- ಸುನಾಮಿನ್ಯೂಸ್, ಏಪ್ರಿಲ್,8
- ಬಾಗಲಕೋಟೆ/ಬೆಂಗಳೂರು
* ಹುಳ್ಳಿಪ್ರಕಾಶ, ಸಂಪಾದಕರು.
ವಿಧಾನ ಪರಿಷತ್ತಿನ ನಿಕಟಪೂರ್ವ ವಿರೋಧ ಪಕ್ಷದ ನಾಯಕರಾದ ಎಸ್ಸಾರ್ ಪಾಟೀಲ್ ರವರು ಕಣಕ್ಕೀಳಿದ ಮೇಲೆ ಬಾಗಲಕೋಟೆ ಉಪ ಸಮರದ ಸಮೀಕರಣವೇ ಸಂಪೂರ್ಣ ಅದಲು,ಬದಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ರಣಾಕಣದಲ್ಲಿ ಆನೆ ಬಲ ತಂದುಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ಎಸ್ಸಾರ್ ಪಾಟೀಲರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಖಾಡಕ್ಕೀಳಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಮೀಸೆಯಡಿ ಎಂದಿನಂತೆ ಖುಷಿ ನಗೆ ಆರಳಿದೆ.
ಸದ್ಯ ಎಸ್ಸಾರ್ ಪಾಟೀಲರ ಅಬ್ಬರದ ಎದುರು, ಈ ತನಕವೂ ಅಭ್ಯರ್ಥಿ ಉಮೇಶ ಮೇಟಿ ಗೆಲುವಿನ ಬಗ್ಗೆ ಎದಿದ್ದ ಎಲ್ಲಾ ನಕಾರಾತ್ಮಕ ಅಂಶಗಳು ಆಲಮಟ್ಟಿ ಜಲಾಶಯದ ಹಿನ್ನೀರನ್ನು ತಲುಪಿವೆ ಎನ್ನುವುದು ಆ ಕ್ಷೇತ್ರದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಜವಾಬ್ದಾರಿಯನ್ನು ಹಿರಿಯ ನಾಯಕ ಎಸ್ಸಾರ್ ಪಾಟೀಲ್ ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮೂಲಕ ವರಿಷ್ಠರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆಗೇನೆ ತಮ್ಮ ಅನುಗಾಲದ ಮಿತ್ರರಾಗಿದ್ದ ದಿವಂಗತ ಹೆಚ್.ವೈ.ಮೇಟಿ ಅವರ ಮನೆತನಕ್ಕೆ ಗೆಲುವು ತಂದುಕೊಡಲು, ಸಮರಕಣದಲ್ಲಿ ಮತದಾರರ ಮನಸೆಳೆಯುವ ಕಾಯಕವನ್ನು ಬಿರುಸುಗೊಳಿಸಿದ್ದಾರೆ.
ಹೀಗಾಗಿ ಮತದಾನಕ್ಕೆ ಇನ್ನೂ ಬರೀ ಮೂರು ದಿನಗಳಷ್ಟೇ ಬಾಕಿ ಉಳಿದಿರುವಾಗಲೇ ಎಸ್ಸಾರ್ ಪಾಟೀಲರು ರಣಾರಂಗ ಪ್ರವೇಶಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮುಖದಲ್ಲಿ ಮೂಡಿದ್ದ ಎಲ್ಲಾ ಆತಂಕದ ಗೆರೆಗಳು ಸಂಪೂರ್ಣ ಮಾಯಾವಾಗಿ, ಆ ಜಾಗದಲ್ಲಿ ಈಗ ಗೆಲುವಿನ ಪಸೆ ದಪ್ಪನಾಗಿ ಕಾಣಿಸುತ್ತಿದೆ.
