- ಸುನಾಮಿನ್ಯೂಸ್, ಏಪ್ರಿಲ್,5
- ಬಾಗಲಕೋಟೆ
* ಹುಳ್ಳಿಪ್ರಕಾಶ, ಸಂಪಾದಕರು.
ಬಾಗಲಕೋಟೆ ಮಿನಿ ಸಮರ; ಪಕ್ಷದ ಗೆಲುವಿಗಾಗಿ ಸಿದ್ದರಾಮಯ್ಯ ಜೊತೆಗಿನ ಮುನಿಸು ಮರೆತು ಅಖಾಡಕ್ಕೀಳಿದ ಎಸ್ಸಾರ್ ಪಾಟೀಲ್! ಸಿಎಂ ಮುಖದಲ್ಲಿ ಹುಟ್ಟಿದ್ದ ದುಗುಡ ಕಣ್ಮರೆ!
ಶನಿವಾರ (ಏ,4), ಬಾಗಲಕೋಟೆಯ ಪ್ರತಿಷ್ಠಿತ ಬಾಪೂಜಿ ಮಲ್ಟಿ ಸ್ಟೇಟ್ಸ್ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಹಾಗು ವಿವಿಧ ಸಂಘ,ಸಂಸ್ಥೆಗಳ ಮುಖಂಡರುಗಳ ಸಭೆಯ ಬಳಿಕ ಸಭೆ ಆರಂಭದವರೆಗೂ ಸಿಎಂ ಸಿದ್ದರಾಮಯ್ಯ ಅವರ ಮುಖದಲ್ಲಿದ್ದ ಆತಂಕ ಕಣ್ಮರೆಯಾಗಿ, ನಿರಾಳತೆ ಮೂಡಿದ್ದು ಕಂಡು ಬಂತು, ಆಗೇನೆ ಬೈ ಎಲೇಕ್ಷನ್ ಗೆಲುವಿನ ಪಸೆ ಕೂಡ ಕಾಣಿಸಿತು.
ಏಕೆಂದರೆ, ದಿವಂಗತ ಹೆಚ್.ವೈ.ಮೇಟಿ ನಿಧನ ದಿಂದಾಗಿ ತೆರವುಗೊಂಡಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಜಯಭೇರಿ ಮೊಳಗಿಸುವುದು ನಾಡಿನ ದೊರೆಯ ಪಾಲಿಗೆ ವೈಯುಕ್ತಿಕವಾಗಿ ಮತ್ತು ಸರ್ಕಾರದ ದೃಷ್ಟಿಯಿಂದ ಮಹಾ ಪ್ರತಿಷ್ಠೆಯ ಪ್ರಶ್ನೆ ಆಗಿದೆ. ಈ ಕಾರಣಕ್ಕೇನೆ ಖುದ್ದು ಅವರೇನೆ ನೇರ,ನೇರಾ ಸಮರಕಲಿಯಾಗಿ ರಣರಂಗವನ್ನು ಪ್ರವೇಶಿಸಿದ್ದಾರೆ.
ಆದರೇ ಖುದ್ದು ಸಿದ್ದರಾಮಯ್ಯ ಸರ್ವ ಆಯುಧಧಾರಿಯಾಗಿ ಸಮರದಾಂಕಣ ಪ್ರವೇಶ ಮಾಡಿದ್ರೂ ಕೂಡ, ಇತ್ತ ಅವರೇನೆ ಖುದ್ದು ಆಸಕ್ತಿವಹಿಸಿ ಆಯ್ಕೆ ಉಮೇಶ ಮೇಟಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಿದ್ದಾರೆ! ಆದರೇ ಈ ತನಕದ ವಿದ್ಯಮಾನಗಳ ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಮೇಟಿ ಅವರ ಫಲಿತಾಂಶದ ಬಗ್ಗೆ ಸಕಾರಾತ್ಮಕ ಕ್ಕಿಂತಲೂ ನಕಾರಾತ್ಮಕ ಅಂಶಗಳೇ ಎದ್ದು ಕಂಡಿರುವುದು ಸಿದ್ದರಾಮಯ್ಯನವರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ ಎನ್ನುವುದು ಬಲು ಇಂಟರೆಸ್ಟಿಂಗ್ ಆಗಿದೆ.
ಈ ಕೂತುಹಲಕಾರಿ ವಿಚಾರ ಏನೇಂದರೇ, ನಾಮಪತ್ರದ ವೇಳೆ, ಆ ನಂತರ ಕ್ಷೇತ್ರದಲ್ಲಿ ಅಭ್ಯರ್ಥಿ ಮೇಟಿ ಅವರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರು ಫಸ್ಟ್ ರೌಂಡ್ ನಲ್ಲಿ ಭರ್ಜರಿ ಪ್ರಚಾರ ಕೈಗೊಂಡರು. ಆ ಬಳಿಕ ಬಾಗಲಕೋಟೆ ಉಪ ಸಮರದ ಫಲಿತಾಂಶದ ಬಗ್ಗೆ ಅವರ ಸುರ್ಪದಿಯಲ್ಲಿರುವ ಗುಪ್ತಚಾರ ಇಲಾಖೆ ಮತ್ತು ಪಕ್ಷದ ಆಂತರೀಕ ಸಮೀಕ್ಷೆಗಳು ನೀಡಿದ್ದ ವರದಿಗಳು, ಸಹಜವಾಗಿಯೇ ಅವರಲ್ಲಿ ಆತಂಕ ಮೂಡಿಸಿದ್ದಂತು ದಿಟವಿತ್ತು!
ಏಕೆಂದರೆ, ಗುಪ್ತಚಾರ ಇಲಾಖೆ ಮತ್ತು ಅವರೇ ಮಾಡಿಸಿದ್ದ ಅಂತರೀಕ ಸಮೀಕ್ಷೆ ಈ ಎರಡು ಸಮೀಕ್ಷಾ ವರದಿಗಳು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಗೆಲುವಿನ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ. ಮೇಟಿ ಸೋಲುತ್ತಾರೆ ಎನ್ನುವ ಬದಲು ಬಿಜೆಪಿ ಅಭ್ಯರ್ಥಿ ವಿರುದ್ಧ ನೆಕ್ಕ್ ಟೂ ನೆಕ್ಕ್ ಫೈಟ್ ಇದ್ದು, ಗೆಲುವಿನ ಅಂತರ ಕ್ಷೀಣಿಸಬಹುದೆಂದು ವರದಿಯಲ್ಲಿತ್ತು. ಈ ಅಂಶ ಸಿಎಂ ಅವರನ್ನು ಫಲಿತಾಂಶದ ಬಗ್ಗೆ ನಿಖರತೆ ಸಿಗದೆ ಕಂಗಾಲಾಗುವಂತೆ ಮಾಡಿತ್ತು.
ಸಮೀಕ್ಷಾ ವರದಿ ನೋಡಿದ ಬಳಿಕ ಸಿಎಂ ಆತಂಕ ಪಡಲು ಬಲವಾದ ಕಾರಣವೂ ಇತ್ತು. ಆದೇನೆಂದರೇ, 2023ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಆಲೆ ಹಾಗೂ ಪಂಚ ಗ್ಯಾರಂಟಿಗಳ ಅಭಯ ಬೆನ್ನಿಗಿದ್ರೂ, ಇತ್ತ ಬಿಜೆಪಿ ಅಭ್ಯರ್ಥಿ ಆಗಿದ್ದ ವೀರಣ್ಣ ಚರಂತಿಮಠ ಎದುರು ಬಂಡಾಯ ಎದ್ದು ಪಕ್ಷೇತರರಾಗಿ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಸ್ಪರ್ಧೆಯ ನಡುವೆಯೂ ದಿವಂಗತ ಹೆಚ್.ವೈ.ಮೇಟಿ ಅವರು ಬರೀ ಐದು ಸಾವಿರ ಚಿಲ್ಲರೆ ಮತಗಳಿಂದ ತಿಣುಕಾಡಿ ಗೆಲುವು ಸಾಧಿಸಿದ್ದರು.
ಆಗ ಜೆಡಿಎಸ್ ನಿಂದ ನಿಂತಿದ್ದ ದೇವರಾಜ ಪಾಟೀಲ್ ನಾಲ್ಕು ಸಾವಿರ, ಇತ್ತ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹತ್ತು ಸಾವಿರ ಚಿಲ್ಲರೆ ಮತಗಳು ಈಗೇ ಇಬ್ಬರು ಸೇರಿ ಬರೋಬ್ಬರಿ ಹದಿನೈದು ಸಾವಿರ ಚಿಲ್ಲರೆ ಮತಗಳಿಗೆ ಬಹುತೇಕ ಕನ್ನ ಹಾಕಿದ್ದು ಬಿಜೆಪಿ ಮತ ಬ್ಯಾಂಕಿಗೇನೆ! ಚರಂತಿಮಠ ಸಹೋದರ ಆಗ ಕಣದಲ್ಲಿರದಿದ್ದರೇ ಬಹುಶಃ ಇವತ್ತು ಬೈ ಎಲೇಕ್ಷನ್ ಜರುಗುವ ಅವಕಾಶವೇ ಒದಗಿ ಬರುತ್ತಿದ್ದಿಲ್ಲ! ಅಂದರೇ ಆಗ ಮೇಟಿ ಸೋತು, ಬಿಜೆಪಿಯ ಚರಂತಿಮಠ ವಿಧಾನಸಭೆಯಲ್ಲಿರುತ್ತಿದ್ದರು.
ಈ ಅಂಶಗಳು, ಫಸ್ಟ್ ರೌಂಡ್ ಪ್ರಚಾರದ ಬಳಿಕ ಸಮೀಕ್ಷಾ ವರದಿಗಳು ನೀಡಿದ್ದ ನೆಕ್ಕ್ ಟೂ ನೆಕ್ಕ್ ಫೈಟ್ ವರದಿ ಸಹಜವಾಗಿಯೇ ಸಿಎಂ ಮುಖದಲ್ಲಿ ಆತಂಕದ ಗೆರೆಯನ್ನುಬ್ಬಿಸಿದ್ದವು. ಆದರೇ ಶನಿವಾರ ಬಾಪೂಜಿ ಬ್ಯಾಂಕಿನಲ್ಲಿ ಜರುಗಿದ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರಲ್ಲಿನ ನಿರಾಳತೆಗೆ ಪ್ರಬಲ ಕಾರಣವಾದ ಪ್ರಮುಖ ಅಂಶ ಯಾವುದೀರ ಬಹುದು!? ಎನ್ನುವುದೇ ಎಲ್ಲರ ಕುತೂಹಲದ ಪ್ರಶ್ನೆ ಆಗಿದೆ.
ಬಾಗಲಕೋಟೆ ಮತ್ತು ವಿಜಯಪುರ ಈ ಎರಡು ಅವಳಿ ಜಿಲ್ಲೆ ಸಹಿತ ಕರ್ನಾಟಕ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಹೆಸರಾಗಿರುವ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಹೌದಾಗಿರುವ, ವಿಧಾನಪರಿಷತ್ತಿನ ನಿಕಟಪೂರ್ವ ವಿರೋಧ ಪಕ್ಷದ ನಾಯಕರಾದ ಎಸ್ಸಾರ್ ಪಾಟೀಲರು, ಸಿಎಂ ಮುಖದಲ್ಲಿನ ಆತಂಕದ ಗೆರೆ ಅಳಿಸಿ ಹಾಕಿ, ಅಲ್ಲಿ ನಿರಾಳತೆಯ ನಗುವಿನ ಗೆರೆ ಬರೆದಿದ್ದಾರೆ!
