- ಹುಳ್ಳಿಪ್ರಕಾಶ, ಸಂಪಾದಕರು.
* ಸುನಾಮಿನ್ಯೂಸ್, ಜುಲೈ,7
ಬಿಎಸ್.ಯಡಿಯೂರಪ್ಪರನ್ನು ರಾಷ್ಟ್ರೀಯ ಹಿರಿಯ ಮಾರ್ಗದರ್ಶಕರಾಗಿ ನೇಮಿಸಿ ಸಿಎಂ ಹುದ್ದೆಯಿಂದ ಅವರನ್ನು ಕೆಳಗಿಳಿಸುವ ತಂತ್ರಗಾರಿಕೆಯನ್ನು ಬಿಜೆಪಿ ರಾಷ್ಟ್ರೀಯ ವರಿಷ್ಠರು ಅನುಸರಿಸಿ ಅದರಲ್ಲಿ ಸಫಲತೆಯನ್ನು ಸಾಧಿಸಿದ್ದರು. ಆ ಮೂಲಕ ಬಿಎಸ್ವೈ ಅವರನ್ನು ರಾಜಕೀಯ ನಿವೃತ್ತಿಗೂ ದೂಡಿದ್ದನ್ನು ಕರ್ನಾಟಕ ರಾಜಕಾರಣ ಕಂಡಿದೆ.
ಇತ್ತ, ಈಗ ಇದೇ ತರಹದ ತಂತ್ರಗಾರಿಕೆಯ ಮಾದರಿಯನ್ನೆ ಅಖಿಲಾ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ವರಿಷ್ಠರು ಕೂಡ ಕರ್ನಾಟಕದಲ್ಲಿ ಸಿದ್ದರಾಮಯ್ಯರ ನಾಯಕತ್ವ ಬದಲಾವಣೆ ವಿಚಾರದಲ್ಲೂ ಪ್ರಯೋಗಿಸಲು ಮುಂದಾಗಿದ್ದಾರೆಯೇ? ಎನ್ನುವ ವಿಶ್ಲೇಷಣೆಯನ್ನು ‘ಸುನಾಮಿನ್ಯೂಸ್ ಸಂಪಾದಕರಾದ ಹುಳ್ಳಿಪ್ರಕಾಶ ಅವರು ಮಾಡಿದ್ದಾರೆ.
ಕರ್ನಾಟಕ ನಾಯಕತ್ವ ಬದಲಾವಣೆ ಇಲ್ಲ ಎಂದೇ ಪ್ರತಿಪಾದಿಸುತ್ತಾ ಬಂದಿದ್ದ ಕೈ ಹೈಕಮಾಂಡ್ ಇದ್ದಕ್ಕಿದ್ದಂತೆಯೇ ಯುಟರ್ನ್ ಹೊಡೆದಂತೆ ಕಾಣ್ತಾಯಿದೆ. ಏಕೆಂದರೆ, ಎಐಸಿಸಿ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯೊಂದನ್ನು ಹೈಕಮಾಂಡ್ ರಚಿಸಿದೆ. ಈ ನೂತನ ಕಮಿಟಿಯ ಚೇರ್ಮನ್ ಆಗಿ ಸಿದ್ದರಾಮಯ್ಯರನ್ನೇ ಹೈಕಮಾಂಡ್ ನೇಮಕಗೊಳಿಸಿದೆ. ಈ ನೇಮಕದ ಹಿಂದೆ ಅಡಗಿ ಕುಳಿತಿದೆ ಕರ್ನಾಟಕದಲ್ಲಿ ಸಂಭವಿಸಬಹುದಾದ ನಾಯಕತ್ವ ಬದಲಾವಣೆಯ ತಂತ್ರಗಾರಿಕೆ!
ಸಿದ್ದರಾಮಯ್ಯರನ್ನು ಎಐಸಿಸಿ ಇದ್ದಕ್ಕಿದ್ದಂತೆ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಕ್ ವಾರ್ಡ್ ಕ್ಲಾಸ್ ಪೊಸ್ಟರ್ ಮಾಡಲು ಕಾಂಗ್ರೆಸ್ ವರಿಷ್ಠರು ತೆಗೆದುಕೊಂಡಿರುವ ಈ ದಿಢೀರ್ ತಿರ್ಮಾನ ಕರ್ನಾಟಕದಲ್ಲಿ ಸಿಎಂ ಸ್ಥಾನದ ಬದಲಾವಣೆಗೆ ಅದು ಕಟ್ಟಿರುವ ಮೊದಲ ಹಂತದ ಮೆಟ್ಟಿಲು ಎನ್ನುವುದು ವರ್ತಮಾನ ಕರ್ನಾಟಕ ರಾಜಕಾರಣದ ವಿಶ್ಲೇಷಣೆಯು ಹೌದಾಗಿದೆ.
