- ಸುನಾಮಿನ್ಯೂಸ್, ಸೆ,11
* ಹಗರಿಬೊಮ್ಮನಹಳ್ಳಿ/ ವಿಜಯನಗರ
ಹೊಸಪೇಟೆ-ಶಿವಮೊಗ್ಗ ರಾಜ್ಯಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆರಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಎನ್ ಹೆಚ್ ಆಗುವುದರಿಂದ ಕಲ್ಯಾಣಕರ್ನಾಟದ ಜನರಿಗೆ ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಸಂಪರ್ಕ ಮಾಡಲು ಉನ್ನತ ದರ್ಜೆಯ ರಸ್ತೆ ಸಂಪರ್ಕ ಸಿಗಲಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಗುರುವಾರ ಪಟ್ಟಣದ ಹಳೆ ಹಗರಿಬೊಮ್ಮನಹಳ್ಳಿ ಏಳನೇಯ ವಾರ್ಡ್ ನ ಸಮುದಾಯ ಭವನದ ಹತ್ತೀರ ಹಾದು ಹೋಗಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25ರಲ್ಲಿ 92 ಲಕ್ಷರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಶಾಸಕರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೇರಿಸುವ ಕಾರ್ಯವನ್ನು ತ್ವರಿತವಾಗಿಸುವಂತೆ ಈಗಾಗಲೇ ಕೇಂದ್ರ ಭೂಸಾರಿಗೆ ಸಚಿವರಾದ ನೀತಿನ್ ಗಡ್ಕರಿ ಅವರಿಗೆ ಮಾನವಿ ಮಾಡಿಕೊಂಡಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ಹೇಳಿದರು.
ಭಾರೀ ಮಳೆ ಯಿಂದಾಗಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಕಿತ್ತುಹೋಗಿ, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈಗ ಮಳೆ ಬೀಡುವ ಕೊಟ್ಟಿದ್ದು ರಸ್ತೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಆಗಿರುವ ರಸ್ತೆ ತೊಂದರೆಯನ್ನು ನಿವಾರಣೆ ಮಾಡಲು ಪ್ರಮಾಣಿಕವಾಗಿ ಪರಿಶ್ರಮಿಸುತ್ತೇನೆ ಎಂದರು.
ಜೆಡಿಎಸ್ ತಾಲೂಕ ಅಧ್ಯಕ್ಷರಾದ ವೈ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ದೀಪಕ್ ಸಾ ಕಠಾರಿ, ಬಿ.ಕೆ.ಡಿ. ಗಂಗಣ್ಣ, ಹಿರಿಯಮುಖಂಡರಾದ ಈ.ಕೃಷ್ಣಮೂರ್ತಿ, ಅಂಬಳಿ ರವೀಂದ್ರ ಗೌಡ, ಚಿತ್ತವಾಡಗಿ ಪ್ರಕಾಶ್, ಜಿಎಂ. ಶಿವಯ್ಯ, ಜಗದೀಶ್ ಜಿಎಂ, ಇಟಗಿ ಕೊಟ್ರೇಶ್, ಪಾಂಡುರಂಗ ನಾಯ್ಕ, ರುದ್ರೇಶ್, ಹೋಟೆಲ್ ಸಿದ್ದರಾಜು, ಕುಮಾರ್ ನಾಯಕ್, ಲೋಕಪಯೋಗಿ ಇಲಾಖೆ ಇಇ ದೇವದಾಸ್, ಎಇಇ ಸತೀಶ್ ನಾಯಕ್ ಸಹಿತ ಹಲವರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.