ಹೌದು, ಬೈ ಎಲೇಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸಿಎಂ ಜೊತೆಗಿನ ಹಲವು ದಿನಗಳಿಂದಲೂ ಇರುವಂತಹ ಕಡು ಕೋಪದ ಮುನಿಸನ್ನು ಮರೆತು, ತಮ್ಮದೆ ಆದ ಬಾಪೂಜಿ ಮಲ್ಟಿ ಸ್ಟೇಟ್ಸ್ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಪಕ್ಷದ ನಾಯಕರು ಹಾಗೂ ವಿವಿಧ ಸಂಘ,ಸಂಸ್ಥೆಗಳ ಮುಖಂಡರುಗಳ ಬೃಹತ್ ಸಭೆಯೊಂದನ್ನು ಆಯೋಜಿಸುವ ಮೂಲಕ ಉಮೇಶ ಮೇಟಿ ಗೆಲುವಿಗೆ ಪ್ರಮಾಣ ಪೂರ್ವಕ ಅಖಾಡಕ್ಕಿಳಿದಿದ್ದಾರೆ ಎಸ್ಸಾರ್ ಪಾಟೀಲರು. ಈ ಬೆಳವಣಿಗೆ ಸಿಎಂ ಸಿದ್ದರಾಮಯ್ಯರ ಮುಖದಲ್ಲಿ ಆ ತನಕ ಮೂಡಿದ್ದ ಆತಂಕದ ಗೆರೆಗಳನ್ನು ಅಳಿಸಿಹಾಕಿ, ನಿರಾಳತೆಯ ದಪ್ಪಗೆರೆಯನ್ನು ಮೂಡುವಂತೆ ಮಾಡಿದೆ.
ಏಕೆಂದರೆ, ಈಗ ಉಪ ಚುನಾವಣೆ ನಡೆಯುತ್ತೀರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕುರುಬ ಸಮುದಾಯ ಪ್ರಾಬಲ್ಯವಿರುವಂತಹ ಕ್ಷೇತ್ರವಲ್ಲ. ಬದಲಿಗೆ ಈ ಕ್ಷೇತ್ರ ರೆಡ್ಡಿ ಲಿಂಗಾಯತ ಮತ ಬ್ಯಾಂಕ್ ಪ್ರಾಬಲ್ಯದ ಕ್ಷೇತ್ರವಾಗಿದೆ. ಸ್ವಾತಂತ್ರ್ಯ ಭಾರತದಲ್ಲಿ ಚುನಾವಣೆ ಆರಂಭವಾದ ಕಾಲ ದಿಂದಲೂ ಈ ಕ್ಷೇತ್ರ ದಿಂದ ಅಧಿಕ ಸಲ ಗೆದ್ದು ಬಂದು ಶಾಸಕರಾದವರಲ್ಲಿ ಹೆಚ್ಚಿನವರು ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ವಿಶೇಷವಾಗಿದೆ. ಪ್ರಸ್ತುತ,ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿರುವ ಎಸ್ಸಾರ್ ಪಾಟೀಲ್ ಈ ಕ್ಷೇತ್ರದಲ್ಲಿ ಪ್ರಶ್ನಾತೀತಾ ಸ್ಟ್ರಾಂಗ್ ಲೀಡರ್.
ಎಸ್ಸಾರ್ ಪಾಟೀಲರು, ವಿಜಯಪುರ ಹಾಗು ಬಾಗಲಕೋಟೆ ಈ ಎರಡು ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆ ಕ್ಷೇತ್ರ ದಿಂದ ಸತತವಾಗಿ ನಾಲ್ಕು ಸಲ ರಾಜ್ಯ ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷ ದಿಂದ ಆಯ್ಕೆ ಆಗಿದ್ದರು. 2021ರಲ್ಲಿ ಕುತಂತ್ರ ಮಾಡಿ ಟಿಕೆಟ್ ತಪ್ಪಿಸದಿದ್ರೇ ದಾಖಲೆಯ ಐದನೇಯ ಬಾರಿಗೆ ಮೇಲ್ಮನೇಯನ್ನು ಪ್ರವೇಶಿಸುತ್ತಿದ್ರು. ವಿರೋಧ ಪಕ್ಷದ ನಾಯಕನಿಗೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದರ ಹಿಂದೆ ಹಲವರು ಕೈಗಳು ಕೆಲಸ ಮಾಡಿದ್ದುಂಟು!
ಒಂದು ಸಲ ಸಚಿವರಾಗಿ, ಪರಿಷತ್ತಿನ ಸಭಾ ನಾಯಕ, ವಿರೋಧ ಪಕ್ಷದ ನಾಯಕರಾಗಿ ಉತ್ತಮ ಸಂಸದೀಯ ಪಟುವಾಗಿ ಎಸ್ಸಾರ್ ಪಾಟೀಲರು ನಾಡಿನ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಸದನದಲ್ಲಿ ಉತ್ತರ ಕರ್ನಾಟಕದ ನೈಜ ಧ್ವನಿ ಆಗಿದ್ದ ಎಸ್ಸಾರ್ ಪಾಟೀಲರು ಈ ಭಾಗದ ಮಲತಾಯಿ ಧೋರಣೆ ಬಗ್ಗೆ ತಮ್ಮದೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹಿಂಜರಿದವರಲ್ಲ.
ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಪಕ್ಷದ ಸಂಘಟನೆ ಮಾಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿರುವ ವೀರಶೈವ ಸಮುದಾಯದ ಪ್ರಬಲ ನಾಯಕರು ಹೌದಾಗಿದ್ದಾರೆ. ಕರೋನದ ಸಮಯದಲ್ಲೂ ಮಠಗಳತ್ತಾ ಯಾತ್ರೆ ಮಾಡಿ ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿ ಕೊಂಡಿದ್ದ ನಾಡಿನ ಮಠಾಧೀಶರ ಕೋಪವನ್ನು ತಣಿಸಲು ಎಸ್ಸಾರ್ ಪಾಟೀಲರು ಸಾಕಷ್ಟು ಪರಿಶ್ರಮ ಪಟ್ಟರು.
ಇತ್ತ, ಬಾಗಲಕೋಟೆ ಮತ್ತು ಬೀಳಗಿಯಲ್ಲಿ
ಮೆಡಿಕಲ್ ಮತ್ತು ಆರ್ಯುವೇದ ಕಾಲೇಜುಗಳ ಸಹಿತ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ.
ಬಾಪೂಜಿ ಬ್ಯಾಂಕ್ ಸಹಿತ ಸಹಕಾರ ರಂಗ ಹಾಗೂ ಸಕ್ಕರೆ ಕಾರ್ಖಾನೆ ಹೀಗೆ ಎಸ್ಸಾರ್ ಪಾಟೀಲರ ಮಾಲಿಕತ್ವದಲ್ಲಿ ವಿವಿಧ ಸಂಸ್ಥೆಗಳು ಸ್ಥಾಪನೆಯಾಗಿ, ಯಶಸ್ವಿ ಆಗಿ ಕಾರ್ಯನಿರ್ವಹಿಸುತ್ತೀವೆ. ಪಾಟೀಲರ ಸಂಸ್ಥೆಗಳಲ್ಲಿ ದುಡಿಯುವ ವರ್ಗ ಮತ್ತು ಅವರನ್ನು ಅವಲಂಬಿತರ ಸಂಖ್ಯೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚಿರ ಬಹುದು! ಇವರಲ್ಲಿ ಬಹುತೇಕರು ಬಾಗಲಕೋಟೆ ಕ್ಷೇತ್ರದ ಮತದಾರರೇ ಹೆಚ್ಚಿದ್ದಾರೆ!
ಇತ್ತ ಬೈ ಎಲೇಕ್ಷನ್ ನಡೆದಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಜಾತಿ ಯಿಂದಲೂ ಅತ್ತ ತಮ್ಮ ಮಾಲಿಕತ್ವದ ಸಂಸ್ಥೆಗಳಿಂದಲೂ ಎರಡು ಕಡೆಯಿಂದಲೂ ಎಸ್ಸಾರ್ ಪಾಟೀಲರು ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿರುವ ಮಾಸ್ ಲೀಡರ್. ಇಂತಹ ಬಲಾಢ್ಯ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿರುವ ಜನನಾಯಕನನ್ನು ಕಡೆಗಣಿಸಿದರೇ ಅದರಿಂದ ಪಕ್ಷಕ್ಕೆ ಬಹು ದೊಡ್ಡ ಲಾಸ್!
ಇದರ ಮಧ್ಯೆ ಸಿದ್ದರಾಮಯ್ಯ ಮತ್ತು ಎಸ್ಸಾರ್ ಪಾಟೀಲ ಇಬ್ಬರು ಬಲು ಪರಮಾಪ್ತರಾಗಿದ್ದರು! 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲಿನ ಆಟ ಕಟ್ಟಿದ್ದಾರೆ ಎನ್ನುವ ಸುಳಿವು ಅರಿಯುತ್ತಲೆ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರಕ್ಕೂ ಕರೆತಂದು ಕಣಕ್ಕೀಳಿಸಿದ್ದು ಇದೇ ಎಸ್ಸಾರ್ ಪಾಟೀಲ್. ಬಿಜೆಪಿಯ ಶ್ರೀರಾಮುಲು ಎದುರಾಗಿ ಕೂದಲೇಳೆಯ ಅಂತರದಲ್ಲಿ ಜಯ ಸಾಧನೆಯ ಹಿಂದೆ ಪರಿಶ್ರಮಿಸಿದ್ದು ಕೂಡ ಎಸ್ಸಾರ್ ಪಾಟೀಲರು.
ಆದರೇ ಗೆದ್ದ ಬಳಿಕ ಪಕ್ಷದೊಳಗಿರುವ ಎಸ್ಸಾರ್ ಪಾಟೀಲರ ವಿರೋಧಿಗಳು ಹಬ್ಬಿಸಿದ ವದಂತಿಗಳನ್ನು ನಂಬಿದ ಸಿದ್ದರಾಮಯ್ಯ, ತನ್ನ ಅನುಗಾಲದ ಗೆಳೆಯನನ್ನು ದೂರ ಸರಿಸಿದರು. ಅಷ್ಟಕ್ಕೆ ನಿಲ್ಲದೆ ಅವರಿಗೆ ಟಿಕೆಟ್ ತಪ್ಪಿದರೂ ನೆರವಿಗೆ ಬರಲಿಲ್ಲ. ನಂತರ ಎರಡು ಸಲ ಎಂಎಲ್ಸಿಗೆ ಅವರ ಹೆಸರು ಫೈನಲ್ ಹಂತಕ್ಕೆ ಹೋದಾಗಲೂ ಇವರು ಸಹಾಯಕ್ಕೆ ನಿಲ್ಲಲ್ಲಿ ಎನ್ನುವುದು ಗೊತ್ತಾದ ಬಳಿಕ ಸಿದ್ದರಾಮಯ್ಯ ಅವರಿಂದ ಅಂತರ ಕಾಪಾಡಿಕೊಂಡೆ ಕಾಂಗ್ರೆಸ್ ಪಕ್ಷದಲ್ಲಿ ಎಸ್ಸಾರ್ ಪಾಟೀಲರು ರಾಜಕಾರಣ ಮಾಡ್ತಾ ಬರುತ್ತೀದ್ದಾರೆ.
ಇತ್ತ ಬಾಗಲಕೋಟೆ ಕ್ಷೇತ್ರಕ್ಕೆ ಬೈ ಎಲೇಕ್ಷನ್ ಅನೌನ್ಸ್ ಆಗಿ, ಫಸ್ಟ್ ರೌಂಡನಲ್ಲಿ ಪ್ರಚಾರ ಕಾರ್ಯ ಆರಂಭವಾದಗಲೂ ಒಂದೇ ವೇದಿಕೆ ಮೇಲಿದ್ರು ಮುಖ,ಮುಖಕ್ಕೆ ಕೊಟ್ಟು ನೋಡದೆ ದೂರ,ದೂರಕ್ಕೆ ನಿಂತು ಸಿಎಂ ಸಿದ್ದರಾಮಯ್ಯ ಅವರಿಂದ ಅಂತರ ಕಾಪಾಡಿಕೊಂಡಿದ್ದರು ಎಸ್ಸಾರ್ ಪಾಟೀಲ್!
