HomeUncategorizedಕೇಸರಿ ಕಾರ್ಯಕರ್ತರಲ್ಲಿ 'ದಕ್ಷಿಣಾ ಕೋಟೆ' ಗೆಲ್ಲುವ ಶಿವಾಜಿ ಛಲ! ಮಲ್ಲಣ್ಣನಿಗೆ 'ಪಾರುಪತ್ಯ' ಉರುಳುವ ಭಯ! 'ಸುನಾಮಿನ್ಯೂಸ್'...

ಕೇಸರಿ ಕಾರ್ಯಕರ್ತರಲ್ಲಿ ‘ದಕ್ಷಿಣಾ ಕೋಟೆ’ ಗೆಲ್ಲುವ ಶಿವಾಜಿ ಛಲ! ಮಲ್ಲಣ್ಣನಿಗೆ ‘ಪಾರುಪತ್ಯ’ ಉರುಳುವ ಭಯ! ‘ಸುನಾಮಿನ್ಯೂಸ್’ ನ ತಾಜಾ ಕ್ಷೇತ್ರ ಸಮೀಕ್ಷೆ.

  • ಸುನಾಮಿನ್ಯೂಸ್, ಏಪ್ರಿಲ್,6
  • ದಾವಣಗೆರೆ

*ಹುಳ್ಳಿಪ್ರಕಾಶ, ಸಂಪಾದಕರು

ಸಚಿವ ಶಾಮನೂರು ಮಲ್ಲಣ್ಣನ ಪುತ್ರ ವ್ಯಾಮೋಹ, ನಮ್ಮ ಕುಟುಂಬ ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಇನ್ನೊಬ್ಬರು ಶಾಸಕರಾಗಿ, ಮುಖಂಡರಾಗಿ ಬೆಳೆಯ ಕೂಡದು ಎನ್ನುವ ಪಾಳೇಗಾರಿಕೆಯ ದರ್ಪತನದ ಹೆಜ್ಜೆಗಳು. ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸಿಗೆ ಬಲು ಭಾರವಾಗಿ ಪರಿಣಾಮಿಸಲಿವೆ. ಇತ್ತ ‘ಮಿಲಾಪಿ ಕುಸ್ತಿ’ ಎಂದು ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ಅಭ್ಯರ್ಥಿ ತನದ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಬೂತ್ ಮಟ್ಟದ ಕೆಳ ಹಂತದ ಕಾರ್ಯಕರ್ತರಲ್ಲಿನ ಒಗ್ಗಟ್ಟು. ದಕ್ಷಿಣಾದಲ್ಲಿ ಶಾಮನೂರು ಪಾರುಪತ್ಯೆ ಅಂತ್ಯಗೊಳಿಸಿ, ಕಮಲದ ಧ್ವಜ ಏರಿಸಬೇಕೆಂದು ಅವರಲ್ಲಿ ಹುಟ್ಟಿಕೊಂಡಿರುವ ಶಿವಾಜಿಯ ಛಲ. ಇದಕ್ಕೆ ಮತದಾರರಿಂದ ಸಿಗುತ್ತಿರುವ ಬೆಂಬಲ,ಸಹಕಾರ ಕಂಡು ಶ್ರೀನಿವಾಸಗೆ ಟಿಕೆಟ್ ಕೊಡಿಸಿರುವ ಮಾಜಿ ಸಂಸದ ಜಿಎಂ.ಸಿದ್ದೇಶ್ವರರಿಗೇನೆ ಇದು ಕನಸೋ,ನನಸೋ ಎಂಬತಾಗಿದೆ. ಇದೀಷ್ಟು ಭಾನುವಾರ ‘ಸುನಾಮಿನ್ಯೂಸ್’ ದಕ್ಷಿಣಾದಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿದಾಗ ಕಂಡು ಬಂದ ಚಿತ್ರಣ.

