ಇಂದು ( ಮೇ,29,ಗುರುವಾರ) ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವಿವಿಧ ಕಡೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸಂಸದರ ಅನುದಾನದಲ್ಲಿ ಜರುಗುವ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಮತ್ತು ರೈತರಿಗೆ ಸರ್ಕಾರಿ ಸೌಲಭ್ಯಗಳ ವಿತರಣೆ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಮತ್ತು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಅವರು ಜಂಟೀ ಭಾಗಿ ಆಗಲಿದ್ದಾರೆ.
ಕ್ಷೇತ್ರದ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಈ ಮೂರು ಪಟ್ಟಣಗಳ ಕೇಂದ್ರ ಸ್ಥಾನಗಳಲ್ಲಿ ಜರುಗುವ ಮೂರು ಇಂದಿರಾ ಕ್ಯಾಂಟೀನ್ ಉದ್ಘಾಟನೆ, ರೈಲ್ವೆಗೇಟ್ ಕಾಮಗಾರಿ ಭೂಮಿಪೂಜೆ, ಸರಕು ರೇಖ್ ಪಾಯಿಂಟ್ ಕಾಮಗಾರಿ ಸ್ಥಳ ಪರೀಶಿಲನೆ ಹಾಗೂ ಬಿತ್ತನೆ ಬೀಜ ವಿತರಣೆ, ಕಾರ್ಮಿಕರ ನಮ್ಮ ಕ್ಲಿನಿಕ್, ಮೊಬೈಲ್ ಕ್ಲಿನಿಕ್ ಉದ್ಘಾಟನೆ ಸೇರಿದಂತೆ ಒಟ್ಟು ಏಳು ಕಾರ್ಯಕ್ರಮಗಳಲ್ಲಿ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ.
ಕ್ಷೇತ್ರದ ಮರಿಯಮ್ಮನಹಳ್ಳಿ ಪಟ್ಟಣದ ಸಂತೇ ಬಯಲು ಪ್ರದೇಶದಲ್ಲಿ ಬೆಳಿಗ್ಗೆ 10-30ಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಸಂಸದರು, ಶಾಸಕರ ಬಿಡುವಿಲ್ಲದ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಆರಂಭವಾಗಲಿವೆ.
ಅಲ್ಲಿಂದ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಆಗಮಿಸುವ ಸಂಸದ ತುಕಾರಾಂ, ಶಾಸಕ ನೇಮಿರಾಜ್ ನಾಯ್ಕ್, ಬ್ಯಾಲಾಳು ಕೆರೆ ಬಳಿ ಬೆಳಿಗ್ಗೆ 11-30ಕ್ಕೆ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಮೇಲಿನ ರೈಲ್ವೇಗೇಟ್ ನಂಬರ್ 35ರ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲಿದ್ದಾರೆ.
ಆ ಮೇಲೆ 12ಕ್ಕೆ ಪಟ್ಟಣದ ಎಪಿಎಂಸಿಯಲ್ಲಿರುವ ರೈತಸಂಪರ್ಕ ಕೇಂದ್ರದ ಬಳಿ ಸಂಸದರ ಅನುದಾನದಲ್ಲಿನ ರೈತರ ಮಾಹಿತಿ ಮತ್ತು ತರಬೇತಿ ಕೇಂದ್ರದ ಕಾಮಗಾರಿಗೆ ಶಂಕುಸ್ಥಾಪನೆ ಜೊತೆಗೆ ರೈತರಿಗೆ ಬಿತ್ತನೆ ಬೀಜ ವಿತರಣೆಮಾಡಲಿದ್ದಾರೆ.
ಇಲ್ಲಿನ ಸೋನಿಯಾಗಾಂಧಿ ನಗರದಲ್ಲಿ ಮಧ್ಯಾಹ್ನ 12-30ಕ್ಕೆ ಕಾರ್ಮಿಕ ಇಲಾಖೆಯ ನಮ್ಮ ಕ್ಲಿನಿಕ್, ಮೊಬೈಲ್ ಕ್ಲಿನಿಕ್ ಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಕೊಟ್ಟೂರು ರಸ್ತೆಯಲ್ಲಿನ ಎಪಿಎಂಸಿಯಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಲ್ಲಿ ಭಾಗಿಆಗಲಿದ್ದಾರೆ.
ಇಲ್ಲಿಂದ ಕೊಟ್ಟೂರು ಪಟ್ಟಣಕ್ಕೆ ನಿರ್ಗಮಿಸುವ ಶಾಸಕ ನೇಮಿರಾಜ್ ನಾಯ್ಕ, ಸಂಸದ ಈ.ತುಕಾರಾಂ ಅವರು ಮಧ್ಯಾಹ್ನ 2 ಕ್ಕೆ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿರಾಕ್ಯಾಂಟೀನ್ ಗೆ ಚಾಲನೆ ನೀಡಿ, 2.15ಕ್ಕೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತೀರುವ ಸರಕು ಲೋಡ್, ಅನ್ ಲೋಡಿಂಗ್ ರೇಖ್ ಪಾಯಿಂಟ್ ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. .
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.