- ಸುನಾಮಿನ್ಯೂಸ್, ಮೇ,20
ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ತುಂಬನೂ ಸದ್ಯ ಅಲ್ಲಿನ ಕಾಂಗ್ರೆಸ್ ಶಾಸಕ ಹೆಚ್.ಆರ್. ಗವಿಯಪ್ಪರ ಪ್ಲೆಕ್ಸ್ ಜಾತ್ರೆ ಭರ್ಜರಿಯಾಗಿಯೇ ಶುರುವಾಗಿದೆ.
‘ ಎಮ್ಮೇಲ್ಲೆ ಗವಿಯಪ್ಪ’ ಎಲ್ಲಿ? ಎಲ್ಲಿ? ಕಾಣ್ತಾಯಿಲ್ಲ ಎನ್ನುವರಿಗೆ ನಾನು ಎಲ್ಲಿ ಹೋಗಿಲ್ಲ ಟೌನ್ ನಲ್ಲಿಯೇ ಇದ್ದೇನೆ ಎಂದು ನಿರೂಪಿಸುವಂತೆ ಇಡೀ ಹೊಸಪೇಟೆ ತುಂಬನೂ ಅವರ ಪ್ಲೆಕ್ಸ್ ಗಳು ಅವರಿಸಿಕೊಂಡಿವೆ!
ಟಿಬಿ ಡ್ಯಾಂ ನಿಂದ ಡಿಸಿ ಕಚೇರಿ ಅಲ್ಲಿಂ ಸಾಯಿಬಾಬ ಗುಡಿ, ಗುಜ್ಜಲ್ ಶಿವರಾಮ ಪೆಟ್ರೋಲ್ ಬಂಕ್ ರೋಡ್, ಕಾಲೇಜ್ ರಸ್ತೆ, ಮುನ್ಸಿಪಾಲ್ ಹೈ ಸ್ಲ್ಕೂಲ್ ಗ್ರೌಂಡ್, ಎಪಿಎಂಸಿ ಲೈನ್, ವಾಲ್ಮೀಕಿ ಸರ್ಕಲ್, ಅಪ್ಪು ವೃತ್ತ, ರೈಲ್ವೆ ಸ್ಟೇಷನ್ ರೋಡ್ ಒಂದ,ಎರಡ ಇಡೀ ಹೊಸಪೇಟೆ ತುಂಬನೂ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಶಾಸಕಗವಿಯಪ್ಪರನ್ನು ಹೊತ್ತು ನಿಂತಿರುವ ಆಳೇತ್ತರದ ಪ್ಲೆಕ್ಸ್ ಗಳ ಜಾತ್ರೆಯದ್ದೆ ಜೋರುಬಾರು.
ನಾಳೆ, ಮಂಗಳವಾರ (20ಮೇ) ಹೊಸಪೇಟೆ ನಗರದ ಅಪ್ಪು ಜಿಲ್ಲಾ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಾರ್ಪಣೆ ಮತ್ತು ಸಂಕಲ್ಪ ಎನ್ನುವ ಸಾಧನಾ ಸಮಾವೇಶವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಸಮಾವೇಶಕ್ಕೆ ಸ್ವಾಗತಕೋರುವ ನೆಪದಲ್ಲಿ ಪಕ್ಷದ ಅಧಿನಾಯಕರ ಭಾವಚಿತ್ರಗಳ ಸಹಿತ ಎಮ್ಮೇಲ್ಲೆ ಗವಿಯಪ್ಪರು ಹಾಕಿಸಿರುವ ಪ್ಲೆಕ್ಸ್ ಗಳು ಜಾತ್ರೆಯ ಸ್ವರೂಪ ಪಡೆದುಕೊಂಡಿದೆ.
ಇತ್ತಿಚಿನ ಹೊಸಪೇಟೆ ರಾಜಕಾರಣದಲ್ಲಿ ಪ್ಲೆಕ್ಸ್ ಗಳು ಕೂಡ ಆಯಾ ರಾಜಕಾರಣಿಯ ತಾಖತ್ ನ್ನು ಪ್ರದರ್ಶಿಸುವ ಪ್ರಮುಖ ಅಂಶವಾಗಿದೆ. ಎನ್ನಇಲ್ಲಿನ ರಾಜಕಾರಣ ಬಲ್ಲಂತವರಿಗೆ ಇದು ಚೆನ್ನಾಗಿ ಗೊತ್ತಿದೆ. ಆಗಂತಾ ಊರು ತುಂಬಾ ಪ್ಲೆಕ್ಸ್ ಕಟ್ಟಿದಾಕ್ಷಣ ಎಲ್ಲರೂ ಎಮ್ಮೇಲ್ಲೆ ಆಗಲಾರರು!
- ಹುಳ್ಳಿಪ್ರಕಾಶ, ಸಂಪಾದಕರು