- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಹೊಸಪೇಟೆ, ಏ,10
ವಿಜಯನಗರ ಕ್ಷೇತ್ರದ ಶಾಸಕರ ಪುತ್ರರು, ಯುವ ಕಾಂಗ್ರೆಸ್ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷರು ಆದ ಹೆಚ್. ಜಿ.ಗುರುದತ್ ರವರು ಬುಧವಾರ ನಗರದ 19 ನೇ ವಾರ್ಡಿನ ಊರಮ್ಮ ಬಯಲಿನಲ್ಲಿ ನಗರ ಸಂಚಾರ ಮಾಡಿ, ವಾರ್ಡ್ ನ ಸಮಸ್ಯೆಗಳನ್ನು ಪರಿಶೀಲಿಸಿ, ಅಲ್ಲಿನ ಜನತೆಯ ಕುಂದು,ಕೊರತೆಗಳನ್ನು ಆಲಿಸಿದರು.
ಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳನ್ನು ಮತ್ತು ಜನರ ಕುಂದು,ಕೊರತೆಗಳನ್ನು
ಅತಿ ಶೀಘ್ರದಲ್ಲಿಯೇ ಬಗೆಹರಿಸುವುದಾಗಿ ಜನತೆಗೆ ಭರವಸೆ ಇತ್ತು, ಸೂಕ್ತಗಮನಹರಿಸುವಂತೆ ಗುರುದತ್ತ್ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
.