- ಸುನಾಮಿನ್ಯೂಸ್, ಸೆ,7
*ಬೆಂಗಳೂರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ.ತುಕಾರಾಂ ಅವರನ್ನು ಓಡಿಸ್ಸಾ ರಾಜ್ಯದ ಬದ್ರಕ್ ಜಿಲ್ಲೆಯ ಎ.ಐ.ಸಿ.ಸಿ ವೀಕ್ಷಕರಾನ್ನಾಗಿ ಹೈಕಮಾಂಡ್ ಜವಾಬ್ದಾರಿ ವಹಿಸಿದೆ.
ಈ ಅಂಶ, ಬಳ್ಳಾರಿಯ ಕ್ರಿಯಾಶೀಲ ಸಂಸದರ ಸಂಘಟನಾ ಸಾಮರ್ಥ್ಯವನ್ನು ಓಡಿಸ್ಸಾ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಲು ಹೈಕಮಾಂಡ್ ಮುಂದಾಗಿರುವುದು ತುಕಾರಾಂ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಶನಿವಾರ ಬದ್ರಕ್ ಜಿಲ್ಲೆಗೆ ಭೇಟಿ ನೀಡಿದ್ದ ಸಂಸದರು ಅಲ್ಲಿ ಎಐಸಿಸಿ ಸಂಘಟಿಸಿರುವ ‘ಸಂಘಟನ್ ಸೃಜನ್ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ, ಬೆಳವಣಿಗೆ ಕುರಿತಂತೆ ಕಾರ್ಯಕರ್ತರು, ಮುಖಂಡರುಗಳ ಜೊತೆಗೆ ಚರ್ಚಿಸಿದರು.
ಪಕ್ಷದ ವರಿಷ್ಠರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ಸಂಸದ ತುಕಾರಾಂ ಅವರನ್ನು ಸಂಪರ್ಕಿಸಿದ “ಸುನಾಮಿನ್ಯೂಸ್” ಗೆ ವ್ಯಕ್ತಪಡಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.