- ಸುನಾಮಿನ್ಯೂಸ್, ಮಾರ್ಚ್,13
- ನವದೆಹಲಿ
* ಹುಳ್ಳಿಪ್ರಕಾಶ, ಸಂಪಾದಕರು
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷರಾದ ಕೆಎಂ ಮಹೇಶ್ವರ ಸ್ವಾಮಿ ಹಾಗೂ ಸಿರುಗುಪ್ಪದ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಇವರ ನೇತೃತ್ವದಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿಯ ಸ್ಥಳಿಯ ಸಂಸ್ಥೆಗಳ ನಿಕಟಪೂರ್ವ ಜನಪ್ರತಿನಿಧಿಗಳು ಹಾಗು ವಿವಿಧ ಮುಖಂಡರುಗಳಿದ್ದ 25 ಜನರ ನಿಯೋಗ ನವದೆಹಲಿಯಲ್ಲಿ ರೈಲ್ವೆ ಹಾಗೂ ಇನ್ನಿತರೆ ಕೇಂದ್ರ ಸಚಿವರನ್ನು ಭೇಟಿ ಮಾಡಿತು.
ಬಳ್ಳಾರಿ- ಸಿರುಗುಪ್ಪ- ಸಿಂಧನೂರು- ಲಿಂಗಸುಗೂರು ನೂತನ ರೈಲ್ವೆ ಮಾರ್ಗ ದ ಆರಂಭಕ್ಕಾಗಿ ಹಿಂದಿನ ಯುಪಿಎ ಸರ್ಕಾರದ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಮೊದಲ ಬಿಜೆಪಿ ಸರ್ಕಾರ ದಲ್ಲಿ ರೈಲ್ವೆ ಮಂತ್ರಿ ಗಳಾಗಿದ್ದ ಸದಾನಂದ ಗೌಡರು ರೈಲ್ವೆ ಬಜೆಟ್ಟಿನಲ್ಲಿ ಈ ಮಾರ್ಗಕ್ಕೆ ಸರ್ವೆ ಆದೇಶ ಮಾಡಿದ್ದರು. ಆ ಪ್ರಕಾರ ಸರ್ವೆ ಕಾರ್ಯ ಮುಗಿದು 13 ವರ್ಷ ಗಳು ಸಂದಿದರೂ ಕೂಡ ಇಂದಿಗೂ ಈ ಮಾರ್ಗದ ಕೆಲಸ ಆರಂಭವಾಗುವ ಸೂಚನೆ ಕಾಣ್ತಾಯಿಲ್ಲ. ಈ ಕೂಡಲೇ ಬಳ್ಳಾರಿ ಸಿರುಗುಪ್ಪ ಸಿಂಧನೂರ್ ನೂತನ ರೈಲು ಮಾರ್ಗದ ಕೆಲಸ ಆರಂಭಿಸಬೇಕೆಂದು ನಿಯೋಗವು ಕೇಂದ್ರ ಸಚಿವರನ್ನು ಒತ್ತಾಯಿಸಿತು.
ಆಗೇನೆ, ಬಳ್ಳಾರಿ ಮಹಾನಗರ ದಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಹೋಗಿಬರಲು ಉದಯ ಸೂಪರ್ ಫಾಸ್ಟ್ ರೈಲು ಇಲ್ಲವೇ ವಂದೇ ಭಾರತ್ ರೈಲಿನ ಸೌಲಭ್ಯ ಒದಗಿಸಬೇಕು. ಈ ರೈಲುಗಳು ಆರಂಭವಾದರೇ ವಿಶ್ವವಿಖ್ಯಾತ ಹಂಪಿ ಪ್ರದೇಶದ ವೀಕ್ಷಣೆಗೆ ಬರುವ ಸ್ವದೇಶಿ,ವಿದೇಶಿ ಪ್ರವಾಸಿಗರಿಗೂ ಆಗೇನೆ ಕೈಗಾರಿಕೆ ಸೇರಿದಂತೆ ದೈನಂದಿನ ವ್ಯವಹಾರಗಳಿಗೆ ಬೆಂಗಳೂರಿಗೆ ಹೋಗಿಬರಲು ಅನುಕೂಲವಾಗುತ್ತದೆ. ಬೆಳಗಿನ ರೈಲು ಬೇಕೆನ್ನುವುದು ಬಳ್ಳಾರಿಗರ 30 ವರ್ಷಗಳ ಬೇಡಿಕೆ ಆಗಿದೆ ಎಂದು ನಿಯೋಗ ಸಚಿವರುಗಳಿಗೆ ಮನವರಿಕೆ ಮಾಡಿತು.
