- ಸುನಾಮಿನ್ಯೂಸ್, ಸೆ,16
* ಹಗರಿಬೊಮ್ಮನಹಳ್ಳಿ/ವಿಜಯನಗರ
ಪಟ್ಟಣದ ಬಸವ ಪುತ್ಥಳಿ ಯಿಂದ ರಾಮನಗರದಲ್ಲಿರುವ ಡಾ.ಬಿಆರ್.ಅಂಬೇಡ್ಕರ್ ವೃತ್ತದವರೆಗೂ ಸೈಕಲ್ ತುಳಿಯುವ ಮೂಲಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ. ನೇಮಿರಾಜನಾಯ್ಕ ಅವರು ಸೋಮವಾರ ಮುಂಜಾನೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ‘ ನನ್ನ ಮತ ನನ್ನ ಹಕ್ಕು’ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ತಹಶಿಲ್ದಾರ ಕವಿತಾ, ತಾಪಂ ಇಓ ಲಕ್ಮೀಕಾಂತ್, ಸಮಾಜಕಲ್ಯಾಣಾಧಿಕಾರಿ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಶ್ ಬೇವೂರ್ ಅವರುಗಳು ಪೇಡಲ್ ತುಳಿಯುತ್ತಾ ಶಾಸಕರಿಗೆ ಸಾಥ್ ಕೊಟ್ಟರು. ವಿವಿಧ ಶಾಲಾ,ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಬಿರುಸಾಗಿ ಸೈಕಲ್ ತುಳಿಯುತ್ತಾ ಶಾಸಕರಿಗೆ ಸೈಕಲ್ ತುಳಿಯಲು ಹುರುಪು ತುಂಬಿದರು.
ಶಾಸಕರ ಜೊತೆಗೆ ಸಾಗಿ ಬಂದ ಸೈಕಲ್ ಜಾಥಾಕ್ಕೆ ಪಟ್ಟಣದ ಜನರು ಶುಭಕೋರಿದರು.
ರಾಮನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತವನ್ನು ಸೈಕಲ್ ಜಾಥಾ ತಲುಪಿದ ಬಳಿಕ ಅಲ್ಲಿ
ಸಂವಿಧಾನಶಿಲ್ಪಿ ಅವರ ಭಾವಚಿತ್ರಕ್ಕೆ ಶಾಸಕರು ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನದ ಪೀಠಿಕೆಯನ್ನು ಓದಿ, ಪ್ರತಿಜ್ಞಾವಿಧಿ ಭೋಧಿಸಿ, ಸ್ವೀಕರಿಸಿದರು.
ಜೆಡಿಎಸ್ ಕ್ಷೇತ್ರಧ್ಯಾಕ್ಷರಾದ ವೈ. ಮಲ್ಲಿಕಾರ್ಜುನ್, ಪುರಸಭೆ ಸದಸ್ಯ ದೀಪಕ ಸಾ ಕಠಾರೆ, ಉಲುವತ್ತಿ ಪಿಕೆಪಿಎಸ್ಎಸ್ ಅಧ್ಯಕ್ಷರಾದ ಕನ್ನಿಹಳ್ಳಿ ಚಂದ್ರಶೇಖರ್, ಹಿರಿಯ ಮುಖಂಡರಾದ ಕಿನ್ನಾಳ್ ಸುಭಾಶ್, ಚಿತ್ತವಾಡಗಿ ಪ್ರಕಾಶ್, ಕಿನ್ನಾಳ ಸುಭಾಷ್, ಸಮಾಜ ಕಲ್ಯಾಣ ಇಲಾಖೆಯ ಮೆನೆಜರ್ ಶೋಭಾ ಸಹಿತ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.