Welcome to sunamipatrike   Click to listen highlighted text! Welcome to sunamipatrike
Sunday, June 22, 2025
HomeUncategorizedಅಂಜುಮನ್ ಚುನಾವಣೆಯಲ್ಲಿ ಮಾಜಿ ಮಂತ್ರಿ ನಬೀ ಪುತ್ರ ನೂರ್ ಆಹ್ಮದ್ ಕಮಾಲ್! ವರ್ಕೌಟ್ ಆಗದ '...

ಅಂಜುಮನ್ ಚುನಾವಣೆಯಲ್ಲಿ ಮಾಜಿ ಮಂತ್ರಿ ನಬೀ ಪುತ್ರ ನೂರ್ ಆಹ್ಮದ್ ಕಮಾಲ್! ವರ್ಕೌಟ್ ಆಗದ ‘ ಲೋಕಲ್ ‘ ನೂರ್ ತೆಕ್ಕೆಗೆ ಹರಪನಹಳ್ಳಿ ಅಂಜುಮನ್!

* ಸುನಾಮಿನ್ಯೂಸ್, ಮೇ,13

ತೀವ್ರ ಜಿದ್ದಾಜಿದ್ದಿ ಯಿಂದ ಕೂಡಿದ್ದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಅಂಜುಮನ್-ಎ- ಇಸ್ಲಾಹುಲ್-ಮುಸ್ಲಿಮಿನ್ ಕಮಿಟಿಯ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಯುವ ನಾಯಕ ಎನ್.ಎಂ.ನೂರ್ ಆಹ್ಮದ್ ಅಂತಿಮ ಹಣಾಹಣಿಯಲ್ಲಿ ಜಯಶಾಲಿ ಆಗುವ ಮೂಲಕ ವಿಜಯದ ನಗೆ ಬೀರಿದ್ದಾರೆ.

ಗೆದ್ದಿರುವ ನೂರ್ ಆಹ್ಮದ್, ಸ್ಥಳಿಯರಲ್ಲ ಅವರು ಹೊರಗಿನವರು ಎಂದು ಪ್ರತಿಸ್ಪರ್ಧಿಗಳು ಮಾಡಿದ್ದ ಲೋಕಲ್ ವರ್ಸಸ್ ನಾನ್ ಲೋಕಲ್ ಪ್ರಚಾರ ಮತದಾರರ ಮೇಲೆ ಅಷ್ಟೊಂದು ಪ್ರಭಾವ ಬೀರಿಲ್ಲ, ಬದಲಿಗೆ ಸಮುದಾಯದ ಅಭಿವೃದ್ಧಿಗೆ ಯಾರು ಕಾಳಜಿವಹಿಸಿ ಶ್ರಮಿಸುತ್ತಾರೆ ಅಂತವರು ಮತದಾರ ಆಯ್ಕೆ ಆಗಿರುತ್ತೆ ಎನ್ನುವುದನ್ನು ಮಾಜಿ ಸಚಿವರಾದ ಎನ್ಎಂ ನಬೀ ಅವರ ಪುತ್ರರು ಆದ ಕೂಡ್ಲಿಗಿ ಶಹರದವಾಸಿ ನೂರ್ ಆಹ್ಮದ್ ಅವರ ಜಯ ಸಾಕ್ಷೀಕರಿಸಿದೆ.

ಗೆದ್ದಿರುವ ನೂರ್ ಆಹ್ಮದ್, 1994ರಲ್ಲಿ ಹೆಚ್.ಡಿ.ದೇವೆಗೌಡರ ಸಂಪುಟದಲ್ಲಿ ಸಂಪುಟದರ್ಜೆಯ ಸಣ್ಣ ಕೈಗಾರಿಕಾ ಸಚಿವರಾಗಿದ್ದ ಎನ್.ಎಂ.ನಬೀ ಅವರ ಪುತ್ರ ಎನ್ನುವ ಕಾರಣಕ್ಕೇನೆ ಅಂಜುಮನ್ ಎಲೇಕ್ಷನ್ ಫಲಿತಾಂಶ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳ ಜೊತೆಗೆ ಪಕ್ಕದ ದಾವಣಗೆರೆ ಜಿಲ್ಲೆಯಲ್ಲೂ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಮಾಜಿ ಮಂತ್ರಿ ಎನ್ಎಂ ನಬೀ ಧರ್ಮಿಕವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ರೂ ಸರ್ವಜನಾಂಗದ ಜನರಜೊತೆಗೆ ಸೌಹಾರ್ದತೆಯ ಸಂಬಂಧ ಇಟ್ಟುಕೊಂಡಿರುವ ಸಜ್ಜನ ರಾಜಕಾರಣಿಗಳು. ಅವಳಿ ಜಿಲ್ಲೆಗಳಲ್ಲಿ ಅವರದ್ದೆ ಆದ ಮತಬ್ಯಾಂಕ್ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆಗಾಗಿ ಪರಿಶ್ರಮಿಸಿದವರಲ್ಲಿ ಎನ್ಎಂ.ನಬೀ ಕೂಡ ಪ್ರಮುಖರು ಹೌದು.

ಇನ್ನೂ ಈಗ ಗೆದ್ದಿರುವ ನೂರ್ ಆಹ್ಮದ್ ಯುವ ಕಾಂಗ್ರೆಸ್ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷದಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರಿಂದ ಜೆಡಿಎಸ್ ಗೂ ಹೋಗಿದ್ರು. ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಪುನಃ ಕಾಂಗ್ರೆಸ್ ಸೇರಿ ಈ.ತುಕಾರಾಂ ಅವರ ಗೆಲುವಿಗೆ ಪರಿಶ್ರಮಿಸಿದ್ರು.

ಹರಪನಹಳ್ಳಿ ಕ್ಷೇತ್ರದಲ್ಲಿ ಮುಸ್ಲಿಂ ಮತ ಬ್ಯಾಂಕ್ ಪ್ರಬಲವಾಗಿದ್ದು ಈಗ ಅಂಜುಮನ್ ಕಮಿಟಿಯ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿರುವ ನೂರ್ ಆಹ್ಮದ್ ಈ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ ಆಗಿ ಬೆಳೆಯಲು, ಮೂರು ವರ್ಷದ ನಂತರ ಬರುವ ವಿಧಾನಸಭೆ ಚುನಾವಣೆಗೆ ಇದು ಚಿಮ್ಮುಹಲಗೆ ಆಗಿಯೂ ಈ ಫಲಿತಾಂಶ ನೂರ್ ಆಹ್ಮದ್ ಗೆ ನೆರವಾಗಲಿದೆ ಎನ್ನುವ ಮಾತುಗಳು ಜೋರಾಗಿವೆ.

*124 ಮತ ಲೀಡ್:

ಲೋಕಲ್ ಕ್ಯಾಂಡಿಡೇಟ್ ಆಗಿ ಕಣಕ್ಕೀಳಿದಿದ್ದ ಸಿ.ಜಯದ್ 124 ಮತಗಳ ಅಂತರದಲ್ಲಿ ಸೋಲೋಪ್ಪಿಕೊಂಡಿದ್ದಾರೆ. ಓಟ್ಟು 5547 ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದರು. ಈ ಪೈಕಿ ಗೆದ್ದಿರುವ ನೂರ್ ಅವರಿಗೆ 2209 ಮತಗಳು, ಪ್ರತಿಸ್ಪರ್ಧಿ ಜಯದ್ ಗೆ 2085 ಮತಗಳು ಬಿದ್ದಿವೆ. 111 ಮತಗಳು ತಿರಸ್ಕೃತಗೊಂಡಿವೆ.

ಭಾನುವಾರ ಜರುಗಿದ ಚುನಾವಣೆಗಾಗಿ ಪಟ್ಟಣದಲ್ಲಿ ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆ ಭಾರೀ ಜಿದ್ದಾಜಿದ್ದಿ ಕಾರಣಕ್ಕೇನೆ ಮತಗಟ್ಟೆ ಸುತ್ತಲೂ ಸಿಸಿ ಕ್ಯಾಮರ್ ಕಣ್ಗಾವಲನ್ನು ಬಿಗಿಗೊಳಿಸಲಾಗಿತ್ತು. ಹರಪನಹಳ್ಳಿ ಪೊಲೀಸ ವಿಭಾಗ ದಿಂದ ವ್ಯಾಪಕ ಬಂದೋಬಸ್ತ್ ವ್ಯವಸ್ಥೆಯಡಿಯಲ್ಲಿ ಶಾಂತರೀತಿಯಲ್ಲಿಯೇ ಚುನಾವಣೆ ಮತ್ತು ಮತ ಏಣಿಕೆ ಸಂಪನ್ನಗೊಂಡಿತು.

  • ಹುಳ್ಳಿಪ್ರಕಾಶ, ಸಂಪಾದಕರು

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!