- ಸುನಾಮಿನ್ಯೂಸ್, ಮೇ29
ಹೊಸಪೇಟೆ ವಯಾ ಹರಿಹರ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥದ ರಸ್ತೆಯಾಗಿಸಲು 1350 ಕೋಟಿರೂಪಾಯಿಗಳಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಅದಷ್ಟು ಬೇಗ ಈ ಪ್ರಸ್ತಾವನೆಗೆ ಅನುಮೊದನೆ ಸಿಗಲಿದೆ ಎನ್ನುವ ವಿಶ್ವಾಸವನ್ನು ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ವ್ಯಕ್ತಪಡಿಸಿದ್ದಾರೆ.
ಗುರುವಾರ ಮಧ್ಯಾಹ್ನ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ಬ್ಯಾಲಾಳುಕೆರೆ ಹತ್ತೀರದ ರೈಲ್ವೆ ಗೇಟ್ 35ರ ಬಳಿ 35ಕೋಟಿ ರೂಪಾಯಿ ವೆಚ್ಚದ ನೂತನ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಬಳಿಕ ಪತ್ರಕರ್ತರ ಜೊತೆಗೆ ಸಂಸದರು ಮಾತನಾಡಿದರು.
ನಾಲ್ಕುಪಥದ ಹೆದ್ದಾರಿ ಅಗತ್ಯವಿದ್ದು ಇದರ ನಿರ್ಮಾಣದಿಂದ ವಿಶ್ವವಿಖ್ಯಾತ ಹಂಪೆಗೆ ಕರಾವಳಿ ಮತ್ತು ಮಲೆನಾಡು ಭಾಗಗಳಿಂದ ಪ್ರವಾಸಿಗರು ಮತ್ತು ಜನರಿಗೆ ನೇರ ಮತ್ತು ಉತ್ತಮದರ್ಜೆಯ ರಸ್ತೆ ಸಂಪರ್ಕ ಸಿಗಲಿದೆ. ಜೊತೆಗೆ ಈ ಭಾಗದ ಪ್ರದೇಶಗಳು ಅಭಿವೃದ್ಧಿ ಹೊಂದುವುದಲ್ಲದೆ ಪೂರಕವಾಗಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುವ ಮೂಲಕ ಉದ್ಯೋಗಾವಕಾಶ ಸಿಗಲಿದೆ ಎಂದರು.
ಈಗಾಗಲೇ ನಾನು ಸಲ್ಲಿಸಿರುವ ಪ್ರಸ್ತಾವನೆ ಪ್ರಧಾನಮಂತ್ರಿಗಳ ಕಚೇರಿಗೂ ಮುಟ್ಟಿದ್ದು, ಅದಷ್ಟು ಬೇಗ ಯೋಜನೆ ಮುಂಜೂರಾಗುವ ಭರವಸೆ ಇದೆ ಎಂದರು.
ಸ್ಥಳಿಯ ಶಾಸಕರಾದ ಕೆ.ನೇಮಿರಾಜನಾಯ್ಕ್, ಹಿರಿಯ ಮುಖಂಡರಾದ ಪವಾಡಿ ಹನುಮಂತಪ್ಪ, ಕನ್ನಿಹಳ್ಳಿ ಚಂದ್ರಶೇಖರ, ಪಿಕೆಪಿಎಸ್ ಅಧ್ಯಕ್ಷ ದಾದಮ್ಮನವರ ಬಸವರಾಜ , ತಹಶಿಲ್ದಾರ ಕವಿತಾ, ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಬಸವರಾಜ ಅಡವಿಬಾವಿ ಸೇರಿದಂತೆ ಹಲವರು ಸಂಸದರ ಜೊತೆಗಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು