- ಸುನಾಮಿನ್ಯೂಸ್, ಮಾರ್ಚ್, 2
- ಬಾಗಲಕೋಟೆ
* ಹುಳ್ಳಿಪ್ರಕಾಶ, ಸಂಪಾದಕರು.
ಈಗ ನಡೆದಿರುವ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿನ ಮತದಾರರ ನಾಡಿ ಮಿಡಿತ ನೋಡಿದರೆ ನಮ್ಮ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರು ನೂರಕ್ಕೆ ನೂರರಷ್ಟು ಗೆದ್ದೇ,ಗೆಲ್ಲುತ್ತಾರೆ ಎನ್ನುವ ವಾತಾವರಣ ಕಾಣ್ತಾಯಿದೆ ಎಂದು ವಿಧಾನ ಪರಿಷತ್ತಿನ ನಿಕಟ ಪೂರ್ವ ವಿರೋಧಪಕ್ಷದ ನಾಯಕರು, ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಎಸ್ಸಾರ್ ಪಾಟೀಲ್ ರವರು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಪರವಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮಂಗಳವಾರ, ಬುಧವಾರ ಎರಡು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಅವರ ಜೊತೆಗೂಡಿ ಉಪ ಚುನಾವಣೆ ನಡೆಯುತ್ತೀರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಅವರು ವ್ಯಾಪಕ ಪ್ರಚಾರ ಕೈಗೊಂಡು, ಮತಯಾಚಿಸಿದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷರು, ಈ ಭಾಗದಲ್ಲಿನ ಅತ್ಯಂತ ಪ್ರಭಾವಿ ನಾಯಕರು ಆಗಿರುವ ಎಸ್ಸಾರ್ ಪಾಟೀಲ್ ಅವರ ಪ್ರವೇಶ ದಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಆಲೆ ಜೋರಾಗಿ, ಅಭ್ಯರ್ಥಿ ಉಮೇಶ ಮೇಟಿ ಅವರ ಗೆಲುವಿನ ವಾತಾವರಣ ದಟ್ಟವಾಯ್ತು ಎನ್ನುವ ಮಾತುಗಳು ಮತದಾರರ ಮಧ್ಯೆ ಯಿಂದ ಜೋರಾಗಿ ಕೇಳಿ ಬಂದವು.
ಕ್ಷೇತ್ರದ ಮುಗುಳೊಳ್ಳಿ ಗ್ರಾಮದಲ್ಲಿ ಜರುಗಿದ ಬಹಿರಂಗ ಮತಯಾಚನೆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡು, ಏ.9 ರಂದು ಜರುಗುವ ಮತದಾನದಲ್ಲಿ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಮತ ಹಾಕಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನ್ನುವುದನ್ನು ನಿರೂಪಿಸ ಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಬಲಾಢ್ಯ ನಾಯಕರು ಆಗಿರುವ ಎಸ್ಸಾರ್ ಪಾಟೀಲರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಆಲೆ ಜೋರಾಗಿ ಬೀಸುತ್ತಿದೆ. ಇತ್ತ ಎಲ್ಲಾ ಮತಗಟ್ಟೆಯಲ್ಲೂ ಮತದಾರರ ನಾಡಿ ಮಿಡಿತವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬೈ ಎಲೇಕ್ಷನ್ ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರು ನೂರಕ್ಕೆ ನೂರರಷ್ಟು ಭರ್ಜರಿ ಜಯ ಸಾಧಿಸುವ ವಿಶ್ವಾಸ ಕಾಣ್ತಾಯಿದೆ. ನಮ್ಮ ಕ್ಷೇತ್ರದ ಜನರ ಆಶೀರ್ವಾದ, ಬೆಂಬಲ, ಸಹಕಾರ ಸದಾ ಕ್ಷಣವೂ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿರಲಿ ಎಂದು ಮಾಜಿ ಸಚಿವರು ಆದ ಎಸ್ಸಾರ್ ಪಾಟೀಲರು ಉಮೇಶ ಮೇಟಿ ಅವರಿಗೆ ಶುಭ ಹಾರೈಸಿದರು.
ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ಸಹಿತ ಹಲವು ಶಾಸಕರು, ಮುಖಂಡರುಗಳು ವೇದಿಕೆಯಲ್ಲಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು,9448234961
