HomeUncategorizedಮುನಿಸಿದೆ ಎಂದಾಕ್ಷಣ ಮುಸ್ಲಿಂರೆಲ್ಲಾ ಕ್ಯೂ ಹಚ್ಚಿ ಬಿಜೆಪಿಗೆ ಮತ ಒತ್ತಲ್ಲ! ಈಗಲೂ ಶೇ80 ರಷ್ಟು ಮುಸ್ಲಿಂ...

ಮುನಿಸಿದೆ ಎಂದಾಕ್ಷಣ ಮುಸ್ಲಿಂರೆಲ್ಲಾ ಕ್ಯೂ ಹಚ್ಚಿ ಬಿಜೆಪಿಗೆ ಮತ ಒತ್ತಲ್ಲ! ಈಗಲೂ ಶೇ80 ರಷ್ಟು ಮುಸ್ಲಿಂ ಬಲ ‘ಮಿನಿಸ್ಟರ್ ಮಲ್ಲಣ್ಣ’ನ ಜೊತೆಗೆ ನಿಂತಿದೆ!

  • ಸುನಾಮಿನ್ಯೂಸ್, ಏಪ್ರಿಲ್,8
  • ದಾವಣಗೆರೆ/ಬೆಂಗಳೂರು

* ಹುಳ್ಳಿಪ್ರಕಾಶ, ಸಂಪಾದಕರು

ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಉಪ ಸಮರದ ರಣಕಣ ರಂಗೇರಿದೆ. ಇದೇ ಮೊದಲ ಸಲ ಈ ಕ್ಷೇತ್ರದಲ್ಲಿ ಶೇ, 40 ರಷ್ಟು ಪ್ರಮಾಣದಲ್ಲಿರುವ ಮುಸ್ಲಿಂ ಮತದಾರರಲ್ಲಿ ಆಡಳಿತರೂಢ ಕಾಂಗ್ರೆಸ್ ವಿರುದ್ಧವಾಗಿ ಅಸಹನೆ ಮತ್ತು ಅಸಮಾಧಾನ ಎದ್ದು ಕಾಣುತ್ತಿದೆ. ಆಗಂತಾ ಇದು ತಾನಾಗಿಯೇ ಹೊತ್ತಿರುವುದಲ್ಲ, ಬದಲಿಗೆ ಮಿನಿಸ್ಟರ್ ಮಲ್ಲಣ್ಣನನ್ನು ನಿಯಂತ್ರಿಸಲು ಉದ್ದೇಶಪೂರ್ವಕವಾಗಿ ಹೊತ್ತಿಸಲಾಗಿದೆ ಎನ್ನುವುದು ಬಲು ಇಂಟರೆಸ್ಟಿಂಗ್ ಆಗಿದೆ.

ಏಕೆಂದರೆ ದಾವಣಗೆರೆ ಮುಸ್ಲಿಂ ಸಮುದಾಯ ಯಾವತ್ತೂ ಕೂಡ ಶಾಮನೂರು ಮನೆತನದ ವಿರುದ್ಧವಾಗಿ ಬುಸ್ ಗುಟ್ಟಿರಲಿಲ್ಲ. ಹೀಗಾಗಿ, ಬದುಕಿರುವ ತನಕವೂ ದಕ್ಷಿಣಾದ ಪಥೇಶ್ವರನಾಗಿಯೇ ಶಾಮನೂರು ಶಿವಶಂಕರಪ್ಪ ವಿಜೃಂಭಿಸಿದ್ದರು! ದಾವಣಗೆರೆ ಮಟ್ಟಿಗೆ ಪಾಲಿಕೆಯಿಂದ ಪಾರ್ಲಿಮೆಂಟ್ ತನಕವೂ ಎಲ್ಲಾ ಚುನಾವಣೆಗಳಲ್ಲೂ ಮುಸ್ಲಿಂ ಸಮುದಾಯ ಶಾಮನೂರು ಅಣತಿ ಧಾಟಿದ್ದು ನೋಡಿದವರಿಲ್ಲ. ಆಗನೆ ಎಂತಹದ್ದೇ ಸಂದರ್ಭ ಎದುರಾದರೂ ಶಿವಶಂಕರಪ್ಪ ನವರು ಕೋಮು ರಾಜಕಾರಣದ ಜೊತೆಗೆ ಸ್ನೇಹ ಬೆಳಸಿದವರಲ್ಲ, ಅವರೊಂದಿಗೆ ‘ಮಿಲಾಪಿ’ ಮಾಡಿಕೊಂಡವರಲ್ಲ.

