- ಸುನಾಮಿನ್ಯೂಸ್, ಮೇ,12,2026
- ಕೊಪ್ಪಳ
* ಹುಳ್ಳಿಪ್ರಕಾಶ, ಸಂಪಾದಕರು
ತುಂಗಭದ್ರಾ ನದಿ ದಂಡೆಯ ಮೇಲಿರುವ
ಕೊಪ್ಪಳ ಜಿಲ್ಲೆಯ ಶ್ರೀ ಕ್ಷೇತ್ರ ಹುಲಿಗಿಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವವವು ಮೇ 11ರಂದು ಲಕ್ಷಾಂತರ ಭಕ್ತಸಾಗರದಲ್ಲಿ ಅತ್ಯಂ ವಿಜ್ರಂಭಣೆಯಿಂದ ನೆರವೇರಿತು.
ಗೋಧೂಳಿ ಸಮಯ ಸಂಜೆ 5.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ತೇರು ಸಾಗುತ್ತಿದ್ದಂತೆಯೇ ಕೊಪ್ಪಳ ಹಾಗು ಈ ಜಿಲ್ಲೆಯೊಂದಿಗೆ ಸರಹದ್ದು ಹಂಚಿಕೊಂಡಿರುವ ವಿಜಯನಗರ, ಬಳ್ಳಾರಿ, ಗದಗ, ರಾಯಚೂರು, ದಾವಣಗೆರೆ ಸೇರಿದಂತೆ ಕರ್ನಾಟಕ ಹಾಗು ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸಿದ್ಧ ಲಕ್ಷಾಂತರ ಭಕ್ತರು ಜಗದ ತಾಯಿ ಹುಲಿಗಾಂಬೇಗೆ ಮುಗಿಲು ಮುಟ್ಟುವ ಜಯಘೋಷ ಮೊಳಗಿಸಿದರು. ರಥೋತ್ಸವವನ್ನು ಕಣ್ಣತುಂಬಿಕೊಂಡರು.
ಜಗನ್ಮಾತೆ ಶ್ರೀ ಹುಲಿಗೆಮ್ಮದೇವಿ ಮೂರ್ತಿಯೊಂದಿಗೆ ಸಾಗಿದ ರಥ
ಪಾದಗಟ್ಟೆ ತಲುಪಿ, ಮರಳಿ ಸ್ವಸ್ಥಾನಕ್ಕೆ ಬಂದು ಸೇರುತ್ತಿದ್ದಂತೆ ಭಕ್ತ ಸಮೂಹದಿಂದ ಕರತಾಡನ ಕೇಳಿ ಬಂದಿತು. ಉದೋ ಉದೋ ಊದೋ.. ಹುಲಿಗೆಮ್ಮ ಎಂದು ಭಕ್ತರು ಮತ್ತೆ ಮತ್ತೆ ಘೋಷಣೆ ಮೊಳಗಿಸಿ, ಶ್ರೀದೇವಿಯ ಕೃಪೆ ಕೋರಿದರು.
ರಥೋತ್ಸವದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಶಾಸಕರಾದ ಹೇಮಲತಾ ನಾಯಕ, ಮಾಜಿ ಸಂಸದರಾದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಹಿರಿಯ ಗಣ್ಯರು ಭಾಗಿಯಾಗಿ ಪೂಜೆ ಸಲ್ಲಿಸಿದರು. ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ರೀ ಹುಲಿಗೆಮ್ಮ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಕಾರ್ಯದರ್ಶಿ ಪ್ರಕಾಶರಾವ್, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
- ಹುಳ್ಳಿಪ್ರಕಾಶ, ಪತ್ರಕರ್ತರು.
