Welcome to sunamipatrike   Click to listen highlighted text! Welcome to sunamipatrike
Friday, July 11, 2025
HomeUncategorized'ತುಕಾರಾಂ' ಲೆಕ್ಕದಲ್ಲಿ ಫರ್ಪೇಕ್ಟ್! ಅಭಿವೃದ್ಧಿ ಯ ಫೈಲ್ ಬಿಟ್ರೇ ಸಂಸದರ ಹತ್ತೀರ 'ಇಡಿ'ಯವರಿಗೆ ಬೇರೆನೂ ಸಿಕ್ಕಿರಕ್ಕಿಲ್ಲ!

‘ತುಕಾರಾಂ’ ಲೆಕ್ಕದಲ್ಲಿ ಫರ್ಪೇಕ್ಟ್! ಅಭಿವೃದ್ಧಿ ಯ ಫೈಲ್ ಬಿಟ್ರೇ ಸಂಸದರ ಹತ್ತೀರ ‘ಇಡಿ’ಯವರಿಗೆ ಬೇರೆನೂ ಸಿಕ್ಕಿರಕ್ಕಿಲ್ಲ!

  • ಸುನಾಮಿನ್ಯೂಸ್, ಜೂನ್15

* ಹುಳ್ಳಿಪ್ರಕಾಶ, ಸಂಪಾದಕರು

” ನಮ್ಮ ಜಿಲ್ಲೆಯ ಬೇರೆ ಶಾಸಕರುಗಳ ಲೆಕ್ಕಗಳು ಒಂದೊಂದು ಸಲ ಏರುಪೇರಾಗಬಹುದು! ಆದರೆ ತುಕಾರಾಮ್ ಅವರ ಲೆಕ್ಕ ಮಾತ್ರ ಯಾವತ್ತೂ ತಪ್ಪಾಗಿರುವುದಿಲ್ಲ. ಅವರ ಮೇಲೆ ದಾಳಿ ಮಾಡಿದ್ದ ಇಡಿಯವರಿಗೆ ಯಾವುದೇ ತಪ್ಪು ಲೆಕ್ಕದ ದಾಖಲಾತಿಗಳು ಸಿಗಲು ಸಾಧ್ಯವೇ ಇಲ್ಲ. ಅವರಿಗೆ ಸಿಕ್ಕಿದ್ರೇ ಕ್ಷೇತ್ರ ಅಭಿವೃದ್ಧಿಯ ಫೈಲ್ ಗಳು ಸಿಕ್ಕಿರಬಹುದು……….”

ಇಂತಹ ಮಾತುಗಳು, ಚರ್ಚೆಗಳು
ಬಳ್ಳಾರಿ ಸಂಸದ ಈ.ತುಕಾರಾಂ ಅವರ ಮೇಲೆ ಜಾರಿ ನಿರ್ದೇಶನಾಲಯ ಅಂದರೇ ಇಡಿ ನಡೆಸಿದ ದಾಳಿಯ ನಂತರ ಬಹುಮುಖ್ಯವಾಗಿ ಸಂಡೂರ ಕ್ಷೇತ್ರದ ತುಂಬನೂ ತುಕಾರಾಂ ಅವರ ಕ್ಲಿನ್ ಇಮೇಜ್ ಬಗ್ಗೆನೇ ಅಲ್ಲಿನ ಜನಸಮೂಹದ ಮಧ್ಯೆ ಜೋರಾಗಿದೆ.

