು.

ಒಂದು ಕಡೆ ಸರ್ಕಾರದ ಬಲ, ಇನ್ನೊಂದು ಬದಿಯಲ್ಲಿ ಖುದ್ದು ಅಖಾಡಕ್ಕೀಳಿದಿರುವ ಸಿಎಂ! ಇತ್ತ ಧರ್ಮ,ಜಾತಿ,ಉಪ ಜಾತಿಗಳಿಗೆ ಅನುಗುಣವಾಗಿ ಸಚಿವರು,ಶಾಸಕರುಗಳ ದಂಢೀ,ದಂಢೀಯಾದ ಬೆಂಗಾವಲು!
ಇಷ್ಟೊಂದು ಬಲ, ಇದ್ಯಾಗೂ ಈ ಬಲಕ್ಕೆ ಉತ್ತರ ಕರ್ನಾಟಕದ ಪ್ರಭಾವಿ ವೀರಶೈವ ಲಿಂಗಾಯತ ಸಮುದಾಯದ ನಾಯಕರು, ವಿಧಾನ ಪರಿಷತ್ತಿನ ಮಾಜಿ ವಿಪಕ್ಷ ನಾಯಕರಾದ ಎಸ್ಸಾರ್ ಪಾಟೀಲರ ಬಲ ಸೇರ್ಪಡೆ ಗೊಳ್ಳದಿದ್ದರೇ!?

ಬಾಗಲಕೋಟೆ ಉಪ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ದಿವಂಗತ ಹೆಚ್.ವೈ.ಮೇಟಿ ಅವರ ಪುತ್ರರ ಮುಖದಲ್ಲಿ ಗೆಲುವಿನ ಪಸೆ ಮೂಡದು!? ಎನ್ನುವುದು ಈ ಹೊತ್ತಿನ ಉಪ ಕದನದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

ಯಸ್, ಈ ತರಹದ ವಿಶ್ಲೇಷಣೆಗಳು ಉಪ ಕದನದ ಅಂಕಣದಲ್ಲಿ ಹುಟ್ಟಿಕೊಳ್ಳಲು ಪ್ರಬಲವಾದ ಕಾರಣವೂ ಇದೆ. ಅದೇನೆಂದರೆ,
ಮಾಜಿ ಸಚಿವರಾಗಿದ್ದ ಹೆಚ್.ವೈ.ಮೇಟಿ ಅವರ ನಿಧನ ದಿಂದಾಗಿ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್‌ ಒಂಭತ್ತ ರಂದು ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಆದರೇ, ಪ್ರಸ್ತುತ ಈ ಕ್ಷೇತ್ರದಲ್ಲಿ ಅನುಕಂಪದ ಆಲೆ ಅಷ್ಟೊಂದಾಗಿ ಕಾಣ್ತಾಯಿಲ್ಲ! ಬದಲಿಗೆ ಈ ಸಲ ವೀರಶೈವ ಲಿಂಗಾಯತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸಿಗೆ ಕೈ ತಪ್ಪಲಿವೆ ಎನ್ನುವ ವಾತಾವರಣವೇ ಸದ್ಯ ಎಲ್ಲಡೆ ನಿರ್ಮಾಣ ಗೊಂಡಿದೆ ಎನ್ನುವ ಮಾತುಗಳು ಕ್ಷೇತ್ರದ ತುಂಬನೂ ಜೋರಾಗಿವೆ!

ಇತ್ತ ಕೈ ತಪ್ಪಿರುವ ಕ್ಷೇತ್ರದಲ್ಲಿ ಪುನಃ ಪ್ರಾಬಲ್ಯ ಸಾಧಿಸಲು ಬಿಜೆಪಿ ಪಕ್ಷ, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ವೀರಣ್ಣ ಚರಂತಿಮಠ ಅವರನ್ನು ಅಭ್ಯರ್ಥಿಯನ್ನಾಗಿಸಿ ಬೈ ಎಲೇಕ್ಷನ್ ರಣ ಕಣದಾಂಕಣಕ್ಕೆ ಇಳಿಸಿ, ಸಿದ್ದರಾಮಯ್ಯ ಸರ್ಕಾರಕ್ಕೆ ಭರ್ಜರಿ ಪೋಟಿಯ ಮುನ್ಸೂಚನೆ ಕೊಟ್ಟಿದೆ.

