- ಸುನಾಮಿನ್ಯೂಸ್, ಮಾರ್ಚ್,12
- ನವದೆಹಲಿ
* ಹುಳ್ಳಿಪ್ರಕಾಶ, ಸಂಪಾದಕರು
ರಾಷ್ಟ್ರೀಯ ಹೆದ್ದಾರಿ-67ರಲ್ಲಿ ಬಳ್ಳಾರಿ ನಗರದ ಬೈ-ಪಾಸ್ ನಿಂದ ಸುಧಾ ಕ್ರಾಸ್ ವರೆಗೆ ಪ್ರಸ್ತುತ ಎರಡು ಪಥದ ರಸ್ತೆ ಇದ್ದು ಇದನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ತತಕ್ಷಣವೇ ಅನುಮೋದನೆ ನೀಡಿ, ಉದ್ದೇಶಿತ ಕಾಮಗಾರಿಗೆ 90 ಕೋಟಿರೂಪಾಯಿ ಅನುದಾನವನ್ನು ಮಂಜೂರು ಮಾಡುವುದಾಗಿ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಖಚಿತ ಭರವಸೆ ನೀಡಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ.ತುಕಾರಾಂ ಅವರು ‘ ಸುನಾಮಿನ್ಯೂಸ್’ಗೆ ತಿಳಿಸಿದ್ದಾರೆ.
ಪ್ರಸ್ತುತ ನವದೆಹಲಿಯಲ್ಲಿ ನಡೆಯುತ್ತೀರುವ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿರುವ ಸಂಸದರು, ಗುರುವಾರ ನವದೆಹಲಿಯಲ್ಲಿ ಕೇಂದ್ರಸಚಿವರನ್ನು ಭೇಟಿಮಾಡಿ, ತಾವು ಪ್ರತಿನಿಧಿಸುತ್ತೀರುವ ಕ್ಷೇತ್ರದಲ್ಲಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಸೇತುವೆಗಳ ನಿರ್ಮಾಣದ ಬಗ್ಗೆ ಮನವಿ ಅರ್ಪಿಸಿದರು.
ಈ ಸಂಬಂಧವಾಗಿ ‘ಸುನಾಮಿನ್ಯೂಸ್’ ದೂರವಾಣಿ ಮೂಲಕ ಸಂಸದರನ್ನು ಸಂಪರ್ಕಿಸಿದಾಗ, ನನ್ನ ಮನವಿಗೆ ಕೇಂದ್ರ ಸಾರಿಗೆ ಸಚಿವರು ಸಕಾರತ್ಮಕವಾಗಿ ಸ್ಪಂದಿಸಿ, ರಸ್ತೆ ಅಭಿವೃದ್ಧಿ ಜೊತೆಗೆ ನಾನು ಸಲ್ಲಿಸಿದ್ದ ಗುಳ್ಯಾಮ್ ಸೇತುವೆ ನಿರ್ಮಾಣಕ್ಕೂ ಒಪ್ಪಿಗೆ ಸೂಚಿಸಿದರು. ಆಗೇನೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಗೂಳ್ಯಾಂ ಸೇತುವೆ ನಿರ್ಮಾಣಕ್ಕೆ ರೂ, 60ಕೋಟಿ ಅನುದಾನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿಯೂ ಭರವಸೆ ನೀಡಿದರು ಎಂದರು.
ಕೇಂದ್ರ ಸಾರಿಗೆ ಸಚಿವರು ನೀಡಿರುವ ಭರವಸೆಯಿಂದಾಗಿ ಬಳ್ಳಾರಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ–67ರ ರಸ್ತೆಯಲ್ಲಿ ಪ್ರಸ್ತುತ ಹೆಚ್ಚುತ್ತೀರುವ ವಾಹನ ಸಂಚಾರ ದಟ್ಟಣೆ ಮತ್ತು ಹೆದ್ದಾರಿ ಎದುರಿಸುತ್ತೀರುವ ಮೂಲಸೌಕರ್ಯಗಳ ಕೊರತೆಯು ಶಾಶ್ವತವಾಗಿ ನಿವಾರಣೆಗೊಂಡು ನಗರದ ಜನತೆಗೆ ಸುರಕ್ಷಿತ ರಸ್ತೆ ಸಂಚಾರ ಸಿಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ-67, ಬಳ್ಳಾರಿ ಮತ್ತು ವಿಜಯನಗರ ಈ ಎರಡು ಅವಳಿ ಜಿಲ್ಲೆಗಳ ಕೈಗಾರಿಕಾ ಬೆಳವಣಿಗೆಗೆ, ಪ್ರವಾಸೋದ್ಯಮದ ಪ್ರಗತಿಗೆ ಹಾಗೂ ನಮ್ಮ ರಾಜ್ಯ, ಅಕ್ಕ,ಪಕ್ಕದ ರಾಜ್ಯಗಳ ವಿವಿಧ ಕಡೆಗಳಿಗೆ
ಸಂಪರ್ಕ ಕಲ್ಪಿಸಲು ಈ ಹೆದ್ದಾರಿ ಅತ್ಯಂತ ಮಹತ್ವದ್ದಾಗಿದೆ. ಆದರೇ ಇತ್ತಿಚಿನ ದಿನಗಳಲ್ಲಿ ಈ ಹೆದ್ದಾರಿ ಮೇಲೆ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಕಿರಿ,ಕಿರಿ,ತೊಂದರೆ ಅನುಭವಿಸುವಂತಾಗಿದೆ.
ಈ ಅಂಶವನ್ನು, ಸಚಿವರ ಮುಂದೆ ಅಂಕಿ,ಸಂಖ್ಯೆಗಳ ಸಮೇತ ನಿಖರವಾದ ಮನವಿ ಇಟ್ಟು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವನ್ನು ಒತ್ತಿ ಹೇಳಿದೆ. ನನ್ನ ಮನವಿಗೆ ಕೇಂದ್ರ ಸಚಿವರು ಆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಸಂಸದ ತುಕಾರಾಂ ಅವರು ‘ಸುನಾಮಿನ್ಯೂಸ್’ಗೆ ತಿಳಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು,9448234961
