- ಸುನಾಮಿನ್ಯೂಸ್, ಮೇ,29
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರೈಲ್ವೆ ಗೇಟ್ 37 ರ ಮೇಲೆ ಸುಮಾರು 40 ಕೋಟಿರೂ ವೆಚ್ಚದಲ್ಲಿ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿಗೆ ಇದೇ ಆಗಷ್ಟ್ ಮಾಸದಲ್ಲಿ ಭೂಮಿ ಪೂಜೆ ನೇರವೇರಿಸಲಾಗುವುದು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಈ.ತುಕಾರಾಂ ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ಬ್ಯಾಲಾಳು ಕೆರೆ ಬಳಿಯ ರೈಲ್ವೆ ಗೇಟ್ 35ರ ಮೇಲೆ ರೂ 35 ಕೋಟಿವೆಚ್ಚದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಸಂಸದರು ಮಾತನಾಡಿದರು.
ಪಟ್ಟಣದ ಮಧ್ಯ ಭಾಗ ದಿಂದ ಹೊಸಪೇಟೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮಾರ್ಗವಿದ್ದು ಈ ಹೆದ್ದಾರಿ ಮೇಲೆ ರೈಲ್ವೆ ಗೇಟ್ -35 ಹಾಗೂ ಗೇಟ್ 37 ಇದ್ದು ಜನನೀಬೀಡವಾದ ಈ ಹೆದ್ದಾರಿ ಮೇಲೆ ಮೇಲ್ಸೇತುವೆ ಅನಿವಾರ್ಯವಿದ್ದು ಎರಡು ಕಾಮಗಾರಿಗಳಿಗೂ ಅನುಮೊದನೆ ಸಿಕ್ಕಿದೆ. ಆಗಷ್ಟ್ ತಿಂಗಳಲ್ಲಿ ಮತ್ತೆ ಭೂಮಿಪೂಜೆ ಮಾಡುವೆ ಎಂದರು.
ಹೊಸಪೇಟೆ ಯಿಂದ ಬೆಂಗಳೂರು, ಹೊಸಪೇಟೆ ಯಿಂದ ಹುಬ್ಬಳಿಗೆ ಎರಡು ಪ್ಯಾಸೆಂಜರ್ ಟ್ರೈನ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುವುದಾಗಿ ಸಂಸದರು ಭರವಸೆ ಇತ್ತರು.
ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್, ಕಾಂಗ್ರೆಸ್ ಮುಖಂಡ ಪವಾಡಿ ಹನುಮಂತಪ್ಪ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ರೈತಸೇವಾಸಹಕಾರಬ್ಯಾಂಕ್ ಅಧ್ಯಕ್ಷ ದಾದಮ್ಮನವರ ಬಸವರಾಜ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ತಹಶಿಲ್ದಾರ ಕವಿತಾ, ಸಿಪಿಐ ವಿಕಾಸ್ ಲಮಾಣಿ, ಪಿಎಸೈ ಬಸವರಾಜ ಅಡವಿಬಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.