* ಸುನಾಮಿನ್ಯೂಸ್, ಜೂನ್,27
ಗುರುವಾರ ಸಂಡೂರು ಪಟ್ಟಣದಲ್ಲಿ ಬಿಟ್ಟು,ಬಿಟ್ಟು ಮಳೆ ಸುರಿಯುತ್ತೀದ್ದರೇ ಇತ್ತ ಪಟ್ಟಣದಲ್ಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರ ನಿವಾಸದ ಸುತ್ತಲೂ ಅಭಿಮಾನಿಗಳ ಅಭಿಮಾನ ಎನ್ನುವುದು ಮಳೆಗಾಲದಲ್ಲಿ ಭೋರ್ಗರೆಯುತ್ತೀರುವ ನಾರಿಹಳ್ಳದ ತರಹವೇ ಪ್ರವಾಹಿಸಿತು!
‘ ನೀವು ನೂರುಕಾಲ ಬದುಕಬೇಕು, ಬಾಳಬೇಕು. ಆ ಭಗವಂತ ನಿಮಗೆ ಆರೋಗ್ಯ,ಆಯುಸ್ಸು ನೀಡಲಿ’ ಎಂದು ಅವರ ಸಹಸ್ರಾರು ಅಭಿಮಾನಿಗಳು, ಬೆಂಬಲಿಗರು, ಬಂಧು,ಭಾಂಧವರು ವ್ಯಕ್ತಪಡಿಸುತ್ತಿದ್ದ ಅಭಿಮಾನ ಒಂದು ಕಡೆಯಾದರೇ, ಇತ್ತ ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯರು, ಆಪ್ತರು ಹೇಳುತ್ತಿದ ಶುಭಹಾರೈಕೆ ಮಳೆಯಾಗಿ ಸುರಿಯುತ್ತೀದ್ದರೇ ಸಂಸದ ತುಕಾರಾಂ ಭಾವುಕರಾಗಿ ಎಲ್ಲವನ್ನೂ ಸ್ವೀಕರಿಸಿ, ವಂದಿಸಿದರು.
ಗುರುವಾರ 57ನೇ ವಸಂತಕ್ಕೆ ಸಂಸದ ಈ.ತುಕಾರಾಂ ಕಾಲಿಟ್ಟರು. ಈ ಕಾರಣಕ್ಕೇನೆ ಸಂಡೂರು ಟೌನ್ ನಲ್ಲಿರುವ ಸಂಸದರ ನಿವಾಸದಲ್ಲಿ ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಸಂಸದರಿಗೆ ಶುಭಕೋರಲು ಗುಂಪು,ಗುಂಪಾಗಿ ಆಗಮಿಸಲಾರಂಭಿಸಿದರು. ಹೀಗಾಗಿ ಬೆಳಗಿನ ಹತ್ತೂವರೇ ವೇಳೆಗೆಲ್ಲ ಸಂಸದರ ನಿವಾಸ ಹಾಗೂ ಸುತ್ತಲಿನ ಆವರಣದ ಸುತ್ತಲೂ ಹುಟ್ಟು ಹಬ್ಬದ ಆಚರಣೆಯ ಸಡಗರ,ಸಂಭ್ರಮವೇ ಧರೇಗಿಳಿದಿದೆ ಎನ್ನುವ ತರಹವೇ ವಾತಾವರಣ ನಿರ್ಮಾಣಗೊಂಡಿತು.
ಹೀಗೆ ಹದಿನೈದು ದಿನಗಳ ಹಿಂದಷ್ಟೆ ಸಂಸದರ ನಿವಾಸದ ಮೇಲೆ ಇಡಿ ದಾಳಿ ಮಾಡಿತ್ತು. ಮಾಡದ ತಪ್ಪಿಗೆ ವಿನಾಕಾರಣ ಇಡಿ ಕಳಂಕ ಹಚ್ಚಿದ್ದು ತುಕಾರಾಂ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಅವರ ಅಭಿಮಾನಿ,ಬೆಂಬಲಿಗರಲ್ಲೂ ಇಡಿ ದಾಳಿ ಬಗ್ಗೆ ಕೋಪ,ತಾಪ ಮನೆಮಾಡಿತ್ತು. ತಮ್ಮ ನೆಚ್ಚಿನ ನಾಯಕನಿಗೆ ಬಲ ತುಂಬುವ ಅವಕಾಶಕ್ಕಾಗಿ ಅವರು ಎದುರು ನೋಡ್ತಾಯಿದ್ರು.