ಹೇಳಿ,ಕೇಳಿ ಈ ಕ್ಷೇತ್ರ ರೆಡ್ಡಿ ಲಿಂಗಾಯತ್ ಮತ ಬ್ಯಾಂಕ್ ಪ್ರಬಲ್ಯದ ಕ್ಷೇತ್ರವಾಗಿದೆ. ಇಂತಹದ್ರಲ್ಲಿ
ವಿಜಯಪುರದವರಾದ ಕೈಗಾರಿಕಾ ಸಚಿವ ಎಂಬಿ.ಪಾಟೀಲ್ ಅವರನ್ನು ಮುಂದು ಮಾಡಿದರೇ, ಅದರಿಂದ ಪ್ಲಸ್ ಗಿಂತಲೂ ಮೈನಸ್ಸ್ ಜಾಸ್ತಿ, ಏನು ವರ್ಕೌಟ್ ಆಗಲ್ಲ ಎನ್ನುವುದು ಕಟು ಸತ್ಯ ಕೂಡ.
ಇತ್ತ ಬಿಜೆಪಿಯ ಶ್ರೀರಾಮುಲು ಕ್ಷೇತ್ದಲ್ಲಿ ಎಬ್ಬಿಸಿರುವ ಅಬ್ಬರದ ಪ್ರಚಾರದ ಧೂಳಿನ ಎದುರು ಸಚಿವ ಸತೀಶ ಜಾರಕಿಹೊಳಿ ಅವರ ವಾಲ್ಮೀಕಿ ಸಹಿತ ಶೋಷಿತ ವರ್ಗಗಗಳ ಗೇಮ್ ಪ್ಲಾನ್ ಕೂಡ ಫಲಿತಾಂಶ ತಾರದು ಎನ್ನುವ ಸಂಗತಿ ಮನವರಿಕೆ ಆದ ಬಳಿಕ, ಇತ್ತ ಇತ್ತಿಚಿಗೆ ಪಕ್ಷಕ್ಕೆ ಸೇರ್ಪಡೆಗೊಂಡು, ನಗರಾಭಿವೃದ್ಧಿ ಪ್ರಾಧಿಕಾರದ ಹುದ್ದೆಯನ್ನು ಗಿಟ್ಟಿಸಿಕೊಂಡಿರುವ ಪ್ರಕಾಶ ತಪಶೆಟ್ಟಿ ಆತನೇ ಖುದ್ದು ಸ್ಪರ್ಧಿಸಿದಾಗ ಎರಡು ಸಾವಿರ ಮತಗಳ ಗೆರೆ ಧಾಟು ವಷ್ಟ ರೊಳಗೇನೆ ನಿಸ್ತೇಜರಾಗಿದ್ದರು. ಹೀಗಾಗಿ ಇವರಿಂದನೂ ನಯಾ ಪೈಸೆಯಷ್ಟು ಬರ್ಕತ್ ಆಗಲ್ಲ ಎನ್ನುವುದು ಕನ್ ಫರ್ಮ ಆಗುತ್ತಲೆ ಸಿಎಂ ಸಿದ್ದರಾಮಯ್ಯ ಕಳವಳದ ಕಂದಕಕ್ಕೆ ಜಾರಿದ್ದು ದಿಟ.
ಹೇಗಾದರೂ ಸರಿ ಈ ಉಪ ಸಮರವನ್ನು ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಸಿಲುಕಿದ್ದಾರೆ ಕೂಡ. ಏಕೆಂದರೆ ಕಣದಲ್ಲಿರುವ ಉಮೇಶ ಮೇಟಿ ಅವರ ಜಾತಿಯವರು, ಜೊತೆಗೆ ಪರಮಾಪ್ತರು ಬೇರೆ. ಅವರನ್ನು ಗೆಲ್ಲಿಸಿಕೊಳ್ಳದಿದ್ರೇ ನನ್ನ ಅಹಿಂದ ಚಾಂಪಿಯನ್ ಎನ್ನುವ ಕಿರಿಟ್ ನೆಲಕ್ಕುರುಳಲಿದೆ! ಇದನ್ನೇ ಮುಂದು ಮಾಡಿ ನಾಯಕತ್ವ ಬದಲಾವಣೆಗೂ ಬಿಗಿಪಟ್ಟು ಹಾಕುವ ಸಾಧ್ಯತೆ ಇದೆ ಎನ್ನುವ ಭಯದ ಸಂಕಷ್ಟ ಅವರ ಎದುರಿಗೆ ನಿಂತಿದೆ.
