*ಸುನಾಮಿನ್ಯೂಸ್, ಮೇ,13
ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದಲೇ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣ ಹಾಗೂ ಸುತ್ತಲಿನ ಹಲವು ಗ್ರಾಮಗಳಲ್ಲಿ ಹದವಾದ ಮಳೆ ಸುರಿಯುತ್ತಿದೆ.
ಇಂದು ಶ್ರೀಕ್ಷೇತ್ರ ಹುಲಿಗಿಯ ಅಧಿದೇವತೆ ಹುಲಿಗೆಮ್ಮದೇವಿಯ ಜಾತ್ರಾ ಮಹೋತ್ಸವದ ಆಂಗವಾಗಿ ದೇವಿಗೆ ಕಂಕಣಕಟ್ಟುವ ಶುಭದಿನ. ಇಂದೇ ಮಳೆ ಸುರಿಯುತ್ತೀರುವುದು ರೈತಾಪಿ ವರ್ಗದಲ್ಲಿ ಈ ಸಲದ ಮುಂಗಾರು ಶುಭಾರಂಭವಾಗಲಿದೆ ಎನ್ನುವ ಭರವಸೆಯನ್ನು ಹೆಚ್ಚಿಸಿದೆ.
ಕಳೆದ ಹಲವು ದಿನಗಳಿಂದಲೂ ಬಿರು ಬಿಸಿಲು, ಝಳಕ್ಕೆ ಜನರು ಕಂಗಾಲಾಗಿದ್ದರು. ಬೆಳಗಿನ ಮಳೆಯಿಂದಾಗಿ ತಂಪಾನೆಯ ವಾತಾವರಣ ಉಂಟಾಯ್ತು. ಇದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯ್ತು.
ಬೆಳಗಿನ 6 ಗಂಟೆಯಿಂದಲೇ ಪಟ್ಟಣ, ಸುತ್ತಲಿನ ಗ್ರಾಮಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತ್ತು. ಗಂಟೆಯ ಬಳಿಕ ಮಳೆ ಶುರುವಾಯ್ತು. ಮಳೆಗೂ ಮುನ್ನ ವ್ಯಾಪಕ ಮಿಂಚು ಇತ್ತು. ಒಂದು ಬಾರಿ ಭಾರೀ ಸಿಡಿಲು ಹೊಡೆಯಿತು. ಆದರೇ ಅದರಿಂದ ಯಾವುದೆ ಹಾನಿ ಆಗಿಲ್ಲ.
ಯಾವುದೇ ಮುನ್ಸೂಚನೆ ನೀಡದೆ ಬಂದ ಮಳೆರಾಯನಿಂದಾಗಿ ಬೆಳಗಿನ ವಾಯುವಿಹಾರಿಗಳ ವಾಕಿಂಗ್ ಮತ್ತು ಜಾಂಗಿಂಗ್ ಗೆ ಭಂಗ ಉಂಟಾಯ್ತು.
ರಸ್ತೆ ಮೇಲಿದ್ದ ಕಸ, ಧೂಳು ಮಳೆ ನೀರಿಗೆ ಕೊಚ್ಚಿಹೊದರೇ ಚರಂಡಿಗಳು ಭರ್ತಿಆಗಿ ಹರಿದವು. ಮನೆಯ ಹರಿನಾಲೆ ಯಿಂದ ನೀರು ಧುಮ್ಮಿಕ್ಕುವ ದೃಶ್ಯ ಎಲ್ಲೇಡೆ ಕಂಡು ಬಂತು.
- ಹುಳ್ಳಿಪ್ರಕಾಶ, ಸಂಪಾದಕರು