Welcome to sunamipatrike   Click to listen highlighted text! Welcome to sunamipatrike
Friday, July 11, 2025
HomeUncategorizedಪತ್ರಕರ್ತರಿಗೆ ಉಚಿತ ಬಸ್ ಪಾಸ್; ಒಂದು ಸಂಘಕಷ್ಟೆ ಸೀಮಿತ ಮಾಡದೇ ಇಡೀ ಗ್ರಾಮೀಣಾ ಪತ್ರಕರ್ತರ ಸಮೂಹವನ್ನೆ...

ಪತ್ರಕರ್ತರಿಗೆ ಉಚಿತ ಬಸ್ ಪಾಸ್; ಒಂದು ಸಂಘಕಷ್ಟೆ ಸೀಮಿತ ಮಾಡದೇ ಇಡೀ ಗ್ರಾಮೀಣಾ ಪತ್ರಕರ್ತರ ಸಮೂಹವನ್ನೆ ಯೋಜನೆ ವ್ಯಾಪ್ತಿಗೆ ಒಳಪಡಿಸಿದಾಗ ಮಾತ್ರವೇ ಸಾರ್ವಜನಿಕ ಹಣಕಾಸು ವೆಚ್ಚಕ್ಕೆ ನ್ಯಾಯ ಸಲ್ಲುತ್ತೆ, ಸರ್ಕಾರದ ಉದ್ದೇಶವೂ ಪರಿಪೂರ್ಣ.

  • ಸುನಾಮಿನ್ಯೂಸ್, ಜುಲೈ,2
    ಮಾನ್ಯತಾ ಕಾರ್ಡ್ ಇಲ್ಲದೆ, ಮಾಡುವಂತಹ ವೃತ್ತಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ, ಬೇದರಿಕೆ, ಹಲ್ಲೆ, ದೌರ್ಜನ್ಯಗಳನ್ನು ಅನುಭವಿಸುತ್ತಾ ಗ್ರಾಮೀಣಾ ಭಾಗದಲ್ಲಿ ಕಾರ್ಯನಿರ್ವಹಿಸುತ್ತೀರುವ ಪತ್ರಕರ್ತರಿಗೆ ಅವರು ಕಾರ್ಯ ನಿರ್ವಹಿಸುತ್ತೀರುವ ಜಿಲ್ಲೆಯ ವ್ಯಾಪ್ತಿಯ ಒಳಗಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಳಪಡುವ ಬಸ್ ಗಳಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಪ್ರಸ್ತುತ ಕನ್ನಡ ಪತ್ರಿಕಾ ದಿನಾಚರಣೆಯ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದೆ.

ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹವಾದುದು ಹಾಗೂ ಸೂಕ್ತವೂ ಹೌದಾಗಿದೆ. ಆದರೇ ಕೇವಲ ಜಿಲ್ಲೆಯ ವ್ಯಾಪ್ತಿಯ ಮಿತಿಯ ನಿರ್ಬಂಧದ ಗಡಿರೇಖೆ ಎಳೆಯುವ ಬದಲು, ‘ಶಕ್ತಿ’ ಮೂಲಕ ಮಹಿಳೆಯರಿಗೆ ರಾಜ್ಯದ ತುಂಬನೂ ಪ್ರಯಾಣಿಸಲು ಮುಕ್ತ ಅವಕಾಶ ಕಲ್ಪಿಸಿರುವಂತೆ ಗ್ರಾಮೀಣಾ ಪತ್ರಕರ್ತರಿಗೂ ಇದೇ ಅವಕಾಶ ಕಲ್ಪಿಸಿದ್ದರೇ ರಾಜ್ಯದ ಬೊಕ್ಕಸಕ್ಕೇನು ಭಾರವಾಗುತ್ತೀರಲಿಲ್ಲ.

