- ಸುನಾಮಿನ್ಯೂಸ್, 11ಫೆ,2026
- ಹಗರಿಬೊಮ್ಮನಹಳ್ಳಿ/ ವಿಜಯನಗರ
- ಹುಳ್ಳಿಪ್ರಕಾಶ, ಸಂಪಾದಕರು
ಕಷ್ಟದ ದಿನಗಳಲ್ಲಿ ನನ್ನ ಬೆನ್ನಿಗೆ ನಿಂತು ನನಗೆ ಬಲ ತುಂಬಿರುವ ಮಡಿವಾಳ ಸಮಾಜದ ಋಣವನ್ನು ಈ ಜನ್ಮದಲ್ಲಿ ತೀರಿಸಿದರೂ ಸಾಲದು. ಈ ಸಮುದಾಯದ ಪ್ರಗತಿಗೆ ದಾರಿದೀಪವಾಗುವ ಡಾ.ಅನ್ನಪೂರ್ಣಮ್ಮ ವರದಿಯ ಸಮಗ್ರ ಜಾರಿಗೆ ಸದನದಲ್ಲಿ ಧ್ವನಿ ಆಗುವೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದರು.
ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಜೆಸ್ಕಾಂ ಕಚೇರಿ ಬಳಿ ಇರುವ ಮಡಿವಾಳ ಮಾಚಿದೇವ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಘಂಟಿ ಮಡಿವಾಳ ಮಾಚಿದೇವ ತಾಲೂಕ ಸಂಘ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಸದನದ ಒಳಗೆ ಮಡಿವಾಳ ಸಮಾಜವನ್ನು ಪ್ರತಿನಿಧಿಸುವ ಶಾಸಕರಿಲ್ಲ ಎನ್ನುವ ಕೊರಗಿದೆ. ಆದರೇ ನಾನು ಆ ಸಮುದಾಯದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡಹಾಕುವ ಮೂಲಕ
ಮಡಿವಾಳ ಬಂಧುಗಳ ಪರ ಸದಾಕಾಲ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು.
ನನಗೆ ಬಲ ತುಂಬಿರುವ ಮಡಿವಾಳ ಸಮಾಜವನ್ನು ಕೈ ಬೀಡುವುದಿಲ್ಲ. ಆ ಸಮುದಾಯದ ಸಮಗ್ರ ಅಭಿವೃದ್ಧಿಗೆ ನನಗೆ ಸಿಕ್ಕಿರುವ ಈ ಅವಕಾಶದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಮಡಿವಾಳ ಸಮಾಜದಂತೆ ಕ್ಷೇತ್ರದಲ್ಲಿ ಅತೀಹಿಂದುಳಿದಿರುವ ಸಮುದಾಯಗಳ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ಎಲ್ಲಾ ಸಮುದಾಯಗಳಿಗೂ ಸಮುದಾಯ ಭವನದ ಸೌಲಭ್ಯಗಳನ್ನು ಕಲ್ಪಿಸಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣರು ಸಮಾಜದ ಒಳಿತಿಗಾಗಿ ಅನುಭವ ಮಂಟಪ ಸ್ಥಾಪನೆ ಮಾಡಿದರು. ಆ ಕಾಲದಲ್ಲಿ ಬಂದಂತಹ ಕಾಯಕದ ಜೊತೆ,ಜೊತೆಯಲ್ಲಿ ಆಧ್ಯಾತ್ಮಿಕವಾಗಿ ಪ್ರಬುದ್ಧರಾಗಿದ್ದರು ಎಂದು ಮಡಿವಾಳ ಮಾಚಿದೇವರನ್ನು ಶಾಸಕರು ಸ್ಮರಿಸಿದರು.
ಇದಕ್ಕೂ ಮುನ್ನ ರಾಮನಗರದ ಶ್ರೀಈಶ್ವರ ದೇವಸ್ಥಾನ ದಿಂದ ರೈಲ್ವೇಗೇಟ್ ಹಾದು ರೈತರ ಓಣಿಯ ಮೂಲಕ ಸಮಾರಂಭ ನಡೆಯುವ ವೇದಿಕೆವರೆಗೂ ಮೆರವಣಿಗೆ ನಡೆಯಿತು. ಕುಂಭಹೊತ್ತ ಮಹಿಳೆಯರು, ಸಮಳ, ನಂದಿಕೋಲು ವಾದ್ಯಪರಿಕರಗಳ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಡಿವಾಳ ಮಾಚಿದೇವ ತಾಲೂಕ ಸಂಘದ ಅಧ್ಯಕ್ಷ ಎಂ.ರಾಮಪ್ಪ ಅಧ್ಯಕ್ಷತೆ ವಹಿದ್ದರು. ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ, ಜೆಡಿಎಸ್ ವಿಜಯನಗರ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಪಿರ್ಕಾಡ್ ಬ್ಯಾಂಕ್ ಅಧ್ಯಕ್ಷ ಬಿಡಿ.ಗಂಗಣ್ಣ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಹಿರಿಯ ಪತ್ರಕರ್ತ ಹುಳ್ಳಿಪ್ರಕಾಶ, ಉಲುವತ್ತಿ ಪಿಕೆಪಿಎಸ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಜೆಡಿಎಸ್ ಮುಖಂಡ ಜಿಎಂ.ಶಂಕರ,
ಮಡಿವಾಳರ ಸಂಘದ ಹಿರಿಯ ಮುಖಂಡರಾದ ಅಗಸರ ತಿಮ್ಮಣ್ಣ, ಬಾಳಪ್ಪ, ಅಗಸರ ಮಂಜುನಾಥ, ವೆಲ್ಡಿಂಗ್ ಹುಲುಗಪ್ಪ, ಲಾಟರಿ ಕರಿಯಪ್ಪ, ಚಿಂತ್ರಪಳ್ಳಿ ಟೀಪುಡಿ ನಾಗರಾಜ, ಯುವ ಘಟಕದ ಎಂ.ಮೇಘರಾಜ, ನಾಗಭೂಷಣ, ಕುಮಾರ,ಪ್ಲಂಬರ್ ಮಾರುತಿ, ಟೈಲ್ಸ್ ನಾಗ, ಭರ್ಮಪ್ಪ, ಗಜೇಂದ್ರ ಮಾಚಿ, ಯಶವಂತ್ ಕಟ್ಟಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಾಗರತ್ನ ಶ್ರೀನಿವಾಸ ಕಟ್ಟಿಮನಿ, ರೇಣುಕಮ್ಮ ತಿಮ್ಮಣ್ಣ, ಮಂಜಮ್ಮ, ಮಂಗಳಗೌರಿ, ನಿರ್ಮಲ ಹುಲುಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಟ್ಟಿಮನಿ, ಖಜಾಂಚಿ ಅಗಸರ ಪ್ರಕಾಶ ಸ್ಬಾಗತಿಸಿ, ನಿರೂಪಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು.

