- ಸುನಾಮಿನ್ಯೂಸ್, ಏಪ್ರಿಲ್,4
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಬಳಿಯ ರೈಲ್ವೆ ಗೇಟ್ ನಂಬರ್ 37 ರಲ್ಲಿ ಮೇಲ್ಸೇತುವೆ ಹಾಗೂ ಪಟ್ಟಣದ ನೇತಾಜಿ ರಸ್ತೆಯಲ್ಲಿನ ಎಸ್ಬಿಐ ಬ್ಯಾಂಕ್ ಹತ್ತೀರದ ರೈಲ್ವೆ ಗೇಟ್ ನಂಬರ್ 38ರ ಬಳಿ ಕೆಳ ಸೇತುವೆ(ಅಂಡರ್ ಪಾಸ್) ನಿರ್ಮಾಣದ ಕಾಮಗಾರಿಗೆ ಭಾರತೀಯ ರೈಲ್ವೆ ಇಲಾಖೆ ಟೆಂಡರ್ ಕರೆದಿದೆ.
ಇದರ ಮೂಲಕ ‘ನಾನು, ವೇದಿಕೆ ಮೇಲೆ ನಿಂತು ವಾಗ್ದಾನ ನೀಡುವುದು ಕೇವಲ ಆ ಕ್ಷಣಕ್ಕೆ ಜನರಿಂದ ಚಪ್ಪಾಳೆ ತಟ್ಟಿಸಿಕೊಂಡು, ಮೆಚ್ಚುಗೆ ಗಿಟ್ಟಿಸಿಕೊಳ್ಳಲಲ್ಲ, ಬದಲಿಗೆ ಜನರಿಗೆ ಕೊಟ್ಟ ಮಾತನ್ನು ಸಾಧಿಸಿ ತೋರಿಸುತ್ತೇನೆ’ ಎನ್ನುವುದನ್ನು ರೂ, 43.24 ಕೋಟಿ ವೆಚ್ಚದ ಮೇಲ್ಸೇತುವೆ, ಅಂಡರ್ ಪಾಸ್ ಕಾಮಗಾರಿಗಳ ಮಂಜೂರಾತಿ ತರುವ ಮೂಲಕ ಸಂಸದರಾದ ಈ.ತುಕಾರಾಂ ನಿರೂಪಿಸಿದ್ದಾರೆ.
ಈ ಎರಡು ಕಾಮಗಾರಿಗಳಿಗೆ ನಿರ್ಮಾಣದ ಭಾಗ್ಯದ ಬಾಗಿಲು ತೆರೆಸಿದ ಮೂಲ ಕಾರಣಕರ್ತರು ಈ.ತುಕಾರಾಂ. ಯಸ್, ಅವರು 2024ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ದಿಂದ ಆಯ್ಕೆಗೊಂಡರು. ಆ ಬಳಿಕ ರೈಲ್ವೆ ಇಲಾಖೆಯ ಸಂಪುಟದರ್ಜೆ, ರಾಜ್ಯ ದರ್ಜೆ ಸಚಿವರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ನಿರಂತರವಾಗಿ ಭೇಟಿ ಮಾಡುತ್ತಾ, ಸತತ ಸಂಪರ್ಕ ಸಾಧಿಸುತ್ತಾ, ಪ್ರಮಾಣಿಕವಾದ, ದಣಿವರಿಯದ ಪ್ರಯತ್ನದ ಫಲ ದಿಂದಾಗಿಯೇ ಈ ಎರಡು ಕಾಮಗಾರಿಗಳ ಫೈಲಿಗಿಡಿದಿದ್ದ ಧೂಳೇಲ್ಲ ಹಾರಿ ಹೋಗಿ, ಪ್ರಸ್ತುತ ಟೆಂಡರ್ ಹಂತಕ್ಕೆ ಬಂದು ನಿಲ್ಲಲ್ಲು ಸಾಧ್ಯವಾಗಿದೆ.
ಏಕೆಂದರೆ, ಕೊಟ್ಟೂರು-ವ್ಯಾಸ್ ಕಾಲೋನಿ ಮಾರ್ಗದಲ್ಲಿ ಹಗರಿಬೊಮ್ಮನಹಳ್ಳಿ ಹೊರತು ಪಡಿಸಿ ಇತರೆ ನಿಲ್ದಾಣಗಳಲ್ಲಿ ಕ್ರಾಸಿಂಗ್ ಸೌಲಭ್ಯ ಇಲ್ಲದ ಕಾರಣಕ್ಕೇನೆ ರೈಲು ಬಂದಗೊಮ್ಮೆ ಈ ಎರಡು ಗೇಟ್ ಗಳನ್ನು ಬಂದ್ ಮಾಡಿದಾಗ ಇಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ನಿಂದ ಜನತೆ ಮತ್ತು ಸವಾರರು, ಚಾಲಕರು ರೋಸಿಹೋಗಿದ್ದರು. ಹೀಗಾಗಿ
ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎನ್ನುವುದು ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ಈ ತಾಲೂಕಿನ ಜನತೆ ಹಾಗು ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಮೇಲೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ದಶಕಗಳ ಬೇಡಿಕೆ ಆಗಿತ್ತು.
ಈ ಕುರಿತಂತೆ ಇಲ್ಲಿನ ಹೋರಾಟಗಾರರು, ಸಂಘ,ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಜಿಲ್ಲೆಯ ಜನಪ್ರತಿನಿಧಿಗಳಿಗೆ, ನೈಋತ್ಯ ರೈಲ್ವೆ ವಲಯಕ್ಕೆ ಸಂಬಂಧಿಸಿದ ಹಿರಿಯ, ಕಿರಿಯ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಅರ್ಪಿಸಿ ಒತ್ತಾಯಿಸುತ್ತಲೇ ಬಂದಿದ್ದರು. ಆದರೇ ಯಾವುದೇ ಪ್ರಗತಿ ಕಂಡಿರಲಿಲ್ಲ.
ಸಂಸದರೆಂದರೇ, ಬಳ್ಳಾರಿ ಟೂ ಡೆಲ್ಲಿ, ಡೆಲ್ಲಿ ಟೂ ಬಳ್ಳಾರಿಗೆ ಟ್ರಾವೆಲ್ ಮಾಡುವುದಲ್ಲ. ಅದರ ಬದಲಿಗೆ ಪಾರ್ಲಿಮೆಂಟ್ ಗೆ ಆಯ್ಕೆ ಮಾಡಿದ ಜನರ ಕಲ್ಯಾಣಕ್ಕೆ ಮತ್ತು ಪ್ರತಿನಿಧಿಸುವ ಕ್ಷೇತ್ರದ ಪ್ರಗತಿಗೆ ಪೂರಕವಾಗುವಂತಹ ಕಾರ್ಯಕ್ರಮ, ಯೋಜನೆಗಳ ಜಾರಿಗಾಗಿ ಐದು ವರ್ಷ ಕಷ್ಟಪಟ್ಟು ದುಡಿದಾಗ ಮಾತ್ರವೇ ಅಧಿಕಾರ ನೀಡಿರುವ ಮತದಾರರ ಋಣ ಸಂದಾಯ ಮಾಡಲು ಸಾಧ್ಯ ಎನ್ನುವ ನಿಲುವಿನ ಈ.ತುಕಾರಾಂ ರವರು ಸಂಸದರಾಗಿದ್ದು ಈ ಎರಡು ಬೇಡಿಕೆಗಳಿಗೆ ಚಾಲನೆಯ ರೆಕ್ಕೆಗಳ ಬಲವನ್ನು ತಂದು ಕೊಟ್ಟಿತು.
ಹೀಗಾಗಿಯೇ ಹಲವು ದಶಕಗಳಿಂದಲೂ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನೆನಗುದಿಗೆ ಬಿದ್ದಿದ್ದ ಈ ಎರಡು ಕಾಮಗಾರಿಗಳು ಪ್ರಸ್ತುತ ತ್ವರಿತಗತಿಯಲ್ಲಿ ಮೇಲೆದ್ದು ನಿಲ್ಲಲು ಸಾಧ್ಯವಾಗಿದೆ. ಇದರಿಂದಾಗಿ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ಈ ಎರಡರ ನಿರ್ಮಾಣದ ಕ್ರೇಡಿಟ್ ಸಂಸದರಾದ ಈ.ತುಕಾರಾಂ ಅವರಿಗೆ ಸಲ್ಲಬೇಕು.
- ಹುಳ್ಳಿಪ್ರಕಾಶ, ಸಂಪಾದಕರು,9448234961