ಶಾಮನೂರು ಕುಟುಂಬದ ಪಡಸಾಲೆಯಲ್ಲಿ ಮೊಟ್ಟ, ಮೊದಲ ಸಲ ಸೋಲಿನ ಆತಂಕ ದೊಡ್ಡದಾಗಿಯೇ ಮನೆಮಾಡಿಕೊಂಡಿದೆ. ಸೋಲಿನ ಕರಿನೆರಳು ಕಾಂಪೌಂಡ್ ಧಾಟಿ, ತೊಲೆ ಬಾಗಿಲ ಮುಂದೇನೆ ಠಳಾಯಿಸುತ್ತಾ ನಿಂತಿದೆ!
ಬಿಜೆಪಿ ಅಖಾಡಕ್ಕೀಳಿಸಿರುವ ಪೈಲ್ವಾನ್ ಗೆ ಮತದಾರರೇ ಸ್ವಯಂ ಪ್ರೇರಿತರಾಗಿ ಮುಂದೆ ಬಂಸು ಗೊಡಂಬಿ,ತುಪ್ಪಾ, ಕಾರ,ಕೊಬ್ಬರಿ ಕೊಟ್ಟು ಉರಿದುಂಬಿಸುತ್ತಿದ್ದಾರೆ!

ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಅನುಕಂಪ ಕ್ಕಿಂತಲೂ ಬಿಜೆಪಿ ಅಭ್ಯರ್ಥಿ ಬಡವನಿದ್ದಾನೆ, ನಮ್ಮ ನಡುವೆ ಹಮಾಲಿ ಮಾಡಿಕೊಂಡು, ಗರಡಿ ಮನೆಯಲ್ಲಿ ಸಾಮು,ಗಿಮ್ಮು ತೆಗೆದು, ಕುಸ್ತಿ ಆಡಿಸುತ್ತಿದ್ದ ಬಡವರ ಪರ ಹೋರಾಟಗಾರ ನಮ್ಮ ದಾಸಕರಿಯಪ್ಪನ ಮಗ, ಈ ಸಲ ಬಡವರಿಗೊಂದು ಅವಕಾಶ ಯಾಕೇ ಕೊಡಬಾರದು ಎನ್ನುವ ಅನುಕಂಪ ಕ್ಷೇತ್ರದ ನಗರ ಮತ್ತು ಗ್ರಾಮೀಣಾ ಈ ಎರಡು ಪ್ರದೇಶಗಳ ಮತಗಟ್ಟೆಯಲ್ಲಿ ಜೋರಾಗಿ ಬೀಸುತ್ತಿದೆ.

ತಮ್ಮ ಎದುರಿಗೆ ಹಿರಿಯ ಪೈಲ್ವಾನ್ ತುಂಬಿಗೇರಿಯ ದಿವಂಗತ ದಾಸಕರಿಯಪ್ಪನ ಮಗ ಶ್ರೀನಿವಾಸ ಅಭ್ಯರ್ಥಿ ಎಂದು ಘೋಷಣೆ ಆದಾಗ ಶಾಮನೂರು ಮನೆಯಲ್ಲಿ ಹಾಗು ಅವರ ಪರಮಾಪ್ತ ಅಡ್ಡೆಗಳಲ್ಲಿ ಅಡ್ವಾನ್ಸ್ ಆಗಿಯೇ ಬೈ ಎಲೇಕ್ಷನ್ ವಿನ್ನಿಂಗ್ ಸೆಲಬ್ರೇಷನ್ ಗಳು ಜೋರಾಗಿಯೇ ಕಾಣಿಸಿಕೊಂಡಿದ್ದವು. ಸಚಿವ ಮಲ್ಲಣ್ಣನ ಮಗನ ವಿಧಾನಸಭೆಯ ಹಾದಿಗೆ ಯಾವುದೇ ಉಬ್ಬು,ತಗ್ಗಿನ ಅಡೆ,ತಡೆ ಇಲ್ಲ ಎನ್ನುವ ವ್ಯಾಖ್ಯಾನಗಳು, ಚರ್ಚೆಗಳು ‘ಬೆಣ್ಣೆದೋಸೆ ನಗರಿ’ ಸುತ್ತಲೂ ಕುಂತಲ್ಲಿ, ನಿಂತಲ್ಲಿ ಜೋರಾದವು.

ಶಾಮನೂರು ಮೊಮ್ಮಗ ಸಮರ್ಥ ಎದುರು ಬಿಜೆಪಿ ಅಸಮರ್ಥನನ್ನು ಅಖಾಡಕ್ಕಿಳಿಸಿದೆ. ಇದು ಶಾಮನೂರು ಕುಟುಂಬದ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಅವರ ಮಗ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಆಡಿಸುತ್ತೀರುವ ಮಿಲಾಪಿ ಕುಸ್ತಿ ಎಂದು ಬಿಜೆಪಿ ಉಚ್ಛಾಟಿತ ಎಮ್ಮೇಲ್ಲೆ ಬಸವನಗೌಡ ಪಾಟೀಲ್ ಯತ್ನಾಳ ರವರು ಟಿಕೇಟ್ ಘೋಷಣೆಯಾದ ಮರು ಕ್ಷಣದಲ್ಲೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಯತ್ನಾಳ ಹೇಳಿಕೆ ತರುವಾಯ ಬಹುತೇಕರು ಯಡಿಯೂರಪ್ಪರ ಕಡೆಗೆ ಅನುಮಾನ ದಿಂದ ನೋಡಿದ್ದುಂಟು.

ಆದರೇ, ನಾಮಪತ್ರ ಸಲ್ಲಿಕೆಯ ತರುವಾಯ ಕ್ಷೇತ್ರದಲ್ಲಿ ಜೋರಾದ ತಯಾರಿಗಳನ್ನು ಗಮನಿಸಿದ ಬಳಿಕ ಮತದಾನಕ್ಕೆ ಇನ್ನೂ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿರುವಾಗ ಉಪ ಸಮರ ದಾವಣಗೆರೆ ದಕ್ಷಿಣಾದಲ್ಲಿ ಕಾಣಿಸುತ್ತೀರುವ ಚಿತ್ರಣ ಬಿಜೆಪಿ ಟಿಕೇಟ್ ಘೋಷಣೆಯ ದಿನ ದಂದು ಹುಟ್ಟಿದ್ದ ಮಾತುಗಳನ್ನು ನಿವಾಳಿಸಿ ಹಾಕಿ, ಅಪ್ಪ, ಮಾವ,ಅಜ್ಹ ರಕ್ಷಿಸಿಕೊಂಡು ಬಂದಿದ್ದ ದಕ್ಷಿಣಾದ ಕೋಟೆಯ ಪಾರುಪತ್ಯ ಕೈ ತಪ್ಪುವುದೇ!? ಎನ್ನುವ ಆತಂಕದ ನಡುಕ ಶಾಮನೂರು ಕುಟುಂಬವನ್ನು ಕಾಡಲಾರಂಭಿಸಿದೆ.

ಏಕೆಂದರೆ, ಭಾನುವಾರ ಇಡೀ ದಿನ ಕ್ಷೇತ್ರದ ತುಂಬನೂ ಸುತ್ತಾಡಿದಾಗ “ಸುನಾಮಿನ್ಯೂಸ್ ” ಗೆ ಕಂಡು ಬಂದ ವಾಸ್ತವಾಂಶ ಏನೇಂದರೇ,
ಇಲ್ಲಿಯ ತನಕ ದಕ್ಷಿಣಾದ ಅಖಾಡದಲ್ಲಿ ಹೆಚ್ಚಾಗಿ ನಡೆದಿದ್ದು ‘ಮಿಲಾಪಿ’ ಕುಸ್ತಿ! ಆದರೇ 2008ರಲ್ಲಿ ಈ ಕ್ಷೇತ್ರ ರಚನೆಯಾದ ಬಳಿಕ ಇದೇ ಮೊಟ್ಟ,ಮೊದಲ ಸಲ ‘ಕಾಟಾ ನಿಖಾಲಿ ಕುಸ್ತಿ’ ಅಬ್ಬರಿಸುತ್ತೀರುವುದು ಪ್ರತಿ ಮತಗಟ್ಟೆಯಲ್ಲೂ ಕಾಣಿಸಿತು.