* ಸರ್ಕಾರದ ಸುರಕ್ಷತೆಗೆ ಗ್ಯಾರಂಟಿ ಇಲ್ಲ!
ಏಕೆಂದರೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆನ್ನುವ ಕೂಗು ಬಹು ದಿನಗಳಿಂದಲೂ ಬಹಿರಂಗವಾಗಿಯೇ ಇದೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಬಹುತೇಕ ಶಾಸಕರೊಂದಿಗೆ ‘ಒನ್ ಟೂ ಒನ್’ ಚರ್ಚಿಸಿದ್ದಾರೆ. ಆ ಬಳಿಕ ಸದ್ಯ ನಾಯಕತ್ವದ ಬದಲಾವಣೆ ನಮ್ಮ ಮುಂದಿಲ್ಲ ಎಂದು ಮಾಧ್ಯಮದ ಎದುರು ಹೇಳಿ ದೆಹಲಿ ವಿಮಾನ ಹತ್ತಿದರು.
ಅವರು ಶಾಸಕರ ಜೊತೆಗೆ ಚರ್ಚಿಸಿದ ವಿಚಾರ ಬಹಿರಂಗವಾಗಿಲ್ಲ. ಆದರೇ, ಸಿದ್ದರಾಮಯ್ಯರನ್ನೇ ಮುಂದುವರೆಸಿದರೂ ಇನ್ನೂ ಮೂರು ವರ್ಷ ಸರ್ಕಾರ ಈಗೇ ಗಟ್ಟಿಯಾಗಿ, ಒಗ್ಗಟ್ಟಿನಿಂದ ಸುಭದ್ರವಾಗಿಯೇ ಇರುತ್ತದೆ ಎನ್ನುವ ವಿಚಾರದಲ್ಲಿ ಯಾವುದೇ ಖಚಿತತೆ ಇಲ್ಲ ಎನ್ನುವ ಅಂಶ ಮಾತುಕತೆಯ ವೇಳೆ ಪಕ್ವವಾಗಿದೆ ಎನ್ನುವ ಮಾತುಗಳು ಸುರ್ಜೇವಾಲ್ ಆತ್ತ ವಿಮಾನ ಏರುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ವಲಯ ದಿಂದ ಜೋರಾಗಿ ಕೇಳಿ ಬರಲಾರಂಭಿಸಿದವು.
ಇದರ ಬೆನ್ನಲ್ಲೆ, ನಾಯಕತ್ವ ಬದಲಾವಣೆಯ ವಿಚಾರವಾಗಿ ಪಕ್ಷದೊಳಗೆ ಎದ್ದಿರುವ ಅಸಮಾಧಾನ ಸಿದ್ದರಾಮಯ್ಯ ಸರ್ಕಾರದ ಸುರಕ್ಷತೆಗೆ ಆಪಾಯ ತರಲಿದೆ! ಅದಕ್ಕಿಂತಲೂ ಕರ್ನಾಟಕದಲ್ಲಿ ಸರ್ಕಾರ ಪತನಗೊಳಿಸಲು ಆಡಳಿತ ಪಕ್ಷ ದಿಂದ ಸಿಗುವ ಸಣ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೇಂದ್ರದ ಬಿಜೆಪಿ ಕಾದು ಕುಳಿತಿದೆ ಎನ್ನುವ ಕಟು ಸತ್ಯವನ್ನು ಸುರ್ಜೇವಾಲ್ ಹೇಳದಿದ್ರೂ ಪರ್ಯಾಯ ಮೂಲಗಳಿಂದ ಎಐಸಿಸಿ ಗಮನಕ್ಕೆ ಹೋಗಿದೆ.
* ವಿಳಂಬರಿಸಿದರೇ ಕಂಟಕ!
