HomeUncategorizedಹಿರಿಯ ಪತ್ರಕರ್ತ ಗೆದ್ದಲಗಟ್ಟಿ ಸೋಮು ನೇತೃತ್ವದ 'ಕಕಾಪಧ್ವನಿ' ತಾಲೂಕ ಘಟಕ ನೀಡುವ ಪ್ರತಿಷ್ಠಿತ; 'ಜಾನಪದ ರತ್ನ'...

ಹಿರಿಯ ಪತ್ರಕರ್ತ ಗೆದ್ದಲಗಟ್ಟಿ ಸೋಮು ನೇತೃತ್ವದ ‘ಕಕಾಪಧ್ವನಿ’ ತಾಲೂಕ ಘಟಕ ನೀಡುವ ಪ್ರತಿಷ್ಠಿತ; ‘ಜಾನಪದ ರತ್ನ’ ಪ್ರಶಸ್ತಿ ಗೆ ರಾಮಕ್ಕ ಜೋಗತಿ, ರಾಜು ರೆಡ್ಡಿ ‘ಉದ್ಯಮರತ್ನ’ ಡಾ.ಹೊಸೂರಪ್ಪ ‘ನಾಟಿ ವೈದ ರತ್ನ’, ಮಲ್ಲೇಶ್ ನಾಯ್ಕ್, ಕೊಟ್ರೇಶ್, ಧಶರಥ್ ‘ಆರಕ್ಷಕರತ್ನ’, ಬಿಇಓ ಮಲ್ಲೇಶ್ ಬೇವೂರ್ ‘ ಶಿಕ್ಷಣರತ್ನ’ ಪ್ರಶಸ್ತಿಗೆ ಆಯ್ಕೆ. 21,ಜುಲೈ ಹಗರಿಬೊಮ್ಮನಹಳ್ಳಿ ವಾಲ್ಮೀಕಿ ಭವನದಲ್ಲಿ ಜರುಗುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ

  • ಸುನಾಮಿನ್ಯೂಸ್, ಜುಲೈ,18
  • ವಿಜಯನಗರ/ಹಗರಿಬೊಮ್ಮನಹಳ್ಳಿ

* ಹುಳ್ಳಿಪ್ರಕಾಶ, ಸಂಪಾದಕರು

ವಿಜಯನಗರ ಜಿಲ್ಲೆಯ ಹಿರಿಯ ಪತ್ರಕರ್ತ ಹಂಪಾಪಟ್ಟಣದ ಗೆದ್ದಲಗಟ್ಟಿ ಸೋಮನಾಥ ಅವರ ಅಧ್ಯಕ್ಷತೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಘಟಕವು ಇದೇ ಜುಲೈ 21 ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಯನ್ನು ಹಮ್ಮಿಕೊಂಡಿದೆ.

ಕಲೆ,ಸಾಹಿತ್ಯ, ಸಮಾಜಿಕ ಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಎಲೆಮಾರೆಯಲ್ಲಿರುವ ಕಾಯಿ ಆಗಿಯೇ ತಾವು ಪ್ರತಿನಿಧಿಸುತ್ತೀರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 25 ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿ ಆ ಮೂಲಕ ಈ ಸಾಧಕರ ಸಾಧನೆಯನ್ನು ಇಡೀ ಲೋಕಕ್ಕೆ ಕಾಣಿಸುವಂತಹ ಮಹತ್ವದಾಯಕ ಸಮಾಜಮುಖಿ ಕಾರ್ಯಕ್ರಮದ ಮೂಲಕ ಈ ಸಲದ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಟ ಮತ್ತು ಅರ್ಥಪೂರ್ಣ ಆಚರಣೆಗೆ ಕಕಾಪಧ್ವನಿ ತಾಲೂಕ ಘಟಕ ಟೊಂಕ ಕಟ್ಟಿ ಶ್ರಮಿಸುತ್ತಿದೆ.

* ಪ್ರಶಸ್ತಿ ಪುರಸ್ಕೃತರು:

ಕಕಾಪಧ್ವನಿ ನೀಡುತ್ತೀರುವ, ಪ್ರತಿಷ್ಠಿತ ‘ಜಾನಪದ ರತ್ನ’ ಪ್ರಶಸ್ತಿಗೆ ನಾಡಿನ ಹೆಸರಾಂತ ಜೋಗತಿ ನೃತ್ಯ ಕಲಾವಿದೆ ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿಯ ರಾಮಕ್ಕ ಜೋಗತಿ, ಹಾಗು ಹಗರಿಬೊಮ್ಮನಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿಯ ಖ್ಯಾತ ತೊಗಲುಗೊಂಬೆ ಕಲಾವಿದರಾದ ಕಿಳ್ಳಿಕ್ಯಾತರ ನಿಂಗಪ್ಪ ಅವರುಗಳು ಆಯ್ಕೆಗೊಂಡಿದ್ದಾರೆ.

ಹಾಗೇನೆ,’ ಉದ್ಯಮ ರತ್ನ’ ಪ್ರಶಸ್ತಿ ಗೆ ತಾಲೂಕಿನ ಉಪನಾಯಕನಹಳ್ಳಿಯ ಲಕ್ಷ್ಮೀ ಕೋಳಿ ಫಾರ್ಂ ನ ದಿವಂಗತ ವಂಶಿ ಸುಬ್ಬಾರೆಡ್ಡಿ(ಮರಣೋತ್ತರ), ಲೋಕಪ್ಪನಹೊಲದ ಎಸ್ಎಲ್ ಆರ್ ಮೆಟಾಲಿಕ್ಸ್ ನ ರಾಜಕುಮಾರ ಗೋಯೆಲ್, ಹಂಪಾಪಟ್ಟಣ ಬಳಿಯ ಆರ್ ಬಿಎಸ್ಎಸ್ ಎನ್ ನ ಆಜಯ್ ಎಸ್ ಭಾಜನರಾಗಿದ್ದಾರೆ.

‘ಶಿಕ್ಷಣರತ್ನ’ ಪ್ರಶಸ್ತಿ, ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರ್, ‘ಸಾಹಿತ್ಯ ರತ್ನ’ ಪ್ರಶಸ್ತಿ ಜಿಲ್ಲೆಯ ಹಿರಿಯ ಸಾಹಿತಿ ಹಿ.ಮ.ಕೊಟ್ರಯ್ಯ, ‘ನಾಟಿ ವೈದ್ಯಕೀಯ ರತ್ನ’ ಪ್ರಶಸ್ತಿ, ಹರಪನಹಳ್ಳಿ ತಾಲೂಕಿನ ಬಾಗಳಿಯ ಖ್ಯಾತ ಜನಪದ ವೈದ್ಯರಾದ ಡಾ.ಬಿ.ಬಿ.ಹೊಸೂರಪ್ಪ ಅವರ ಮುಡಿಗೇರಿದೆ.

ಇನ್ನೂ, ‘ ಆರಕ್ಷಕ ರತ್ನ’ ಪ್ರಶಸ್ತಿ, ಹಗರಿಬೊಮ್ಮನಹಳ್ಳಿ ಪೊಲೀಸ್ ಇಲಾಖೆಯ ಮಲ್ಲೇಶ್ ನಾಯ್ಕ್, ದಶರಥ್, ಕೂಡ್ಲಿಗಿಯ ಕೊಟ್ರೇಶ್ ಅವರುಗಳಿಗೆ ಮತ್ತು ಇದೇ ಇಲಾಖೆಯ ಕುಂ.ರವಿಗೂ ‘ಸಾಹಿತ್ಯ ರತ್ನ’ ಪ್ರಶಸ್ತಿ ಒಲಿದಿದೆ.

ಹಾಗೇನೆ, ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಲಕ್ಷ್ಮೀದೇವಿ, ಡಾ.ವಿನಾಯಕ, ಡಾ.ತಿಪ್ಪೇಸ್ವಾಮಿ ಹಾಗು ಆರೋಗ್ಯ ಇಲಾಖೆ ಅಂಬೂಲೇನ್ಸ್ ಡ್ರೈವರ್ ಮೊಹಮ್ಮದ್ ಅವರು ‘ಚಾಲಕರತ್ನ’ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಉಳಿದಂತೆ ಹಗರಿಬೊಮ್ಮನಹಳ್ಳಿ ಪಟ್ಟಣದ ಕನ್ನಡಪರ ಹೋರಾಟಗಾರರು, ಸಮಾಜಿಕ ಕಳಕಳಿ ಇರುವ ವಿಶ್ವನಾಥ ಅವರಿಗೆ ‘ಹೆಮ್ಮೆಯ ಕನ್ನಡಿಗ’, ಕಂದಾಯ ಇಲಾಖೆಯ ಆಸಿಫ್ ಅಲಿಗೆ ‘ಸೇವಾ ರತ್ನ’, ಯುವ ರೈತ ಎ.ರೇವಪ್ಪಗೆ ‘ರೈತ ಸೇವಾ ರತ್ನ’, ರಂಗನಟ ಹಂಚಿನಮನಿ ರಮೇಶಗೆ ‘ರಂಗಭೂಮಿ ಕಲಾ ರತ್ನ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇದೇ 21, ಜುಲೈ, 2026 ಮಂಗಳವಾರ ಹಗರಿಬೊಮ್ಮನಹಳ್ಳಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ ಪತ್ರಿಕಾ ದಿನಾಚರಣೆ ಸಮಯದಲ್ಲಿ ಕಲೆ,ಸಾಹಿತ್ಯ, ರಂಗಭೂಮಿ, ಉದ್ಯಮ, ಆರೋಗ್ಯ, ಸಂಗೀತಾ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 25 ಸಾಧಕರಿಗೆ ಪ್ರಶಸ್ತಿ ನೀಡಿ, ಸಾಧಕರ ಸಾಧನೆಯನ್ನು ನಾಡಿಗೆ ಪರಿಚಯಿಸುವಂತಹ ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮ ಜರುಗಲಿದೆ.

ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಕರ್ನಾಟಕದ ಹಿರಿಯ ಮಹಿಳಾ ನೇತಾರರಾದ ಶ್ರೀಮತಿ ರಾಣಿ ಸಂಯುಕ್ತ ಅವರು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ.

ಹಗರಿಬೊಮ್ಮನಹಳ್ಳಿ ತಹಶಿಲ್ದಾರ ಆರ್.ಕವಿತಾ, ತಾಪಂ ಇಓ ವಿಶ್ವನಾಥ ಪಾಲಯ್ಯನಕೋಟೆ, ಪುರಸಭೆ ಮುಖ್ಯಾಧಿಕಾರಿ ಎಂಕೆ.ಮುಗುಳಿ, ಸರ್ಕಲ್ ಇನ್ಸ್ ಪೇಕ್ಟರ್ ವಿಕಾಸ ಲಮಾಣಿ, ಪಿಎಸ್ಐ ಉಮಾಪತಿನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ದಿಗಡೂರು ಸಹಿತ ಹಲವು ಗಣ್ಯರು ಹಾಜರಿದ್ದ ಪತ್ರಕರ್ತರು ಆಯೋಜಿಸಿರುವ ಸಮಾಜಮುಖಿ ಸಮಾರಂಭವನ್ನು ಸಾಕ್ಷಿಕರಿಸಲಿದ್ದಾರೆ.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು, 9448234961.
RELATED ARTICLES
- Advertisment -

Most Popular

Recent Comments