- ಸುನಾಮಿನ್ಯೂಸ್, ಜೂನ್, 20
- ವಿಜಯನಗರ/ಬೆಂಗಳೂರು
- ಹುಳ್ಳಿಪ್ರಕಾಶ ಸಂಪಾದಕರು
–
ರಾಜ್ಯದಲ್ಲಿ ಸಿದ್ದರಾಮಯ್ಯ ಇಳಿದು ಅವರ ಜಾಗಕ್ಕೆ ಹೊಸ ಸಿಎಂ ಆಗಿ ಡಿಕೆ.ಶಿವಕುಮಾರ ಅಧಿಕಾರವಹಿಸಿಕೊಂಡ ಕ್ಷಣ ದಿಂದಲೇ ಸಿಎಂ ಬದಲಾಗುತ್ತಿದ್ದಂತೆಯೇ ಇತ್ತ ವಿಜಯನಗರ ಜಿಲ್ಲಾ ಕೇಂದ್ರದಲ್ಲೂ ಸರ್ಕಾರದ ನೇಮಕಾತಿ ಹೊಂದಿದ ಅಧಿಕಾರಗಳು ಕೂಡ ಬದಲಾಗಲಿವೆ ಎನ್ನುವ ಮಾತುಗಳು ಜಿಲ್ಲೆಯದ್ಯಾಂತ ಜೋರಾಗಿವೆ.
ಬಹು ಮುಖ್ಯವಾಗಿ ಜಿಲ್ಲಾ ಕೇಂದ್ರ ಸ್ಥಾನ ದಲ್ಲಿರುವ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ (ಹೂಡಾ)ದ ಅಧ್ಯಕ್ಷ ಹುದ್ದೆ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಹುದ್ದೆಗಳು ಜಿಲ್ಲೆ ಮಟ್ಟಿಗೆ ಪ್ರಭಾವಿ ಆಗಿವೆ.
ಜಮೀರ್ ಆಹ್ಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಅವರ ಆಪ್ತರಾಗಿ ಬದಲಾಗಿದ್ದ ಮಹ್ಮದ್ ನಿಯಾಜೀ, ಡಿಸ್ಟ್ರಿಕ್ಟ್ ಮಿನಿಸ್ಟರ್ ಹೂಕ್ಕೂಂ ಮೇರೆಗೆ ಹೂಡಾ ಅಧ್ಯಕ್ಷಗಿರಿಯ ಕಿರೀಟ್ ತೊಟ್ಟುಕೊಂಡಿದ್ದರು! ಈ ನೇಮಕಾತಿಗೆ, ಸ್ಥಳೀಯ ಕಾಂಗ್ರೆಸ್ ಶಾಸಕ ಹೆಚ್.ಆರ್. ಗವಿಯಪ್ಪ ಎಷ್ಟೇ ಪ್ರತಿರೋಧ ವ್ಯಕ್ತ ಪಡಿಸಿದ್ರೂ ಅವರ ಪ್ರತಿರೋಧ ‘ಸಹಕಾರಿ ಕಲ್ಯಾಣ ಮಂಟಪ’ ಧಾಟದಂತೇ ಮಿನಿಸ್ಟರ್ ಜಮೀರ್ ಅಡ್ಡಗೋಡೆ ಕಟ್ಟಿದ್ದರು!
ಇನ್ನೂ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಮಾಜಿ ಶಾಸಕ ಎಸ್.ಭೀಮಾನಾಯ್ಕ್ ಆಪ್ತ ಕುರಿ ಶಿವಮೂರ್ತಿ ಪಾಲಾಯ್ತು! ಈ ಹುದ್ದೆಯ ಆಯ್ಕೆಯಲ್ಲೂ ಗವಿಯಪ್ಪ ಸಹಿತ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳ ಪ್ರತಿರೋದಗಳು ಶಾನಭೋಗ ಹೊಟೇಲ್ ಹರಟೆ ಕಟ್ಟೆಗೆ ಆಹಾರವಾದವೇ ಹೊರತು ಶಿವಮೂರ್ತಿ ಅಧಿಕಾರಕ್ಕೆ ಅಡ್ಡಿಯಾಗಲಿಲ್ಲ!
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಮೀರ್ ಆಹ್ಮದ್, ಮಾಜಿ ಶಾಸಕ ಎಸ್.ಭೀಮಾನಾಯ್ಕ್ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡ ಕಾರಣಕ್ಕೇನೆ
ಸ್ಥಳಿಯ ಕೈ ಶಾಸಕ ಗವಿಯಪ್ಪರ ಪ್ರತಿರೋಧ, ಇತ್ತ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಕ್ ಅವರ ಅಭಿಪ್ರಾಯ ಕೇಳಿಲ್ಲ ಎನ್ನುವ ಆಕ್ಷೇಪ ಇದ್ಯಾಗೂ ಜಿಲ್ಲೆಯ ಉನ್ನತ ಹುದ್ದೆಗಳ ನೇಮಕಾತಿಗಳು ಸಿಎಂ ಕಚೇರಿ ಯಿಂದ ಸಲೀಸಾಗಿ ಅನುಮೋದನೆಗೊಂಡು ಜಾರಿ ಆಗಿದ್ದವು.
ಈಗ ಸಿದ್ದರಾಮಯ್ಯ ಹೋಗಿ, ಡಿಕೆ.ಶಿವಕುಮಾರ ಸಿಎಂ ಆಗಿ ಚಾರ್ಜ್ ತೆಗೆಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಬಗ್ಗೆ ಹಾಗು ಇಲ್ಲಿನ ಕಾಂಗ್ರೆಸ್ ಪಕ್ಷದೊಳಗೆ ಯಾರು ನಿಷ್ಠಾವಂತರು, ಯಾರು ಅಧಿಕಾರಧಾಹಿಗಳು ಎನ್ನುವುದರ ಬಗ್ಗೆ ಇಂಚಿಂಚು ಕೆಪಿಸಿಸಿ ಅಧ್ಯಕ್ಷರಾಗಿ ಪಾರ್ಟಿಯ ಬುಡವನ್ನು ಸದೃಢವಾಗಿಸಿರುವ ಡಿಕೆ.ಶಿವಕುಮಾರ ಅವರಿಗೆ ಗೊತ್ತಿದೆ.
ಹೀಗಾಗಿ, ಈ ಸಲ ನೇಮಕಾತಿ ಅಧಿಕಾರಕ್ಕೆ ಅಂತಿಮ ಮುದ್ರೆ ಒತ್ತುವ ದಂಡ ಅವರ ಕೈಗೆ ಸಿಕ್ಕಿರುವುದರಿಂದ ಮೂಲ ಕಾಂಗ್ರೆಸಿಗರು, ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತೀರುವವರು, ಅಧಿಕಾರಸ್ಥರ ಬಾಲ ಬಡುಕರಲ್ಲದ ನಿಯತ್ತಿನ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತಾರೆ ಎನ್ನುವ ವಿಶ್ವಾಸ ಜಿಲ್ಲೆಯಾದ್ಯಂತ ಇರುವ ಪಕ್ಷದ ಕಾರ್ಯಕರ್ತರಲ್ಲಿ ಜೋಳದರಾಶಿ ಎತ್ತರಕ್ಕೆ ಬೆಳೆದು ನಿಂತಿದೆ!
ಕೊನೆಯದಾಗಿ, ಹೂಡಾ ಮತ್ತು ಜಿಲ್ಲಾ ಗ್ಯಾರಂಟಿ ಸಮಿತಿಗಳ ಕಿರೀಟ್ ಹೊಸಮುಖಗಳ ತಲೆಯನ್ನು ಏರುವುದಂತೂ ಖಚಿತ! ಹೊಸ ನೇಮಕಾತಿ ತಿಂಗಳೋಪ್ಪತ್ತಿನಲ್ಲಿ ಆಗಲಿದೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