ಈ ಉಪ ಸಮರದಲ್ಲಿ ಅನುಕಂಪ ಎನ್ನುವುದು ‘ಬಾತಿ ಕೆರೆ’ ಆಚೆ ಎನ್ನುವುದು ಕಾಣಿಸಿತು. ಜಾತಿ ಆಧಾರಿದ ಮತದಾನದ ಬಗ್ಗೆ ಮಾತನಾಡುವರ ಸಂಖ್ಯೆ ಕ್ಷೇತ್ರದಲ್ಲಿ ಕ್ಷೀಣಿಸಿದೆ, ಬದಲಿಗೆ
ವಂಶಪಾರಂಪರೆ ವಿರುದ್ಧದ ಮಾತುಗಳು ಎಲ್ಲಾ ಕಡೆನೂ ಜೋರಾಗಿರುವುದು ವಿಶೇಷವಾಗಿದೆ. ಏನೇ ಮುನಿಸಿದ್ರು ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಬಿಜೆಪಿ ಚಿಹ್ನೆಗೆ ಮತ ಒತ್ತಲ್ಲ. ಹೀಗಾಗಿ ಈ ಸಲ ಜಾತಿಗೀತಿ ಬಿಟ್ಟು ಹಿಂದೂ ಮತಗಳನ್ನು ಕ್ರೂಢೀಕರಣಗೊಳಿಸುವ ಮಾತುಗಳು ಕ್ಷೇತ್ರದ ಗ್ರಾಮೀಣಾ ಪ್ರದೇಶದಲ್ಲಿ ಹೆಚ್ಚಾಗಿ ಕೇಳಿಸಿದವು.

ಮತದಾರರಲ್ಲಿ ಜಾತಿ ಮೀರಿದ ಇಂತಹ ಬದಲಾವಣೆಗೂ ಬಲವಾದ ಕಾರಣವಿದೆ. ಅದೇನೆಂದರೆ, ಬಿಜೆಪಿಯವರು ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕಿದ್ದಾರೆ. ಶಾಮನೂರು ಮಲ್ಲಣ್ಣ ಕೂಡ ತನ್ನ ಪುತ್ರನಿಗೆ ಟಿಕೇಟ್ ಬೇಕೆಂದು ಹಠ ಹಿಡಿಯುವ ಬದಲು ತನ್ನ ಹಿಂದೆ,ಮುಂದೆ ಹಲವು ದಶಕಗಳಿಂದ ದೇಖರಿಕೆ ಮಾಡಿಕೊಂಡು ಬರುತ್ತೀರುವವರಲ್ಲಿ ಇಲ್ಲವೆ ತನ್ನದೆ ವೀರಶೈವ ಸಾಧು ಲಿಂಗಾಯತರಲ್ಲಿ ಒಬ್ಬರಿಗೆ ಪಕ್ಷ ದಿಂದ ಅಖಾಡಕ್ಕೀಳಿಸಿ, ನಾಲ್ಕು ರೋಖ ಖರ್ಚಾ ಮಾಡಿ ಸಾಮಾನ್ಯ ಕಾರ್ಯಕರ್ತನನ್ನು ವಿಧಾನಸಭೆಗೆ ಕಳುಹಿಸಬಹುದಿತ್ತಲ್ಲ ಎನ್ನುವ ಮಾತುಗಳು ಕ್ಷೇತ್ರದ ತುಂಬನೂ ಜೋರಾಗಿವೆ.