ಚರಂತಿಮಠರ ನಾಮಪತ್ರ ಸಲ್ಲಿಕೆಯಲ್ಲಿ ಕಂಡು ಬಂದ ಆಪಾರ ಜನಸ್ತೋಮ ನೋಡಿದರೇ ಈ ಸಲ ಅನುಕಂಪ ವರ್ಕೌಟ್ ಗಿಂತಲೂ ಫಲಿತಾಂಶದ ಮೇಲೆ ಜಾತಿ ಗರಿಷ್ಠ ಪರಿಣಾಮ ಬೀರಲಿದೆ ಎನ್ನುವುದು ಸ್ಪಷ್ಟ ಸೂಚನೆ ಕಾಣಿಸಿದೆ!ಹೀಗಾಗಿ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆ ಯಲ್ಲಿರುವ ವೀರಶೈವ ಲಿಂಗಾಯತ ಮತ ಬ್ಯಾಂಕ್ ಗೆ ಸಾಕಷ್ಟು ಡಿಮ್ಯಾಂಡ್ ಕುದರಲಿದೆ ಎನ್ನಬಹುದು!

ಇತ್ತ ಈ ಕ್ಷೇತ್ರದಲ್ಲಿ ವೀರಶೈವ ಸಮುದಾಯದಲ್ಲಿ ರೆಡ್ಡಿ ಲಿಂಗಾಯಿತ ಮತಗಳೇ ಅತ್ಯಂತ ಗರಿಷ್ಠ ಪ್ರಮಾಣದಲ್ಲಿವೆ. ಈ ತನಕವೂ ಬಾಗಲಕೋಟೆ ಕ್ಷೇತ್ರ ದಿಂದ ಗೆದ್ದು ಶಾಸಕರಾದವರಲ್ಲಿ ಹೆಚ್ಚಿನವರು ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. 2023ರ ಚುನಾವಣೆಯಲ್ಲಿ ಈ ಸಮುದಾಯದ ಬಹುತೇಕ ಮತಗಳು ಆಗಿನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಹೆಚ್.ವೈ.ಮೇಟಿ ಪರವಾಗಿ ವರ್ಗಾವಣೆಗೊಂಡಿದ್ದವು. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಮೇಟಿ ಅವರು ಐದು ಸಾವಿರ ಚಿಲ್ಲರೆ ಮತಗಳಿಂದ ಬಿಜೆಪಿಯ ವೀರಭದ್ರಯ್ಯ ಚರಂತಿಮಠರ ವಿರುದ್ಧವಾಗಿ ಗೆಲುವಿನ ನಗೆ ಬೀರಲು ಸಾಧ್ಯವಾಯ್ತು.

ಆ ವೇಳೆ ಹಿರಿಯ ಕಾಂಗ್ರೆಸ್ ನಾಯಕರು ಆಗಿರುವ ಎಸ್ಸಾರ್ ಪಾಟೀಲರು, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಜೊತೆಗಿನ ಕುದಿ ಮೌನದ ವಿರಸವನ್ನು ಮರೆತು, ತಮ್ಮ ಅನುಗಾಲದ ಒಡನಾಡಿ ಮೇಟಿ ಅವರ ಪರವಾಗಿ ಚುನಾವಣಾ ಅಖಾಡದಲ್ಲಿ ಸದೃಢವಾಗಿ ನಿಂತು, ರೆಡ್ಡಿ ಲಿಂಗಾಯತ ಸಮುದಾಯದ ಬಹುತೇಕ ಮತಗಳನ್ನು ಹೊತ್ತು ತರುವ ಮೂಲಕ ಅವರ ಗೆಲುವಿಗೆ ಪರಿಶ್ರಮಿಸಿದ್ದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮೇಲೆ
ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯ ಹಾಗು ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರು, ಸಹಕಾರಿ ಧುರೀಣರು, ವಿಧಾನ ಪರಿಷತ್ತಿನ ನಿಕಟ ಪೂರ್ವ ವಿರೋಧ ಪಕ್ಷದ ನಾಯಕರು ಆದ ಎಸ್ಸಾರ್ ಪಾಟೀಲರಿಗೆ ಬಲವಾದ ಹಿಡಿತವಿದೆ. ಕ್ಷೇತ್ರದ ಮತದಾರರ ಮನದಾಳದ ಬಗ್ಗೆನೂ, ಜಾತಿ ಸಮೀಕರಣದ ನಡೆಯು ಪಾಟೀಲರಿಗೆ ಚೆನ್ನಾಗಿ ಗೊತ್ತಿದೆ.