ಏಕೆಂದರೆ, ರಾಜ್ಯ ಸರ್ಕಾರವೇ ಹೇಳುವ ಪ್ರಕಾರ ಕನಿಷ್ಠ ಮೂರು ಕೋಟಿ ಸಂಖ್ಯೆಯಷ್ಟು ಮಹಿಳೆಯರು ಶಕ್ತಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೇ ಇಡೀ ಕರ್ನಾಟಕದಲ್ಲಿ ಮಾನ್ಯತೆ ಪಡೆಯದ ಗ್ರಾಮೀಣಾ ಪತ್ರಕರ್ತರ ಸಂಖ್ಯೆ ಒಂದು ಲಕ್ಷವೂ ಧಾಟುವುದಿಲ್ಲ!

ಇನ್ನೂ ನಿಶ್ಚಿತ ಆದಾಯ ಅಂದರೇ ಸಂಬಳ, ಪಿಂಚಣಿ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಉದ್ಯೋಗದ ಭದ್ರತೆ ಇಲ್ಲದೆ
ಗ್ರಾಮೀಣಾ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತೀರುವ ಪತ್ರಕರ್ತರಿಗೆ ಕನಿಷ್ಠ ಉಚಿತವಾಗಿ ರಾಜ್ಯದ ತುಂಬನೂ ಪ್ರಯಾಣಿಸಲು ಬಸ್ ಪಾಸ್ ಆದರೂ ನೀಡಿ ಎನ್ನುವುದು ಗ್ರಾಮೀಣಾ ಪತ್ರಕರ್ತರ ಬಹು ದಶಕಗಳ ಬೇಡಿಕೆ ಕೂಡ ಆಗಿತ್ತು.

ಈಗಾಗಲೆ ವಾರ್ತಾ ಇಲಾಖೆಯಿಂದ ಮಾನ್ಯತೆ ಪಡೆದ ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ರಾಜ್ಯ ವ್ಯಾಪ್ತಿ ರಿಯಾತಿಯಾಗಿ ಪ್ರಯಾಣಿಸುವ ಸೌಲಭ್ಯದ ಜೊತೆಗೆ ಇಲಾಖೆ ವತಿಯಿಂದ ಹಲವು ಉಪಯೋಗಗಳು ಸಿಗುತ್ತಿವೆ. ಜೊತೆಗೆ ಮಾನ್ಯತೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಹೊರತು ಪಡಿಸಿದರೇ ಬಹುತೇಕ ಪತ್ರಕರ್ತರಿಗೆ ಸರ್ಕಾರಿ ನೌಕರರಿಗೆ ಸಿಗುವಂತೆ ತಿಂಗಳು,ತಿಂಗಳು ಗ್ಯಾರಂಟಿ ವೇತನವುಂಟು, ಆಗೇನೆ ಪಿಂಚಣಿ ಸಹ ಇದೆ. ನಿವೃತ್ತಿ ತರುವಾಯ ಇಲಾಖೆ ನೀಡುವ ಮಾಶಾಸನಕ್ಕೂ ಅವರು ಎಲಿಜಿಬಲ್ ಕೂಡ. ಆದರೇ ಮಾನ್ಯತಾ ಕಾರ್ಡ್ ಹೊಂದಿರದವರಿಗೆ ಇಂತಹ ಅವಕಾಶಗಳು ಸಂಪೂರ್ಣ ಕ್ಷೀಣ.

ಇತ್ತ ಸರ್ಕಾರ ಗ್ರಾಮೀಣಾ ಪತ್ರಕರ್ತರಿಗೆ ಜಿಲ್ಲೆಯ ತುಂಬನೂ ಪ್ರಯಾಣಿಸಲು ಉಚಿತ ಬಸ್ ಪಾಸ್ ಘೋಷಿಸಿದೆ. ಆದರೇ ಸರ್ಕಾರದ ಈ ಸೌಲಭ್ಯ ಯಾವುದೋ ಒಂದು ಪತ್ರಕರ್ತರ ಸಂಘಟನೆಯ ಸದಸ್ಯರಿಗಷ್ಟೇ ಕಲ್ಪಿಸದೇ, ಇಡೀ ಗ್ರಾಮೀಣಾ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತೀರುವಂತಹ ಎಲ್ಲಾ ಪತ್ರಕರ್ತರಿಗೂ ಈ ಸೌಲಭ್ಯ ಸಿಗಬೇಕು.