ಇಂತಹ ಸಂದಿಗ್ಧತೆಯ ಸಮಯದಲ್ಲಿ ಬಾಗಲಕೋಟೆ ಕಣವನ್ನು ಗೆದ್ದು ತರಲು ಸಿಎಂಗೆ ನೆನಪಾಗಿದ್ದೇ ರೆಡ್ಡಿ ಲಿಂಗಾಯತ್ ಸಮುದಾಯದ ಪ್ರಭಾವಿ ಲೀಡರ್ ಹಾಗೂ ಎಲ್ಲ ವರ್ಗದಲ್ಲೂ ಅಜಾತ ಶತ್ರು ಎನಿಸಿಕೊಂಡಿರುವ ಎಸ್ಸಾರ್ ಪಾಟೀಲ್ ಹೆಸರು.
ಎಸ್ಸಾರ್ ಪಾಟೀಲ್ ಮತ್ತು ಸಿದ್ದರಾಮಯ್ಯ ಇಬ್ಬರ ನಡುವೆ ಒಂದು ಕಾಲದವರೆಗೂ ಉತ್ತಮ ಬಾಂಧವ್ಯ ಇತ್ತು. ಆದರೇ 2021ರಲ್ಲಿ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಸ್ಸಾರ್ ಪಾಟೀಲರಿಗೆ ಟಿಕೇಟ್ ತಪ್ಪಿದ ಬಳಿಕ ದಿಂದ ಇಬ್ಬರ ನಡುವೆ ಉಭಯ ಕುಶಲೋಪರಿ ಕೂಡ ಇರಲಿಲ್ಲ. ಎದುರು, ಬದರುಗೊಂಡು ಮುಖ ತಿರುಗಿಸುವಷ್ಟು ಕಡು ಮುನಿಸು ಹುಟ್ಟಿಕೊಂಡಿತ್ತು. ಅಳಕಟ್ಟಿಗಳ ಮಾತಿಗೆ ಕಿವಿಯಾಗಿ ಬಂಗಾರದಂತಹ ನಾಯಕನ ಸ್ನೇಹವನ್ನು ಸಿಎಂ ಕಳೆದುಕೊಂಡಿದ್ರು.
ಇದರಿಂದಾಗಿ, ಇಬ್ಬರ ನಡುವೆ ಬಿಗುವಿನ ಪರಿಸ್ಥಿತಿ ಕಳೆದ ಆರು ವರ್ಷಗಳಿಂದಲೂ ಇದ್ದೆ,ಇತ್ತು. ಆದರೇ ತನ್ನ ಅಹಿಂದ ಚಾಂಪಿಯನ್ ಗೇನೆ ಭಾರೀ ಸವಾಲು ಹಾಗೂ ಪ್ರತಿಷ್ಠೆ ಆಗಿರುವ ಬಾಗಲಕೋಟೆ ಉಪ ಸಮರದ ಅಖಾಡದಲ್ಲಿ
ಇಂಪ್ಯಾಕ್ಟ್ ಪ್ಲೇಯರ್ ಆಗಿ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷರು, ಬಾಗಲಕೋಟೆ ಮತ್ತು ವಿಜಯಪುರ ಅವಳಿಜಿಲ್ಲೆಗಳ ಪ್ರಭಾವಿ ನಾಯಕರಾದ ಎಸ್ಸಾರ್ ಪಾಟೀಲ್ ಕಣಕ್ಕೀಳಿಯದಿದ್ರೇ ಮೇಟಿ ಖೇಲ್ ಖತ್ಂ ಎನ್ನುವ ಸಮೀಕ್ಷಾ ರಿರ್ಪೋಟ್ ಗಳು ಕೈ ತಲುಪುತ್ತಲೇ ಪಾತಾಳಕ್ಕೆ ಕುಸಿಯುವ ಪರಿಸ್ಥಿತಿ ನಾಡದೊರೆ ಸುತ್ತಲೂ ಆವರಿಸಿಕೊಂಡಿದ್ದಂತು ದಿಟವಿದೆ.