ಈ ಕಾರಣಕ್ಕೇನೆ ಕೈ ಪಕ್ಷ ಇವರನ್ನು ನಿರ್ಲಕ್ಷ್ಯ ಮಾಡಿದಷ್ಟು ಅದರಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಲೆಕ್ಕಕ್ಕೆ ಸೋಲಿನ ಬಾಬ್ತು ಜಮಾವಾಗಲಿದೆಯೇ ಹೊರತು ಗೆಲುವಿನ ಪಸೆ ಕಾಣದು ಎನ್ನುವ ಮಾತುಗಳು, ರಾಜಕೀಯ ವಿಶ್ಲೇಷಣೆಗಳು ಬಾಗಲಕೋಟೆ ರಾಜಕಾರಣದಲ್ಲಿ ಸದ್ಯ ಜೋರಾಗಿವೆ.

ಏಕೆಂದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಸ್ಸಾರ್ ಪಾಟೀಲರ ಹೆಸರು ಮತದಾರರ ಮಧ್ಯೆ ಸಾಕಷ್ಟು ಮುಂಚೂಣಿಯಲ್ಲಿತ್ತು. ಅವತ್ತೇನಾದರೂ ಎಸ್ಸಾರ್ ಪಾಟೀಲರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರೂ ಗೆದ್ದು ಶಾಸನಸಭೆಯಲ್ಲಿರುತ್ತಿದ್ರು! ಅಷ್ಟರ ಮಟ್ಟಿಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪ್ರಭಾವಿಶಕ್ತಿ.

ಆದರೇ, ಬಹುಕಾಲದ ಸಹಪಾಠಿ, ರಾಜಕೀಯ ಒಡನಾಡಿ ಆಗಿದ್ದ ಅದಕ್ಕೂ ಮಿಗಿಲಾಗಿ ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದ ದಿವಂಗತ ಹೆಚ್.ವೈ.ಮೇಟಿ ಅವರಿಗೆ ಪ್ರಾತಿನಿಧ್ಯ ಸಿಗಲಿ ಎನ್ನುವ ಕಾರಣಕ್ಕೇನೆ ಅಂದಿನ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಜೊತೆಗೆ ಮನಸ್ತಾಪ ಇದ್ರುನೂ ಅದನ್ನು ಬದಿಗಿಟ್ಟು ಮೇಟಿ ಅವರ ಗೆಲುವಿಗೆ ರಹದಾರಿ ನಿರ್ಮಿಸಿದ್ದು ಎಸ್ಸಾರ್ ಪಾಟೀಲರು!

ಹೆಚ್.ವೈ.ಮೇಟಿ ಅವರ ಗೆಲುವಿಗಾಗಿ ಸಾಕಷ್ಟು ಪರಿಶ್ರಮವಹಿಸಿ ದುಡಿದರು. ಈ ಕ್ಷೇತ್ರದಲ್ಲಿ ನಿರ್ಣಾಯಕ ಶಕ್ತಿ ಆಗಿರುವ ವೀರಶೈವ ಲಿಂಗಾಯತ ಮತದಾರರನ್ನು ಕಾಂಗ್ರೆಸ್ ಪರವಾಗಿ ಕ್ರೂಢೀಕರಿಸುವ ಮೂಲಕ ಲಿಂಗಾಯತ ಮತದಾರರ ಪ್ರಾಬಲ್ಯದ ಕ್ಷೇತ್ರದಲ್ಲಿ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ಮೇಟಿ ಅವರ ಗೆಲುವಿಗೆ ಮುನ್ನಡಿ ಬರೆದರು.

