HomeUncategorized'ಹರಿ' ಚಮತ್ಕಾರ, ಹರಿಯಾಣದಲ್ಲಿ 'ಕೈ'ಗೆ ಗೆಲುವಿನ 'ಪ್ರಸಾದ! ಬಿಜೆಪಿಯ ಕೃತ್ಯಗಳನ್ನು ಬುಡಮೇಲು ಗೊಳಿಸಿ, ಕಾಂಗ್ರೆಸ್ ನ್ನು...

‘ಹರಿ’ ಚಮತ್ಕಾರ, ಹರಿಯಾಣದಲ್ಲಿ ‘ಕೈ’ಗೆ ಗೆಲುವಿನ ‘ಪ್ರಸಾದ! ಬಿಜೆಪಿಯ ಕೃತ್ಯಗಳನ್ನು ಬುಡಮೇಲು ಗೊಳಿಸಿ, ಕಾಂಗ್ರೆಸ್ ನ್ನು ವಿಜಯ ವೇದಿಕೆ ಹತ್ತಿಸಿದ ಅನುಭವಿ ಹಿರಿಯ ನಾಯಕ ಬಿಕೆ.ಹರಿಪ್ರಸಾದ್.

  • ಸುನಾಮಿನ್ಯೂಸ್, ಮಾರ್ಚ್,17
  • ಚಂಡೀಗಢ, ಹರಿಯಾಣ,

* ಹುಳ್ಳಿಪ್ರಕಾಶ, ಸಂಪಾದಕರು

ಹರಿಯಾಣದ ರಾಜ್ಯಸಭಾ ಚುನಾವಣೆಯಲ್ಲಿ ದಲಿತ ಧ್ವನಿಯನ್ನು ಮಣಿಸಲು ನಡೆದ ಬಿಜೆಪಿಯ ನೀಚತನದ ಪ್ರಹಸನಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಪಾಠ ಕಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕರ್ಮವೀರ ಸಿಂಗ್ ಬೌದ್ಧ ಅವರ ಗೆಲುವಿನ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಹರಿಯಾಣದ ಜನತೆ ಎತ್ತಿ ಹಿಡಿದಿದ್ದಾರೆ ಎಂದು ಆ ರಾಜ್ಯದ ಉಸ್ತುವಾರಿಗಳು ಹಾಗು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಆದ ಬಿ.ಕೆ.ಹರಿಪ್ರಾದ್ ಅವರು ಹೇಳಿದ್ದಾರೆ.

ಸೋಮವಾರ ರಾತ್ರಿ ಹರಿಯಾಣ ರಾಜ್ಯದ ವಿಧಾನಸಭೆ ಯಿಂದ ರಾಜ್ಯಸಭೆಗೆ ಜರುಗಿದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರ್ಮವೀರ ಸಿಂಗ್ ಬೌದ್ಧ ಅವರು ಜಯಭೇರಿ ಬಾರಿಸಿದ ಬಳಿಕ ಅವರು ಮಾಧ್ಯಮದ ಜೊತೆಗೆ ಮಾತನಾಡಿ, ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

ಶಾಸಕರನ್ನು ಖರೀದಿಸುವುದು, ಹೆದರಿಸುವುದು-ಬೆದರಿಸುವುದು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು, ಚುನಾವಣಾ ಆಯೋಗವನ್ನೇ ನಿಷ್ಕ್ರೀಯಗೊಳಿಸಿ ಸಂವಿಧಾನದ ಮೌಲ್ಯವನ್ನೇ ಬುಡಮೇಲು ಮಾಡಿ ಗೆಲ್ಲುವ ಪ್ರಧಾನಿ ನರೇಂದ್ರಮೋದಿ , ಗೃಹ ಸಚಿವ ಅಮೀತಾ ಷಾ ಹಾಗೂ ಬಿಜೆಪಿ ಪಕ್ಷದ ಸಿದ್ದಮಾದರಿಯ ಚುನಾವಣಾ ಕುತಂತ್ರಗಾರಿಕೆಯನ್ನು ಹರಿಯಾಣದ ಜನತೆ ಮಣ್ಣು ಮುಕ್ಕಿಸಿದ್ದಾರೆ ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿನ ಮುನ್ಸೂಚನೆ ಮೋ-ಶಾ ಜೋಡಿಗೆ ಸಿಗುತ್ತಲೇ, ಇತ್ತ ಸೋಲಿನ ಭೀತಿಯಿಂದಾಗಿ ಗುಜರಾತಿನ ಉಪಮುಖ್ಯಮಂತ್ರಿಯನ್ನೇ ಹರಿಯಾಣ ರಾಜ್ಯಕ್ಕೆ ಕಳಿಸಲಾಗಿತ್ತು. ಅಧಿಕಾರದ ದರ್ಪ, ಹಣಬಲ ಮತ್ತು ನೀಚ ರಾಜಕೀಯದಿಂದ ಹರಿಯಾಣ ರಾಜ್ಯದ ದಲಿತ ಸಮುದಾಯದ ಹೋರಾಟಗಾರನನ್ನು ಸೋಲಿಸಲು ನಡೆದ ಸಂಚನ್ನು ಹರಿಯಾಣದ ಕಾಂಗ್ರೆಸ್ ಶಾಸಕರು ಸ್ಪಷ್ಟವಾಗಿ ಬಯಲು ಮಾಡಿದ್ದಾರೆ ಎಂದು ಎಐಸಿಸಿಯ ಪ್ರಭಾವಿ ನಾಯಕರು ಹೌದಾಗಿರುವ ಹರಿಪ್ರಸಾದ್ ಅವರು ಹೇಳಿದರು.

ರಾಜಕೀಯ ಒತ್ತಡಗಳು, ಆಮಿಷಗಳು ಮತ್ತು ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಶಾಸಕರು ತೋರಿದ ಏಕತೆ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ಅವರ ಬದ್ಧತೆಯನ್ನು ದೃಢಪಡಿಸಿದೆ. ಹಣಬಲದ ಮುಂದೆ ಮಣಿಯದೆ ನಿಲ್ಲುವ ರಾಜಕೀಯ ಮನೋಬಲವೇ ಜನತಂತ್ರದ ನಿಜವಾದ ಶಕ್ತಿ ಎಂಬುದನ್ನು ಕಾಂಗ್ರೆಸ್ ಶಾಸಕರು ಈ ಚುನಾವಣೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಪಕ್ಷವನ್ನು ವಿಜಯ ವೇದಿಕೆ ಹತ್ತಿಸಿರುವ ಪಕ್ಷದ ಶಾಸಕರನ್ನು ಹರಿಪ್ರಸಾದ್ ಅವರು ಶ್ಲಾಘಿಸಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಚುನಾವಣಾ ಆಯೋಗದ ನಿಷ್ಕ್ರೀಯತೆ ಅತ್ಯಂತ ಆತಂಕಕಾರಿ. ಸಂವಿಧಾನದ ಮೌಲ್ಯವನ್ನು ಕಾಪಾಡಬೇಕಾದ ಸಂಸ್ಥೆಯೇ ತನ್ನ ಕಣ್ಣೆದುರೇ ನಡೆಯುತ್ತಿದ್ದ ರಾಜಕೀಯ ಅಕ್ರಮಗಳತ್ತ ನಿರ್ಲಕ್ಷ್ಯ ತೋರಿರುವುದು ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳದಿರುವುದು ಜನತಾಂತ್ರಿಕ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುವಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿ, ಚುನಾವಣಾ ಪ್ರಕ್ರಿಯೆಯ ಪವಿತ್ರತೆಯನ್ನು ಕಾಪಾಡಬೇಕಾದ ಸಂಸ್ಥೆ ತಟಸ್ಥತೆಯನ್ನು ಕಳೆದುಕೊಂಡಂತೆ ಕಾಣುತ್ತಿರುವುದು ದೇಶದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಸೂಚನೆ ಎಂದಿದ್ದಾರೆ.

ಪ್ರಜಾಪ್ರಭುತ್ವವನ್ನು ಹರಾಜಿಗೆ ಇಡುವ ರಾಜಕೀಯ ಯಾವತ್ತೂ ಶಾಶ್ವತವಾಗುವುದಿಲ್ಲ. ಅಂತಿಮವಾಗಿ ಗೆಲ್ಲುವುದು ಜನತಂತ್ರದ ಮೌಲ್ಯಗಳೇ ಎಂಬುದು ಭಾರತದ ರಾಜಕೀಯ ಇತಿಹಾಸ ಹಲವು ಬಾರಿ ಸಾಬೀತುಪಡಿಸಿದೆ. ಶ್ರೀ ಕರ್ಮವೀರ ಸಿಂಗ್ ಬೌದ್ಧ ಅವರಿಗೆ ಅಭಿನಂದನೆಗಳು,ಅವರ ಗೆಲುವಿಗೆ ಶ್ರಮಿಸಿದ ಹರಿಯಾಣ ಮಾಜಿ ಮುಖ್ಯಮಂತ್ರಿ, ಸಿಎಲ್ ಪಿ ನಾಯಕರಾದ ಭೂಪೇಂದ್ರ ಸಿಂಗ್ ಹೂಡಾ , ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾವ್ ನರೇಂದ್ರ ಸಿಂಗ್, ಪಕ್ಷದ ಸಂಸದರಾದ ದಿಪೇಂದ್ರ್ ಸಿಂಗ್ ಹೂಡಾ ಸೇರಿದಂತೆ ಶಾಸಕರುಗಳು ಹಾಗೂ ಹರಿಯಾಣದ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದರು.

ದೇಶದಲ್ಲಿ ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿರುವ ಹರಿಪ್ರಸಾದ್ ಅವರಿಗೆ ಹರಿಯಾಣ ರಾಜ್ಯದ ಉಸ್ತುವಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ವಹಿಸಿದ್ದರು.

ಹರಿಪ್ರಸಾದ್ ಉಸ್ತುವಾರಿ ವಹಿಸಿಕೊಂಡ ಬಳಿಕ ಜರುಗಿದ ಮೊದಲ ರಾಜ್ಯಸಭಾ ಚುನಾವಣೆಯಲ್ಲಿಯೇ ಆಡಳಿತರೂಢ ಬಿಜೆಪಿ ಪಕ್ಷ ಒಡ್ಡಿದ್ದ ಎಲ್ಲಾ ಕಂದಕಗಳನ್ನು ಧಾಟಿ ಪಕ್ಷವನ್ನು ಗೆಲುವಿನ ದಡದ ಮೇಲೆ ತಂದು ನಿಲ್ಲಿಸುವಲ್ಲಿ ಹರಿಪ್ರಸಾದ್ ರವರು ಯಶಸ್ವಿ ಆಗಿದ್ದಾರೆ.

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments