HomeUncategorizedನಿನ್ನೆ ರೋಡ್, ಇಂದು 'ಏಕಲವ್ಯ' ವಸತಿ ಶಾಲೆ, ಡೆಲ್ಲಿಯೊಳಗೆ ನಡೆದಿದೆ ಬಳ್ಳಾರಿ ಎಂಪಿ ತುಕಾರಾಂ ರವರ...

ನಿನ್ನೆ ರೋಡ್, ಇಂದು ‘ಏಕಲವ್ಯ’ ವಸತಿ ಶಾಲೆ, ಡೆಲ್ಲಿಯೊಳಗೆ ನಡೆದಿದೆ ಬಳ್ಳಾರಿ ಎಂಪಿ ತುಕಾರಾಂ ರವರ ಭರ್ಜರಿ ಮ್ಯಾಜಿಕ್!

  • ಸುನಾಮಿನ್ಯೂಸ್, ಮಾರ್ಚ್,13
  • ನವದೆಹಲಿ

* ಹುಳ್ಳಿಪ್ರಕಾಶ, ಸಂಪಾದಕರು

ಬಳ್ಳಾರಿ ಸಂಸದರಾದ ಈ.ತುಕಾರಾಂ ರವರು ತನ್ನನ್ನು ಲೋಕಸಭೆಗೆ ಆಯ್ಕೆ ಮಾಡಿರುವ ಮತದಾರರ ಕಲ್ಯಾಣಕ್ಕೆ ಪಣತೊಟ್ಟು, ಇತ್ತ ಅಧಿಕಾರ ಕೊಟ್ಟಿರುವ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸುಂದರ ಕನಸು ಇಟ್ಟು ಕೊಂಡು ಸಿಕ್ಕಿರುವ ಅವಕಾಶವನ್ನು ಒಂದಿಷ್ಟು ವೆಸ್ಟ್ ಮಾಡದೇ, ವಿರಾಮಿಸದೇಯೂ ಕಾಲಿಗೆ ಚಕ್ರ ಕಟ್ಟಿಕೊಂಡು ಕಾರ್ಯನಿರ್ವಹಿಸುತ್ತಿರುವ ಜನರಪರ ಸಂಸದರಾಗಿದ್ದಾರೆ.

ಲೋಕಸಭೆಯಲ್ಲಿ ಎಸ್ಟಿಗೆ ಮೀಸಲಿರುವ ಬಳ್ಳಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತೀರುವ ಈ.ತುಕಾರಾಂ ಅವರು ಎಲ್ಲಾ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು, ಎಲ್ಲರೂ ಕಲಿಯಬೇಕು ಎನ್ನುವುದು ಅವರ ಮಹಾದಾಸೆ ಕೂಡ. ಈ ನಿಟ್ಟಿನಲ್ಲಿ ಅವರು ಸದಾ ಕಾಲ ಶೈಕ್ಷಣಿಕ ಪ್ರಗತಿಯ ಕಾರ್ಯದಲ್ಲಿ ಕಾರ್ಯೋ ನ್ಮುಖರಾಗಿರುತ್ತಾರೆ.

ಇದರ ಭಾಗವಾಗಿ, ಅವರ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಆದಿವಾಸಿ ಜನರ ಮಕ್ಕಳು ಕೂಡ ಯಾವುದೇ ಸಂದರ್ಭದಲ್ಲೂ ಕಲಿಕೆಯಿಂದ ದೂರ ಉಳಿಯ ಬಾರದು ಎಂದು
ಕೇಂದ್ರ ಸರ್ಕಾರದ ಬುಡಕಟ್ಟು ಇಲಾಖೆ ವತಿಯಿಂದ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಡೆಂ ಗ್ರಾಮದಲ್ಲಿ ಏಕಲವ್ಯ ವಸತಿ ಶಾಲೆ ಸ್ಥಾಪನೆಗೆ ಕೇಂದ್ರ ಬುಡಕಟ್ಟು ಸಚಿವರಿಂದ ಖಚಿತ ಭರವಸೆ ಪಡೆದುಕೊಳ್ಳುವಲ್ಲಿ ಅವರು ಸಫಲತೆ ಸಾಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸಾಕಷ್ಟು ಎದುರಿಸುತ್ತಿದೆ. ಹೀಗಾಗಿ ಹಿಂದುಳಿದಿರುವ ಈ ತಾಲೂಕಿನ ಹೂಡೇಂ ಗ್ರಾಮವನ್ನು ಕೇಂದ್ರಿಕರಿಸಿಟ್ಟು ಕೊಂಡು ಆರಂಭವಾಗುವ ಏಕಲವ್ಯ ಮಾದರಿ ವಸತಿ ಶಾಲೆ ಇಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳಿಗೆ ಕ್ವಾಲಿಟಿ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಲಿದೆ.

ಸಂಸದ ತುಕಾರಾಂ ಅವರ ದೂರದೃಷ್ಟಿತ್ವದ ಸತತ ಪ್ರಯತ್ನಕ್ಕೆ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಇಲಾಖೆ ಸಚಿವರಾದ ಜುವಾಲ್ ಓರಾಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಬುಡಕಟ್ಟು ಮಕ್ಕಳು ಕಲಿಕೆಯಿಂದ ದೂರ ಉಳಿಯದೇ, ಅವರೆಲ್ಲರೂ ಶಿಕ್ಷಣವಂತರಾಗಿ, ನಾಡಿಗೆ ಬೆಳಕಾಗಬೇಕು ಎನ್ನುವ ಸಂಸದರ ಆಶಯಕ್ಕೆ ಬಲ ತುಂಬಿದಂತಾಗಿದೆ.

ಶುಕ್ರವಾರ ನವದೆಹಲಿಯಲ್ಲಿ ಬುಡಕಟ್ಟು ಸಚಿವರನ್ನು ಭೇಟಿ ಮಾಡಿದ ಸಂಸದರು ವಸತಿ ಶಾಲೆಗೆ ಮನವಿ ಅರ್ಪಿಸಿದರು. ಮನವಿ ಸ್ವೀಕರಿಸಿದ ಸಚಿವರು, ಶಾಲೆಯ ಸ್ಥಾಪನೆಯ ಸದುದ್ದೇಶದ ಬಗ್ಗೆ ಸಂಸದರಿಂದ ಸವಿವರವಾಗಿ ಅರಿತುಕೊಂಡು, ಈ ಕೂಡಲೇ ಹೂಡೇಂನಲ್ಲಿ ಏಕಲವ್ಯ ವಸತಿ ಶಾಲೆಗೆ ಅನುಮೋದನೆ ನೀಡಲು ಅಗತ್ಯ ಇರುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನಸೂಚನೆ ನೀಡಿದರು.

ಸಚಿವರ ಈ ಸ್ಪಂದನೆ ಈ ನಾಡಿನ ಆದಿವಾಸಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವಂತರಾಗಲು ಆರಂಭಿಕವಾಗಿ ಅವರಿಗೆ ಸಿಕ್ಕಿರುವ ಮಹತ್ವದಾಯಕ ಹಂತ ಎನ್ನಬಹುದು.
ಆಗೇನೆ ಕೂಡ್ಲಿಗಿ ಸೇರಿದಂತೆ ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿರುವ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ತುಕಾರಾಂ ಅವರ ಬದ್ಧತೆ ಈ ಮೂಲಕ ಸ್ಪಷ್ಟವಾಗಿದೆ.

ಬುಡಕಟ್ಟು ಸಚಿವರ ಭೇಟಿಯ ಬಳಿಕ ದೂರವಣಿ ಮೂಲಕ ‘ಸುನಾಮಿನ್ಯೂಸ್’ ಸಂಸದರನ್ನು ಸಂಪರ್ಕಿಸಿದಾಗ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಬೇಕು. ಅವರನ್ನು ಕಲಿಕೆಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು, ಧರ್ಮ, ಜಾತಿ,ವರ್ಗದ ತಾರತಮ್ಯ ಎಣಿಸದೆ ಎಲ್ಲಾ ಮಕ್ಕಳಿಗೂ ಉನ್ನತ ಮತ್ತು ಸಮೃದ್ಧವಾದ ಶಿಕ್ಷಣದ ಸೌಲಭ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಜನರು ನೀಡಿರುವ ಅಧಿಕಾರವನ್ನು ಅವರಿಗಾಗಿಯೇ ಧಾರೇ ಎರೆಯಲು ಸಿಕ್ಕಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತೀರುವೆ ಎಂದರು.

  • ಹುಳ್ಳಿಪ್ರಕಾಶ, ಸಂಪಾದಕರು.
RELATED ARTICLES
- Advertisment -

Most Popular

Recent Comments