ಆದರೇ ಈಗ ಶಾಮನೂರು ಧಣಿ ಇಲ್ಲ. ಇದೇ ಮೊದಲ ಬಾರಿಗೆ ತಂದೆಯ ರಕ್ಷೆ ಇಲ್ಲದೆ ಅಖಾಡಕ್ಕೀಳಿದಿರುವ ಅವರ ಪುತ್ರ ಮಿನಿಸ್ಟರ್ ಮಲ್ಲಣ್ಣನ ವಿರುದ್ಧವಾಗಿ ಅಲ್ಲಿನ ಮುಸ್ಲಿಂ ಸಮುದಾಯ ಬಂಡಾಯ ಸಾರಿದೆ. ಆಗಂತಾ ಎಲ್ಲಾ ಮುಸ್ಲಿಂರು ಲಡಾಯಿ ಘೋಷಿಸಿಲ್ಲ ಎನ್ನುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ.

ಅದರಲ್ಲೂ ಸಾಧಿಕ್ ಪೈಲ್ವಾನ್ ಬಂಡಾಯ ತಣಿಸಿದ್ದು ಒಂದು ರೀತಿಯಲ್ಲಿ ಮಿನಿಸ್ಟರ್ ಮಲ್ಲಣ್ಣರ ತಲೆನೋವನ್ನು ಸಂಪೂರ್ಣ ನಿವಾರಿಸಿದೆ ಎನ್ನಬಹುದು. ಸಾಧಿಕ್ ಕಣದಲ್ಲಿದ್ದರೇ ಕನಿಷ್ಠ ಪಕ್ಷ ಹತ್ತ ರಿಂದ ಹದಿನೈದು ಸಾವಿರ ಮತಗಳನ್ನು ಪೈಲ್ವಾನ್ ಎಬ್ಬುತ್ತಿದ್ದರು.
ಹೀಗಾಗಿ ಸಾಧಿಕ್ ಪೈಲ್ವಾನ್ ಅಖಾಡ ದಿಂದ ದೂರ ಸರಿದು, ಮಲ್ಲಣ್ಣನ ಪಕ್ಕಕ್ಕೆ ಬಂದು ನಿಂತಿದ್ದು ಸಮರ್ಥ ಶಾಮನೂರನ್ನು ಬಹು ದೊಡ್ಡ ಅನಾಹುತ ದಿಂದ ತಪ್ಪಿಸಿದೆ ಎನ್ನಬಹುದು.

ಏಕೆಂದರೆ, ಸಚಿವ ಜಮೀರ್ ಹಾಗು ಎಮ್ಮೇಲ್ಸಿ ಜಬ್ಬಾರ್ ಮುನಿಸಿಕೊಂಡಿದ್ರೂನೂ, ಇತ್ತ ಕಣದಲ್ಲಿ ಎಸ್ಡಿಪಿಐ ಅಭ್ಯರ್ಥಿ ಸಹಿತ ಹದಿಮೂರು ಮುಸ್ಲಿಂ ಕ್ಯಾಂಡಿಡೇಟ್ ಗಳು ಕಣದಲ್ಲಿ ಇದ್ದಾಗಲೂ ದಕ್ಷಿಣದಲ್ಲಿ ಈಗಲೂ ಶೇ 80ರಷ್ಟು ಮುಸ್ಲಿಂ ಮತದಾರರು ಮಿನಿಸ್ಟರ್ ಮಲ್ಲಣ್ಣ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ.