‘ಇಡಿ’ ದಾಳಿಯ ನಂತರ ತುಕಾರಾಂ ಪರವಾಗಿ ಇದ್ದಕ್ಕಿದಂತೆಯೇ ಅನುಕಂಪದ ಆಲೆ ಎನ್ನುವುದು ಕ್ಷೇತ್ರದ ಉದ್ದಗಲಕ್ಕೂ ಸುನಾಮಿಯ ಸ್ವರೂಪ ಪಡೆದುಕೊಂಡಿದೆ. ಸದ್ಯ ಜನರಿಂದ ವ್ಯಕ್ತವಾಗುತ್ತೀರುವ ಅನುಕಂಪದ ತೀವ್ರತೆ ನೋಡ್ತಾಯಿದ್ರೇ, ಇಡಿ ದಾಳಿ ಆಗಿದ್ದರಿಂದಲೇ ಅವರು ಈ ತನಕವೂ ರಾಜಕಾರಣದಲ್ಲಿ ಕಾಪಾಡಿಕೊಂಡು ಬರುತ್ತೀರುವ ಕ್ಲಿನ್ ಇಮೇಜ್ ಸಾರ್ವಜನಿಕವಾಗಿ ಲೋಕಕ್ಕೆ ಗೊತ್ತಾಗುವಂತಾಯ್ತು ಎನ್ನಬಹುದು.

ಏಕೆಂದರೆ, ಸದಾ ಜನರೊಟ್ಟಿಗೆ ಇದ್ದು, ಸರಳ ಜೀವನಶೈಲಿಯ ತುಕಾರಾಂ ಅವರು
ಆಕ್ರಮವಾಗಿ ಆಸ್ತಿ ಸಂಪಾದಿಸ ಬೇಕೆನ್ನುವ ಕಾರಣಕ್ಕೇನೆ ರಾಜಕೀಯಕ್ಕೆ ಬಂದವರಲ್ಲ. ಬದಲಿಗೆ ಜನರು ಕೈಹಿಡಿದು ಕೊಟ್ಟಿರುವ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿಯೇ ಬಳಸುತ್ತಾ ಬಂದಿದ್ದಾರೆಯೇ ಹೊರತು ಆಕ್ರಮ ಎಸಗಿ, ಹಣ ಸಂಪಾದಿಸ ಬೇಕೆನ್ನುವ ಮನಸ್ಥಿತಿಯ ರಾಜಕಾರಣಿ ಅಲ್ಲ ಎನ್ನುವುದನ್ನು ಇಡಿ ದಾಳಿಯ ಬಳಿಕ ಅವರ ಕಾರ್ಯವೈಖರಿ ಬಗ್ಗೆ ಜನರಿಂದ ಕೇಳಿ ಬರುತ್ತೀರುವ ಪಾಸಿಟಿವ್ ಮಾತುಗಳು ಪುಷ್ಟಿಕರಿಸಿವೆ.

ಆ ಮಾನುಷ್ಯನಿಗೆ ಸ್ವಲ್ಪ ಸಿಟ್ಟು, ಸೆಡವು ಇದೆ, ಇದ್ದಿದ್ದು ಇದ್ದಂಗೇನೆ ಮುಖಕ್ಕೆ ಹೊಡೆದಂತೆ ಮಾತನಾಡುತ್ತಾನೆ ಎನ್ನುವುದು ಬಿಟ್ಟರೇ ತೀರಾ ಕೆಳಕ್ಕೆ ಇಳಿದು ಆಕ್ರಮ ಆಸ್ತಿ,ಪಾಸ್ತಿ ಮಾಡಿಕೊಳ್ಳುವಂತಹ ಹಣಧಾಯಿಯಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ತಾಯಿ ಕರುಳಿದೆ. ಸಮಸ್ಯೆ ಹೊತ್ತು ಬಂದವರನ್ನು ಕಾಯಿಸುವುದಿಲ್ಲ ಎನ್ನುವರು. ಆಗೇನೆ ತುಕಾರಾಂ ಜನರಪರವೇ ಹೊರತು ಸಾರ್ವಜನಿಕ ಹಣಕಾಸಿಗೆ ಪೀಡಕನಲ್ಲ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುವರ ಸಂಖ್ಯೆಯು ಕ್ಷೇತ್ರದಲ್ಲಿ ಹೆಚ್ಚಿದೆ.