ಎಲ್ಲರಿಗೂ ಸೌಲಭ್ಯ ದೊರಕಿದಾಗ ಮಾತ್ರವೇ ಸಾರ್ವಜನಿಕ ಹಣಕಾಸು ಬಳಸಿಕೊಂಡು ಸರ್ಕಾರ ಜಾರಿಗೊಳಿಸುವ ಯೋಜನೆಯು
ನ್ಯಾಯಸಮ್ಮತವೂ ಹೌದಾಗಲಿದೆ. ಹೀಗಾಗಿ ಗ್ರಾಮೀಣಾ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತೀರುವ ಎಲ್ಲಾ ಪತ್ರಕರ್ತರನ್ನು ಉಚಿತ ಬಸ್ ಯೋಜನೆಯಡಿ ತರುವಂತಹ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಕೂಡ.

ಏಕೆಂದರೆ, ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಬಸ್ ವಿತರಣೆಯ ಘೋಷಣೆ ಮಾಡಿದಾಗ ಆಗ ವೇದಿಕೆ ಮೇಲೆ ಇದಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮಾತ್ರ ಇದ್ದರು. ಆದರೇ ರಾಜ್ಯದಲ್ಲಿ ಪತ್ರಕರ್ತರ ಸಂಘಟನೆ ಮಾಡುತ್ತೀರುವ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ವೇದಿಕೆ ಮೇಲೆ ಕಾಣಿಸಲಿಲ್ಲ.

ಈ ಅಂಶ ಉಚಿತ ಬಸ್ ಎಲ್ಲಾ ಪತ್ರಕರ್ತರಿಗೋ ಇಲ್ಲ ಒಂದು ಸಂಘದ ಸದಸ್ಯರಿಗೋ ಎನ್ನುವ ಅನುಮಾನವನ್ನು ಪತ್ರಕರ್ತರ ಮಧ್ಯೆ ದಟ್ಟೈಸುವಂತೆ ಮಾಡಿದೆ. ಈ ಅನುಮಾನವನ್ನು ವಾರ್ತಾ ಇಲಾಖೆ ಸ್ಪಷ್ಟವಾಗಿಸುವುದು ಈ ಹೊತ್ತಿನ ಅಗತ್ಯವೂ ಹೌದಾಗಿದೆ.

ಏಕೆಂದರೆ, ಪ್ರಸ್ತುತ ರಾಜ್ಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಂತೆ
ಪತ್ರಕರ್ತರನ್ನು ಸಂಘಟಿಸುವ ಹೆಸರಿನಲ್ಲಿ ಹಲವು ರಾಜ್ಯ ಮಟ್ಟದ ಸಂಘಟನೆಗಳು ಕಾರ್ಯನಿರ್ವಹಿಸುತ್ತೀವೆ.ಜೊತೆಗೆ ಆಯಾ ನಗರ,ಪಟ್ಟಣವನ್ನು ಕೇಂದ್ರಿಕರಿಸಿಕೊಂಡು ಹಲವು ಮಿಡಿಯಾ ಕ್ಲಬ್ ಗಳು ಕೂಡ ಅಸ್ತಿತ್ವದಲ್ಲಿವೆ. ಈ ಎಲ್ಲಾ ಸಂಘಟನೆಗಳು ಸಹಕಾರ ಇಲಾಖೆ ಇಲ್ಲವೆ ಕಾರ್ಮಿಕ ಇಲಾಖೆ ಅಡಿಯಲ್ಲಿ ನೊಂದಾಯಿತ ಆಗಿವೆ.

