Welcome to sunamipatrike   Click to listen highlighted text! Welcome to sunamipatrike
Sunday, September 7, 2025
HomeUncategorizedಹೆಚ್ ಬಿಹಳ್ಳಿ; ಪೋಲಿಸ್ ಬೀಗಿ ಪಹರೆಯಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡ 'ಹಿಂದೂ ಗಣಪತಿ' ವಿಸರ್ಜನಾ ಶೋಭಾಯಾತ್ರೆ!

ಹೆಚ್ ಬಿಹಳ್ಳಿ; ಪೋಲಿಸ್ ಬೀಗಿ ಪಹರೆಯಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡ ‘ಹಿಂದೂ ಗಣಪತಿ’ ವಿಸರ್ಜನಾ ಶೋಭಾಯಾತ್ರೆ!

  • ಸುನಾಮಿನ್ಯೂಸ್, ಸೆ,7

* ಹಗರಿಬೊಮ್ಮನಹಳ್ಳಿ/ವಿಜಯನಗರ

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಶನಿವಾರ ಜರುಗಿದ ಹಿಂದೂ ಗಣಪತಿ ವಿಸರ್ಜನೆ ನಿಮಿತ್ತ ಜರುಗಿದ ಶೋಭಾಯಾತ್ರೆ ಭಾರೀ ಪೊಲೀಸ್ ಬಂದೋಬಸ್ತ್ ಪಹರೆಯಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡಿತು.

ಶೋಭಾಯಾತ್ರೆಯಲ್ಲಿ ಭಾಗವಹಿಸಲೇಂದೆ ಬೆಳಿಗ್ಗೆಯಿಂದಲೇ
ಪಟ್ಟಣ ಸಹಿತ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರಯ ಸಂಖ್ಯೆಯಲ್ಲಿಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಯಾತ್ರೆ ಆರಂಭಗೊಳ್ಳುವ ಪಟ್ಟಣದ ರಥ ಬೀದಿಯಲ್ಲಿನ ಶ್ರೀ ಪಾದಗಟ್ಟಿ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಜಮಾಯಿಸಿದ್ದರು.

ಡಿಜೆ ಸಹಿತ, ಕೋಲಾಟ, ಮರಗಾಲು, ಡೊಳ್ಳು, ಸಮಳ, ಕಹಳೆವಾದನ, ಹಲಗೆವಾದನ, ಹಗಲುವೇಷಗಾರರು, ಗೊಂಬೆ ಕುಣಿತ ಸೇರಿದಂತೆ ಜನಪದ ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಮೆರವಣಿಗೆಯ ಆಂದವನ್ನು ಹೆಚ್ಚಿಸಿ, ನೋಡುಗರನ್ನು ಯಾತ್ರೆಯತ್ತ ಆಕರ್ಷಿಸಿದವು.

ಪಟ್ಟಣದ ರಾಮನಗರದ ಶ್ರೀ ಪಾದಗಟ್ಟಿ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಹನ್ನೇರೆಡು ವರ್ಷಗಳಿಂದಲೂ ಹಿಂದೂ ಗಣಪತಿ ಸಮಿತಿಯವರು ಶ್ರೀ ವಿನಾಯಕನನ್ನು ಪ್ರತಿಷ್ಠಾಪಿಸಿಕೊಂಡು ಬರುತ್ತೀದ್ದಾರೆ.

ಅನಂತ ಚರ್ತುಥಿ ದಿನದಂದು ಗಣಪತಿಯನ್ನು ವಿಸರ್ಜನೆ ಮಾಡುವ ಪದ್ಧತಿಯನ್ನು ಸಮಿತಿ ಅನುಸರಿಸಿಕೊಂಡು ಬರುತ್ತಿದೆ. ಈ ಸಲ ಸೆ, 6 ರಂದು ಆ ದಿನ ಬಂದಿದ್ದು ಈಗಾಗಿ ಶನಿವಾರ ವಿಸರ್ಜನೆ ಕಾರ್ಯಕ್ರಮವನ್ನು ಸಮಿತಿ ಹಮ್ಮಿಕೊಂಡಿತ್ತು.

ಶನಿವಾರ ಬೆಳಿಗ್ಗೆ ಇಲ್ಲಿಂದ ಗಣಪತಿ ಹೊತ್ತ ವಾಹನ ಸಹಿತ ಭವ್ಯವಾದ ಶೋಭಾಯಾತ್ರೆ ಆರಂಭವಾಯ್ತು. ಅಲ್ಲಿಂದ ಸಾಗಿದ ಯಾತ್ರೆಯು ಕೂಡ್ಲಿಗಿ ಸರ್ಕಲ್ ಮೂಲಕ ಹಾದು ಸಿನಿಮಾ ವೃತ್ತದಲ್ಲಿ ಸಾಗಿ, ಎಸ್ ಬಿಐ ಬ್ಯಾಂಕ್ ಬಳಿಯ ರೈಲ್ವೇಗೇಟ್ ಹಾದು, ಬೈ ಪಾಸ್ ಸರ್ಕಲ್ ನಲ್ಲಿ ಬಹು ಹೊತ್ತು ನಿಂತು, ಅಲ್ಲಿಂದ ಮುಂದೆ ಸಾಗಿದ ಶೋಭಾಯಾತ್ರೆ ಬಸವೇಶ್ವರ ಬಜಾರ್ ಹಾದು ಬಸವಪುತ್ಥಳಿಯನ್ನು ಸುತ್ತು ಹಾಕಿ, ಹಗರಿ ಸೇತುವೆ ಧಾಟಿ ಹಳೇ ಹಗರಿಬೊಮ್ಮನಹಳ್ಳಿ ಯನ್ನು ಪ್ರವೇಶಿಸಿದ ಯಾತ್ರೆ ಅಲ್ಲಿ ಬಹು ಹೊತ್ತು ಇದ್ದು ನಂತರ ಅಲ್ಲೆ ಸಂಪನ್ನ ಗೊಂಡಿತು.

ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ಬೀಗಿ ಪೊಲೀಸ್ ಪಹರೆ ಹಾಗೂ ಬಂದೋಬಸ್ತ್ ಇತ್ತು. ಶೋಭಾಯಾತ್ರೆ ಸಾಗಿ ಬಂದ ಮಾರ್ಗದ ಉದ್ದಕ್ಕೂ ಸೂಕ್ಷ್ಮ ಕಣ್ಗಾವಾಲಿಟ್ಟು ಪೋಲಿಸರು ನಿಗಾವಹಿಸಿ ಕಾಯುವ ಮೂಲಕ ಯಾವುದೇ ಅಹಿತರ ಘಟನೆಗಳು ಸಣ್ಣದಾಗಿ ಮೊಳಕೆ ಬಿಚ್ಚಲು ಕೂಡ ಅಸ್ಪದ ಮಾಡಿಕೊಡದೆ ಶಾಂತಿ ಕಾಪಾಡಿದರು.
ಸ್ಥಳಿಯ ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಬಸವರಾಜ ಅಡವಿಬಾಯಿ ಯಾತ್ರೆಯು ಶಾಂತಿಯುತವಾಗಿ ಸಾಗಲು ಕಟ್ಟೇಚ್ಚರವಹಿಸಿದ್ದರು.
ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್, ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಮಾಜಿ ಶಾಸಕ ಎಲ್.ಪಿ.ಬಿ.ಭೀಮಾನಾಯ್ಕ್, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್ ಸಹಿತ ಹಲವರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ಹಿಂದೂ ಗಣಪತಿ ಸಮಿತಿ ಸಂಚಾಲಕರಾದ ಬಿವಿಆರ್ಟ್ಸ್ ನಾಗರಾಜ, ಪೀಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ವಕೀಲರಾದ ಚಂದ್ರಶೇಖರ್, ಸಮಿತಿ ಮುಖಂಡರಾದ ಚಿಂತ್ರಪಳ್ಳಿ ಆಟೋ ನಾಗರಾಜ, ಇಕ್ಕೇರಿ ಕೊಟ್ರೇಶ, ಪೋಟೋ ಪೂಜಾರ್ ಸಂತೋಷ್, ಪೋಟೋ ರಾಘು, ಬಿ.ಜಯರಾಂ ಸಹಿತ ಹಲವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!