ಇತ್ತ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ ಮುನಗೂರು ಎಕ್ಸ್ಪ್ರೆಸ್ ರೈಲು ರೈಲ್ವೆ ಬಜೆಟಿನಲ್ಲಿ ಘೋಷಣೆಯಾಗಿ ಲೋಕಸಭೆಯಿಂದ ಅನುಮೋದನೆ ಪಡೆದ ರೈಲಾಗಿತ್ತು. ಆದರೇ ಕಳೆದ ಒಂದು ವರ್ಷದಿಂದ ಈ ರೈಲು ನಿಲುಗಡೆ ಆಗಿದೆ. ಶಿವಮೊಗ್ಗ-ಚೆನ್ನೈ ಬೈ ವೀಕ್ಲಿ ರೈಲುಗಳು ಕೂಡ ಬಂದ್ ಆಗಿವೆ. ಈ ಕೂಡಲೇ ಈ ರೈಲುಗಳನ್ನು ಪುನಾರಾ ರಂಭಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಆಗೇನೆ, ದಿನ ದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು ಬಳ್ಳಾರಿ ರೈಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು. ರಸಗೊಬ್ಬರಗಳ ಡೌನ್ಲೋಡಿಂಗ್ ಗೆ ಇನ್ನಷ್ಟು ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎನ್ನುವ ಬೇಡಿಕೆಗಳ ಮನವಿಪತ್ರವನ್ನು ಮಂಗಳವಾರ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ ಜೋಶಿ, ರೈಲ್ವೆ ರಾಜ್ಯ ಮಂತ್ರಿಗಳಾದ ವಿ ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳು ಮತ್ತು ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಇವರನ್ನು ನವದೆಹಲಿಯಲ್ಲಿ ನಿಯೋಗ ಭೇಟಿ ಮಾಡಿ ಅವರಿಗೆ ಅರ್ಪಿಸಿ, ಅವರೊಂದಿಗೆ ವಿವರವಾಗಿ ಚರ್ಚಿಸಿ ಕೂಡಲೇ ಕ್ರಮ ವಹಿಸುವಂತೆ ವಿನಂತಿಸಿತು.
ಹುಬ್ಬಳ್ಳಿ ರೈಲ್ವೆ ವಿಭಾಗದ ಡಿ ಆರ್ ಯು ಸಿ ಸಿ ಸದಸ್ಯ ಕೆಎಮ್ ಕೊಟ್ರೇಶ್, ತಾಪಂ ಮಾಜಿ ಅಧ್ಯಕ್ಷ ಪಿ .ಯೋಗರಾಜ್, ಜಿಪಂ ಮಾಜಿ ಸದಸ್ಯ ಗೋನಾಳ್ ರಾಜಶೇಖರ ಗೌಡ, ಬುಡಾ ಮಾಜಿ ಅಧ್ಯಕ್ಷ ದಮ್ಮುರು ಶೇಖರ್, ಪಲ್ಲೇದ ದೊಡ್ಡಪ್ಪ
ಗಣಪಾಲ್ ಐನಾಥ ರೆಡ್ಡಿ, ಸಿರುಗುಪ್ಪ ನಗರಸಭಾ ಮಾಜಿ ಸದಸ್ಯರಾದ ನಟರಾಜ್ ಮಂಜುನಾಥ, ಮಹದೇವ ಚಾಗಿ, ಸುಬ್ಬಯ್ಯ, ಕುಂಟನಾಳ ಮಲ್ಲಿಕಾರ್ಜುನ ಮುಂತಾದವರು ನಿಯೋಗದಲ್ಲಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು.