ತಡಮಾಡಿದಷ್ಟು ಕಂಟಕ ಜಾಸ್ತಿ ಎನ್ನುವುದು ಗೊತ್ತಾಗುತ್ತಲೇ ಹೈಕಮಾಂಡ್ ಎಚ್ಚೇತ್ತುಕೊಂಡು ಫೀಲ್ಡ್ ಗಿಳಿದಿದೆ. ಸರ್ಕಾರವೂ ಉಳಿಯಬೇಕು, ಇತ್ತ ಸಿದ್ದರಾಮಯ್ಯ ಕೂಡ ಮೆತ್ತಾಗೆ ಆಗಬೇಕು. ಅವರ ಬಣ ದಿಂದ ಅಪಸ್ವರ ಕಾಣಿಸಬಾರದು. ಇದಕ್ಕೆ ಎಐಸಿಸಿ ಆಯ್ದು ಕೊಂಡ ಜಾಣ್ಮೆಯ ಮಾರ್ಗವೇ ರಾಷ್ಟ್ರೀಯ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಎನ್ನುವ ಹೊಸ ವ್ಯವಸ್ಥೆಯನ್ನು ಪಕ್ಷದೊಳಗೆ ಹುಟ್ಟು ಹಾಕಿ, ಈಗೇ ಹೊಸದಾಗಿ ಹುಟ್ಟುವ ಕುರ್ಚಿಗೆ ಸಿದ್ದರಾಮಯ್ಯ ಅವರನ್ನೇ ಚೇರ್ಮನ್ ಮಾಡಿ ಅದರ ಮೇಲೆ ಪ್ರತಿಷ್ಟಾಪನೆಗೈದರೇ ಅಲ್ಲಿಗೆ ಒಂದೇ ಪೊಸ್ಟ್ ನಲ್ಲಿ ಎರಡು ಸಮಸ್ಯೆ ನಿವಾರಿಸಬಹುದು ಎನ್ನುವ ಉಸ್ತುವಾರಿಗಳ ಸಲಹೆಯಂತೆ ಎಐಸಿಸಿ ನಡೆದುಕೊಂಡಿರ ಬಹುದೇನೋ!
ಸುರ್ಜೇವಾಲ್ ಪತ್ರೀಕಾಗೋಷ್ಠಿಯಲ್ಲಿ ನಾಯಕತ್ವ ಬದಲಾವಣೆಗೆ ನೋ ಎಂದ ಬಳಿಕ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರೀಯೆ ಮುಗಿದೇಹೊಯ್ತು ಎನ್ನುವ ವಾತಾವರಣ ಕಳೆದೊಂದು ವಾರದಿಂದಲೇ ನಿರ್ಮಾಣಗೊಂಡಿತ್ತು. ಇತ್ತ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಹರ್ಷದ ಹೊನಲು ತುಂಬಿತುಳುಕಾಡುತ್ತಿತ್ತು. ಆದರೇ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರ ಆಪ್ತರು, ಬೆಂಬಲಿಗರು ಬಿಡಿ, ಖುದ್ದು ಸಿದ್ದರಾಮಯ್ಯ ಅವರನ್ನೇ ನಿಬ್ಬೇರಾಗಾಗಿಸಿರ ಬಹುದು!
ಏಕೆಂದರೆ, ಯಾವತ್ತೂ ಕೂಡ ಕೇಂದ್ರ ರಾಜಕಾರಣವನ್ನು ಸಿದ್ದರಾಮಯ್ಯ ಬಯಸಿದವರಲ್ಲ. ಅಂದಿನ ಜನತಾಪರಿವಾರದ ಮುಖಂಡರ ಬಲವಂತದ ಮೇರೆಗೆ 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧೆ ಮಾಡಿ ಹಲವು ಸಾವಿರ ಮತಗಳಿಂದ ಸೋತ ಬಳಿಕ ಈ ತನಕವೂ ಅವರು ಕೇಂದ್ರದತ್ತ ಮುಖ ಮಾಡೇಯಿಲ್ಲ.ಹಿಂದಿವಾಲಾಗಳಿಂದ ತುಂಬಿರುವ ದೆಹಲಿ ರಾಜಕಾರಣ ಕ್ಕಿಂತಲೂ ಸುಮಧುರ ಕನ್ನಡನಾಡಿನ ರಾಜಕೀಯವೇ ಮೇಲೆಂದು, ರಾಜ್ಯ ರಾಜಕಾರಣದಲ್ಲೆ ಸಿದ್ದರಾಮಯ್ಯ ಇರಬಯಸಿದವರು. ಇದು ಕೈ ಹೈಕಮಾಂಡ್ ಗೆ ಗೊತ್ತೀರದ ವಿಚಾರವೇನಲ್ಲ.