ಇನ್ನೂ, ಈ ಸಲದ ಉಪ ಸಮರದಲ್ಲಿ ಮುಸ್ಲಿಂರಿಗೆ ಟಿಕೇಟ್ ನೀಡಬೇಕೆನ್ನುವ ವಿಚಾರದ ಧ್ವನಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲಿರುವ ಹಲವರು ರಾಮ್ ಅಂಡ್ ಕೋ ಸರ್ಕಲ್ ಹೋಳಿ ಹಬ್ಬದ ಡಿಜೆ ಸೌಂಡ್ ಎಫೆಕ್ಟ್ ಕೊಡಿಸಿದರು! ಹೀಗಾಗಿ ಶಾಮನೂರು ಕುಟುಂಬ, ಟಿಕೇಟ್ ಪಡೆಯಲು ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣದ ತನಕವೂ ಕಾಯಬೇಕಾಯ್ತು!

ಶಾಮನೂರು ಶಿವಶಂಕರಪ್ಪ ಅವರ ನಿಧನ ದಿಂದ ಕ್ಷೇತ್ರ ತೆರವುಗೊಂಡಿದೆ. ನಿಧನ ಹೊಂದಿದ ಮನೆತನದವರಿಗೆ ಪ್ರಾತಿನಿಧ್ಯ ನೀಡುವುದನ್ನು ರಾಜಕೀಯ ಪಕ್ಷಗಳು ಹಿಂದಿ ನಿಂದಲೂ ಅನುಸರಿಸಿಕೊಂಡು ಬರುತ್ತೀವೆ. ಈಗಾಗಿ ಉಪ ಚುನಾವಣೆ ಟಿಕೇಟ್ ಅವರಿಗೆ, ಬೇಕಿದ್ದರೇ 2028ರ ಚುನಾವಣೆಯಲ್ಲಿ ನಮಗೆ ಪ್ರಾತಿನಿಧ್ಯ ಕೊಡಿಸಿ ಎನ್ನೋಣ ಎಂದು ಸಚಿವ ಜಮೀರ್ ಆಹ್ಮದ್ ಖಡಕ್ ಆಗಿ ಹೇಳಿದ್ದರೇ.

ಬಹುಶಃ ಇವತ್ತು ಮಿನಿಸ್ಟರ್ ಮಲ್ಲಣ್ಣ ತನ್ನ ಮಗನ ಗೆಲುವಿಗೆ ಇಷ್ಟೊಂದು ಪರಿತಪಿಸುವುದು ಅಗತ್ಯ ಇರಲಿಲ್ಲ. ಆಗೇನೆ, ಮುಸ್ಲಿಂ ವಿರೋಧವನ್ನು ಕಟ್ಟಿಕೊಳ್ಳುವ ಪ್ರಮೇಯೇ ಒದಗಿ ಬರುತ್ತಿದ್ದಲ್ಲ. ದೂರದ ತೆಲಂಗಾಣ ದಿಂದ ಕ್ರಿಕೆಟ್ ರ್ ಅಜರ್ ವುದ್ದಿನ್ ಅವರನ್ನು ಇಲ್ಲಿಗೆ ಕರೆಸಿ ಮುಸ್ಲಿಂರ ಮನವೋಲಿಸುವಂತೆ ದುಂಬಾಲು ಬಿಳ್ಳುವ ಅಗತ್ಯವೂ ಒದಗಿ ಬರ್ತಾಯಿದ್ದಿಲ್ಲ.

ಇತ್ತ ಸಿಎಂ ಸಿದ್ದರಾಮಯ್ಯ ಮತ್ತವರ ಸರ್ಕಾರ ಕೂಡ ಈ ವಿಚಾರದಲ್ಲಿ ನಡೆದುಕೊಂಡ ನಡುವಳಿಕೆಗಳು ಆಗೇನೆ ಶಾಮನೂರು ಕುಟುಂಬ ಎಲ್ಲಿ ನಮ್ಮ ಪಾರುಪತ್ಯ ಕಳಚಿಬಿಳ್ಳುತ್ತೆ ಎನ್ನುವ ಹಪಾಹಪಿ ಈ ಎರಡು ಅಂಶಗಳು ಕ್ಷೇತ್ರದ ಒಟ್ಟಾರೆ ಮತದಾರರಲ್ಲಿ ಶೇಕಡ ನಲವತ್ತ ರಷ್ಟಿರುವ ಮುಸ್ಲಿಂ ಸಮುದಾಯದಲ್ಲಿ ಅಸಹನೆ, ಅಸಮಾಧಾನ ಹುಟ್ಟುವಂತೆ ಮಾಡಿದ್ದಂತು ದಿಟವಿದೆ.

ಆಗಂತಾ, ಅಸಮಾಧಾನಿತ ಮುಸ್ಲಿಂ ಮತದಾರರು ಏಪ್ರಿಲ್,9 ರಂದು ಕಮಲ ಚಿಹ್ನೆಗೆ ಬಟನ್ ಒತ್ತುತ್ತಾರೆಯೇ!? ಶಾಮನೂರು ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಸುರಿಸುತ್ತೀರುವ ದಾವಣಗೆರೆ ದಕ್ಷಿಣಾ ಕ್ಷೇತ್ರದ ಮುಸ್ಲಿಂ ಮತದಾರರು ಬಿಜೆಪಿಗೆ ಮತ ಹಾಕುತ್ತಾರೆ ಎನ್ನುವುದು ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪೇಮೆಂಟ್ ಕೋಟಾದಲ್ಲಿ ಉಚಿತ ಸೀಟು ಸಿಗುತ್ತೆ!? ಎನ್ನುವಷ್ಟೆ ಕಟು ಸತ್ಯ ಸಹ.

ಏಕೆಂದರೆ, 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿದ ದಿನಗಳಿಂದಲೂ ಈ ದೇಶದ ಮುಸ್ಲಿಂ ಮತದಾರರಲ್ಲಿ ಬಿಜೆಪಿ ಬಗ್ಗೆ ಅಸಹನೆ ಶುರುವಾಗಿದೆ. ಆಗಂತಾ ಅದಕ್ಕೂ ಮೊದಲು ಮುಸ್ಲಿಂರು ಕಮಲ ಮುಡಿದಿರಲಿಲ್ವೇ!? ಎನ್ನುವ ಪ್ರಶ್ನೆ ಇದೆ. ಆಗ ಅವರಲ್ಲಿ ಶೇಕಡ 20 ರಷ್ಟು ಮತದಾರರು ಉದಾರವಾದಿಗಳಿದ್ದರು. ಆಗಿನ ವಾಜಪೇಯಿ ನೇತೃತ್ವದ ಬಿಜೆಪಿ ಈಗಿನಷ್ಟು ಕಠೋರ, ಉಗ್ರ ಮುಸ್ಲಿಂ ವಿರೋಧಿ ಆಗಿರಲಿಲ್ಲ. ಹೀಗಾಗಿ ಪ್ರಸ್ತುತ ಶೇಕಡ ಒಂದರಷ್ಟು ಕೂಡ ಬಿಜೆಪಿಗೆ ಮತ ಒತ್ತುವರಿಲ್ಲ ಎನ್ನುವುದು ಕಠಿಣ ವಾಸ್ತವ ಕೂಡ.

ಒಂದು ವೇಳೆ ಸ್ಪರ್ಧೆ ಮಾಡಿರುವ ಕಾಂಗ್ರೆಸ್, ಸಮಾಜವಾದಿ, ಆರ್ ಜೆಡಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಕಮ್ಯೂನಿಸ್ಟ್‌ ಪಕ್ಷಗಳು……. ಹೀಗೆ ಬಿಜೆಪಿಯ ನೆಂಟಸ್ಥಿಕೆ ಹೊಂದಿರದ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಅವರಿಗೆ ಅಸಮಾಧಾನ ಇಲ್ಲವೆ ತಮಗೆ ಇಷ್ಟ ಇರದಿದ್ದರೇ, ಆಗ ಬಿಜೆಪಿ ಕ್ಯಾಂಡಿಡೇಟ್ ನ್ನು ಸೋಲಿಸುವ ಸಮರ್ಥ್ಯ ಇರುವಂತಹ ಪಕ್ಷೇತರರಾಗಿರಲಿ ಇಲ್ಲವೆ ಬಿಜೆಪಿ ಜೊತೆಗೆ ಗೆಳೆತನ ಇರದ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಆಗಿರಲಿ ಅವರ ಪರವಾಗಿ ಮತ ಚಲಾಯಿಸುತ್ತಾರೆ.

ಆಕಸ್ಮಾತ ಕಣದಲ್ಲಿರುವ ಅಭ್ಯರ್ಥಿಗಳ್ಯಾರು ಸರಿ ಕಾಣದಿದ್ದರೇ ಮತದಾನ ದಿಂದ ದೂರ ಉಳಿಯುವ ಇಲ್ಲವೆ ನೋಟಕ್ಕೆ ಮತ ಚಲಾಯಿಸುವ ಮೂಲಕ ತಮ್ಮ ಅಸಮಾಧಾನವನ್ನು ತಣಿಸುವಂತಹ ನೂರಾರು ಉದಾಹರಣೆಗಳು 2014ರ ಬಳಿಕ ಈ ದೇಶದ ಚುನಾವಣೆಯಲ್ಲಿ ದಾಖಲಾಗಿವೆ ಕೂಡ.

ದಾವಣಗೆರೆ ದಕ್ಷಿಣಾದ ಕಣದಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಸವಾಲು ಹಾಕುವಂತಹ ಬಲಿಷ್ಠವಾದ ಪರ್ಯಾಯಾ ಕಾಣ್ತಾಯಿಲ್ಲ. ಕಣದಲ್ಲಿ ಎಸ್ಡಿಪಿಐ ಅಭ್ಯರ್ಥಿ ಇದ್ದಾರೆ. ಆದರೇ ಇಡೀ ಮುಸ್ಲಿಂ ಮತದಾರರೆಲ್ಲ ಕಾಂಗ್ರೆಸ್ ತೊರೆದು ಅವರಿಗೆ ಮತ ಹಾಕಿದರೇ ಆಭ್ಯರ್ಥಿ ಗೆದ್ದೇ,ಗೆಲ್ಲುತ್ತಾನೆ ಎನ್ನುವ ಯಾವುದೇ ಸಣ್ಣ ಖಚಿತ ಗ್ಯಾರಂಟಿಯು ಈ ತನಕ ಕಾಣಿಸಿಲ್ಲ.

ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿ ಗಿಂತಲೂ ಗೆಲ್ಲುವ ಅವಕಾಶ ಜಾಸ್ತಿ ಕಾಣ್ತಾಯಿರುವುದು ಸಮರ್ಥ ಶಾಮನೂರು ಪರವಾಗಿನೇ! ಹೀಗಾಗಿ ಸರಾಸಟ್ಟಾಗಿ ಮುಸ್ಲಿಂ ಮತದಾರರು ಕಾಂಗ್ರೆಸ್ ನಿಂದ ದೂರ ಸರಿಲಾರರು ಎನ್ನುವುದು ಮತದಾನಕ್ಕೆ ಮೂರು ದಿನ ಬಾಕಿ ಇರುವಾಗ ದಾವಣಗೆರೆ ದಕ್ಷಿಣಾದಲ್ಲಿ ‘ ‘ಸುನಾಮಿನ್ಯೂಸ್’ ಗೆ ಕಂಡು ಬಂದ ವಾಸ್ತವಾ ಸ್ಥಿತಿ!

ಇದರ ನಡುವೆ, ಎಸ್ಡಿಪಿಐ ಸಹಿತ ಕಣದಲ್ಲಿರುವ ನಮ್ಮ ಅಭ್ಯರ್ಥಿಗಳು ಗೆಲ್ಲತ್ತಾರೋ, ಸೋಲುತ್ತಾರೇ ಅದು ಮುಖ್ಯವಲ್ಲ. ಆದರೇ ಕ್ಷೇತ್ರದಲ್ಲಿ ಈ ಸಲ ಮುಸ್ಲಿಂ ಸಮುದಾಯದ ಒಗ್ಗಟನ್ನು ತೋರಿಸಲೇ ಬೇಕೆನ್ನುವ ಛಲದ ಯುವ ಮತದಾರರು ಕ್ಷೇತ್ರದಲ್ಲಿದ್ದಾರೆ. ಇವರಲ್ಲಿ ಬರೀ ಶೇಕಡ ಐದ ರಷ್ಟು ಮತದಾರು ಎಸ್ಡಿಪಿಐ ಪರವಾಗಿ ಮತಚಲಾಯಿಸಿ, ಇನ್ನೂ ಉಳಿದ ಶೇಕಡ ಐದರಷ್ಟು ಮತದಾರರು ಮತದಾನ ದಿಂದ ದೂರ ಉಳಿದರೇ ಸಾಕು ಶಾಮನೂರು ಕೋಟೆಯ ತಳಪಾಯವೇ ಅಲ್ಲಾಡಿಹೋಗುತ್ತೆ ಎನ್ನುವುದು ಈ ಹೊತ್ತಿನ ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ವಿಶ್ಲೇಷಣೆಯು ಹೌದಾಗಿದೆ.

ಹೀಗಾಗಿ ಮಿನಿಸ್ಟರ್ ಮಲ್ಲಣ್ಣ, ಅವರ ಪತ್ನಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ ಅವರು ಮುಸ್ಲಿಂರು ದಟ್ಟವಾಗಿ ವಾಸಿಸುವ ಪ್ರದೇಶಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತೀರುಗಾಡುತ್ತಾ, ಮುಸ್ಲಿಂ ಮತದಾರರ ಮುನಿಸನ್ನು ತಣಿಸುವತ್ತಾ ಹಗಲು, ರಾತ್ರಿ ನಿದ್ದೆಗೆ ಬೈ ಹೇಳಿ ಪರಿಶ್ರಮಿಸುತ್ತಿದ್ದಾರೆ.

ಆಗೇನೆ ಯಾವುದೇ ಕಾರಣಕ್ಕೂ ಮತದಾನ ದಿಂದ ಒಬ್ಬೇ,ಒಬ್ಬ ಮತದಾರನೂ ದೂರ ಉಳಿದಂತೆ ಎಲ್ಲರನ್ನೂ ಮತಗಟ್ಟೆಗೆ ಕರೆ ತಂದು ಮತಹಾಕಿಸುವಂತೆ ಮುಖಂಡರು, ಕಾರ್ತಕರ್ತರಿಗೆ ಕಟ್ಟು ನಿಟ್ಟಿನ ತಾಖೀತ್ ಮಾಡಿದ್ದಾರೆ ಎನ್ನಲಾಗಿದೆ. ಮುಸ್ಲಿಮರ ಅಸಮಾಧಾನದ ಸುತ್ತಲೂ ಹುಟ್ಟಿಕೊಂಡಿರುವ ಸಂಕಥೆಗಳಿಗೆಲ್ಲ ಉತ್ತರ ಮೇ ನಾಲ್ಕರ ತನಕ ಕಾಯಬೇಕು.

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments