HomeUncategorizedಮೋದಿ-ಷಾ ಭದ್ರಕೋಟೆಯನ್ನೇ ಭೇದಿಸುವ 'ರಣ ಬೇಟೆಗಾರ!

ಮೋದಿ-ಷಾ ಭದ್ರಕೋಟೆಯನ್ನೇ ಭೇದಿಸುವ ‘ರಣ ಬೇಟೆಗಾರ!

Lost

  • ಸುನಾಮಿನ್ಯೂಸ್, ಜೂನ್,22
  • ಬೆಂಗಳೂರು

* ಹುಳ್ಳಿಪ್ರಕಾಶ, ಸಂಪಾದಕರು

ಸಿದ್ದರಾಮಯ್ಯ ರ ಬೆನ್ನಿಗಿರುವ ಶಾಸಕರ ಬಲದಲ್ಲಿ ಹತ್ತು ಪರ್ಸೆಂಟ್ ಅವರಿಗಿಲ್ಲ ಎಂದು ಕಟಕಿಯಾಡಿ, ಹೀಯಾಳಿಸಿದ್ದವರಿಗೆ,
ಮೋದಿ-ಷಾ ರಂತಹವರ ಭದ್ರ ಕೋಟೆಯನ್ನೇ ಬೇಧಿಸಿ ಅಲ್ಲಿಂದಲೂ ಎಮ್ಮೇಲ್ಲೆ ಗಳನ್ನು ಹೊತ್ತು ತಂದು ಕಾಂಗ್ರೆಸಿಗೆ ದಿಗ್ವಿಜಯ ತಂದು ಕೊಡುವ ತಾಖತ್ ಇದೆ ಎನ್ನುವುದನ್ನು, ಎಮ್ಮೇಲ್ಸಿ ಎಲೇಕ್ಷನ್ ನಲ್ಲಿ ವಿನಯ್ ಕಾರ್ತಿಕ್ ಗೆಲುವಿನ ಮೂಲಕ ಸಿಎಂ ಡಿಕೆ.ಶಿವಕುಮಾರ ಅವರು ನಿರೂಪಿಸಿ ತೋರಿಸಿದ್ದಾರೆ.

ಮೊನ್ನೆ ಜರುಗಿದ ಪರಿಷತ್ತಿನ ಚುನಾವಣೆಯಲ್ಲಿ ಡಿಕೆ.ಶಿವಕುಮಾರ ಹೊಡೆದ ಸಿಕ್ಸರ್ -ಪೆದ್ದಿ’ ಸಿನಿಮಾದಲ್ಲಿ ನಟ ರಾಮ್ ಚರಣ್ ಮೂರು ಸ್ಟೇಡಿಯಂ ಧಾಟೀ ಹೋಗುವಂತೆ ಹೊಡೆಯುವ ಸಿಕ್ಸರ್ ನಂತೆ ನೇರವಾಗಿ ಹೋಗಿ ಬಿದ್ದಿದ್ದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಚಾಣಕ್ಯ ರಾಜಕೀಯ ಜೋಡಿ ಎಂದೇ ವಿಖ್ಯಾತಿಹೊಂದಿರುವ ಮೋದಿ-ಷಾ ಮನೆಯೊಳಕ್ಕೇನೆ!

ಯಸ್, ಕರ್ನಾಟಕದ ಪರಿಷತ್ ಎಲೇಕ್ಷನ್ ನಲ್ಲಿ ಡಿಕೆಶಿವಕುಮಾರ ಕೊಟ್ಟ ಪೆಟ್ಟು, ರಾಷ್ಟ್ರೀಯ ಮಟ್ಟದಲ್ಲಿ ಮೋದಿ-ಷಾ ಗೂ ಟಾಂಗ್ ಕೋಡುವಂತಹ ಮತ್ತೋಬ್ಬ ರಾಜಕೀಯ ಚಾಣಕ್ಯ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿದ್ದಾನೆ ಎನ್ನುವ ಸಂದೇಶ ರಾಷ್ಟ್ರೀಯ ರಾಜಕಾರಣಕ್ಕೆ ಸ್ಪಷ್ಟವಾಗಿ ರವಾನೆ ಆಗಿರುವುದಂತೂ ದಿಟವಿದೆ.

ಸಿಎಂ ಆಗಿ ಎದುರಿಸಿದ ಮೊದಲ ಸವಾಲಿನಲ್ಲಿಯೇ ಸಿಎಂ ಡಿಕೆಶಿ ಅವರು ಹೈಕಮಾಂಡ್ ಭಲೇ ಡಿಕೆ ಎನ್ನುವಂತಹ ಗೆಲುವಿನ ಸರದಾರ ಆಗಿದ್ದಾರೆ!
ಏಕೆಂದರೆ, ಹೈಕಮಾಂಡ್ ಗೇನೆ ಗೆಲುವಿನ ಬಗ್ಗೆ ಪಕ್ಕಾ ಇರದ ಐದನೇಯ ಅಭ್ಯರ್ಥಿಯನ್ನು ದಿಗ್ವಿಜಯ ಸಾಧಿಸುವ ಮೂಲಕ ತನ್ನ ಮೇಲೆ ನಂಬಿಕೆ ಇಟ್ಟು ನಾಯಕತ್ವ ಕೊಟ್ಟಿರುವ ಹೈಕಮಾಂಡ್ ನಿರೀಕ್ಷೆಯನ್ನು ತನ್ನ ಆಪ್ತನ ಗೆಲುವಿನ ಮೂಲಕ ಉಳಿಸಿಕೊಂಡಿದ್ದಾರೆ ಡಿಕೆ!

ವಿನಯ್ ಕಾರ್ತೀಕ ಗೆಲುವಿನ ಸಂಪೂರ್ಣ ಶ್ರೇಯಸ್ಸು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಮಾತ್ರ ಸಲ್ಲಬೇಕು ಕೂಡ. ಏಕೆಂದರೆ, ಐದನೇಯ ಅಭ್ಯರ್ಥಿಯನ್ನು ಕಣಕ್ಕೀಳಿಸಿದಾಗ ಮೂಗು ಮುರಿದು, ಕೊಂಕು ನುಡಿದವರೇ ಹೆಚ್ಚಿದ್ದರು!

ಆದರೇ, ಐದನೇಯ ಅಭ್ಯರ್ಥಿ ಗೆಲುವು ಡಿಕೆ.ಶಿವಕುಮಾರ್ ಅವರ ದೈತ ರಾಜಕಾರಣವನ್ನು ಕರ್ನಾಟಕ ದಿಂದ ದೆಹಲಿ ತನಕವೂ ಅನಾವರಣಗೊಳಿಸಿದೆ ಎನ್ನುತ್ತಾರೆ ರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಕಾರರು.


ವಿಧಾನಸಭೆ ಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಶ್ವಾಸದಲ್ಲಿ ಬಹು ದೊಡ್ಡ ಬೊಂಗಾ ಕೊರೆದಿದ್ದರೇ! ಅದಕ್ಕಿಂತಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಬಹು ದೊಡ್ಡ ಕಂಪನದ ಅಲ್ಲೋಲಕಲ್ಲೋಲವನ್ನುಂಟು ಮಾಡಿದೆ!

ಹೌದು, ಶಾಸಕ ಬಲದ ಕೊರತೆ ನಡುವೆಯೂ ಪಕ್ಷದ ಐದನೇಯ ಅಭ್ಯರ್ಥಿ ಪಕ್ಷದ ಇನ್ನಿತರೆ ನಾಲ್ಕು ಕ್ಯಾಂಡಿಡೇಟ್ ಗಳಿಗಿಂತಲೂ ಅತ್ಯಧಿಕ ಮತಗಳಿಂದ ದಿಗ್ವಿಜಯ ಸಾಧಿಸಿರುವುದು ಆಡಳಿತರೂಢ ಪಕ್ಷದೊಳಗೆ ಸಿಎಂ ಡಿಕೆ.ಶಿವಕುಮಾರ ಅವರ ವಿರೋಧಿಗಳಿಗೆ ಭೀಮಾನ ಗದ್ದಾಯುದ್ದದಲ್ಲಿ ಬರುವ ಸರೋವರದೊಳಗೆ ಬೆವರಿದ್ದ ದುರ್ಯೋಧನನ ಅನುಭವನ್ನುಂಟು ಮಾಡಿದೆ!

ಇತ್ತ, ಕ್ರಾಸ್ ವೋಟಿಂಗ್ ಬಳಿಕ, ಕರ್ನಾಟಕಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಸಿಎಂ ಡಿಕೆ.ಶಿವಕುಮಾರ ಅವರ ಪ್ರಾಬಲ್ಯಕ್ಕೆ ಸವಾಲು ಎಸೆಯುವ ಇನ್ಯಾವ ಲೀಡರ್ ಸದ್ಯಕ್ಕಿಲ್ಲ ಎನ್ನುವ ವಾತಾವರಣದ ನಿರ್ಮಾಣಕ್ಕೂ ವೇದಿಕೆ ಕಲ್ಪಿಸಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ-ಕುಮಾರಸ್ವಾಮಿ ನೆತೃತ್ದದ ಎನ್ ಡಿಎ ಮೈತ್ರಿಯನ್ನು ಹೊಡೆದುರುಳಿಸಲು ಸಿದ್ದರಾಮಯ್ಯ ಗಿಂತಲೂ ಡಿಕೆ ಮಹಾನ್ ರಣ ಬೇಟೆಗಾರ ಎನ್ನುವುದು ಅಡ್ಡಮತದಾನ ದಿಂದ ದಕ್ಕಿರುವ ಗೆಲುವು ಹೈಕಮಾಂಡ್ ಗೆ ಸಾಬೀತು ಪಡಿಸಿದೆ. ಮನಸ್ಸು ಮಾಡಿದರೇ ಬೆಟ್ಟವನ್ನೇ ಪುಡಿಯಾಗಿಸುವ ಕಲೆ ಶಿವಕುಮಾರಗೆ ಸಿದ್ದಿಸಿದೆ ಎನ್ನುವುದು ಇವರ ಬಲಭುಜದ ಮೇಲೆ ನಂಬಿಕೆ ಇಟ್ಟುಕೊಳ್ಳದ ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಟ್ಟಿದೆ.

ಏಕೆಂದರೆ, ಡಿಕೆ.ಶಿವಕುಮಾರ ಎಂತಹ ಶಕ್ತಿವಂತ ಎನ್ನುವುದು ಮೋದಿ-ಷಾ ಇಕ್ಕಳದಲ್ಲಿ ಸಿಲುಕಿದ್ದ ತನ್ನ ಪರಮಾಪ್ತ ಆಹ್ಮದ್ ಪಟೇಲ್ ರನ್ನು ರಾಜ್ಯಸಭಾ ಚುನಾವಣೆಯಲ್ಲಿ ಗೆಲುವಿನ ದಡ ಹತ್ತಿಸಿದ ಸಮಯದಲ್ಲಿಯೇ ಸೋನಿಯಾಗಾಂಧಿ ಮೇಡ್ಂ ಗೆ ಗೊತ್ತಾಗಿತ್ತು. ಈ ಸ್ಪಷ್ಟತೆ ಕಾರಣಕ್ಕೋಸ್ಕರವೇ ದಲಿತ ಸಿಎಂ, ಬ್ಯಾಕ್ ವರ್ಡ್ ಲೀಡರ್ ಹೀಗೆ ಏನೇಲ್ಲ ದಾಳಗಳನ್ನು ಪ್ರಯೋಗಿಸಿದರೂ ಸಿದ್ದರಾಮಯ್ಯಜೀ ಮೊದಲು ಸಿಎಂ ಸ್ಥಾನಕ್ಜೆ ರಾಜೀನಾಮೆ ಕೊಟ್ಟು ಬನ್ನಿ, ಆ ನಂತರ ಮಾತಡೋಣ ಎಂದಿದ್ದು ಮೇಡ್ಂ!

ಇದರ ನಡುವೆ, ಸಿಎಂ ಡಿಕೆ.ಶಿವಕುಮಾರ ಅವರ ಬಲಭುಜದ ಪರಾಕ್ರಮದ ಸಾಮರ್ಥ್ಯವನ್ನು ನಿಜಪಡಿಸಲೇಂದೆ ಬಹುಶಃ ಹೆಚ್ಡಿ ಕುಮಾರಸ್ವಾಮಿ ಅವರು ಸ್ವಂತ ಬಲದ ಜೊತೆಗೆ ಬಿಜೆಪಿ ಮೈತ್ರಿಕೂಟದ ಬಲ ದಿಂದಲೂ ಗೆಲ್ಲಲು ಅಸಾಧ್ಯವಾಗಿದ್ದ ಪರಿಷತ್ತಿನ ಏಳನೇಯ ಸ್ಥಾನಕ್ಕೆ ಗೋವಿಂದರಾಜು ಅವರಿಗೆ ತನೆಹೊತ್ತಮಹಿಳೆಯ ಬಿಫಾರ್ಂ ಕೊಟ್ಟು ಕಣಕ್ಕೀಳಿಸಿದರೆನ್ನ ಬಹುದು! ಹೀಗಾದರೂ ತಮ್ಮ ವೈರತ್ವ ಬದಿಗಿಟ್ಟು ಕುಮಾರಸ್ವಾಮಿ ಅವರಿಗೆ ಡಿಕೆಶಿವಕುಮಾರ ಥ್ಯಾಂಕ್ಸ್ ಹೇಳಬೇಕಲ್ವೇ!?

ಏಕೆಂದರೆ, ಡಿಕೆ.ಶಿವಕುಮಾರ ಬೆಂಬಲಿಸುವ ಶಾಸಕರು ಮೂರು, ಮತ್ತೊಂದು ಎಂದೇ ಸಿದ್ದರಾಮಯ್ಯ ಅವರನ್ನು ಬದಲಿಸುವ ವಿಚಾರ ಮುನ್ನೆಲೆಗೆ ಬಂದಾಗಲೇಲ್ಲ ಪಕ್ಷದೊಳಗಿರುವ ಅವರ ಆಪ್ತರು ಲೇವಡಿ ಮಾಡಿಕೊಂಡು ಗಹಗಹಿಸಿ ನಗೆಯಾಡುತ್ತಿದ್ದರು ಇದು ಡಿಕೆ ಅವರ ಕಿವಿಗೂ ಬಿಳ್ಳುತ್ತಿತ್ತು! ಇದನ್ನೇಲ್ಲ ಅವರು ಗಂಭಿರವಾಗಿ ಪರಿಗಣಿಸದೇ ತನ್ನ ಮನಸ್ಸಿನ ಸುತ್ತಲೂ ತಾಳ್ಮೆಯ ಭದ್ರಕೋಟೆಯನ್ನೇ ಕಟ್ಟಿಕೊಂಡಿದ್ದ ರಿಂದಲೇ ಅವರು ಕಾಣುತ್ತಿದ್ದ ಸಿಎಂ ಕನಸು ಜೂನ್,ಮೂರರಂದು ನನಸಾಸಗಿಸಿಕೊಂಡಿದ್ದು ಈಗ ಇತಿಹಾಸ!

ಜೂನ್ ಹದಿನೆಂಟರಂದು ಜರುಗಿದ ಪರಿಷತ್ತಿನ ಏಳು ಸ್ಥಾನಗಳ ಪೈಕಿ ತನಗೀರುವ ಶಾಸಕರ ಬಲದಲ್ಲಿ ಸುಲಭವಾಗಿ ಗೆಲ್ಲಬಹುದಾದ ನಾಲ್ಕು ಸ್ಥಾನಗಳಿಗಷ್ಟೇ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿದ್ದ ಕೈ ಹೈಕಮಾಂಡ್ ಐದನೇಯ ಸ್ಥಾನದ ರಿಸ್ಕ್ ಗೆ ಮುಂದಾಗಿರಲಿಲ್ಲ. ಆದರೇ ಬಹು ಕಾಲದ ತನ್ನ ಆಪ್ತ ವಿನಯ್ ಕಾರ್ತಿಕ ಅವರನ್ನು ಪಕ್ಷದ ಐದನೇಯ ಅಭ್ಯರ್ಥಿಯಾಗಿಸಿ ಕಣಕ್ಕೀಳಿಸಲು ಹೈಕಮಾಂಡ್ ಒಪ್ಪಿಸುವ ಮೂಲಕ ಬಹು ದೊಡ್ಡ ರಿಸ್ಕ್ ನ್ನೆ ತಮ್ಮ ಮೈಮೇಲೆ ಎಳೆದುಕೊಳ್ಳುವ ಧೈರ್ಯವನ್ನು ಸಿಎಂ ಡಿಕೆಶಿವಕುಮಾರ ತೋರಿದ್ದರು.

ಇದೆಲ್ಲದಕ್ಕಿಂತಲೂ ಐದನೇಯ ಅಭ್ಯರ್ಥಿಯ ಗೆಲುವಿಗೆ ಶಾಸಕರ ಬಲ ಇಲ್ಲದಿದ್ದರೂ ಸಹ ತನ್ನ ಆಪ್ತನನ್ನು ಗೆಲ್ಲಿಸಿಕೊಳ್ಳುವ ಮೂಲಕ ಪಕ್ಷದ ಶಾಸಕರಲ್ಲದೆ ಬಿಜೆಪಿ,ಜೆಡಿಎಸ್ ಶಾಸಕರನ್ನು ಹೊತ್ತು ತಂದು ಪಕ್ಷಕ್ಕೆ ಗೆಲುವು ದಕ್ಕಿಸಿಕೋಡುವ ತಾಖತ್ ನನ್ನಲ್ಲಿದೆ ಎನ್ನುವುದನ್ನು ಶಾಸಕರ ಬಲ ಇಲ್ಲ ಎಂದು ಹಿಯಾಳಿಸಿದವರಿಗೆ ಉತ್ತರಿಸಲೇಂದೆ ಈ ರಿಸ್ಕ್ ನ್ನು ಶಿವಕುಮಾರ ತೆಗೆದುಕೊಂಡಿದ್ದರು.

ಈ ನಡುವೆ ಸಿದ್ದರಾಮಯ್ಯ ಅವರ ಪದಚ್ಯುತಿ ಬಳಿಕ 135 ಸಂಖ್ಯೆಯಲ್ಲಿರುವ ಕಾಂಗ್ರೆಸ್ ಶಾಸಕರಲ್ಲಿ ಬಹುತೇಕ ಶಾಸಕರು ಸಿದ್ದರಾಮಯ್ಯ ಬೆಂಬಲಿಗರಿದ್ದಾರೆ. ಹೀಗಾಗಿ ಅವರಲ್ಲಿ ಒಂದಿಷ್ಟು ಶಾಸಕರು ಬೇಲಿ ಹಾರುವ ಮೂಲಕ ವಿನಯ್ ಕಾರ್ತಿಕ ಅವರಿಗೆ ಸೋಲಿಸಿ ನ ಖೆಡ್ಡಾ ತೋಡುತ್ತಾರೆ. ಪಕ್ಷದ ಐದನೇಯ ಅಭ್ಯರ್ಥಿ ಸೋತರೆಂದರೇ ಆದರಿಂದ ಸಿಎಂ ಡಿಕೆ ಶಿವಕುಮಾರೇ ಸೋತಂತೆ ಆಗುತ್ತದೆ ಎನ್ನುವ ಮಾತುಗಳು ಪರಿಷತ್ ಅಖಾಡದಲ್ಲಿ ಜೋರಾಗಿದ್ದವು.

ಈಗೇ ಆದರೇ, ಆಗ ಕರ್ನಾಟಕ ದಲ್ಲಿ ಡಿಕೆ.ಶಿವಕುಮಾರ ಅವರಿಗೆ ಪಕ್ಷದ ಶಾಸಕರ ಮೇಲೆ ನಿಯಂತ್ರಣ ಇಲ್ಲ, ಅವರ ನಾಯಕತ್ವವನ್ನು ಪಕ್ಷದ ಶಾಸಕರು ಒಪ್ಪಿಕೊಂಡಿಲ್ಲ ಎನ್ನುವ ಸಂದೇಶ ಬಯಲಾಗುತ್ತದೆ. ಇಂತಹ ಸಂದೇಶದ ಮೂಲಕ ಹೈಕಮಾಂಡ್ ಮೇಲೆ ಪುನಃ ಒತ್ತಡ ಹಾಕಿ ಡಿಕೆಯನ್ನು ಕೆಳಗಿಳಿಸ ಬಹುದು ಎನ್ನುವ ಮಹಾಮೋಸದ ಕುತಂತ್ರಗಳ ಮಾಸ್ಟರ್ ಪ್ಲಾನ್ ಗಳು ಕೂಡ ವಿನಯ್ ಕಣಕ್ಕೀಳಿಸಿದ ಗಳಿಗೆಯಿಂದಲೇ ಸಿದ್ದವಾಗಿದ್ದವು ಕೂಡ!

ಇಡೀ ದೇಶದಲ್ಲಿಯೇ ತನ್ನ ಎದುರಾಳಿ ಕೋಟೆಗಳಿಗೆ ಮುಲಾಜಿಲ್ಲದೇ ನುಗ್ಗಿ ಆಪರೇಷನ್ ಕಮಲದ ಮೂಲಕ ಅಲ್ಲಿಂದ ಶಾಸಕ,ಸಂಸದರನ್ನೇ ಹೊತ್ತು ತರುವ ಮೂಲಕ ಮೋದಿ-ಷಾ ಜೋಡಿ ದೇಶದ ವಿರೋಧ ಪಕ್ಷಗಳ ಪಾಲಿಗೆ ಭಯಾನಕ ಜೋಡಿಯಾಗಿ ಕಾಡುತ್ತಲೇ ಇದ್ದಾರೆ. ಈ ಜೋಡಿಯ ನಡೆಯ ವೇಗ ಸುನಾಮಿ ಗಿಂತಲೂ ಒಂದು ಗುಲಗಂಜಿ ತೂಕ ಹೆಚ್ಚೇ ಇದೆ ಎನ್ನಬಹುದು!

ಒಂದು ಕಾಲಕ್ಕೆ ಮಹಾರಾಷ್ಟ್ರದ ರಾಜಕಾರಣವನ್ನೇ ತನ್ನ ಕಿರುಬೆರಳಿನ ತುದಿಯ ಮೂಲಕ ಆಡಿಸುತ್ತಿದ್ದ ಬಾಲ್ ಠಾಕ್ರೇ ಅವರ ಶಿವಸೇನಾ, ಶರದ್ ಪವಾರ್ ನೇತೃತ್ವದ ಎನ್ ಸಿಪಿ, ಸದ್ಯ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷಗಳು ಸೇರಿದಂತೆ ಹತ್ತಾರು ಪ್ರಾದೇಶಿಕ ಪಕ್ಷಗಳು, ಎಡಪಕ್ಷಗಳು ಕೂಡ ರಾಜಕೀಯವಾಗಿ ಈಗಾಗಲೇ ತಮ್ಮ ಮೂಲ ಅಸ್ತಿತ್ವವನ್ನೆ ಕಳೆದುಕೊಳ್ಳುವತ್ತಾ ಮುಖ ಮಾಡಿ ನಿಂತಿವೆ! ಇನ್ನೂ, ಅರ್ಧ ಶತಮಾನ ಕಾಲ ಇಡೀಇಂಡಿಯಾವನ್ನೇ ಆಳಿದ್ದ ಕಾಂಗ್ರೆಸ್ ಸ್ಥಿತಿ ಭಿನ್ನವಾಗಿಲ್ಲ!

ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯ
ಭದ್ರಕೋಟೆಯಿಂದಲೇ ಅವರ ಶಾಸಕರನ್ನು ಹೊತ್ತುಕೊಂಡು ಬಂದು ಐದನೇಯ ಅಭ್ಯರ್ಥಿಯನ್ನು ಅಭೂತಪೂರ್ವ ಲೀಡ್ ನೊಂದಿಗೆ ಗೆಲ್ಲಿಸಿಕೊಂಡಿರುವ ಡಿಕೆ.ಶಿವಕುಮಾರ ಎದೆಗಾರಿಕೆ ಕಂಡು ಕಾಂಗ್ರೆಸ್ ಹೈಕಮಾಂಡ್ ಗೆ ಹೈಕಮಾಂಡ್ ಯೇ ಶಬ್ಹಾಸ್ ಡಿಕೆ ಎಂದು ಬೆನ್ನುಚಪ್ಪರಿಸಿದೆ.

ಕರ್ನಾಟಕದಲ್ಲಿ ಡಿಕೆ ಶಿವಕುಮಾರ ಆಡಿದ ಈ ಆಟ ಕಂಡು ಮೋದಿ-ಷಾ ಜೋಡಿ, ಮೊನ್ನೆ ಮುಗಿದ ಐಪಿಎಲ್ ನಲ್ಲಿ ಹದಿನೈದರ ಬಾಲ ಪ್ರತಾಪಿ ವೈಭವ್ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್ ಕಂಡು ನಿಬ್ಬೇರಗಾಗಿದ್ದ ವಿಶ್ವ ದರ್ಜೆಯ ಬೌಲರ್ ಗಳಾಂತಾಗಿದ್ದಾರೆ!
ಮೋದಿ-ಷಾ ರಂತಹ ಬಲಿಷ್ಠ ತಂಡ ದಿಂದಲೇ ವಿಕೇಟ್ ಎತ್ತಿರುವ ಡಿಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿಗೆ ನಿಜಕ್ಕೂ ಶಕ್ತಿಮಾನ್!

ಇನ್ನೂ, ಬಹು ಮುಖ್ಯವಾಗಿ ಸಿದ್ದರಾಮಯ್ಯ ಇಲ್ಲದೇ ಹೊದ್ರೇ!? ಕರ್ನಾಟಕದಲ್ಲಿ ಕಾಂಗ್ರೆಸಿಗೆ ಪಾತಾಳವೇ ಗತಿ! ಎಂದು ಭ್ರಮಾಲೋಕ ದಲ್ಲಿಯೇ ಸಂಚರಿಸುತ್ತಿದ್ದವರೆಲ್ಲರ ಮೈಯಲ್ಲಿ ವಿನಯ್ ಕಾರ್ತಿಕ್ ಗೆಲುವಿನ ವೇಗ ಭಾರೀ ನಡುಕ ಹುಟ್ಟಿಸಿದೆ ಕೂಡ!

ಕೊನೆಯದಾಗಿ ಇನ್ನೂ ಬರೀ ಐದೇ ಐದು ತಿಂಗಳು ಸಿಎಂ ಅವಧಿಯನ್ನು ಪೂರೈಸುವುದರ ಒಳಗೇನೆ ಇಡೀ ಕರ್ನಾಟಕದ ತುಂಬನೂ ಡಿಕೆ,ಡಿಕೆ,ಡಿಕೆ ಎನ್ನುವ ಆಲೆ ಸುನಾಮಿಯೋಪಾದಿಯಲ್ಲಿಯೇ ನಿರ್ಮಾಣಗೊಂಡರೂ ಆಶ್ಚರ್ಯವಾಗದೂ!

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್. 9448234961
RELATED ARTICLES
- Advertisment -

Most Popular

Recent Comments