ಆದರೇ ಈ ವಿಚಾರ ಗೊತ್ತಿದ್ದೂ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ನೇಮಕ ಮಾಡಿರುವುದನ್ನು ಗಮನಿಸಿದರೆ ಕರ್ನಾಟಕದಲ್ಲಿ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯರನ್ನು ಕೆಳಗೆ ಇಳಿಸುವ ಪ್ರಕ್ರಿಯೆಗಳು ಸ್ತಬ್ಧವಾಗಿಲ್ಲ! ಬದಲಿಗೆ ಅವು ಇನ್ನಷ್ಟು ವೇಗ ಪಡೆದುಕೊಂಡಿವೆ ಎನ್ನುವ ಅನುಮಾನಗಳು ಸಿದ್ದು ಆಪ್ತರನ್ನು, ಬೆಂಬಲಿತರನ್ನು ಕಾಡದೇ ಇರದು
ಏಕೆಂದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲಾ ಎಂದು ಕಳೆದ ವಾರವಷ್ಟೇ ಎಐಸಿಸಿಯ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿಕೆ ನೀಡಿದ್ರು. ಇದರ ಬೆನ್ನಲ್ಲೆ ಮುಂದಿನ ಮೂರು ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಖುದ್ದು ಸಿದ್ದರಾಮಯ್ಯ ನವರೇನೆ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ರು. ಅವರು ಹೇಳಿಕೆ ನೀಡಿ ಮೂರು ದಿನ ಕಳೆದಿಲ್ಲ ರಾಷ್ಟ್ರೀಯ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಚೇರ್ಮನ್ ಗಿರಿ ನೇಮಕದ ದಿಢೀರ ನಿರ್ಧಾರ ಎಐಸಿಸಿ ಯಿಂದ ಹೊರಬಂದಿದೆ.
ಹೀಗಾಗಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸುತ್ತಲೆ ಇವೆ. ಆದರೇ, ಇತ್ತ ಈ ಸಲ ಅತ್ಯಂತ ಪಕ್ಕಾ ಪ್ಲಾನ್ ಮಾಡಿಯೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಕೈ ಪಕ್ಷದ ಹೈಕಮಾಂಡ್ ಭರ್ಜರಿ ಸಿದ್ಧತೆಯನ್ನೆ ಮಾಡಿಕೊಂಡೇ ಸರಿಯಾದ ಮಾಸ್ಟರ್ ಪ್ಲಾನ್ ಸಿದ್ದವಾಗಿಟ್ಟು ಕೊಂಡೇ ಅದು ಣಕ್ಕೀಳಿದಿದೆ ಎನ್ನುವ ಚರ್ಚೆಗಳು, ವ್ಯಾಖ್ಯಾನಗಳು, ವಿಶ್ಲೇಷಣೆಗಳು ಕರ್ನಾಟಕ ರಾಜಕಾರಣದಲ್ಲಿ ಜೋರಾಗಿವೆ.
* ಕರ್ನಾಟಕದ ಮಾಸ್ ಲೀಡರ್ಸ್:
ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಸಿಎಂಗಳಾದ ಹೆಚ್ಡಿ ಕುಮಾರಸ್ವಾಮಿ, ಬಿಎಸ್.ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಈ ನಾಲ್ವರು ಕರ್ನಾಟಕದ ಮಟ್ಟಿಗೆ ಬಹುದೊಡ್ಡ ಜನಪರ ನಾಯಕರುಗಳು. ದೇವೆಗೌಡರು, ಕುಮಾರಸ್ವಾಮಿ ಒಕ್ಕಲಿಗ, ಯಡಿಯೂರಪ್ಪ ಲಿಂಗಾಯತ ಮತ ಬ್ಯಾಂಕ್ ಮೇಲೂ, ಸಿದ್ದರಾಮಯ್ಯ ಕುರುಬ ಸಮುದಾಯದ ಓಟ್ ಬ್ಯಾಂಕ್ ಮೇಲೆ ಬಿಗಿಯಾದ ಪ್ರಭುತ್ವವನ್ನೇ ಸಾಧಿಸಿದಂತಹ ಲೀಡರ್ ಗಳು.
ಜೆಡಿಎಸ್ ಪಕ್ಷಕ್ಕೆ ದೇವೆಗೌಡ್ರೇ ಹೈಕಮಾಂಡ್. ಇನ್ನೂ ಯಡಿಯೂರಪ್ಪ, ಸಿದ್ದರಾಮಯ್ಯ ಈ ಇಬ್ಬರ ಮೇಲೆ ಅವರ ಪಕ್ಷಗಳ ಹೈಕಮಾಂಡ್ ತೂಗುಕತ್ತಿ ಇದ್ದೇ ಇದೆ. ಆದರೇ ಇವರನ್ನುಮಟ್ಟ ಹಾಕುವುದು ಆಯಾ ಪಕ್ಷಗಳ ವರಿಷ್ಠರಿಗೆ ಬಲು ತಲೆಬಿಸಿ ಮಾಡುವಂತಹ ಕೆಲಸವೇ ಹೌದಾಗಿದೆ.
* ರಾಷ್ಟ್ರೀಯ ನಾಯಕತ್ವ ಎನ್ನುವ ಬಲೂನ್!
ಯಡಿಯೂರಪ್ಪ ವಿರುದ್ಧವಾಗಿ
ನೇರ,ನೇರಾ ಕದನಕ್ಕೀಳಿದರೇ ಇವರ ಬೆಂಬಲಿಗರು ಬಂಡಾಯ ಎದ್ದರೇ! ಕೈಯಲ್ಲಿರುವ ಸರ್ಕಾರವನ್ನೆ ಕಳೆದುಕೊಳ್ಳಬೇಕಾದೀತು ಎನ್ನುವ ಆಪಾಯದ ಸುಳಿವು ಅರಿತುಕೊಂಡೇ ಅವರ ಬೆನ್ನಿಗೆ ರಾಷ್ಟ್ರೀಯ ಮಟ್ಟದ ನಾಯಕತ್ವದ ಬಲೂನ್ ಕಟ್ಟುವ ಮೂಲಕ ಕರ್ನಾಟಕದ ಮಟ್ಟಿಗೆ ಮಾಸ್ ಲೀಡರ್ ಆಗಿದ್ದ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆಇಳಿಸುವಲ್ಲಿ ಕಮಲಪಡೆ ಸಫಲವಾಯ್ತು.
ಆಗೇನೆ ಈಗ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರೀಯ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ನಾಯಕತ್ವ ಎನ್ನುವ ಬಲೂನ್ ಸಿದ್ದಪಡಿಸಿದೆ. ಅದನ್ನು ಕಟ್ಟಿ ಅವರನ್ನು ಕರ್ನಾಟಕದ ನಾಯಕತ್ವ ದಿಂದ ಕೆಳಗಿಳಿಸಲು ಡೆಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕರಾದ ಭೀಮನಗೌಡ ಕಾಶೀರೆಡ್ಡಿ.
* ನೇರವಾಗಿ ಕಣಕ್ಕೀಳಿದರೇ ಆಪಾಯ!
ಸಿಎಂ ಆಗಿದ್ದ ಯಡಿಯೂರಪ್ಪರನ್ನು ಇದ್ದಕ್ಕಿದ್ದಂತೆ ನಾಯಕತ್ವ ದಿಂದ ಕೆಳಗಿಳಿಸಿದ್ದರೇ ವೀರಶೈವ ಸಮುದಾಯದ ಪ್ರಬಲ ಪ್ರತಿರೋಧ ಎದುರಾಗಬಹುದು ಎನ್ನುವುದನ್ನು ಅರಿತ ಬಿಜೆಪಿ ಹೈಕಮಾಂಡ್ ರಾಷ್ಟ್ರೀಯ ಮಾರ್ಗದರ್ಶಕ ಮಂಡಳಿಗೆ ಅವರನ್ನು ಬಡ್ತಿ ಕೊಟ್ಟು, ಇವರ ಜನಪ್ರಿಯತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಳ್ಳಲು ಅವರಿಗೆ ರಾಷ್ಟ್ರೀಯ ನಾಯಕತ್ವ ನೀಡಲಾಗಿದೆ ಎಂದು ಬಿಂಬಿಸಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಂಘಪರಿವಾರದ ಸಲಹೆಯಂತೆ ಬಸವರಾಜ ಬೊಮ್ಮಾಯಿ ಕೂಡಿಸಿದ್ದನ್ನು ಕನ್ನಡಿಗರು ನೋಡಿದ್ದಾರೆ.
* ಇನ್ನೂ ಮೂರು ವರ್ಷ ನಾನೇ ಸಿಎಂ ಎಂದಿದ್ದು ಹೈಕಮಾಂಡ್ ಗೆ ನುಂಗಲಾರದ ಬಿಸಿ ತುಪ್ಪವಾಯ್ತೇ…..!?
ಈಗ ಪ್ರಸ್ತುತ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೆ ಮುಟ್ಟಿದೆ. ಇದರ ನಡುವೆ ನಾನೇ ಇನ್ನೂ ಮೂರು ವರ್ಷ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಗಂಟೆ ಹೊಡೆದಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ಸಿಎಂ ಹುದ್ದೆಯಲ್ಲಿ ಮುಂದುವರೆಯುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ.
ಈ ಹೇಳಿಕೆ ಕೈಪಕ್ಷದ ಹೈಕಮಾಂಡ್ ಕಣ್ಣು ಕೆಂಪಾಗಿಸಿತು ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಜೋರಾಗಿವೆ. ಈ ಕಾರಣಕ್ಕೇನೆ ಸಿದ್ದರಾಮಯ್ಯ ಅವರನ್ನು ಮಟ್ಟಹಾಕಲು
ಇದ್ದಕ್ಕಿದ್ದಂತೆಯೇ ಎಐಸಿಸಿ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯನ್ನು ಹುಟ್ಟು ಹಾಕಿ ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನೇ ಅಧ್ಯಕ್ಷ ಹುದ್ದೆ ನೇಮಕಗೊಳಿಸುವ ಮೂಲಕ ಹೈಕಮಾಂಡ್ ಪ್ರತಿತಂತ್ರವನ್ನು ಹೆಣೆಯುವ ಕೆಲಸ ಮಾಡಿರಬಹುದು ಎನ್ನುವ ಚರ್ಚೆಗಳು ಕೂಡ ಬಿರುಸು ಪಡೆದುಕೊಂಡಿವೆ.
* ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯವಲ್ಲ!
ಕಾಂಗ್ರೆಸ್ ಪಕ್ಷದ ವರಿಷ್ಠರ ಈ ನಡೆ ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆಯ ವಿಚಾರ ಮುಗಿದ ಅಧ್ಯಾಯವಲ್ಲ ಬದಲಿಗೆ ಚಾಲ್ತಿಯಲ್ಲಿದೆ ಎನ್ನುವುದನ್ನು ನಿರೂಪಿಸಿದೆ. ಪಕ್ಷದ ಈ ನಿರ್ಧಾರ ರಾಜ್ಯದ ಜನತೆಯನ್ನು ಸಾಕಷ್ಟು ಕುತೂಹಲಿಗಳನ್ನಾಗಿಸಿದೆ. ಜೊತೆಗೆ ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ವರಿಷ್ಠರು ತೆಗೆದುಕೊಂಡಿದ್ದ ನಿರ್ಧಾರವನ್ನು ಕರ್ನಾಟಕದ ಜನತೆ ಪುನ: ನೆನಪು ಮಾಡಿಕೊಂಡು ಚರ್ಚಿಸುವಂತೆಯೂ ಮಾಡಿದೆ.
* ಕೈ ಹೈಕಮಾಂಡ್ ನಿಂದ ಸೇಫ್ ಗೇಮ್;
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಕೈ ಪಕ್ಷದ ಹೈಕಮಾಂಡ್ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.ಆಗೇನೆ ಸೇಫ್ ಗೇಮ್ ಮೊರೆಹೊಕ್ಕಿದೆ ಎನ್ನಬಹುದು. ಹೇಗೆಂದರೇ, ಗ್ಯಾರಂಟಿ ಯೋಜನೆಗಳ ಮೂಲಕ ಜನಪ್ರೀಯತೆಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ರಾಷ್ಟ್ರೀಯ ಮಟ್ಟದಲ್ಲೂ ಬಳಸಿಕೊಂಡು, ರಾಷ್ಟ್ರದಲ್ಲಿನ ಹಿಂದುಳಿದ ವರ್ಗಗಳ ಮತಬ್ಯಾಂಕ್ ನ್ನು ಪಕ್ಷದತ್ತ ಸೆಳೆಯಲು ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದು ವಿವರಣೆ ಕೊಟ್ಟಿದೆ.
ಆಗೇನೆ, ಬಿಹಾರ, ತಮಿಳುನಾಡು ಸೇರಿದಂತೆ ಬರಲಿರುವ ವಿಧಾನಚುನಾವಣೆಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಆಗೇನೆ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘಟನೆಗೂ ಬಲವರ್ಧನೆ ಸಿಗಲಿದೆ ಎನ್ನುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎನ್ನುವಂತೆ ಕಾಂಗ್ರೆಸ್ ಹೈಕಮಾಂಡ್ ಬಿಂಬಿಸಲಾರಂಭಿಸಿದೆ.
ಆ ಮೂಲಕ ಸಿದ್ದರಾಮಯ್ಯ ಪದತ್ಯಾಗ ದಿಂದಾಗಿ ಪಕ್ಷದ ಮೇಲೆ ಯಾವುದೇ ವ್ಯತಿರಿಕ್ತ ಅಡ್ಡ ಪರಿಣಾಮ ಉಂಟಾಗದಂತೆ ಅದು ಸೇಫ್ ಗೇಮ್ ಆಡ್ತಾಯಿದೆ ಎನ್ನುವುದು ವರ್ತಮಾನ ಕರ್ನಾಟಕ ರಾಜಕಾರಣದ ವಿಶ್ಲೇಷಣೆಯು ಹೌದಾಗಿದೆ. ಪ್ರಸ್ತುತ ಕರ್ನಾಟಕ ಹೊರತು ಪಡಿಸಿದರೇ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಗೊತ್ತೀರದ ವಿಚಾರವೆನಲ್ಲ.
.* ಸಲಹಾ ಮಂಡಳಿ ಅಗತ್ಯ ಇತ್ತೇ!?
ಇನ್ನೂ ಎಐಸಿಸಿ ಹೊಸದಾಗಿ ರಚಿಸಿರುವ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಪ್ರಸ್ತುತ ಅಗತ್ಯ ಇತ್ತೇ? ಎಂದು ಪ್ರಶ್ನಿಸುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕರಾದ ಭೀಮನಗೌಡ ಕಾಶೀರೆಡ್ಡಿ.
ಏಕೆಂದರೆ, ಈಗಾಗಲೇ ಎಐಸಿಸಿ ಹಿಂದುಳಿದ ವರ್ಗಗಳ ಸಮಿತಿ ಪಕ್ಷದೊಳಗಡೆ ಮುಂಚೂಣಿ ಘಟಕವಾಗಿ ಅಸ್ಥಿತ್ವದಲ್ಲಿದೆ. ಪಕ್ಷದ ಸಂವಿಧಾನದ ಪ್ರಕಾರವೇ ರಾಷ್ಟ್ರೀಯ ಮಟ್ಟದಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ)ಗಳಲ್ಲೂ ರಾಜ್ಯಘಟಕಗಳಿವೆ. ಹಿಂದುಳಿದ ವರ್ಗಗಳ ಮಧ್ಯೆ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಈ ಸಮಿತಿಗಳು ನಿರಂತರವಾಗಿ ಮಾಡುತ್ತಾ ಬರ್ತಾಯಿವೆ ಎನ್ನುತ್ತಾರೆ ಕಾಶೀರೆಡ್ಡಿ.
ಆಗಾದರೇ, ಎಐಸಿಸಿ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಎನ್ನುವ ಹೊಸ ವ್ಯವಸ್ಥೆಯೊಂದಕ್ಕೆ ಹೈಕಮಾಂಡ್ ದಿಢೀರ್ ನೇ ಜನ್ಮಕೊಟ್ಟಿದ್ದು ಯಾಕೇ……!??????.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.