ಬಾಗಲಕೋಟೆ ಕ್ಷೇತ್ರದಲ್ಲಿ ಪಕ್ಷಾತೀತಾವಾಗಿ ಎಲ್ಲರೂ ಪ್ರೀತಿಸುವ, ಮೆಚ್ಚುವಂತಹ ಜನರಪರವಾಗಿರುವ ನಾಯಕರಾಗಿದ್ದಾರೆ ಎಸ್ಸಾರ್ ಪಾಟೀಲರು. ಎಲ್ಲಾ ಧರ್ಮ,ಜಾತಿ,ವರ್ಗಗಳ ಜನರು ವಿಶ್ವಾಸವಿರಿಸುವ ಮುಖಂಡರಾಗಿ ಎಸ್ಸಾರ್ ಪಾಟೀಲರ ವ್ಯಕ್ತಿತ್ವ ಬಹು ಎತ್ತರಕ್ಕೆ ಬೆಳೆದಿದೆ.

ಈ ಕಾರಣಕ್ಕೇನೆ ಪ್ರಸ್ತುತ ಉಪ ಸಮರ ಶುರುವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಸಾರ್ ಪಾಟೀಲರನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ಗೌರವಿಸುತ್ತದೆಯೋ ಅದರ ಮೇಲೆ ಅಲ್ಲಿನ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ ಎನ್ನುವುದು ಈ ಹೊತ್ತಿನ ಬಾಗಲಕೋಟೆ ಜಿಲ್ಲಾ ರಾಜಕಾರಣದ ವಿಶ್ಲೇಷಣೆಯು ಹೌದಾಗಿದೆ.

ಇದರ ಮಧ್ಯೆ, 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯರ ವರ್ಚಸ್ಸು, ಪಂಚ ಗ್ಯಾರಂಟಿಯ ಉಚಿತ ಉಡುಗೋರೆಗಳು ಇಡೀ ಬಾಗಲಕೋಟೆ ಜಿಲ್ಲೆಯಾದ್ಯಂತ ಮತದಾರರ ಬಳಗದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಭರ್ಜರಿ ಜೋಶ್ ತುಂಬಿಸಿದ್ದವು. ಈ ಜೋಶ್ ಜಿಲ್ಲೆಯಲ್ಲಿ ಕೈ ಪಕ್ಷ ಜಯಭೇರಿ ಬಾರಿಸುವಂತೆ ಮಾಡಿತ್ತು.

ಆದರೇ, ಕಾಂಗ್ರೆಸ್ ಪಕ್ಷದ ಪರವಾಗಿ 2023ರಲ್ಲಿಕಾಣಿಸಿಕೊಂಡಿದ್ದ ಜೋಶ್ ಈ ಉಪ ಸಮರದಲ್ಲಿ ಮತದಾರರಲ್ಲಿ ಕಾಣಿಸುತ್ತಿಲ್ಲ. ಇದು ಆಡಳಿತರೂಢರನ್ನು ನಿದ್ದೆಗೆಡಿಸಿದೆ ಎನ್ನುವುದು ಈ ಹೊತ್ತಿನ ಬಾಗಲಕೋಟೆ ಜಿಲ್ಲಾ ರಾಜಕಾರಣದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

ಬೈ ಎಲೇಕ್ಷನ್ ಗಳಲ್ಲಿ ಸಹಜವಾಗಿ ಆಡಳಿತ ಮಾಡುವ ಸರ್ಕಾರದ ಪರವಾಗಿಯೇ ಫಲಿತಾಂಶ ಬರುತ್ತದೆ. ಆದರೇ ಹಲವು ಸಲ ಆಡಳಿತ ಪಕ್ಷಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ರಿಜಲ್ಟ್ ಗಳನ್ನು ಮತದಾರರು ನೀಡಿರುವ ಸಾಕಷ್ಟು ಉದಾಹರಣೆಗಳು ಕರುನಾಡ ರಾಜಕಾರಣದಲ್ಲಿ ದಾಖಲಾಗಿವೆ.