ಆದರೇ, ರೆಡ್ಡಿ ಲಿಂಗಾಯತ ಪ್ರಾಬಲ್ಯದ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಭಾವಿ ನಾಯಕ
ಎಸ್ಸಾರ್ ಪಾಟೀಲ್ ಅಖಾಡಕ್ಕೀಳಿಯದಿದ್ರೇ ಬಾಗಲಕೋಟೆ ಕೈ ತಪ್ಪುವ ಆತಂಕದ ರಿರ್ಪೋಟ್ ಅಂತರಿಕ ಸಮೀಕ್ಷೆಗಳು ನೇರಾವಾಗಿ ಕೈಗಿಟ್ಟಾಗ ದಿಗಿಲುಗೊಂಡ ಸಿಎಂ.
ಸೆಕೆಂಡ್ ರೌಂಡ್ ಪ್ರಚಾರದಲ್ಲಿ ಎಸ್ಸಾರ್ ಪಾಟೀಲರತ್ತ ಪುನಃ ಸ್ನೇಹದ ಹಸ್ತ ಚಾಚಿದಾಗ ನಗೆ ಬೀರಿದ ಎಸ್ಸಾರ್ ಪಾಟೀಲ್, ಅಖಾಡಕ್ಕೀಳಿದು ಪ್ರಚಾರವನ್ನು ಬಿರುಸುಗೊಳಿಸುತ್ತಿದ್ದಂತೆಯೇ ತಾನು ಆಯ್ಕೆ ಮಾಡಿರುವ ಉಮೇಶ ಮೇಟಿಯ ಗೆಲುವಿನ ಬಗ್ಗೆ ಇದ್ದಂತಹ ಆತಂಕ ದೂರವಾಗಿ, ಸಿದ್ದರಾಮಯ್ಯ ಅವರು ನಿರಾಳರಾಗುವಂತೆ ಮಾಡಿದೆ.
ಶನಿವಾರದ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಸಹಿತ ಎಲ್ಲಾ ಸಚಿವರು, ಶಾಸಕರು ದಂಡು ಎಸ್ಸಾರ್ ಪಾಟೀಲರ ನಿವಾಸಕ್ಕೆ ಭೇಟಿ ಕೊಟ್ಟು ಊಟೋಪಚಾರದ ಜೊತೆಗೆ ಅಲ್ಲಿಯೇ ಬೈ ಎಲೇಕ್ಷನ್ ಗೆಲುವಿಗೆ ಅನುಸರಿಸ ಬೇಕಾದ ರಣತಂತ್ರಗಳನ್ನು ಎಸ್ಸಾರ್ ಪಾಟೀಲರ ನೇತೃತ್ವದಲ್ಲಿಯೇ ರೂಪಿಸಿರುವುದು ಅತ್ಯಂತ ಮಹತ್ವದಾಯಕ ಸಂಗತಿಯು ಹೌದಾಗಿದೆ.
ಈ ಎಲ್ಲಾ ಬೆಳವಣಿಗೆಯ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಕುರಿತಂತೆ ಈ ತನಕ ಅವರಿಸಿದ್ದ ಎಲ್ಲಾ ಊಹಾಪೋಹಗಳನ್ನು ತಣ್ಣಾಗಾಗಿಸಿದ್ದಲ್ಲದೆ, ಸ್ವತಹ ಸಿಎಂ ಅವರ ಎದೆಯಾಳದಲ್ಲಿ ಜನಿಸಿದ್ದಂತಹ ದುಗುಡವನ್ನು ಪ್ರಭಾವಿ ನಾಯಕ ಎಸ್ಸಾರ್ ಪಾಟೀಲರು ದೂರವಾಗಿಸಿದರು ಎನ್ನುವುದು ಉಪ ಕದನದ ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.
- ಹುಳ್ಳಿಪ್ರಕಾಶ, ಸಂಪಾದಕರು, 9448234961
