- ಸುನಾಮಿನ್ಯೂಸ್, ಜೂನ್,28
ಅಂತೂ,ಇಂತೂ ಕೊನೆಗೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿರುವ ಅಂಚೆ ಕಚೇರಿಗೆ ಬಹು ದಶಕಗಳಿಂದಲೂ ಕಾಡುತ್ತೀರುವ ಬಾಡಿಗೆ ಕಟ್ಟಡದ ದಾಸ್ಯ ದಿಂದ ಶಾಶ್ವತವಾಗಿ ವಿಮೋಚನೆಗೊಳ್ಳುವಂತಹ ಕಾಲ ಕೂಡಿ ಬಂದಿದೆ!
ಈ ಅಂಚೆಕಚೇರಿ (ಪೊಸ್ಟಾಫೀಸ್)ಗೊಂದು ಸ್ವಂತ ಕಟ್ಟಡದ ಸೌಲಭ್ಯ ಕಲ್ಪಿಸುವ ಮೂಲಕ ಬಾಡಿಗೆ ಕಟ್ಟಡ ದಿಂದ ಪೊಸ್ಟಾಫೀಸ್ ನ್ನು ಶಾಶ್ವತವಾಗಿ ಮುಕ್ತಿಗೊಳಿಸಿ ಎನ್ನುವ ಹಕ್ಕೋತ್ತಾಯವನ್ನು ಬಹು ದಶಕಗಳಿಂದಲೂ ಇಲ್ಲಿನ ಸಾರ್ವಜನಿಕರು ಆಳುವ ವರ್ಗಕ್ಕೆ ಸಲ್ಲಿಸುತ್ತಲೇ ಬರುತ್ತೀದ್ದರು. ಆದರೇ ಫಲಿತಾಂಶ ಮಾತ್ರ ಶೂನ್ಯ!
ಈ ಕ್ಷಣದ ಈ ಹೊತ್ತಿನಲ್ಲಿ ಈಗ ‘ಸುನಾಮಿನ್ಯೂಸ್’ಗೆ ಲಭ್ಯವಾಗಿರುವ ಖಚಿತ ಮಾಹಿತಿ ಅನ್ವಯ ಬಳ್ಳಾರಿ ಸಂಸದರಾದ ಈ.ತುಕಾರಾಂ ಅವರ ವಿಶೇಷ ಆಸಕ್ತಿಯಿಂದಾಗಿ ಇಲ್ಲಿನ ಅಂಚೆ ಕಚೇರಿಯು ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದುವಂತಹ ಕಾಲ ತೀರಾ ಸನ್ನಹಿತದಲ್ಲಿದೆ ಎನ್ನುವ ಸುದ್ದಿ ಸಿಕ್ಕಿದೆ. ಇದು ಸಾರ್ವಜನಿಕರ ಬಹು ದಶಕಗಳ ಹಕ್ಕೋತ್ತಾಯಕ್ಕೆ ಸಿಕ್ಕ ಫಲ ಎನ್ನುವ ಖುಷಿಯ ವಿಚಾರವೂ ಹೌದಾಗಿದೆ.
* 1.80 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪೋಸ್ಟಾಫೀಸ್ ನಿರ್ಮಾಣ.
ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವೂ ಆಗಿರುವ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತೀರುವ ಅಂಚೆ ಕಚೇರಿಗೆ ಸುಸಜ್ಜಿತವಾದ ಸ್ವಂತ ಕಟ್ಟಡ ನಿರ್ಮಿಸಲು 1.80 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದೆ. ತ್ವರಿತದಲ್ಲಿಯೇ ನೂತನ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ.
* ಗೆದ್ದ ಒಂದು ವರ್ಷದಲ್ಲಿಯೇ ಬಾಡಿಗೆ ಕಟ್ಟಡಕ್ಕೆ ಮುಕ್ತಿಕೊಡಿಸಿದ ಸಂಸದ ತುಕಾರಾಂ.
ಈ.ತುಕಾರಾಂ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರ ದಿಂದ ಸಂಸದರಾಗಿ ಗೆದ್ದು ಒಂದು ವರ್ಷದ ಅವಧಿ ತುಂಬುವುದರ ಒಳಗೇನೆ ಹಗರಿಬೊಮ್ಮನಹಳ್ಳಿ ಅಂಚೆ ಕಚೇರಿಯನ್ನು ಬಹು ವರ್ಷಗಳಿಂದಲೂ ಕಾಡುವ ಬಾಡಿಗೆ ಕಟ್ಟಡ ದಿಂದ ಶಾಶ್ವತವಾಗಿ ಮುಕ್ತಿಗೊಳಿಸುವ ಕೆಲಸವನ್ನು ಮಾಡಿದ್ದಾರೆ.
ಆ ಮೂಲಕ ಸದಾ ನಾನು ಜನರಪರ ಇರುವ ಜನಪ್ರತಿನಿಧಿ ಎನ್ನುವುದನ್ನು ಅಂಚೆಕಚೇರಿಯ ನೂತನ ಕಟ್ಟಡ ಕಟ್ಟಲು ಅನುದಾನ ತರುವ ಮೂಲಕ ಅವರು ನಿರೂಪಿಸಿ ತೋರಿಸಿದ್ದಾರೆ.
* ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಗೆ ರೂ, 3.30 ಕೋಟಿ ಅನುದಾನ ಮಂಜೂರು:
ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಹಗರಿಬೊಮ್ಮನಹಳ್ಳಿಯಲ್ಲಿ ರೂ, 1.80 ಕೋಟಿ ಮತ್ತು ಹೂವಿನ ಹಡಗಲಿಯಲ್ಲಿ ರೂ,1.50 ಕೋಟಿ ವೆಚ್ಚದಲ್ಲಿ ಈ ಎರಡು ಪಟ್ಟಣಗಳಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವಂತಹ ಪೋಸ್ಟಾಫೀಸ್ ಕಟ್ಟಡ ನಿರ್ಮಾಣ ಮಾಡಲು ಒಟ್ಟು ರೂ, 3.30 ಕೋಟಿ ಅನುದಾನ ಮಂಜೂರು ಆಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ.ತುಕಾರಾಂ ಅವರು ‘ಸುನಾಮಿನ್ಯೂಸ್’ ಗೆ ತಿಳಿಸಿದ್ದಾರೆ.
ಈಗಾಗಲೇ ಕೊಟ್ಟೂರು ಪಟ್ಟಣದಲ್ಲಿ ನೂತನ ಪೋಸ್ಟಾಫೀಸ್ ಕಾಮಗಾರಿ ಉದ್ಘಾಟನಾ ಹಂತಕ್ಕೆ ಬಂದು ನಿಂತಿದೆ ಎಂದರು.
* ಏಳು ದಶಕಗಳಿಂದಲೂ ಬಾಡಿಗೆ ಕಟ್ಟಡದಲ್ಲಿರುವ ಪೋಸ್ಟಾಫೀಸ್
ಈಗ್ಗೆ ಏಳು ದಶಕಗಳ ಹಿಂದೆ ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಅಂದಿನ ಕಾಲದ ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿದ್ದ ಐತಿಹಾಸಿಕ ನಾರಾಯಣದೇವರಕೆರೆ(ನಾಣಿಕೇರಿ) ಸಂಪೂರ್ಣ ಮುಳುಗಡೆ ಆಯ್ತು. ಅಲ್ಲಿನ ನಿವಾಸಿಗಳಿಗೆ ಈಗಿನ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ರಾಮನಗರವನ್ನು ನಿರ್ಮಿಸಿ ಅಲ್ಲಿ ಪುನರ್ ವಸತಿ ಕಲ್ಪಿಸಲಾಯ್ತು.
ಈಗೇ ಅಸ್ತಿತ್ವಕ್ಕೆ ಬಂದಿರುವ ರಾಮನಗರದ ನೇತಾಜಿ ರಸ್ತೆಯಲ್ಲಿನ ಬಾಡಿಗೆ ಕಟ್ಟಡದಲ್ಲಿ ಮೊದಲಿಗೆ ಪೊಸ್ಟಾಫೀಸ್ ಆರಂಭವಾಯ್ತು. ಪಟ್ಟಣ ಬೆಳೆದಂತೆ, ವ್ಯವಹಾರ ಜೋರಾದಂತೆ ಕಟ್ಟಡ ಚಿಕ್ಕದಾಗಿದ್ದರಿಂದ ಅಲ್ಲಿಂದ ರಾಮನಗರದ ಶ್ರೀಕೃಷ್ಣದೇವರಾಯ ರಸ್ತೆಯಲ್ಲಿನ ಬಾಡಿಗೆ ಕಟ್ಟಡಕ್ಕೆ ಅಂಚೆ ಕಚೇರಿಯನ್ನು ಸ್ಥಳಾಂತರಿಸಲಾಯ್ತು. ಬಹು ವರ್ಷಗಳ ಕಾರ್ಯ ನಿರ್ವಹಿಸಿದ ಬಳಿಕ ಪ್ರಸ್ತುತ ಈಗ ರಾಮನಗರದ ತೇರು ಬೀದಿಯಲ್ಲಿರುವ ಬಾಡಿಗೆ ಕಟ್ಟಡಕ್ಕೆ ಪೊಸ್ಟಾಫೀಸ್ ನ್ನು ಸ್ಥಳಾಂತರ ಮಾಡಲಾಗಿದೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.