ಏಕೆಂದರೆ,ನಾಮಪತ್ರ ಸಲ್ಲಿಕೆ, ಆನಂತರದ ಬಳಿಕ ಖುದ್ದು ತಾವೇ ನಾಯಕತ್ವವಹಿಸಿ, ಸಾಲು,ಸಾಲು ಸಚಿವರು, ಶಾಸಕರುಗಳ ದಂಡು ಕಟ್ಟಿಕೊಂಡು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು ಸಿಎಂ ಸಿದ್ದರಾಮಯ್ಯ. ಆ ಬಳಿಕ ಅವರೇ ಗೊತ್ತು ಪಡಿಸಿದ್ದ ಅಂತರೀಕ ಸಮೀಕ್ಷಾದಾರರು ಮುಂದಿಟ್ಟ ಸಮೀಕ್ಷೆಗಳಲ್ಲಿ ಉಮೇಶ ಮೇಟಿ ಗೆಲುವಿನ ಬಗ್ಗೆ ಅನಾಹುತಕಾರಿ ಮತ್ತು ಆತಂಕಕಾರಿ ಆದ ವರದಿಗಳು ದಾಖಲಾಗಿದ್ದವು.
ಇದನ್ನು ಕಂಡು ಸಿಎಂ ಬೆಚ್ಚಿದರು ಅಂಬೋಣ.
ಅತ್ಯಂತ ಬಲಾಢ್ಯರಾದ ಇಪ್ಪತ್ತು ಸಚಿವರು, ಜಾತಿ, ಉಪಜಾತಿಗೆ ಅನುಗುಣವಾಗಿ ನಲವತ್ತು ಶಾಸಕರುಗಳು ಇವರು ಸಾಲದು ಎನ್ನುವಂತೆ ಪ್ರಭಾವಿ ಎನಿಸಿದ ತಂಡೋಪ, ತಂಡವಾಗಿರುವ ನಾಯಕರುಗಳಿದ್ರೂ ಕೂಡ ಉಮೇಶ ಮೇಟಿಯ ಫಲಿತಾಂಶದ ಬಗ್ಗೆ ಕ್ಷೇತ್ರದಲ್ಲಿ ನಕಾರಾತ್ಮಕ ವಾತಾವರಣವೇ ಎದ್ದು ಕಾಣಿಸಿದ್ದು ಸಿಎಂ ಸಿದ್ದರಾಮಯ್ಯನವರನ್ನು ಚಿಂತೆಯ ಮನೆಗೆ ದೂಡಿತ್ತು. ತಾವು ಅಖಾಡಕ್ಕೀಳಿಸಿದ ಪ್ರಬಲ ರಿಂದ ನಿರೀಕ್ಷಿತ ಫಲಿತಾಂಶ ಬರದ್ದರಿಂದ ಕೊನೆಗೆ ಇಂಪ್ಯಾಕ್ಟ್ ಪ್ಲೇಯರ್ ಆಗತ್ಯತೆ ಮನದಾಟ್ಟಾಯ್ತು.
ಆಗ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಾರಿಗೆ ಮಂತ್ರಿ ರಾಮಲಿಂಗರೆಡ್ಡಿ ಸಹಿತ ಹಲವು ಹಿರಿಯ ಸಚಿವರ ಜೊತೆಗೂಡಿ ಬಾಗಲಕೋಟೆ ಶಹರದಲ್ಲಿರುವ ಎಸ್ಸಾರ್ ಪಾಟೀಲರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ನವರು ಸ್ನೇಹದ ಪುನರ್ ಮಿಲನಕ್ಕೆ ನಾಂದಿಹಾಡಿದರು.
ಎಲ್ಲಾ ವೈಮನಸ್ಸುಗಳನ್ನು ಮರೆತು
ಆ ಕ್ಷಣವೇ ಪ್ಯಾಡ್ ಕಟ್ಟಿಕೊಂಡು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಾಗಲಕೋಟೆ ಉಪ ಸಮರದಾಂಕಣವನ್ನು ಎಸ್ಸಾರ್ ಪಾಟೀಲರು ರಭಸವಾಗಿಯೇ ಪ್ರವೇಶಿಸಿದರು.
ಸಿಎಂ ಅವರಿಂದ ರಣವೀಳ್ಯೆ ತೆಗೆದುಕೊಂಡು ಎಸ್ಸಾರ್ ಪಾಟೀಲರು ಅಖಾಡಕ್ಕೀಳಿದ ಬಳಿಕ ಅಲ್ಲಿ ತನಕ ಇದ್ದಂತಹ ಉಪ ಸಮರದ ಲೆಕ್ಕಾಚಾರಗಳೆಲ್ಲವೂ ಉಲ್ಟ್,ಪಲ್ಟ್ ಹೊಡೆಯಲಾರಂಭಿಸಿದವು. ಉಮೇಶ ಮೇಟಿ ಅವರ ಗೆಲುವಿನ ಬಗ್ಗೆ ಇದ್ದಂತಹ ನಕಾರಾತ್ಮಕ ಅಂಶಗಳು ಕ್ಷೀಣಿಸುತ್ತಾ ಸಾಗಲಾರಂಭಿಸಿವೆ. ಸಿದ್ದರಾಮಯ್ಯ ನವರು ಮೂರನೇಯ ಸಲ ಬಾಗಲಕೋಟೆ ಗೆ ಕಾಲಿಡುವ ವೇಳೆಗೆಲ್ಲ ಚಿತ್ರಣವೇ ಸಂಪೂರ್ಣ ಬದಲಾಗಿದ್ದು ಕಂಡು ಸಿದ್ದರಾಮಯ್ಯ ನಿರಾಳತೆಯಿಂದ, ಹೊಟ್ಟೆ ತುಂಬಿ ನಗುತ್ತಿದ್ದಾರೆ ಕೂಡ!
ಇದೇಲ್ಲ ಆಗಿರುವುದು ತಾವೇನೂ ಈ ತನಕ ನಿರ್ಲಕ್ಷ್ಯ ಮಾಡಿ, ದೂರ ಸರಿಸಿದ್ದ ಎಸ್ಸಾರ್ ಪಾಟೀಲ್ ಅವರ ಇಂಪ್ಯಾಕ್ಟ್ ನಿಂದ ಎನ್ನುವುದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಆಗಿದೆ ಕೂಡ. ಸರ್ವ ಜನಾಂಗ ಪ್ರೀತಿಸುವ ಎಸ್ಸಾರ್ ಪಾಟೀಲರಂತಹ ನಾಯಕ ಸಿದ್ದರಾಮಯ್ಯ ಬಲಕ್ಕೆ ಇದ್ದರೇ ಅಹಿಂದ ನಾಯಕನ ಗತ್ತಿಗೊಂದು ಕೋಹಿನೂರ್ ವಜ್ರ ಇದ್ದಂತೆಯೇ ಸರಿ.
ಬಹುಶಃ ಅವರೀವರ ಮಾತುಗಳನ್ನು ಕೇಳಿ ಎಸ್ಸಾರ್ ಪಾಟೀಲರನ್ನು ದೂರ ಇಟ್ಟಿದ್ದರೇ ಬಹುಶಃ ಉಪ ಸಮರದಲ್ಲಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಎದುರಿಸಲೇ ಬೇಕಾಗಿತ್ತು. ಬಹುಶಃ ಈಗ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಉಮೇಶ ಮೇಟಿ ಅವರ ಫಲಿತಾಂಶದ ಬಗ್ಗೆ ಇದ್ದಂತಹ ಆತಂಕಗಳು ದೂರವಾಗಿದೆ ಎನ್ನುವ ವಾತಾವರಣ ಸದ್ಯ ಕ್ಷೇತ್ರದಲ್ಲಿ ಕಾಣ್ತಾಯಿದೆ.
- ಹುಳ್ಳಿಪ್ರಕಾಶ ಸಂಪಾದಕರು,9448234961
.
.