ಕ್ಷೇತ್ರದ ತುಂಬನೂ ಶಾಮನೂರು ಮಲ್ಲಣ್ಣನ ಕುಟುಂಬ ರಾಜಕಾರಣದ ಬಗ್ಗೆ ಮೊಟ್ಟ,ಮೊದಲ ಸಲ ಮತದಾರರಲ್ಲಿ ತೀವ್ರ ಅಸಹ್ಯ ಮತ್ತು ಅಸಹನೆ ಕಾಣಿಸುತ್ತಿದೆ! ಭದ್ರಾ ಚಾನೇಲ್ ನೀರಿನಂತೆ ಹಣವನ್ನು ಹರಿಸಿದರೂ, ಇಡೀ ಸಿದ್ದರಾಮಯ್ಯ ನವರ ಸರ್ಕಾರದ ಸಚಿವ,ಶಾಸಕರ ದಂಡು ದರ್ಬಾರ ಹಾಗೂ ಮುಸ್ಲಿಂ ಮತ ಬ್ಯಾಂಕ್ ಬಲಕ್ಕೆ ನಿಂತಿದ್ರು ಕೂಡ ಅವರ ಮುಖದಲ್ಲಿ ನಾಮಪತ್ರ ಸಲ್ಲಿಕೆಯ ತನಕವೂ ಇದ್ದಂತಹ ನಗುವು ಕಾಣಿಸುತ್ತಿಲ್ಲ.

ಆಗೇನೆ, 2008 ರಿಂದ 2023ರ ವರೆಗಿನ ಚುನಾವಣೆಯಲ್ಲಿ ಮನೆಯಲ್ಲಿಯೇ ಕುಳಿತು ಶಾಮನೂರು ಶಿವಶಂಕರಪ್ಪ ಸುಲಭವಾಗಿ ಗೆದ್ದು ಬರುವಂತೆ ಈ ಉಪ ಸಮರದಲ್ಲಿ ಸಚಿವ ಮಲ್ಲಣ್ಣ, ಅವರ ಪತ್ನಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮಗನ ಗೆಲುವು ಸಿಲಿಂಡರ್ ಇಲ್ಲದೆ ಮೇಲೇಳದ ಬೆಣ್ಣೆದೋಸೆಯಂತಾಗಿ ಕಾಡುತ್ತಿದೆ ಕೂಡ!

ಇದರ ನಡುವೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತವರ ಕುಟುಂಬ ಕ್ಕಿಂತಲೂ ಇಲ್ಲಿನ ಕಾರ್ಯಕರ್ತರಲ್ಲಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ, ರಾಮ್ ಅ್ಯಂಡ್ ಕೋ ವೃತ್ತದಲ್ಲಿ ಮತ್ತೋಮ್ಮೆ ರಂಗು,ರಂಗಿನ ಹೋಳಿಯಲ್ಲಿ ಮಿಂದೇಳುತ್ತಾ ಕೇಸರಿಯ ವಿಜಯೋತ್ಸವವನ್ನು ಮುಗಿಲೇತ್ತರಕ್ಕೇರಿಸಿ ಆಚರಿಸಲೇಬೇಕೆನ್ನುವ ಛಲದೊಂದಿಗೆ ಮನೆ,ಮನೆ ತಿರುಗಿ, ವಯೋಮಾನದ ಅಂತರ ನೋಡದೆ ಮತದಾರರ ಕೈ,ಕಾಲು ಹಿಡಿದು ಬಿಜೆಪಿ ಪರ ಮತ ನೀಡಿ, ಗೆಲ್ಲಿಸಿ ಎನ್ನುತ್ತಿರುವುದು ಕ್ಷೇತ್ರದ ತುಂಬನೂ ಬಿರುಸಾಗಿ ಕಂಡು ಬರುತ್ತಿದೆ.

