HomeUncategorizedಕೃಷಿ ಕಾಯಕದಲ್ಲಿ ನಿರತ ಅನ್ನದಾತ ಬಲಿ ಪಡೆದ ಉದ್ರಿಕತ್ತ ಹೆಜ್ಜೇನು ಪಡೆ!

ಕೃಷಿ ಕಾಯಕದಲ್ಲಿ ನಿರತ ಅನ್ನದಾತ ಬಲಿ ಪಡೆದ ಉದ್ರಿಕತ್ತ ಹೆಜ್ಜೇನು ಪಡೆ!

  • ಸುನಾಮಿನ್ಯೂಸ್, ಮೇ,23,2026
  • ತಂಬ್ರಹಳ್ಳಿ/ವಿಜಯನಗರ

* ಹುಳ್ಳಿಪ್ರಕಾಶ, ಸಂಪಾದಕರು

ಕೃಷಿ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ಹೆಜ್ಜೇನುಗಳ ಭೀಕರ ದಾಳಿಗೆ ಒಳಗಾಗಿದ್ದ ಅನ್ನದಾತನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ.

ತಂಬ್ರಹಳ್ಳಿ ಗ್ರಾಮದ ತಳವಾರ ಹನುಮಂತಪ್ಪ(70) ಹಜ್ಜೇನು ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ನತದೃಷ್ಟ ಅನ್ನದಾತ. ಹೆಜ್ಜೇನು ಕಡಿತದ ಬಳಿಕ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬವರ್ಗದವರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಇಲ್ಲಿನ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಬಂಡೆ ರಂಗಪ್ಪನ ಬೆಟ್ಟದ ತಪ್ಪಲಿನ ಸರಹದ್ದಿನಲ್ಲಿ ಮೃತ ಅನ್ನದಾತರ ಕೃಷಿ ಭೂಮಿ ಇದೆ. ಮೇ,19 ರಂದು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿಯಾಗಿ ಹೆಜ್ಜೇನುಗಳ ದೊಡ್ಡ ಗುಂಪು ಹಿರಿಯ ರೈತರಾದ ತಳವಾರ ಹನುಂಮತಪ್ಪ ಅವರ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿ, ಮನಬಂದಂತೆ ಮೈತುಂಬ ಕಚ್ಚಿದ್ದವು. ಈ ಪರಿಣಾಮ ತಕ್ಷಣ ಅವರನ್ನು ಕುಟುಂಬಸ್ಥರು ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಕೊಪ್ಪಳ ಹಾಗೂ ಧಾರವಾಡಕ್ಕೆ ಶಿಫಾರಸ್ಸು ಮಾಡಲಾಗಿತ್ತು.

ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೃತರಾಗಿರುವ ತಳವಾರ ಹನುಮಂತಪ್ಪ ನವರ ಪುತ್ರರಾದ ಪ್ರವೀಣ ಅವರು ಈ ಸಂಭಂದವಾಗಿ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

  • ಸಚಿತ್ರ ವರದಿ: ಮಂಜುನಾಥ ಪಟ್ಟಣಶೆಟ್ಟಿ,ತಂಬ್ರಹಳ್ಳಿ, ವಿಜಯನಗರ.
RELATED ARTICLES
- Advertisment -

Most Popular

Recent Comments