ಈ ಎಲ್ಲಾ ಸಂಘಟನೆಗಳು ಕರ್ನಾಟಕ ಸರ್ಕಾರದ ಮಾನ್ಯತೆಗೆ ಒಳಪಟ್ಟಿವೆ. ಹೀಗಾಗಿ ರಾಜ್ಯ ಸರ್ಕಾರದ ಬಸ್ ಪಾಸ್ ಯೋಜನೆ ಗ್ರಾಮೀಣಾ ಕರ್ನಾಟಕವನ್ನು ಪ್ರತಿನಿಧಿಸುತ್ತೀರುವ ಎಲ್ಲಾ ಪತ್ರಕರ್ತರಿಗೂ ಸಿಗಬೇಕು. ಈಗಾದಾಗ ಮಾತ್ರವೇ ರಾಜ್ಯ ಸರ್ಕಾರದ ಉದ್ದೇಶ ಪರಿಪೂರ್ಣವಾಗಲು ಸಾಧ್ಯ.

ಇನ್ನು ಗಮನಿಸಬೇಕಾದ ಅಂಶ ಏನೇಂದರೇ, ಇಡೀ ರಾಜ್ಯದಲ್ಲಿ ಪತ್ರಕರ್ತರ ಸಂಖ್ಯೆ ಒಂದು ಲಕ್ಷದ ಒಳಗಡೆ ಇದೆ! ಎಲ್ಲಾ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದು ಎನ್ನುವುದನ್ನು ಮತ್ತೊಮ್ಮೆ ಸರ್ಕಾರಕ್ಕೆ ನೆನಪು ಮಾಡಬೇಕಾಗಿರುವುದು ಈ ಹೊತ್ತಿನ ಅನಿವಾರ್ಯವೂ ಹೌದಾಗಿದೆ.

ಏಕೆಂದರೆ ಈಗಾಗಲೇ ‘ಶಕ್ತಿ’ ಯೋಜನೆ ಮೂಲಕ ಕರ್ನಾಟಕದ ಉದ್ದಗಲಕ್ಕೂ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ರಾಜ್ಯಸರ್ಕಾರ ತನ್ನ ಗ್ಯಾರಂಟಿ ಮೂಲಕ ಸೌಲಭ್ಯ ಕಲ್ಪಿಸಿದೆ. ಕನಿಷ್ಠ ಮೂರು ಕೋಟಿಯಷ್ಟು ಮಹಿಳೆಯರು ಶಕ್ತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಮೇ ತಿಂಗಳಲ್ಲಿ ಹೊಸಪೇಟೆ ನಗರದಲ್ಲಿ ಜರುಗಿದ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿಯೇ ಸಿಎಂ,ಡಿಸಿಎಂ ಆದಿಯಾಗಿ ಸಚಿವರು,ಶಾಸಕರುಗಳು ತಮ್ಮ ಭಾಷಣಗಳಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.

ಇತ್ತ ನೆತ್ತಿ ಸುಡುವ ಬಿಸಿಲಿನ ತಾಪವನ್ನು ಸಹಿಸಿಕೊಂಡು, ಚಳಿ,ಮಳೆ, ಗಾಳಿ, ಸಿಡಿಲು, ಗುಡುಗಿಗೆ ಎದುರಾಗಿ ಪ್ರಾಣವನ್ನು ಒತ್ತೆ ಇಟ್ಟು, ಲೈನೇಜ್ ಎನ್ನುವ ಪುಡಿಗಾಸಿನ ಗೌರವಧನವನ್ನು ನೆಚ್ಚಿಕೊಂಡು ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ಗ್ರಾಮೀಣಾ ಭಾಗಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತೀರುವ ಎಲ್ಲಾ ಪತ್ರಕರ್ತರಿಗೂ ಇಡೀ ರಾಜ್ಯದ ತುಂಬನೂ ಪ್ರಯಾಣಿಸುವ ಅವಕಾಶ ಕಲ್ಪಿಸಿದರೇ ರಾಜ್ಯದ ಖಜಾನೆ ಬರಿದಾಗದು.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!