ಏಕೆಂದರೆ, ಬಿಜೆಪಿ ಪಾಳೆಯದಲ್ಲಿ ಪಕ್ಷದ ವರಿಷ್ಠರು, ಹಿರಿಯ ಮುಖಂಡರಿ ಗಿಂತಲೂ ಬೂತ್ ಮಟ್ಟದಲ್ಲಿ ಕೇಸರಿ ಧ್ವಜ ಎತ್ತಿ ಹಿಡಿಯುತ್ತಾ ಬಂದಿರುವ ಕೆಳ ಹಂತದ ಕಾರ್ಯಕರ್ತರಲ್ಲಿ ಮುಸ್ಲಿಂ ಪ್ರಾಬಲ್ಯದ ದಕ್ಷಿಣಾದ ಕೋಟೆಯಲ್ಲಿ ಶಾಮನೂರು ಮನೆತನದ ಪಾಳೆಪಟ್ಟನ್ನು ನೆಲಕ್ಕುಳಿಸಿ, ಅಲ್ಲಿ ಕೇಸರಿ ಧ್ವಜ ಹಾರಿಸಲೇ ಬೇಕೆನ್ನುವ ಮಹಾರಾಜ ಶಿವಾಜಿಯ ಛಲ ಅವರಲ್ಲಿ ಹುಟ್ಟಿದೆ!

ಹೀಗಾಗಿ ಬಹಳಷ್ಟು ಬೂತ್ ಮಟ್ಟದ ಕಾರ್ಯಕರ್ತರು ಸ್ವಂಪ್ರೇರಿತರಾಗಿ ತಾವೇ ಹಣ ಹೊಂದಿಸಿಕೊಂಡು ನಿತ್ಯದ ಪ್ರಚಾರದ ಖರ್ಚು,ವೆಚ್ಚಗಳನ್ನು ಸರಿದೂಗಿಸುತ್ತಾ, ತನ್ನ ಪಕ್ಷದ ಅಭ್ಯರ್ಥಿಗೆ ಆರ್ಥಿಕ ಹೊರೆ ನಿವಾರಿಸುತ್ತೀದ್ದಾರೆ. ಹಲವು ಕಡೆಗಳಲ್ಲಿ ಜನರೇ ಚುನಾವಣಾ ಖರ್ಚಿಗೆ ದೇಣಿ ಕೊಟ್ಟು ಪ್ರೋತ್ಸಾಹಿಸುತ್ತಿರುವ ಸನ್ನಿವೇಶಗಳು ಸಮೀಕ್ಷೆ ಕಾಲಕ್ಕೆ ಕಂಡು ಬಂದವು.

ಇನ್ನೂ ಜಾತಿ, ಹಣ, ಉದ್ಯೋಗ, ದಾನ,ಧರ್ಮ ಹೀಗೆ ನಾನಾ ಕಾರಣಗಳಿಗೋಸ್ಕರ ಶಾಮನೂರು ಮನೆತನದ ಪರವಾಗಿರುವ ಎಲ್ಲಾ ಹಿಂದೂಗಳ ಮತ ಬ್ಯಾಂಕಿನಲ್ಲಿ ಕನಿಷ್ಠ ಪಕ್ಷ ಶೇಕಡ ಏಳೇಂಟು ರಷ್ಟು ಕದಲಿದರೂ ಸಾಕು, ಅತ್ತ ಕ್ಷೇತ್ರದಲ್ಲಿರುವ ಮುಸ್ಲಿಂ ಮತದಾರರಲ್ಲಿ ಶೇಕಡ ಹತ್ತ ರಷ್ಟು ಮತದಾನ ಕಡಿಮೆಯಾದರೂ ಸಾಕು ಶಾಮನೂರು ಕಟ್ಟಿರುವ ದಕ್ಷಿಣದ ಕೋಟೆ ಕಮಲಾಧಿಪತಿಗಳ ಸುರ್ಪದಿಗೆ ತಾನಾಗಿಯೇ ಬರಲಿದೆ!

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments