- ಸುನಾಮಿನ್ಯೂಸ್, ಸೆ,7
* ಬೆಂಗಳೂರು.
ಬೂತ್ ಮಟ್ಟದಲ್ಲಿರುವ ಕಾರ್ಯಕರ್ತರು ಪಕ್ಷಕ್ಕೆ ದಕ್ಷ ಸೇನಾನಿಗಳಿದ್ದಂತೆ. ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಬ್ಲಾಕ್ ಮಟ್ಟದಲ್ಲಿ ಪಕ್ಷದ ಸಂಘಟನಾ ನಾಯಕತ್ವವನ್ನು ನಿರ್ಧಾರಿಸಲಾಗುವುದು ಎಂದು ಓಡಿಸ್ಸಾ ಪ್ರದೇಶ ಕಾಂಗ್ರೆಸ್ ಸಮಿತಿಗೆ ಎಐಸಿಸಿ ಯಿಂದ ವೀಕ್ಷಕರಾಗಿ ನೇಮಕಗೊಂಡಿರುವ ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಹೇಳಿದರು.
ಭಾನುವಾರ ಓಡಿಸ್ಸಾ ಪಿಸಿಸಿ ಅಡಿಯಲ್ಲಿ ಬದ್ರಕ್ ಜಿಲ್ಲಾ ಕಾಂಗ್ರೆಸ್ ಸಮಿತಿ ಬದ್ರಕ್ ನಗರದ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ‘ಸೃಜನ್ ಅಭಿಯಾನ’ ಕಾರ್ಯಕ್ರಮವನ್ನುದ್ದೇಶಿಸಿ ಬಳ್ಳಾರಿ ಸಂಸದರು ಮಾತನಾಡಿದರು.
ಓಡಿಸ್ಸಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗತಕಾಲದ ವೈಭವವನ್ನು ಮರು ಸ್ಥಾಪಿಸಬೇಕಾಗಿದೆ. ಈ ದಿಸೆಯಲ್ಲಿ ಪ್ರತಿಯೋಬ್ಬ ಕಾರ್ಯಕರ್ತರ ಪಾತ್ರವೂ ಮುಖ್ಯವಾಗಿದೆ. ಅದ್ದರಿಂದ ಬೂತ್ ಮಟ್ಟದಲ್ಲಿನ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಪರಿಶ್ರಮಿಸಬೇಕೆಂದು ಕರೆಯಿತ್ತರು.
ಬೇರು ಮಟ್ಟ ದಿಂದಲೇ ಪಕ್ಷವನ್ನು ಬಲಪಡಿಸಿದಾಗ ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿ ಬಲವರ್ಧನೆಗೊಳ್ಳಲಿದೆ. ಈ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟ ದಿಂದ ಸಂಘಟಿಸುವ ಮೂಲಕ ಹೈಕಮಾಂಡ್ ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಾನು ನಿಭಾಯಿಸುವ ಪಣ ತೊಟ್ಟಿರುವೆ. ನಿಮ್ಮ ಸಹಕಾರ, ಸಲಹೆ, ಬೆಂಬಲವನ್ನು ನೀಡಿ, ಆ ಮೂಲಕ ಓರಿಸ್ಸಾದಲ್ಲಿ ಪುನಃ ಕಾಂಗ್ರೆಸ್ ಶಕೆಯ ಆರಂಭಕ್ಕೆ ಕೈಜೋಡಿಸುವಂತೆ ಸಂಸದ ತುಕಾರಾಂ ಅಭಿಯಾನದಲ್ಲಿ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರು.
ಓಡಿಸ್ಸಾ ರಾಜ್ಯದ ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ನನ್ನನ್ನು ಇಲ್ಲಿಗೆ ಬಂದಾಗ ಸ್ವಾಗತಿಸಿದರು. ಪ್ರಸಿದ್ಧ ಪುರಿ ಜಗನ್ನಾಥ್ ದೇವತ ಕಲಾಕೃತಿ ಹಾಗೂ ಸ್ಥಳೀಯ ಕರಕುಶಲ ವಸ್ತುಗಳಿಂದ ತಯಾರಿಸಿದ ಉಡುಗೊರೆಗಳನ್ನು ನೀಡುವುದರ ಮೂಲಕ ಗೌರವಿಸಿದ್ದೀರಿ ನಿಮ್ಮ ಅಭಿಮಾನಕ್ಕೆ ನಾನು ಸದಾ ಋಣಿ ಆಗಿರುವೆ ಎಂದ ಸಂಸದ ತುಕಾರಾಂ, ಜೈ ಕಾಂಗ್ರೆಸ್, ಜೈಜೈ ಕಾಂಗ್ರೆಸ್ ಘೋಷಣೆಯನ್ನು ಕೂಗುವ ಮೂಲಕ ಅಭಿಯಾನದಲ್ಲಿ ಹಾಜರಿದ್ದ ಕಾರ್ಯಕರ್ತರು, ಮುಖಂಡರಲ್ಲಿ ಹುರುಪು ತುಂಬಿದರು.
ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಪುತ್ಥಳಿಗೆ ಸಂಸದ ತುಕಾರಾಂ ಮಾರ್ಲಾಪಣೆ ಮಾಡಿದರು. ಡಿಸಿಸಿ ಅಧ್ಯಕ್ಷರು ಸಹಿತ ಸ್ಥಳಿಯ ಮುಖಂಡರು,ಜನಪ್ರತಿನಿಧಿಗಳು ಸಂಸದರೊಟ್ಟಿಗೆ ಕೈಜೋಡಿಸಿದರು.
ಬದ್ರಕ್ ಜಿಲ್ಲಾ ಕಾಂಗ್ರೆಸ್ ಕೋಅಡಿನೇಟರ್ ಅಸಿತ್ ಪಟ್ನಾಯಕ, ಬಸುದೇವಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ ಕುಮಾರ ದಾಸ್, ಮಾಜಿ ಶಾಸಕ ಕುಮಾರ ಚಿರಂಜೀವಿ, ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಕಾರ್ಯಾಧ್ಯಕ್ಷ ದೇಬ್ ಮೊಹಾಂತಿ, ಹಿರಿಯ ಮುಖಂಡರಾದ ದೇಬೆಂದ್ರ ಮೊಹಾಂತಿ, ಮಧುಮಿತ ಸೇಥಿ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಕೃಷ್ಣಚಂದ್ರ ಮೊಹಾಂತಿ, ಎನ್ ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ಯಾದವ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವಜೀತ್ ಲೇಂಕಾ, ಯುವ ಕಾಂಗ್ರೆಸ್ ಮುಖಂಡರಾದ ನಳೀನಿಕಾಂತಾ ಮಹಾಂತಿ ಸಹಿತ ರಾಜ್ಯ,ಜಿಲ್ಲೆಯ ಹಲವು ಮುಖಂಡರುಗಳು ಅಭಿಯಾನದಲ್ಲಿ ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.