HomeUncategorizedತುಂಗಾಭದ್ರೆ ತಟದ ಬಾಚಿಗೊಂಡನಹಳ್ಳಿ-2 ರಲ್ಲಿ ಮುಗಿಲು ಮುಟ್ಟಿದ ನೂತನ ಮಹಾರಥೋತ್ಸವದ ಸಂಭ್ರಮ. ಗ್ರಾಮಸ್ಥರ ನೆರವಿನಲ್ಲಿ ನಿರ್ಮಾಣವಾದ...

ತುಂಗಾಭದ್ರೆ ತಟದ ಬಾಚಿಗೊಂಡನಹಳ್ಳಿ-2 ರಲ್ಲಿ ಮುಗಿಲು ಮುಟ್ಟಿದ ನೂತನ ಮಹಾರಥೋತ್ಸವದ ಸಂಭ್ರಮ. ಗ್ರಾಮಸ್ಥರ ನೆರವಿನಲ್ಲಿ ನಿರ್ಮಾಣವಾದ ಹೊಸ ತೇರು.

  • ಸುನಾಮಿನ್ಯೂಸ್, ಮಾರ್ಚ್,29
  • ಹಗರಿಬೊಮ್ಮನಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಾಭದ್ರ ಹಿನ್ನೀರ ದಂಡೆಯ ಮೇಲಿರುವ ಬಾಚಿಗೊಂಡನಹಳ್ಳಿ-2 ನೇ ಕಾಲೋನಿಯ ಆರಾಧ್ಯದೇವ ಶ್ರೀ ಆಂಜನೇಯ ಸ್ವಾಮಿ ಅವರ ನೂತನ ಮಹಾರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವ ದಿಂದ ಜರುಗಿತು.

ಇದ್ದೂರು ಸೇರಿದಂತೆ ಸುತ್ತೂರಿ ನಿಂದಲೂ ಸಕುಟುಂಬ ಸಮೇತರಾಗಿ ಆಗಮಿಸಿದ್ದ ಭಕ್ತಾಧಿಗಳು ಹೊಸ ತೇರಿಗೆ ಹೂ,ಹಣ್ಣ,ಊತ್ತೂತ್ತಿ ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈವರ್ಷ ಮದುವೆ ಆಗಿರುವ ನೂತನ ದಂಪತಿಗಳು ತೇರಿನ ಕಳಸ ನೋಡಿ ಕೈ ಮುಗಿದು ದಾಂಪತ್ಯ ಜೀವನದ ರಕ್ಷಣೆಗೆ ಆಂಜನೇಯ ಸ್ವಾಮಿಯ ಆಭಯವನ್ನು ಕೋರಿದರು.

ತುಂಗಭದ್ರಾ ಡ್ಯಾಂ ನಿರ್ಮಾಣದ ನಂತರ ಹಿನ್ನೀರಿನಲ್ಲಿ ಬಾಚಿಗೊಂಡನಹಳ್ಳಿ-2 ಮುಳುಗಡೆ ನಂತರ ಈಗಿನ ಊರಿಗೆ ಊರು ಸ್ಥಳಾಂತರಗೊಂಡಿತ್ತು.ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ತೇರು ಶೀಥಿಲಾವಸ್ಥೆ ಯಾಗಿದ್ದರಿಂದ ಗ್ರಾಮಸ್ಥರು ದೇಣಿಗೆ ಹಾಕಿ ನೂತನ ರಥವನ್ನು ನಿರ್ಮಿಸಿದರು. ಹಗರಿಬೊಮ್ಮನಹಳ್ಳಿ ಪಟ್ಟಣದ ಬಡಿಗೇರ ಸಿದ್ದಪ್ಪ ಅವರು ವೈಶಿಷ್ಟ್ಯಪೂರ್ಣವಾಗಿ ಸಂಪ್ರದಾಯದಂತೆ ಆರ್ಷಕವಾಗಿ ತೇರು ನಿರ್ಮಿಸಿದ್ದಾರೆ.

ಶ್ರೀ ರಾಮನವಮಿ ದಿನವಾದ ಶುಕ್ರವಾರದಂದು ಬೆಳಗಿನ ಜಾವ ಹೋಮ ಹವನ ರುದ್ರಾಭಿಷೇಕವನ್ನು ಕೈಗೊಂಡು ನಂತರ ದಂಪತಿಗಳ ಸಮೇತ ನೂತನ ರಥಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ರಥದ ದಾನಿಗಳನ್ನು ಸನ್ಮಾನಿಸಲಾಯ್ತು.

ಜಾತ್ರಾ ಮಹೋತ್ಸವದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಹಾಲಸ್ವಾಮಿ,
ಹಂಪಸಾಗರದ ಮಹದೇವ ತಾತನವರು, ಕಡ್ಲ ಬಾಳಿನ ಗವಿಮಠದ ಶಾಂತವೀರ ಸ್ವಾಮಿಗಳು, ತೋಂಟದಾರ್ಯ ಮಠದ ಕಿರಿಯ ಸ್ವಾಮೀಜಿ, ಗಾಯಿತ್ರಿ ದೇವಸ್ಥಾನದ ಅರ್ಚಕ ವೆಂಕಟ ರಾಮರಾಜು,

ಗ್ರಾಮದ ಮುಖಂಡರಾದ ಹೊಳಗುಂದಿ ಕೊಟ್ರಪ್ಪ, ರಾರಾಳು ಶೇಖರಪ್ಪ, ನೇತಾಜಿಗೌಡ್ರು,
ಶ್ರೀಕಾಂತ , ವೀರಭದ್ರಪ್ಪ, ಸಣ್ಣಬಸಪ್ಪ ಗೊಂಡಬಾಳ, ನೆಂಬದಾರ ಪಿತಾಂಬ್ರಪ್ಪ, ಬಿ.ಸುರೇಶ, ಗೊಂಡಬಾಳ ಮಂಜುನಾಥ, ಗೊಂಡಬಾಳ ನಾಗರಾಜ, ಗೊಂಡಬಾಳ ರುದ್ರಪ್ಪ, ಜಿ.ಚೆನ್ನಪ್ಪ, ಹೇಮಂತಕುಮಾರ, ಆನಂದ ಹರಿಜನ, ಪರಶುರಾಮ, ಫಕೀರಪ್ಪ, ದುರುಗಪ್ಪ, ದವಲಸಾನ, ರಾಜಸಾಬ,ಚಿತ್ವಾಡಗಿ ವಿರೇಶ,ಚಿತ್ವಾಡಗಿ ದುರುಗಪ್ಪ ಸೇರಿದಂತೆ ಊರಿನ ಜನತೆ ನೂತನ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -

Most Popular

Recent Comments