*ಸುನಾಮಿನ್ಯೂಸ್, ಮೇ,23
*ಹಗರಿಬೊಮ್ಮನಹಳ್ಳಿ/ವಿಜಯನಗರ
*ಹುಳ್ಳಿಪ್ರಕಾಶ, ಸಂಪಾದಕರು
ಆಕೆ, ಪತಿ ಯಿಂದ ಪರಿತ್ಯಕ್ತೆ. ಆ ದುಸ್ವಪ್ನ ಮರೆತು, ಉತ್ತಮ ಭವಿಷ್ಯದ ಕನಸು ಹೊತ್ತು ಐದು ವರ್ಷದ ಪುಟ್ಟಮಗನೊಂದಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದೊಳಕ್ಕೆ ಕಾಲಿಟ್ಟಿದ್ದಳು.
ಆದರೇ ಈ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಏಳೆಂಟು ತಿಂಗಳು ಕಳೆಯುವ ವೇಳೆಗೆಲ್ಲ ನಾನು ಇಲ್ಲಿಯೇ ಬೀದಿ ಹೆಣವಾಗುತ್ತೇನೆ ಎನ್ನುವ ಊಹೆ ಕೂಡ ಆಕೆ ಕಂಡ ಕನಸಿನಲ್ಲಿ ಕಾಣಿಸಿರಲಿಲ್ಲ!
ಆದರೇ ಆಕೆ ಕಂಡ ಬದುಕಿನ ವಿಚಿತ್ರವೇ ಬೇರೆ ಆಗಿತ್ತು. ಗುರುವಾರ ರಾತ್ರಿ ಆಕೆ ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರ ವಲಯದ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಬಳಿಯ ತಾಲೂಕ ಆಡಳಿತ ಸೌಧದ ಬಲಕ್ಕೀರುವ ಅಗ್ನಿಶಾಮಕ ದಳದ ಕಚೇರಿ ಸಮೀಪ ಅನಾಥ ಹೆಣವಾದಳು. ಆಕೆ ಐದು ವರ್ಷದ ಮಗು ಯಾರು ದಿಕ್ಕಿಲ್ಲದ ಅನಾಥ ಮಗುವಾಯ್ತು.
ಇದು ಕೊಲೆಯೋ? ಇಲ್ಲವೇ ಹಿಟ್ ಆ್ಯಂಡ್ ರನೋ? ಇಲ್ಲವೇ ಅಘಾತಕಾರಿ ರೆಪ್ ಆ್ಯಂಡ್ ಮರ್ಡರೋ……..!? ಈಗೇ ನಾನಾ ಊಹಾತ್ಮಕ ಮಾತುಗಳು, ವಿಶ್ಲೇಷಣೆಗಳು ಈ ದುರ್ದೈವಿ ಮಹಿಳೆಯ ಸಾವಿನ ತರುವಾಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿವೆ. ಈ ಸುದ್ದಿ ಇಡೀ ವಿಜಯನಗರ ಜಿಲ್ಲೆಯಾದ್ಯಂತ ಸಾಕಷ್ಟು ವೈರಲ್ ಆಗುತ್ತಲೇ ಇದೆ.
ವಿಚಾರ ಗೊತ್ತಾತ್ತಾದ ವೇಗಲ್ಲಿಯೇ ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಜಾಹ್ನವಿ. ಎಸ್ ಮತ್ತು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಮತ್ತವರ ಕ್ರೈಂ ತಂಡ ಧಾವಿಸಿ ಬಂದು ಮಹಿಳೆಯ ಸಾವಿನ ಸುತ್ತಲಿನ ಸಾಕ್ಷಧಾರಗಳು ನಾಶವಾಗದಂತೆ ಎಚ್ಚರವಹಿಸಿದ್ದು ಸಾರ್ವಜನಿಕ ರಿಂದ ಮೆಚ್ಚುಗೆ ಗಳಿಸಿದೆ.
ಘಟನೆಯ ನಂತರ ಸಿಕ್ಕ ಸುಳಿವಿನ ಜಾಲ ಹಿಡಿದು ಭೇಧಿಸಿದಾಗ,
ಸುನೀಲ್ ನಾಯ್ಕ್ ಮತ್ತು ಕೃಷ್ಣನಾಯ್ಕ್ ಎಂಬ 20ರ ಹರೆಯದ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ಲುತಾಂಡ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಸಫಲವಾಗಿದೆ.
ಘಟನಾ ವಿವರ:
ಹಗರಿಬೊಮ್ಮನಹಳ್ಳಿ ಪಟ್ಟಣದ ಬೈ ಪಾಸ್ ಬಳಿ ಇರುವ ‘ಮೀಯಾ ಫ್ಯಾಷನ್’ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕ (27) ಬೀದಿ ಹೆಣವಾದ ದುರ್ದೈವಿ ಮಹಿಳೆ. ಮೂಲತಃ ಈ ಮಹಿಳೆಯ ಊರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೊಬಳಿಯ ನಾಗಲಾಪುರ ತಾಂಡ.
ಕಟ್ಟಿಕೊಂಡ ಗಂಡ ನಿಂದ ಬೇರ್ಪಟ್ಟು, ಕಳೆದ ಏಳೆಂಟು ತಿಂಗಳಿನಿಂದಲೂ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮ್ ರಹೀಂ ನಗರದಲ್ಲಿ ಐದು ವರ್ಷದ ಏಕೈಕ ಪುತ್ರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಜೀವನ ನಿರ್ವಹಣೆಗಾಗಿ ಮೀಯಾ ಫ್ಯಾಷನ್ ನಲ್ಲಿ ಕೆಲಸಕ್ಕಿದ್ದಳು.
ಪಿಕಪ್ ನಲ್ಲಿತ್ತೇ ಸಾವಿನ ಸಂಚು!
ಸಾವಿಗೂ ಮುನ್ನ, ಆ ದಿನ ರಾತ್ರಿ ಗಂಟೆ ಎಂಟೂವರೇ ಸಮಯದಲ್ಲಿ ಇಬ್ಬರು ಯುವಕರು ಮೀಯಾ ಫ್ಯಾಷನ್ ಬಳಿ ಯಿಂದಲೇ ಪ್ರಿಯಾಂಕಾಳನ್ನು ಬೈಕ್ ನಲ್ಲಿ ಪಿಕಪ್ ಮಾಡಿಕೊಂಡು ಹೋಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪಿಕಪ್ ಮಾಡಿರುವ ಇಬ್ಬರು ಯುವಕರನ್ನು ವಿಜಯನಗರ ಜಿಲ್ಲಾ ಪೊಲೀಸ ಅಧಿಕ್ಷಕರಾದ ಜಾಹ್ನವಿ ಎಸ್, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಮತ್ತವರ ಕ್ರೈಂ ತಂಡ ಬಂಧಿಸಿ, ಹೆಡೆಮುರಿಗೆ ಕಟ್ಟುವಲ್ಲಿ ಸಫಲವಾಗಿದೆ.
ಆಗಾದರೇ, ಏಳೆಂಟು ತಿಂಗಳಿನ ಹಿಂದಷ್ಟೆ ಈ ಪಟ್ಟಣಕ್ಕೆ ಬಂದಿದ್ದ ಪ್ರಿಯಾಂಕಳಿಗೆ ಸುನಿಲ್ ನಾಯ್ಕ್ ಮತ್ತು ಕೃಷ್ಣನಾಯ್ಕ್ ಅವರ ಪರಿಚಯವಿತ್ತೆ!? ಪರಿಚಯ ಇಲ್ಲದಿದ್ದರೇ ಅವರ ಬೈಕ್ ನಲ್ಲಿ ಆಕೆ ಹತ್ತುತ್ತಿರಲಿಲ್ಲ, ಪರಿಚಯ ಇದ್ದೀರಲೇ ಬೇಕು. ಇದರಿಂದಾಗಿಯೇ ಇಬ್ಬರು ಯುವಕರ ಜೊತೆಗೆ ಹದಿ ವಯಸ್ಸಿನ ಆ ಮಹಿಳೆ ರಾತ್ರಿ ವೇಳೆ ಅವರ ಬೈಕ್ ನಲ್ಲಿ ಹತ್ತಿದ್ದಾಳೆ.
ಇಲ್ಲಾ, ಗಂಡ ನಿಂದ ಬೇರ್ಪಟ್ಟು, ತನ್ನ ಸ್ವಂತ ಕಾಲ ಮೇಲೆ ನಿಂತು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಶುರು ಮಾಡಿದ ಪ್ರಿಯಾಂಕಳ ಬೆಳವಣಿಗೆ ಸಹಿಸದೇ ಆಕೆಯನ್ನು ಇಲ್ಲವಾಗಿಸಲು ಕುತಂತ್ರಗಳನೇದಾರು ರೂಪಿಸಲಾಗಿತ್ತೆ!?
ಇದರ ಭಾಗವಾಗಿಯೇ ಪರಿಚಯಸ್ಥರಿಂದಲೇ
ಪಿಕಪ್ ಮಾಡುವಾಗಲೇ ಪ್ರಿಯಾಂಕಳ ಸಾವಿನ ಸಂಚು ರೂಪಿಸಲಾಗಿತ್ತೆ!? ಎನ್ನುವ ನೂರೆಂಟು ಅನುಮಾನಗಳನ್ನು ಪ್ರಿಯಾಂಕಳ ಅನುಮಾನಾಸ್ಪದ ಸಾವು ಸಾರ್ವಜನಿಕರಲ್ಲಿ ನಿರ್ಮಾಣಗೊಳಿಸಿದೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