ಇಡಿಯವರಿಗೆ ಏನಾದರೂ ಸಿಕ್ಕಿದ್ರೇ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಜನರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಿಗೆ ಬರೆದಿರುವಂತಹ ಲೇಟರ್ ಗಳು, ಫೈಲ್ ಗಳ ಗುಡ್ಡೆ ಸಿಕ್ಕಿರಬಹುದೇ ಹೊರತು ಆಕ್ರಮ ಆಸ್ತಿಯ ದಾಖಲೆಗಳು ಸಿಗಲು ಸಾಧ್ಯವೇ ಇಲ್ಲ. ಆಸ್ತಿಗಳಿಸಿದ್ರೇ ತಾನೇ ಸಿಗಲು ಸಾಧ್ಯ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಾಯಿವೆ.

ಸತತ ನಾಲ್ಕು ಸಲ ಶಾಸಕ, ಒಮ್ಮೆ ಮಂತ್ರಿ, ಈಗ ಎಂಪಿ. ಜೊತೆಗೆ ಹೆಂಡತಿ ಶಾಸಕಿ. ಈಗೇ ಸಾಲು,ಸಾಲು ಅಧಿಕಾರಗಳು ಕೈಯಲ್ಲಿದ್ರು ತುಕಾರಾಂ ಹಾದಿ ತಪ್ಪಿಲ್ಲ, ಆಕ್ರಮ ಹಣಗಳಿಸಲು ಹಪಾಹಪಿತನಕ್ಕೀಳಿದಿಲ್ಲ ಎನ್ನುವ ನಂಬಿಕೆ, ವಿಶ್ವಾಸ ಸಂಡೂರು ಜನತೆ ತುಕಾರಾಂ ಮೇಲೆ ಗಾಢವಾಗಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೇನೆ ಇಡಿ ದಾಳಿಯ ಬಳಿಕ ತುಕಾರಾಂ ಬಗ್ಗೆ ಕ್ಷೇತ್ರದ ತುಂಬನೂ ವ್ಯಾಪಕ ಅನುಕಂಪದ ಆಲೆ ಜೋರಾಗಿ ಬೀಸಲು ಕಾರಣವಾಗಿದೆ.

ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ವಿಎಸ್ಎಲ್ ಗಣಿ ಕಂಪನಿಯಲ್ಲಿ ಲೆಕ್ಕಿಗರಾಗಿದ್ರು ತುಕಾರಾಂ. ಆ ವೇಳೆ ಸಾವಿರಾರು ಕೋಟಿರೂಪಾಯಿಗಳ ವ್ಯವಹಾರಕ್ಕೆ ಇವರೆ ಲೆಕ್ಕಾಧಿಪತಿ! ಇವರು ಲೆಕ್ಕಬುಕ್ಕದಲ್ಲಿ ಅತ್ಯಂತ ಪರ್ಫೆಕ್ಟ್ ಆಗಿದ್ರು. ಸಾವಿರಾರು ಕೋಟಿಗಳ ಲೆಕ್ಕಚಾರ ಕೈಯಲ್ಲಿದ್ರು ಹಣದಾಸೆಗೆ ಬಿದ್ದು ರಾಮನ ಲೆಕ್ಕ, ಕೃಷ್ಣನ ಲೆಕ್ಕಬರೆದು ಕೈ ಹೊಲಸು ಮಾಡಿಕೊಳ್ಳಲಿಲ್ಲ, ನಂಬಿಕೆ ಇಟ್ಟಿದ್ದ ಲಾಡ್ ಧಣಿಗಳ ವಿಶ್ವಾಸಕ್ಕೆ ದ್ರೋಹ ಬಗೆಯಲಿಲ್ಲ.

ಈ ಕಾರಣಕ್ಕೇನೆ 2008ರಲ್ಲಿ ಸಂಡೂರು ಕ್ಷೇತ್ರ ಎಸ್ಟಿಗೆ ಮೀಸಲಾಗುತ್ತಿದ್ದಂತೆಯೇ ವಿಎಸ್ಎಲ್ ಲಾಡ್ ಗಣಿ ಕಂಪನಿಯ ಮಾಲೀಕರಾದ ಏಕನಾಥ್ ಲಾಡ್ ಮತ್ತು ಸಂತೋಷ್ ಲಾಡ್ ಅವರುಗಳು ತುಕಾರಾಂ ಅವರ ಉಡಿಗೆ ಸಂಡೂರು ಕ್ಷೇತ್ರವನ್ನು ಹಾಕಲು ಒಂದು ಕ್ಷಣವೂ ತಡ ಮಾಡಲಿಲ್ಲ. ಆಗೇನೆ ಎಸ್ಟಿ ಜನಾಂಗದಲ್ಲಿ ಬೇರೆ ಅಭ್ಯರ್ಥಿಗಳಿದ್ರೂ ಅವರ ಬಗ್ಗೆ ಕಿಂಚಿತ್ ಯೋಚಿಸಲಿಲ್ಲ. ಕಣ್ಣೆತ್ತಿಯೂ ನೋಡಲಿಲ್ಲ.

ಹಣಕಾಸು ವ್ಯವಹಾರದಲ್ಲಿನ ಈ ಪಾರದರ್ಶಕತೆ, ನಂಬಿಕೆಗಳೇ ಇವತ್ತು ತುಕಾರಾಂ ಅವರು ನಾಲ್ಕು ಸಲ ಶಾಸಕರಾಗಿ, ಲೋಕಸಭಾ ಸದಸ್ಯರಾಗಲು ಇತ್ತ ಅವರು ತೆರವುಗೊಳಿಸಿದ್ದ ಸಂಡೂರು ಕ್ಷೇತ್ರಕ್ಕೆ ಅವರ ಪತ್ನಿಯೂ ಶಾಸಕರಾಗಲು ಸಾಧ್ಯವಾಗಿದೆ.

ಕೊ‌ನೆಯದಾಗಿ, ತುಕಾರಾಂ ಅವರಿಂದ ಅನುಕೂಲ ಮಾಡಿಕೊಂಡವರೇನೆ ಅವರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹರಿಬಿಡುತ್ತಾರೆಯೇ ಹೊರತು ಅವರ ಎದುರಾಳಿಗಳು ರಾಜಕಾರಣದ ಕಾರಣಕ್ಕೇನೆ ಮಾತ್ರವೇ ವಿರೋಧಿಸುತ್ತಾರೆ! ಇನ್ನೂ ಗನ್ ಮ್ಯಾನ್ ಗಳ ಆರ್ಭಟವಿಲ್ಲದ, ಪಿಎಗಳ ಕಾಟವಿಲ್ಲದ ಸಾಮಾನ್ಯ ಮತದಾರರು ಕೂಡ ನೇರವಾಗಿ ಸಂಪರ್ಕಿಸುವಂತಹ ವ್ಯವಸ್ಥೆ ಇದೆ.
ಈ ಕಾರಣಕ್ಕೇನೆ ತುಕಾರಾಂ ಅವರ ಬಗ್ಗೆ ಜನಸಮೂಹದ ನಡುವೆ ಪ್ರೀತಿಯ ಅಭಿಮಾನ ಎನ್ನುವುದು ಭರ್ತಿಯಾಗಿರುವ ‘ನಾರಿಹಳ್ಳ ಜಲಾಶಯ’ದ ಕ್ರಸ್ಟ್ ಗೇಟ್ ಗಳ ಮೂಲಕ ಪ್ರವಾಹಿಸುತ್ತೀರುವ ನೀರಿನಷ್ಟೇ ಭೋರ್ಗರೆಯುತ್ತಿದೆ.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!