* ಆಪಾರ ಸಂಖ್ಯೆಯ ಅಭಿಮಾನಿ,ಬೆಂಬಲಿಗರು
ಇಡಿ ದಾಳಿ ನಂತರ ಬಂದ ಸಂಸದರ ಹುಟ್ಟುಹಬ್ಬ ಅಭಿಮಾನ ಮೇರೆಸಲು ಉತ್ತಮ ವೇದಿಕೆ ಆಗಿತ್ತು. ಹೀಗಾಗಿ ಅವರ ಆಪಾರ ಅಭಿಮಾನಿಗಳು, ಬೆಂಬಲಿಗರು ಭಾರೀ ಸಂಖ್ಯೆಯಲ್ಲಿಯೇ ಸೇರಿಕೊಂಡು ‘ನೀವು ತಪ್ಪು ಮಾಡಿಲ್ಲ, ತಪ್ಪು ಮಾಡುವರು ಅಲ್ಲ. ಯಾವುದಕ್ಕೂ ಎದೆಗುಂದಬೇಡಿ ನಿಮ್ಮ ಬೆಂಬಲಕ್ಕೆ ಸದಾಕಾಲ ನಾವೀರುತ್ತೇವೆ’ ಎಂದು ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಸಂಸದರಿಗೆ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದರು.
ಸಂಡೂರು ಕ್ಷೇತ್ರದ ಪ್ರತಿಮತಗಟ್ಟೆ ಯಿಂದಲೂ ತಂಡೋಪ,ತಂಡವಾಗಿ ಅವರ ಅಭಿಮಾನಿಗಳು, ಬೆಂಬಲಿಗರು, ಮುಖಂಡರುಗಳು ಕಾರು, ಟ್ರ್ಯಾಕ್ಸ್, ಆಟೋ, ಬೈಕ್ ಗಳ ಮೂಲಕ ಬಂದು ಹೂಗುಚ್ಛ ನೀಡಿ, ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂಸದರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದು ವಿಶೇಷವಾಗಿತ್ತು.
* ನಾಡಿನ ವಿವಿಧ ಕಡೆಗಳಿಂದಲೂ ಬಂದ ಅಭಿಮಾನಿಗಳು
ಇತ್ತ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೊಸಪೇಟೆ, ಕಂಪ್ಲಿ, ಬಳ್ಳಾರಿ ನಗರ, ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಂದಲೂ ಆತ್ತ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ಹೀಗೆ ನಾಡಿನ ವಿವಿಧ ಕಡೆಗಳಿಂದಲೂ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಆಗಮಿಸಿ ಬಂದು ಸಂಸದರಿಗೆ ಶುಭಕೋರಿದರು.
* ಬೃಹತ್ ಹಾರ, ಕೇಕ್:
ಒಂದಿಷ್ಟು ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಮಾಲೆ ಹಾಕಿ ಅಭಿಮಾನ ಮೆರೆದರೇ, ಹಲವರು ಕೇಕ್ ತಂದು, ಸಂಸದ ರಿಂದ ಕತ್ತರಿಸಿ ಕೇಕ್ ತಿನ್ನಿಸಿ ತಮ್ಮ ನೆಚ್ಚಿನ ನಾಯಕನಿಗೆ ಬರ್ಥಡೇ ವಿಶ್ ಮಾಡಿದರು. ಬಂಧುಗಳು, ಆಪ್ತರು ಉಡುಗೊರೆ ನೀಡಿ ಶುಭಕೋರಿದರು. ಬಂದವರಿಗೆ ರುಚಿಕರವಾದ ಊಟೋಪಾಚಾರ ವ್ಯವಸ್ಥೆ ಮಾಡುವ ಮೂಲಕವೂ ಹಲವು ಬೆಂಬಲಿಗರು ತಮ್ಮ ಅಭಿಮಾನ ಮೆರೆದರು.
* ದೇವಸ್ಥಾನಕ್ಕೆ ಭೇಟಿ:
ಹುಟ್ಟು ಹಬ್ಬದ ನಿಮಿತ್ತ ಬೆಳ್ಳಿಗೆ ಸಂಸದರು ತಮ್ಮ ಕುಟುಂಬ ಸಮೇತರಾಗಿ ಲೋಹಾದ್ರಿನಾಡಿನ ಆರಾಧ್ಯದೇವ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ, ದೇವರದರ್ಶನ ಪಡೆದುಕೊಂಡರು. ನಂತರ ಅಲ್ಲಿಂದ ಬಂದು ಪಟ್ಟಣದಲ್ಲಿನ ಶ್ರೀರಾಘವೇಂದ್ರಸ್ವಾಮಿ ಮಠ, ಶ್ರೀಕಾಳಮ್ಮದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೂ ಭೇಟಿಕೊಟ್ಟು ಪೂಜೆ ಸಲ್ಲಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು
.