- ಸುನಾಮಿನ್ಯೂಸ್, ಸೆ,8
* ಹಗರಿಬೊಮ್ಮನಹಳ್ಳಿ/ವಿಜಯನಗರ
ತಾಲೂಕನ್ನು ಗೆದ್ದು, ಓಲಂಪಿಕ್ ಗೇಮ್ಸ್ ನಲ್ಲೂ ನಾನು ವಿಜಯ ವೇದಿಕೆ ಹತ್ತ ಬಲ್ಲೇ ಎನ್ನುವ ಛಲ, ಕನಸು ನಿಮದಾಗಿದ್ರೇ ಮುಂದೊಂದು ದಿನ ನೀವು ಈ ದೇಶಕ್ಕೆ ಕೀರ್ತಿ ತರುವಂತಹ ಕ್ರೀಡಾಪಟುಗಳುತ್ತೀರಿ ಎಂದು ಪಿಯು ಕಾಲೇಜ್ ಕೂಟದಲ್ಲಿ ಭಾಗವವಹಿಸಿರುವ ಕ್ರೀಡಾಪಟುಗಳಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಶುಭಹಾರೈಸಿದರು.
ಸೋಮವಾರ ಬೆಳಿಗ್ಗೆ ಪಟ್ಟಣದ ರಾಮನಗರದಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ ಪಿಯು ಕಾಲೇಜುಗಳ ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸಿ ಚಾಲನೆ ಕೊಟ್ಟು ಶಾಸಕರು ಮಾತನಾಡಿದರು.
ನಮ್ಮ ಕನಸುಗಳು ದೊಡ್ಡ ಮಟ್ಟದಲ್ಲಿರ ಬೇಕು. ಗ್ರಾಮೀಣಾ ಪ್ರದೇಶದಲ್ಲಿ ಓಲಂಪಿಕ್ ಗೇಮ್ ಗಳನ್ನು ಪ್ರತಿನಿಧಿಸುವಂತಹ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಆದರೇ ಅವರಿಗೆ ಸೂಕ್ತ ವ್ಯವಸ್ಥೆ ಸಿಗದೇ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.ನಿಮಗೆ ಉತ್ತಮ ಅವಕಾಶ ಸಿಕ್ಕಿದೆ ಇದನ್ನು ಚೆನ್ನಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈಗ ನೀವು ತಾಲೂಕ ಮಟ್ಟದಲ್ಲಿ ಸ್ಪರ್ಧೆ ಮಾಡ್ತಾಯಿದ್ರೂ ನಾನು ಓಲಂಪಿಕ್ ಗೇಮ್ಸ್ ನಲ್ಲಿಯೇ ಸ್ಪರ್ಧೆ ಮಾಡ್ತಾಯಿದ್ದೇನೆ ಎನ್ನುವ ಫಿಲೀಂಗ್ ನಿಮ್ಮದಾಗಿದ್ರೇ ನಿಮ್ಮಿಂದ ಉತ್ತಮ ಸಾಧನೆ ತೋರಲು ಅದು ದಾರಿ ಆಗುತ್ತೆ ಅಂತಹ
ಅಂತಹ ಸಾಧಕ ಗುರಿಯನ್ನಿಟ್ಟುಕೊಂಡು ಕಲಿಕೆಯ ಜೊತೆಗೆ ನಿಮ್ಮ ಕ್ರೀಡಾಜೀವನವನ್ನು ರೂಪಿಸಿಕೊಳ್ಳಿ ಎಂದು ಶಾಸಕರು ಶುಭಹಾರೈಸಿದರು.
ಆಟೋಟಗಳನ್ನು ಆಡುತ್ತಾಹೊದರೆ ಬಿಪಿ,ಶುಗರ್ ನಿಮ್ಮ ಹತ್ತೀರವೂ ಸುಳಿಯುವುದಿಲ್ಲ.ಕ್ರೀಡೆ ನಮ್ಮ ದೇಹವನ್ನು ದಷ್ಟ,ಪುಷ್ಟವಾಗಿರಿಸುತ್ತೆ. ಮಾನಸಿಕವಾಗಿ ಗಟ್ಟಿಗೊಳಿಸುತ್ತೆ. ಓದಿನ ಜೊತೆಗೆ ಸಂಸ್ಕಾರವು ಬಹು ಮುಖ್ಯವಾಗಿದೆ. ಸಂಸ್ಕಾರವಂತರಾಗಿ ಎಂದರು.
ತಾಲೂಕಿನ ಹದಿನಾಲ್ಕು ಪಿಯು ಕಾಲೇಜುಗಳನ್ನು ಪ್ರತಿನಿಧಿಸಿ ನೂರಾರು ವಿದ್ಯಾರ್ಥಿ ಕ್ರೀಡಾಪಟುಗಳು, ಅಧಿಕಾರಿಗಳು ಕೂಟದಲ್ಲಿ ಭಾಗವಹಿಸಿದ್ದಾರೆ. ಹರಿಣಿ ಪಿಯು ಕಾಲೇಜ್ ಕೂಟವನ್ನು ಆಯೋಜಿಸಿದೆ.
ಮುಖಂಡರಾದ ಬಾದಾಮಿ ಮೃತ್ಯುಂಜಯ, ಗಂಭಿ ಸರಕಾರಿ ಪಿಯು ಕಾಲೇಜ್ ಪ್ರಾಂಶುಪಾಲರಾದ ಡಾ.ಎಂಕೆ.ದುರುಗಪ್ಪ, ತಾಲೂಕಾ ಆರೋಗ್ಯಾಧಿಕಾರಿ ಹೆಚ್.ಎಂ.ಪ್ರವೀಣ್ ಕುಮಾರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.