ಸದ್ಯ ಬಾಗಲಕೋಟೆ ವಿಧಾನಸಭಾ ಉಪ ಸಮರದಲ್ಲಿ ಆಡಳಿತ ಸರ್ಕಾರ ಬೆನ್ನಿಗೆ ನಿಂತಿದ್ರೂ ಕೂಡ, ಆ ಪಕ್ಷದ ಅಭ್ಯರ್ಥಿ ಆಗಿರುವ ಉಮೇಶ ಮೇಟಿ ಅವರಿಗೆ ಗೆಲುವಿನ ಲೆಕ್ಕಾಚಾರಗಳು ಅಷ್ಟು ಸುಲಭವಿಲ್ಲ. ಏಕೆಂದರೆ ಈ ಕ್ಷೇತ್ರದಲ್ಲಿರುವ ರೆಡ್ಡಿ ಲಿಂಗಾಯತ ಸಮುದಾಯದ ಮತಬ್ಯಾಂಕಿನ ಸಂಪೂರ್ಣವಾದ ಬಲ ಸಿಗದಿದ್ದರೇ ಆಡಳಿತ ಪಕ್ಷಕ್ಕೆ ಮುಖಭಂಗ ತಪ್ಪಿದ್ದಲ್ಲ ಎನ್ನುವ ವಾತಾವರಣ ಸದ್ಯ ಕ್ಷೇತ್ರದಲ್ಲಿ ಆವರಿಸಿದೆ!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಸಮರದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಗೆಲುವಿನ ಹಣೆಬರಹವನ್ನು ಬರೆಯುವಂತಹ ನಿರ್ಣಾಯಕರು ಆ ಕ್ಷೇತ್ರದ ತುಂಬಾನೂ ವ್ಯಾಪಕ ಪ್ರಮಾಣದಲ್ಲಿರುವ ರೆಡ್ಡಿ ಲಿಂಗಾಯತ ಮತದಾರರು!

ಯಸ್, ಸಾಮಾನ್ಯವರ್ಗಕ್ಕೆ ಮೀಸಲಿರುವ ಬಾಗಲಕೋಟೆ ಕ್ಷೇತ್ರ ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಲಿಂಗಾಯತ ಒಳ ಪಂಗಡಗಳಲ್ಲಿ ಬರುವಂತಹ ಹಲವು ಉಪ ಜಾತಿಗಳು ಬಿಜೆಪಿ ಪರವಾಗಿ ಹಲವು ಚುನಾವಣೆಗಳಲ್ಲಿ ನಿಲ್ಲುತ್ತಾ ಬಂದ್ರುನೂ ಇತ್ತ ಇಲ್ಲಿನ ಬಹುತೇಕ ರೆಡ್ಡಿ ಲಿಂಗಾಯತ ಮತದಾರರು ಲಾಗಾಯ್ತಿ ನಿಂದಲೂ ಕಾಂಗ್ರೆಸ್ ಪರವಾಗಿ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸುತ್ತಾ ಬರುತ್ತೀದ್ದಾರೆ.

ರೆಡ್ಡಿ ಲಿಂಗಾಯತ ಸಮುದಾಯದ ಜನಪ್ರೀಯ ನಾಯಕರಾಗಿರುವ ಎಸ್ಸಾರ್ ಪಾಟೀಲರು ತಮ್ಮ ಸರಳ ಜೀವನ, ಸ್ವಚ್ಛ,ದಕ್ಷ ಮತ್ತು ಜನರಪರವಾದ ಆಡಳಿತದ ಮೂಲಕ ಸರ್ವಧರ್ಮ, ಜಾತಿ,ಸಮುದಾಯಗಳ ಮತದಾರ ವರ್ಗದಲ್ಲೂ ಜಾತ್ಯಾತೀತ ನಾಯಕರಾಗಿ ಗೌರವಿಸಲ್ಪಡುತ್ತಾರೆ.

ಬಾಗಲಕೋಟೆ-ವಿಜಯಪುರ ಈ ಎರಡು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದಿಂದ ಸತತವಾಗಿ ನಾಲ್ಕು ಸಲ ರಾಜ್ಯ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷ ದಿಂದ ಆಯ್ಕೆಯಾಗಿ, ಸಚಿವ, ಸಭಾನಾಯಕ, ವಿಪಕ್ಷ ನಾಯಕರಾಗಿ, ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿಯು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸುತ್ತಾ ಬರುತ್ತಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿರುವ ರೆಡ್ಡಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಹೌದಾಗಿದ್ದಾರೆ. ಇಂತಹ ಪ್ರಭಾವಿ ನಾಯಕರಿಗೆ 2021ರಲ್ಲಿ ಅವರು ಪರಿಷತ್ತಿನ ವಿರೋಧಪಕ್ಷದ ನಾಯಕರಿದ್ದಾಗಲೇನೆ ಕುತಂತ್ರ ಮಾಡಿ ಅವರಿಗೆ ಸ್ಥಳಿಯಸಂಸ್ಥೆ ಕ್ಷೇತ್ರದ ಟಿಕೇಟ್ ತಪ್ಪಿಸಲಾಯ್ತು. ಇದರಿಂದ ಪಕ್ಷಕ್ಕೆ ನಷ್ಟವಾಯ್ತೇ ಹೊರತು ಪಾಟೀಲರಿಗಲ್ಲ.

ಇತ್ತ, ರೆಡ್ಡಿ ಲಿಂಗಾಯತ ಮತದಾರರು ಗಟ್ಟಿಯಾಗಿ ಬೆಂಬಲಕ್ಕೆ ನಿಂತಿರುವ ಕಾರಣಕ್ಕೇನೆ ಕುರುಬ ಸಮುದಾಯಕ್ಕೆ ಸೇರಿದ ಹೆಚ್.ವೈ.ಮೇಟಿ ಅವರು 2013 ಮತ್ತು 2023ರ ಈ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯ್ತು. ಈ ಕ್ಷೇತ್ರದಲ್ಲಿ ರೆಡ್ಡಿ ಲಿಂಗಾಯತ ಮತದಾರರನ್ನು ಹಿರಿಯ ನಾಯಕರಾಗಿರುವ ಎಸ್ಸಾರ್ ಪಾಟೀಲ ರವರು ಕಾಂಗ್ರೆಸ್ ಪರವಾಗಿ ನಿರ್ಣಾಯಕ ಶಕ್ತಿ ಆಗಿಸಿದ್ದರಿಂದಲೇ ನಮ್ಮ ತಂದೆಯವರಿಗೆ ಎರಡು ಸಲ ಗೆಲುವು ಸಿಕ್ತು ಎನ್ನುವ ಸಂಗತಿ ದಿವಂಗತ ಮೇಟಿ ಕುಟುಂಬಕ್ಕೆ ಗೊತ್ತೀರದ ವಿಚಾರವೇನಲ್ಲ!

ಒಂದುವೇಳೆ ಕ್ಷೇತ್ರದಲ್ಲಿರುವ ರೆಡ್ಡಿ ಲಿಂಗಾಯತ ಮತದಾರರು ಏನಾದರೂ ಕೈ ಬಿಟ್ರೇ!? ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆನ್ನಿಗೆ ನಿಂತು, ಹಣದ ಹೊಳೆಯನ್ನೇ ಹರಿಸಿದರೂ ಉಪ ಸಮರದಲ್ಲಿ ಮೇಟಿ ಪುತ್ರನ ಖೇಲ್ ಖತ್ಂ! ಎನ್ನುವ ಮಾತುಗಳು ಉಪ ಚುನಾವಣೆ ನಡೆದಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ಕಡೆಯಿಂದಲೂ ಜೋರಾಗಿ ಕೇಳಿ ಬರುತ್ತೀವೆ!

ಏಕೆಂದರೆ, 2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರವಾಗಿದ್ದಂತಹ ಜೋಶ್ ಬೈ ಎಲೇಕ್ಷನ್ ನಡೆಯುತ್ತೀರುವ ಈ ವೇಳೆಗೆಲ್ಲ ಸಂಪೂರ್ಣ ಇಳಿದಿದೆ. ಬಾಗಲಕೋಟೆ ಒಂದೇ ಅಲ್ಲ ಇಡೀ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಸದ್ಯ ವ್ಯತಿರಿಕ್ತ ವಾತಾವರಣ ನಿರ್ಮಾಣಗೊಂಡಿದೆ.

  • ಹುಳ್ಳಿಪ್ರಕಾಶ, ಸಂಪಾದಕರು.9448234961

.

!

.

.

RELATED ARTICLES
- Advertisment -

Most Popular

Recent Comments